ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅವೈಜ್ಞಾನಿಕ ಏಕಪಕ್ಷೀಯ ನಿಯಮಗಳ ವಿರುದ್ಧ ಆನೆಗೊಂದಿ ಭಾಗದ ಜನರಿಂದ ಪ್ರತಿಭಟನೆ.
Latest- Est 0 min
- 0 Views
- 3 months ago
Sport
News
ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನಕ್ಕಾಗಿ ಕಿಷ್ಕಿಂಧಾ ಅಂಜನಾದ್ರಿ ಮೊರೆ ಹೋದ ತಂಗಡಗಿ ಅಭಿಮಾನಿಗಳು.
ಆಧ್ಯಾತ್ಮಿಕ ರಾಜಕೀಯ- Est 1 min
- 0 Views
- 2 weeks ago
ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದಿದ್ದಕ್ಕೆ ಸಿದ್ದರಾಮಯ್ಯನವರು ನಮ್ಮ ವಿರೋಧಿಸುತ್ತಿದ್ದಾರೆ:ಪೂಜ್ಯ ಪ್ರಣವಾನಂದ ಸ್ವಾಮೀಜಿ.
ಆಧ್ಯಾತ್ಮಿಕ ರಾಜಕೀಯ- Est 1 min
- 0 Views
- 3 months ago
ಜನರನ್ನು ಬೆಸೆಯಲು ಪ್ರತಿ ಧರ್ಮದಲ್ಲಿ ಹಬ್ಬಗಳು ಇವೆ:ಗಾಲಿ ಜನಾರ್ದನ ರೆಡ್ಡಿ
ಆಧ್ಯಾತ್ಮಿಕ ರಾಜಕೀಯ- Est 0 min
- 0 Views
- 3 months ago
ಕನಕಗಿರಿ ಕನಕಾಚಲಪತಿ ಮಹಾರಥೋತ್ಸವಕ್ಕೆ ಸಾಕ್ಷಿಯಾಯ್ತು ಲಕ್ಷಾಂತರ ಭಕ್ತ ಸಮೂಹ!
ಆಧ್ಯಾತ್ಮಿಕ- Est 0 min
- 0 Views
- 3 months ago
ವಾಲ್ಮೀಕಿಶ್ರೀಗಳ ಕ್ಷೇಮ ವಿಚಾರಿಸಿದ ಕೆಎಂಎಫ್ ಬಳ್ಳಾರಿ ಮಾಜಿ ಅಧ್ಯಕ್ಷ ಭೀಮ್ ನಾಯ್ಕ್
ಆಧ್ಯಾತ್ಮಿಕ- Est 1 min
- 0 Views
- 3 months ago
134ನೇ ಬೆಟ್ಟದ ಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ರಥೋತ್ಸವ ಮತ್ತು ಸಾಮೂಹಿಕ ವಿವಾಹಗಳು
ಆಧ್ಯಾತ್ಮಿಕ- Est 1 min
- 0 Views
- 4 months ago
ಮಾ.03 ರಂದು ಚಂದ್ರ ಗ್ರಹಣ: ಅರ್ಧ ದಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಗುಡಿ ಬಂದ್
ಆಧ್ಯಾತ್ಮಿಕ ಸುದ್ದಿ- Est 1 min
- 0 Views
- 4 months ago
Recent
Posts
ಆರೆಸ್ಸೆಸ್ ಸಂಘ ಪರಿವಾರಕ್ಕೆ ಸಂವಿಧಾನಾತ್ಮಕವಾಗಿ ಉತ್ತರಿಸುವ ಶುದ್ಧ ಹಸ್ತದ ನಂಬಿಗಸ್ಥ ಬಂಟ ಬಿ.ಕೆ.ಹರಿಪ್ರಸಾದ ಅವರಿಗೆ ಕೆಪಿಸಿಸಿ ಸಾರಥ್ಯ!

*ಜನಾರ್ದನ ಪೂಜಾರಿ-ಎಸ್.ಎಂ.ಕೃಷ್ಣ ಜೋಡಿಯನ್ನು ನೆನಪಿಸುವಂತೆ ಡಿಕೆಶಿ-ಹರಿಪ್ರಸಾದ ಸಮ್ಮಿಲನ ಹೈಕಮಾಂಡ್ ತೀರ್ಮಾನ.
*ಗಾಂಧಿ ಕುಟುಂಬದ ನಂಬಿಕಸ್ಥನಿಗೆ ಒಲಿದ ಕೆಪಿಸಿಸಿ-ಎಂಎಲ್ಸಿ ಪುನಾರಾಯ್ಕೆ.
*ಸಂಘಟನಾತ್ಮಕವಾಗಿ ಕೆಪಿಸಿಸಿಗೆ ದಿಕ್ಕುದೆಸೆ ಸಾಧ್ಯತೆ!
ಕಿಷ್ಕಿಂಧವಾಣಿ ವಿಶೇಷ
ಗಂಗಾವತಿ: ಆರೆಸ್ಸೆಸ್ ಸಂಘ ಪರಿವಾರಕ್ಕೆ ಸಂವಿಧಾತ್ಮಕವಾಗಿ ಉತ್ತರ ನೀಡಬಲ್ಲ ದೇಶದ ಕೆಲವೇ ನಾಯಕರ ಪೈಕಿ ಗಾಂಧಿ ಕುಟುಂಬದ ನಂಬಿಕಸ್ಥ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ನಿಂದ ರಾಜಕೀಯ ಆರಂಭಿಸಿರುವ ಬಿ.ಕೆ.ಹರಿಪ್ರಸಾದ ಅವರಿಗೆ ಕೆಪಿಸಿಸಿ ಸಾರಥ್ಯವನ್ನು ಎಐಸಿಸಿ ವಹಿಸಿದ್ದು ಈ ಹಿಂದೆ ಜನಾರ್ದನ ಪೂಜಾರಿ ಹಾಗೂ ಎಸ್.ಎಂ.ಕೃಷ್ಣ ಅವರ ಜೋಡಿಯಂತೆ
ಕರ್ನಾಟಕದಲ್ಲಿ ಕಮಾಲ್ ಮಾಡಲು ಮುಂದುವರಿದ ಹಾಗೂ ಹಿಂದುಳಿದ ಜನಾಂಗದ ಮುಖಂಡರಿಗೆ ಪ್ರಮುಖ ಹುದ್ದೆಗಳನ್ನು ನೀಡುವ ಮೂಲಕ ಅಹಿಂದ ವರ್ಗದ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಿದನ್ನು ಸರಿದೂಗಿಸಲು ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ಮಾಡಿದೆ ಎನ್ನಲಾಗುತ್ತದೆ.
ಕರ್ನಾಟಕ ಕಾಂಗ್ರೆಸ್ನ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲಿ ಮುಖಕ್ಕೆ ಹೊಡೆದಂತೆ ಕಟು ಸತ್ಯ ಮಾತನಾಡುವವರಿಗಿಂತ ತೆರೆಮರೆಯಲ್ಲಿ ಸಂಧಾನ ನಡೆಸಿ, ಸ್ವಾರ್ಥಕ್ಕಾಗಿ ಹತ್ತಾರು ರಾಜಿ ಸೂತ್ರಗಳನ್ನು ಸಿದ್ಧಪಡಿಸುವವರಿಗೇ ಮನ್ನಣೆ ಹೆಚ್ಚು. ಆದರೆ, ಬಿ.ಕೆ. ಹರಿಪ್ರಸಾದ್ ಅವರ ಆಯ್ಕೆ ಈ ಹಳೆಯ ಗುಲಾಮಿ ಸಂಪ್ರದಾಯಕ್ಕೆ ಸಂಪೂರ್ಣ ಭಿನ್ನವಾದದ್ದು. ಐದು ದಶಕಗಳ ಕಾಲ ದಿಲ್ಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಪ್ರಧಾನ ಕಾರ್ಯದರ್ಶಿಯಾಗಿ, ದೇಶದ ಸುಮಾರು 18ಕ್ಕೂ ಹೆಚ್ಚು ರಾಜ್ಯಗಳ ಚುನಾವಣಾ ಉಸ್ತುವಾರಿಯಾಗಿ ರಾಜಕೀಯದ ಒಳ-ಹೊರಗುಗಳನ್ನು ಅರಿತ ಇವರಿಗೆ ತವರು ರಾಜ್ಯದ ಚುಕ್ಕಾಣಿ ಸಿಕ್ಕಿರುವುದು ಹೂವಿನ ಹಾಸಿಗೆಯಲ್ಲ, ಬದಲಿಗೆ ಮುಳ್ಳಿನ ಕಿರೀಟ.
ಬೀದಿ ಹೋರಾಟದ ಗರಡಿಯಿಂದ ಸಂಸತ್ತಿನ ಉಭಯ ಸದನಗಳವರೆಗೆ
ಬಿ.ಕೆ. ಹರಿಪ್ರಸಾದ್ ಅವರ ಇಡೀ ವ್ಯಕ್ತಿತ್ವ ರೂಪಿತವಾಗಿದ್ದು ಇಂದಿನ ಹಲವು ಎಸಿ ರೂಂ ನಾಯಕರಂತೆ ಸುಲಭವಾಗಿ ಅಲ್ಲ; ಬದಲಿಗೆ 1970ರ ದಶಕದ ತಳಮಟ್ಟದ ಬೀದಿ ಹೋರಾಟಗಳಲ್ಲಿ. 1954 ಜುಲೈ 29 ರಂದು ಬೆಂಗಳೂರಿನಲ್ಲಿ ಕೆಂಪಯ್ಯ ಮತ್ತು ಗುಣವತಿ ದಂಪತಿಯ ಮಗನಾಗಿ ಜನಿಸಿದ ಹರಿಪ್ರಸಾದ್, ವಾಣಿಜ್ಯ ಶಾಸ್ತ್ರದ (ಬಿ.ಕಾಂ) ಪದವಿ ಪಡೆಯುತ್ತಿದ್ದಾಗಲೇ ಕಾಲೇಜು ವಿದ್ಯಾರ್ಥಿ ಸಂಘಗಳ ಅಧ್ಯಕ್ಷರಾಗಿ ಧ್ವನಿ ಎತ್ತಿದವರು. 1972ರಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸದಸ್ಯತ್ವ ಪಡೆದ ಇವರು, 1979-81ರ ಅವಧಿಯಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್ ಎಸ್ ಯು ) ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ್ದು, ಇವರ ರಾಷ್ಟ್ರ ರಾಜಕಾರಣದ ಪಯಣಕ್ಕೆ ಮುನ್ನುಡಿಯಾಯಿತು.
ಇವರ ಸಂಸದೀಯ ಮತ್ತು ಸಾಂಸ್ಥಿಕ ಅನುಭವ ಕೇವಲ ಸೀಮಿತ ರಾಜಕಾರಣದ್ದಲ್ಲ. ಒಟ್ಟು ನಾಲ್ಕು ಬಾರಿ (1990, 2004, 2013, 2014) ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಹರಿಪ್ರಸಾದ್, ಕೇಂದ್ರ ಸರ್ಕಾರದ ಹಲವು ಪ್ರಮುಖ ಸಚಿವಾಲಯಗಳ ಸಲಹಾ ಸಮಿತಿಗಳಲ್ಲಿ ಕಳಕಳಿಯ ಒಳನೋಟಗಳನ್ನು ನೀಡಿದ್ದರು. 1980ರ ದಶಕದಲ್ಲೇ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ಅಧ್ಯಕ್ಷರಾಗಿ ಆಡಳಿತಾತ್ಮಕ ಅನುಭವ ಗಳಿಸಿದ್ದ ಇವರು, 2020ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ, 2022 ರಿಂದ 2023ರವರೆಗೆ ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಅಂದಿನ ಸರ್ಕಾರದ ಲೋಪಗಳನ್ನು ತೀಕ್ಷ್ಣ ಪದಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. 2009ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ( ಭಾರತದ ಅಧಿಕೃತ ಪ್ರತಿನಿಧಿಯಾಗಿ) ಭಾಗವಹಿಸಿದ್ದು ಇವರ ಅಂತರರಾಷ್ಟ್ರೀಯ ಮಟ್ಟದ ಪ್ರಬುದ್ಧತೆಗೆ ಸಾಕ್ಷಿ.
ಹರಿಪ್ರಸಾದ್ ಹೆಗಲಿಗೆ ಸಾರಥ್ಯ: ಹೈಕಮಾಂಡ್ನ ‘ಮಹಾ’ ತಂತ್ರಗಳು
ರಾಜಕೀಯವನ್ನು ಕೇವಲ ಮೇಲ್ನೋಟಕ್ಕೆ ನೋಡುವವರಿಗೆ ಬಿ.ಕೆ. ಹರಿಪ್ರಸಾದ್ ಅವರ ಆಯ್ಕೆ ಸಾಮಾನ್ಯ ನೇಮಕಾತಿಯಂತೆ ಕಾಣಬಹುದು. ಆದರೆ ಅಧಿಕಾರದ ಒಳಹರಿವನ್ನು ಬಲ್ಲವರಿಗೆ ಇದರ ಹಿಂದಿರುವ ಹೈಕಮಾಂಡ್ನ ಅಲಿಖಿತ ಮತ್ತು ಅತ್ಯಂತ ತೀಕ್ಷ್ಣವಾದ ಲೆಕ್ಕಾಚಾರಗಳು ಸ್ಪಷ್ಟವಾಗಿ ಗೋಚರಿಸುತ್ತವೆ:
ಅಹಂಕಾರದ ಪ್ರಾದೇಶಿಕ ನಾಯಕತ್ವಕ್ಕೆ ದಿಲ್ಲಿಯ ‘ಚೆಕ್ ಅಂಡ್ ಬ್ಯಾಲೆನ್ಸ್’
ಸದ್ಯ ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ನಾಯಕರು ಅತ್ಯಂತ ಆಕ್ರಮಣಕಾರಿ, ನೇರ ಮತ್ತು ಇಡೀ ಪಕ್ಷ ಹಾಗೂ ಸರ್ಕಾರವನ್ನು ತಮ್ಮದೇ ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸುವ ಸ್ವಭಾವದವರು. ಇಂತಹ ದೈತ್ಯ ನಾಯಕ ಸಿಎಂ ಆದಾಗ, ಸರ್ಕಾರ ಮತ್ತು ಮುಖ್ಯಮಂತ್ರಿಗಳು ಪಕ್ಷದ ಸಿದ್ಧಾಂತವನ್ನು ಮೀರಿ ಸ್ವಚ್ಛಂದವಾಗಿ ವರ್ತಿಸದಂತೆ ತಡೆಯಲು ಅಷ್ಟೇ ತೂಕದ ನಾಯಕನ ಅಗತ್ಯವಿತ್ತು. ಬಿ.ಕೆ. ಹರಿಪ್ರಸಾದ್ ಅವರಿಗೆ ಇರುವ ದೆಹಲಿ ನೆಟ್ವರ್ಕ್, ಅವರ ಹಿರಿತನ ಮತ್ತು ಗಾಂಧಿ ಕುಟುಂಬದೊಂದಿಗಿನ ನೇರ ಸಂಪರ್ಕದ ಮುಂದೆ ಯಾರೂ ಸುಲಭವಾಗಿ ಆಟವಾಡಲು ಸಾಧ್ಯವಿಲ್ಲ. ಸರ್ಕಾರದ ತಪ್ಪುಗಳನ್ನು ಮುಲಾಜಿಲ್ಲದೆ ಎತ್ತಿ ತೋರಿಸುವ, ಅಗತ್ಯಬಿದ್ದರೆ ಮುಖ್ಯಮಂತ್ರಿಯವರಿಗೆ “ಇದು ಹೈಕಮಾಂಡ್ ಆದೇಶ, ಇದನ್ನು ಜಾರಿಗೊಳಿಸಲೇಬೇಕು” ಎಂದು ಖಡಕ್ಕಾಗಿ ಹೇಳುವ ಧೈರ್ಯ ಹರಿಪ್ರಸಾದ್ ಅವರದ್ದಾಗಿದೆ. ಈ ಮೂಲಕ ಸರ್ಕಾರದ ಮೇಲೆ ಪಕ್ಷದ ಹಿಡಿತವನ್ನು ಬಿಗಿಗೊಳಿಸಲು ಹೈಕಮಾಂಡ್ ಇವರನ್ನು ಕಣಕ್ಕಿಳಿಸಿದೆ.
ಪಕ್ಷದ ಹಿತಕ್ಕಾಗಿ ‘ಬಲಿದಾನ’ಕ್ಕೂ ಸಿದ್ಧರಾಗುವ ಅಪ್ಪಟ ನಿಷ್ಠೆ
ಇಂದಿನ ರಾಜಕಾರಣದಲ್ಲಿ ತಮಗೆ ಗೆಲ್ಲುವ ನೂರಕ್ಕೆ ನೂರರಷ್ಟು ಅವಕಾಶವಿರುವ, ಸುರಕ್ಷಿತವಾದ ಕ್ಷೇತ್ರ ಸಿಕ್ಕರೆ ಮಾತ್ರ ಚುನಾವಣಾ ಅಖಾಡಕ್ಕೆ ಇಳಿಯುವ, ಇಲ್ಲದಿದ್ದರೆ ನೆಪ ಹೇಳಿ ಜಾರಿಕೊಳ್ಳುವ ನಾಯಕರೇ ತುಂಬಿದ್ದಾರೆ. ಆದರೆ ಹರಿಪ್ರಸಾದ್ ವಿಷಯದಲ್ಲಿ ಹಾಗಾಗಲಿಲ್ಲ. ಈ ಹಿಂದೆ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಗೆ ಸಂಖ್ಯಾಬಲದ ಕೊರತೆ ಇದ್ದಾಗ, ಸೋಲು ಖಚಿತ ಎಂದು ಗೊತ್ತಿದ್ದರೂ ಹೈಕಮಾಂಡ್ ಆದೇಶದ ಮೇರೆಗೆ ಅವರು ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿ ಪಕ್ಷ ನಿಷ್ಠೆ ತೋರಿದ್ದರು. ಅಷ್ಟೇ ಅಲ್ಲ, 2019ರ ಲೋಕಸಭಾ ಚುನಾವಣೆಯಲ್ಲೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪರಿಸ್ಥಿತಿ ತಮಗೆ ಪೂರಕವಾಗಿಲ್ಲದಿದ್ದರೂ, ಪಕ್ಷದ ಹಿತಕ್ಕಾಗಿ ಕಣಕ್ಕಿಳಿದು ಹೋರಾಡಿದ್ದರು. ಇಂತಹ ‘ಬಲಿದಾನದ ರಾಜಕಾರಣ’ ಮತ್ತು ಕಾರ್ಯಕರ್ತನ ಶಿಸ್ತು ಇವತ್ತು ಅವರಿಗೆ ಹೈಕಮಾಂಡ್ನಿಂದ ಅತ್ಯುನ್ನತ ಬಹುಮಾನವನ್ನು ತಂದುಕೊಟ್ಟಿದೆ.
ಕರಾವಳಿಯ ಕೋಮು ರಾಜಕಾರಣಕ್ಕೆ ಸೈದ್ಧಾಂತಿಕ ಚಾಟಿ ಕರಾವಳಿ ಮತ್ತು ಇಡೀ ರಾಜ್ಯದಲ್ಲಿ ಬಿಜೆಪಿಯ ಹಿಂದುತ್ವದ ಅಜೆಂಡಾ ಹಾಗೂ ಸಂಘ ಪರಿವಾರದ ತಂತ್ರಗಳನ್ನು ಎದುರಿಸಲು ಕಾಂಗ್ರೆಸ್ಗೆ ಮೃದು ಧೋರಣೆಯ ಅಥವಾ ಆರೆಸ್ಸೆಸ್ ಜೊತೆ ಒಳ ಒಪ್ಪಂದ ಮಾಡಿಕೊಳ್ಳುವ ನಾಯಕರ ಅಗತ್ಯವಿರಲಿಲ್ಲ. ಬದಲಿಗೆ, ಸಂಘ ಪರಿವಾರದ ಸಿದ್ಧಾಂತವನ್ನು ತಳಮಟ್ಟದಿಂದ ಅರಿತುಕೊಂಡು, ಯಾವುದೇ ವೇದಿಕೆಯಲ್ಲೂ ಸಂಕೋಚವಿಲ್ಲದೆ ನೇರವಾಗಿ ಮತ್ತು ತೀಕ್ಷ್ಣವಾಗಿ ಮುಖಾಮುಖಿ ದಾಳಿ ನಡೆಸಬಲ್ಲ ನಾಯಕ ಬೇಕಾಗಿತ್ತು. 2000-2001ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಪಕ್ಷದ ಶಿಸ್ತಿನ ದಂಡನ್ನು ಮುನ್ನಡೆಸಿದ ಹರಿಪ್ರಸಾದ್ ಸೈದ್ಧಾಂತಿಕವಾಗಿ ಎಂದೂ ರಾಜಿ ಮಾಡಿಕೊಂಡವರಲ್ಲ. ಇವರ ನೇರ ಮಾತುಗಳು ಮತ್ತು ಕರಾವಳಿಯ ಹಿನ್ನೆಲೆ ಎದುರಾಳಿಗಳ ಅಜೆಂಡಾಕ್ಕೆ ತಕ್ಕ ಪ್ರತ್ಯುತ್ತರ ನೀಡಬಲ್ಲದು.
ಕಳಂಕರಹಿತ ವ್ಯಕ್ತಿತ್ವ ಮತ್ತು ಇಮೇಜ್ ಅಸ್ತ್ರ
ಐದು ದಶಕಗಳ ಸುದೀರ್ಘ ರಾಜಕೀಯ ಜೀವನ, ದೆಹಲಿ ಮಟ್ಟದ ಪ್ರಭಾವ ಹಾಗೂ ದೇಶದ ಸುಮಾರು 18ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿ ನೂರಾರು ಕೋಟಿ ರೂಪಾಯಿಗಳ ವ್ಯವಹಾರಗಳನ್ನು ಕಣ್ಣಾರೆ ಕಂಡಿದ್ದರೂ, ಹರಿಪ್ರಸಾದ್ ಅವರ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರದ ಒಂದೇ ಒಂದು ಸಣ್ಣ ಕಪ್ಪು ಚುಕ್ಕೆಯೂ ಅಂಟಿಲ್ಲ. ಇಂದಿನ ದಿನಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ (ಈಡಿ ಐಟಿ) ಭಯವಿಲ್ಲದೆ, ಯಾವುದೇ ಹಗರಣಗಳ ಸೋಂಕಿಲ್ಲದೆ ತಲೆ ಎತ್ತಿ ನಿಲ್ಲಬಲ್ಲ ರಾಜ್ಯದ ಕೆಲವೇ ಕೆಲವು ‘ಶುದ್ಧ ಹಸ್ತ’ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರು. ಈ ಕಳಂಕರಹಿತ ಇಮೇಜ್ ಇವತ್ತು ವಿರೋಧ ಪಕ್ಷಗಳ ಭ್ರಷ್ಟಾಚಾರದ ಆರೋಪಗಳಿಗೆ ಕೌಂಟರ್ ಕೊಡಲು ಕಾಂಗ್ರೆಸ್ಗೆ ದೊಡ್ಡ ಶಕ್ತಿಯಾಗಲಿದೆ.
ಅಹಿಂದ ಮತಬ್ಯಾಂಕ್ ಕುಸಿಯದಂತೆ ಸಾಮಾಜಿಕ ಸಮತೋಲನ
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪ್ರಬಲ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ, ಆ ಸಮುದಾಯಗಳಲ್ಲಿ ಮತ್ತು ಅಹಿಂದ (ಅಲ್ಪಸಂಖ್ಯಾತ, ಹಿನುಳಿದ, ದಲಿತ) ವಲಯದಲ್ಲಿ ಸೃಷ್ಟಿಯಾಗಬಹುದಾದ ಅಸಮಾಧಾನವನ್ನು ತಣ್ಣಗಾಗಿಸಲು ಹೈಕಮಾಂಡ್ ಈ ಮಾಸ್ಟರ್ ಸ್ಟ್ರೋಕ್ ನೀಡಿದೆ. ಸಿದ್ದರಾಮಯ್ಯ ಅವರ ನಂತರ ರಾಜ್ಯ ಕಾಂಗ್ರೆಸ್ನಲ್ಲಿ ಹಿಂದುಳಿದ ವರ್ಗಗಳ (ಒಬಿಸಿ) ಪೈಕಿ ಅತಿ ದೊಡ್ಡ ಮತ್ತು ಪ್ರಭಾವಿ ಧ್ವನಿ ಎಂದರೆ ಅದು ಬಿ.ಕೆ. ಹರಿಪ್ರಸಾದ್. ಹಿಂದುಳಿದ ವರ್ಗಗಳ ಮತಬ್ಯಾಂಕ್ ಕಾಂಗ್ರೆಸ್ ಕೈತಪ್ಪದಂತೆ ತಡೆಯೊಡ್ಡಲು ಹರಿಪ್ರಸಾದ್ ಅವರ ನೇಮಕಾತಿ ಅತ್ಯಂತ ಸೂಕ್ತ ಹಾಗೂ ಅನಿವಾರ್ಯವಾಗಿತ್ತು.
ಐದು ದಶಕಗಳ ಪ್ರಶ್ನಾತೀತ ಗಾಂಧಿ ಕುಟುಂಬದ ನಿಷ್ಠೆ
ನೆಹರು-ಗಾಂಧಿ ಕುಟುಂಬಕ್ಕೆ ಅತ್ಯಂತ ನಿಕಟವರ್ತಿಯಾಗಿರುವ ಹರಿಪ್ರಸಾದ್, ಇಂದಿರಾ ಗಾಂಧಿ ಅವರ ಕಾಲದಲ್ಲೇ ರಾಜಕೀಯದ ಓನಾಮ ಕಲಿತವರು. ಅಂದಿನಿಂದ ಹಿಡಿದು ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಇಂದಿನ ರಾಹುಲ್ ಗಾಂಧಿ ಅವರವರೆಗೂ ಎಲ್ಲರೊಂದಿಗೂ ಅತ್ಯಂತ ನಿಕಟವಾದ ಹಾಗೂ ವೈಯಕ್ತಿಕ ವಿಶ್ವಾಸಾರ್ಹ ಬಾಂಧವ್ಯವನ್ನು ಹೊಂದಿದ್ದಾರೆ. ರಾಜ್ಯದ ಹಲವು ಪ್ರಾದೇಶಿಕ ನಾಯಕರು ದಿಲ್ಲಿಯ ಮಟ್ಟದಲ್ಲಿ ಲಾಬಿ ನಡೆಸಲು ಪರದಾಡುತ್ತಿರುವಾಗ, ಹರಿಪ್ರಸಾದ್ ಅವರಿಗೆ ಹೈಕಮಾಂಡ್ನ ಬಾಗಿಲುಗಳು ಯಾವಾಗಲೂ ಮುಕ್ತವಾಗಿದ್ದವು. ಹೈಕಮಾಂಡ್ನ ಆಂತರಿಕ ವಲಯದಲ್ಲಿ ಇವರಿಗಿರುವ ಮನ್ನಣೆ ಮತ್ತು ವಿಶ್ವಾಸಾರ್ಹತೆ ಉಳಿದೆಲ್ಲಾ ನಾಯಕರಿಗಿಂತ ಒಂದು ಕೈ ಮೇಲಿದೆ.
ಮುಖಸ್ತುತಿಯ ರಾಜಕಾರಣಕ್ಕೆ ಬ್ರೇಕ್: ಹರಿಪ್ರಸಾದ್ ಮುಂದಿರುವ ಮುಳ್ಳಿನ ಹಾದಿ
ಹರಿಪ್ರಸಾದ್ ಅವರ ರಾಜಕೀಯ ಇತಿಹಾಸವನ್ನು ನೋಡಿದರೆ ಅವರು ಸಕ್ಕರೆ ಸವರಿದ ಮಾತುಗಳನ್ನಾಡುವ ಮೃದು ನಾಯಕನಲ್ಲ. ಈ ಹಿಂದೆ ಸ್ವಪಕ್ಷದ ಪ್ರಭಾವಿ ನಾಯಕರ ಏಕಸ್ವಾಮ್ಯ ಧೋರಣೆಯ ವಿರುದ್ಧವೇ ಸಾರ್ವಜನಿಕವಾಗಿ ಆಕ್ರೋಶ ಹೊರಹಾಕಿದ್ದ ಇವರು, “ನಾನು ಹೈಕಮಾಂಡ್ನ ನಿಷ್ಠಾವಂತನೇ ಹೊರತು ಯಾವುದೇ ಪ್ರಾದೇಶಿಕ ನಾಯಕನ ಹಂಗಿನಲ್ಲಿ ಬದುಕುವವನಲ್ಲ” ಎಂದು ಸಿಡಿದೆದ್ದಿದ್ದರು. ಈಗ ಅವರ ಕೈಗೇ ಅಧಿಕಾರ ಸಿಕ್ಕಿರುವುದರಿಂದ, ಪಕ್ಷದೊಳಗಿನ ಭಿನ್ನಮತೀಯರನ್ನು, ಸ್ವಾರ್ಥ ರಾಜಕಾರಣಿಗಳನ್ನು ಮತ್ತು ಒಳಗಿಂದಲೇ ಬೆನ್ನು ಇರಿಯುವವರನ್ನು ಅವರು ಹೇಗೆ ಹದ್ದುಬಸ್ತಿನಲ್ಲಿಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಅವರಿಗೆ ಹೂವಿನ ಹಾಸಿಗೆಯಲ್ಲ, ಬದಲಿಗೆ ಮುಳ್ಳಿನ ಕಿರೀಟ. ಪಕ್ಷದೊಳಗಿನ ವಿಭಿನ್ನ ಬಣಗಳನ್ನು ಒಟ್ಟುಗೂಡಿಸಿಕೊಂಡು ಹೋಗುವುದು, ತಳಮಟ್ಟದ ನಿಷ್ಠಾವಂತ ಕಾರ್ಯಕರ್ತರಿಗೆ ಮನ್ನಣೆ ಸಿಗುವಂತೆ ಮಾಡುವುದು ಮತ್ತು ಸರ್ಕಾರದ ಭ್ರಷ್ಟಾಚಾರದ ಕಪ್ಪು ಚುಕ್ಕೆಗಳು ಪಕ್ಷಕ್ಕೆ ಅಂಟದಂತೆ ನೋಡಿಕೊಳ್ಳುವುದು ಅವರ ಮುಂದಿರುವ ಹೆಜ್ಜೆಗಳು.
ಬಿ.ಕೆ. ಹರಿಪ್ರಸಾದ್ ಅವರ ಕೆಪಿಸಿಸಿ ಸಾರಥ್ಯವು ಕರ್ನಾಟಕ ಕಾಂಗ್ರೆಸ್ನಲ್ಲಿ ಹೊಸದೊಂದು ಅಧ್ಯಾಯಕ್ಕೆ ನಾಂದಿ ಹಾಡಿದೆ. ಹಿಂಬಾಗಿಲಿನಿಂದ ತಂತ್ರ ಹೂಡುವ ರಾಜಕಾರಣಿಗಳ ಮಧ್ಯೆ, ಎದುರಿಗೇ ನಿಂತು ಕಟು ಸತ್ಯಗಳನ್ನು ಮುಖಕ್ಕೆ ಹೊಡೆದಂತೆ ಮಾತನಾಡುವ ಹರಿಪ್ರಸಾದ್ ಅವರ ಈ ನೇರ ನಡೆ ಮತ್ತು ದೆಹಲಿ ಮಟ್ಟದ ಪ್ರಭಾವ ಕರ್ನಾಟಕ ಕಾಂಗ್ರೆಸ್ ಅನ್ನು ಯಶಸ್ಸಿನ ಹಾದಿಗೆ ತರುತ್ತದೆಯೇ ಅಥವಾ ಹೊಸ ಆಂತರಿಕ ಜಟಾಪಟಿಗೆ ಕಾರಣವಾಗುತ್ತದೆಯೇ ಎಂಬುದನ್ನು ಮುಂಬರುವ ದಿನಗಳೇ ನಿರ್ಧರಿಸಲಿವೆ. ಆದರೆ ಒಂದು ಮಾತ್ರ ಸತ್ಯ – ಹರಿಪ್ರಸಾದ್ ಸಾರಥ್ಯದಲ್ಲಿ ಕರ್ನಾಟಕ ಕಾಂಗ್ರೆಸ್ ಇನ್ನು ಮುಂದೆ ಸದ್ದಿಲ್ಲದೆ ಕೂರುವುದಿಲ್ಲ, ಬದಲಿಗೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಾ ಸದಾ ಆಕ್ರಮಣಕಾರಿಯಾಗಿಯೇ ಇರಲಿದೆ ಎನ್ನುವುದು ಕಟು ಸತ್ಯ…
ಡಿ.ಕೆ.ಶಿವಕುಮಾರ್ ಸಿಎಂ ಪ್ರಮಾಣ ವಚನ,ಗಂಗಾವತಿಯಲ್ಲಿ ಗರಿಗೆದರಿದ ಕಾಂಗ್ರೆಸ್ ಚಟುವಟಿಕೆಗಳು!

*ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಸೀಫ್ ನೇತೃತ್ವದಲ್ಲಿ ಪ್ರಮಾಣವಚನ ಕಾರ್ಯಕ್ರಮಕ್ಕೆ ತೆರಳಿದ ಕಾಂಗ್ರೆಸ್ಸಿಗರು.
ಕಿಷ್ಕಿಂಧವಾಣಿ ವಿಶೇಷ
ಕೆ.ನಿಂಗಜ್ಜ
ಗಂಗಾವತಿ: ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜೂ.03ರಂದು ಮುಖ್ಯಮಂತ್ರಿಗಳಾಗಿ ಲೋಕಭವನದಲ್ಲಿ ಅಧಿಕಾರ ಪ್ರಮಾಣವಚನ ಸ್ವೀಕಾರ ಮಾಡಲಿದ್ದು ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಸೀಫ್ ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಾಮೀದ್
ಮನಿಯರ್ ನೇತೃತ್ವದಲ್ಲಿ ಪ್ರಮುಖ ಕಾಂಗ್ರೆಸ್ ಮುಖಂಡರು ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದರಿಂದಾಗಿ ಗಂಗಾವತಿ ಕಾಂಗ್ರೆಸ್ ನಲ್ಲಿ ಚಟುವಟಿಕೆಗಳು ಚುರುಕುಗೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ.
ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ ಪರಿಣಾಮವಾಗಿ ಪಕ್ಷದ ಕಾರ್ಯ ಚಟುವಟಿಕೆಗಳು ಅಷ್ಟಕಷ್ಟೇ ಇದ್ದವು.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳು ಅಷ್ಟಾಗಿ ಕಂಡು ಬರುತ್ತಿರಲಿಲ್ಲ. ಕಾಂಗ್ರೆಸ್ ನಾಯಕರ ಜಯಂತಿ, ಪುಣ್ಯಸ್ಮರಣೆಗಳು ಹಾಗೂ ಪಕ್ಷದ ವಿಜಯೋತ್ಸವಗಳು ಆಗೊಮ್ಮೆ ಈಗೊಮ್ಮೆ ನಡೆಯುತ್ತಿದ್ದವು.
ಇಕ್ಬಾಲ್ ಅನ್ಸಾರಿ, ಎಂ.ಮಲ್ಲಿಕಾರ್ಜುನ ನಾಗಪ್ಪ ಹಾಗೂ ಹೆಚ್.ಆರ್.ಶ್ರೀನಾಥ ಹೀಗೆ ಹಲವು ಕಾಂಗ್ರೆಸ್ ಗುಂಪುಗಳಿಂದ ಕಾರ್ಯಕರ್ತರು ರೋಸಿ ಹೋಗಿದ್ದಾರೆ.
ಒಬ್ಬ ಮುಖಂಡರ ಮನೆ ಕಾಂಗ್ರೆಸ್ ಕಾರ್ಯಕರ್ತರು ತೆರಳಿದರೆ ಮತ್ತೊರ್ವ ಮುಖಂಡ ಕೋಪಗೊಳ್ಳುವ ನೆಪದಲ್ಲಿ ಕಾರ್ಯಕರ್ತರು ಪರಸ್ಪರ ಬಹಿರಂಗ ಮಾತನಾಡದ ಸ್ಥಿತಿ ಇತ್ತು.
ಇದನ್ನು ಹೋಗಲಾಡಿಸುವ ಕಾರ್ಯ ನಡೆಯುತ್ತಿದ್ದು
ಪಕ್ಷದ ಕಾರ್ಯಚಟುವಟಿಕೆಗಳ ದೃಷ್ಟಿಯಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಎಲ್ಎ-01 ಆಗಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರನ್ನು ಬದಲಿಸಿ ಸಂಸದ ಕೆ.ರಾಜಶೇಖರ ಹಿಟ್ನಾಳ ಅವರನ್ನು ನೇಮಕ ಮಾಡಿದ ನಂತರ ಗಂಗಾವತಿ ನಗರದ ಬೂತ್ ಬಿಎಲ್ ಎ2 ನೇಮಕ ಮಾಡಿ ಒಟ್ಟು 235 ಬಿಎಲ್ಎ 2 ನೇಮಕ ಮಾಡಿ ಪ್ರತಿ ಬೂತಿನ ಮಾಹಿತಿಯನ್ನು ಶಾಮೀದ್ ಮನಿಯಾರ್,ಬ್ಲಾಕ್ ಅಧ್ಯಕ್ಷ ನಾಗರಾಜ ನಂದಾಪೂರ,ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್ಮಿ ಫಕೀರಪ್ಪ ,ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಸೀಫ್ ಹಾಗೂ ಇತರೆ ಕೆಲ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಪಕ್ಷದ ಚಟುವಟಿಕೆಗಳು ಆರಂಭವಾಗಿವೆ.
ಬಿಎಲ್ಎ-01 ನೇಮಕಾತಿ ನಂತರ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಅವರ ಆಪ್ತರು ಸೋಶಿಯಲ್ ಮೀಡಿಯದಲ್ಲಿ ಹಿಟ್ನಾಳ ಫ್ಯಾಮಿಲಿ,ಶಿವರಾಜ ತಂಗಡಗಿ,ಹೆಚ್.ಆರ್.ಶ್ರೀನಾಥ ಮತ್ತು ಬಸವರಾಜ ರಾಯರೆಡ್ಡಿ ಇವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.ಸ್ವತಹ ಇಕ್ಬಾಲ್ ಅನ್ಸಾರಿ ಸಹ 2018 ಮತ್ತು 2023 ರಲ್ಲಿ ನನ್ನ ಸೋಲಿಗೆ ಹಿಟ್ನಾಳ ಫ್ಯಾಮಿಲಿ ಹಾಗೂ ಬೇರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ಕಾರಣ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಜತೆಗೆ ಜೆಡಿಎಸ್ ವರಿಷ್ಠ ಹೆಚ್. ಡಿ.ದೇವೆಗೌಡರ ಜನ್ಮ ದಿನದ ಸಂದರ್ಭದಲ್ಲಿ ಶುಭ ಕೋರುವ ಮೂಲಕ ಜೆಡಿಎಸ್ ಗೆ ಹತ್ತಿರವಾಗುವ ಸೂಚನೆ ಬಂದಿತ್ತು.
ನಂತರ ಸಿದ್ದರಾಮಯ್ಯ ನವರ ರಾಜೀನಾಮೆಯ ನಂತರ ಗಂಗಾವತಿ ಕಾಂಗ್ರೆಸ್ ಗದ್ದಲ್ಲ ಮೌನಕ್ಕೆ ಜಾರಿದ್ದು, ಇದೀಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಅಧಿಕಾರ ಸ್ವೀಕಾರದ ನಂತರ ಗಂಗಾವತಿ ಕಾಂಗ್ರೆಸ್ ನಲ್ಲೂ ಚಟುವಟಿಕೆಗಳು ಚಿಗುರೊಡೆಯುವ ಮುನ್ಸೂಚನೆ ದೊರಕುತ್ತಿದೆ.
ಮೊದಲಿನಿಂದಲೂ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಬೇಕೆಂದು ಹೇಳುತ್ತಿದ್ದ ಮಾಜಿ ಎಂಎಲ್ಸಿ ಹೆಚ್.ಆರ್.ಶ್ರೀನಾಥ ಅವರ ನೇತೃತ್ವದಲ್ಲಿ ಮುಖಂಡರ ತಂಡ ಪ್ರಮಾಣ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಾಮನಿರ್ದೇಶನಕ್ಕೆ ಹೆಚ್ಚಿದ ಲಾಭಿ: ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದರಿಂದ ಡಿ.ಕೆ. ಶಿವಕುಮಾರ್ ಪರವಾಗಿ ಬ್ಯಾಟಿಂಗ್ ಮಾಡಿದ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ನಂತರದಲ್ಲಿ ನಗರ ಯೋಜನಾ ಪ್ರಾಧಿಕಾರ, ಜಿಲ್ಲಾ ಗ್ಯಾರೆಂಟಿ ಯೋಜನಾ ಸಮಿತಿ,ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಹಾಗೂ ಬೇರೆ ಬೇರೆ ಸರ್ಕಾರದ ನಾಮ ನಿರ್ದೇಶನಗಳಲ್ಲಿ ತಮ್ಮ ಬೆಂಬಲಿಗರಿಗೆ ಸ್ಥಾನಮಾನಗಳನ್ನು ಕೊಡಿಸುವ ಪ್ರಯತ್ನವನ್ನು ಈಗಾಗಲೇ ಮಾಡುತ್ತಿದ್ದಾರೆ.
ಆದ್ದರಿಂದಲೇ ಡಿ.ಕೆ.ಶಿವಕುಮಾರ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರುವ ನೆಪದಲ್ಲಿ ಡಿ.ಕೆ.ಶಿವಕುಮಾರ್ ಅವರ ಮುಂದೆ
ಹಾಜರಾತಿ ಖಚಿತಪಡಿಸಿಕೊಳ್ಳುತ್ತಿದ್ದಾರೆ.
***
ರಾಜ್ಯದ ಅಹಿಂದ ವರ್ಗದ ಶಾಶ್ವತ ಮುಖಂಡರಾದ ಸಿದ್ದರಾಮಯ್ಯನವರು ಕಳೆದ 8 ವರ್ಷಗಳಿಂದ ಅಹಿಂದ ವರ್ಗಕ್ಕೆ ಸಂವಿಧಾನಾತ್ಮಕವಾಗಿ ದೊರಕಬೇಕಿದ್ದ ಎಲ್ಲಾ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ.ಅವರು ರಾಜೀನಾಮೆ ನೀಡಿ ಮುಂದಿನ ಎರಡು ವರ್ಷಗಳ ಕಾಲ ಡಿ.ಕೆ. ಶಿವಕುಮಾರ್ ಅವರಿಗೆ ಮಾರ್ಗದರ್ಶನ ನೀಡಿ ಸಮಾಜದ ಎಲ್ಲ ವರ್ಗದವರಿಗೂ ಸರ್ಕಾರದ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ಮಾಡುವ ಭರವಸೆ ಇದೆ. ಡಿ.ಕೆ. ಶಿವಕುಮಾರ್ ಅವರು ಪಕ್ಷ ನಿಷ್ಠೆ ಮತ್ತು ಕಾರ್ಯಕರ್ತರ ಹಿತ ಕಾಯುವ ಕಾರ್ಯ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಇದೀಗ ಅವರು ಸಿಎಂ ಆಗುತ್ತಿರುವುದು ಪಕ್ಷದ ಸರ್ವರಿಗೂ ಸಂತೋಷದ ವಿಷಯ ಮುಂದಿನ 2028 ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಭರ್ಜರಿ ಗೆಲುವು ಸಾಧಿಸುವಲ್ಲಿ ಯುವ ಕಾಂಗ್ರೆಸ್ ಕಾರ್ಯ ಮಾಡಲಿದೆ ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ನ ಮುಖಂಡರು ಪಾಲ್ಗೊಂಡು ಶುಭ ಕೋರಲಿದ್ದೇವೆ. ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಕ್ಷದ ಚಟುವಟಿಕೆಗಳು ಇನ್ನಷ್ಟು ತೀವ್ರಗೊಳ್ಳಲಿವೆ. ಅವಕಾಶ ವಂಚಿತ ಕಾರ್ಯಕರ್ತರಿಗೆ ಸರ್ಕಾರದ ನಾಮ ನಿರ್ದೇಶನಗಳು ದೊರಕಲಿವೆ.
-ಅಸೀಫ್ ಪ್ರಧಾನ ಕಾರ್ಯದರ್ಶಿ ರಾಜ್ಯ ಯುವ ಕಾಂಗ್ರೆಸ್ ಘಟಕ ಬೆಂಗಳೂರು.
ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನಕ್ಕಾಗಿ ಕಿಷ್ಕಿಂಧಾ ಅಂಜನಾದ್ರಿ ಮೊರೆ ಹೋದ ತಂಗಡಗಿ ಅಭಿಮಾನಿಗಳು.

* ಹನುಮಾನ್ ಚಾಲೀಸಾ ಪಠಣ ಶ್ರೀ ರಾಮ ಜಯ ರಾಮ ಘೋಷಣೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ರಾಜ್ಯದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಹಿರಿಯ ಶಾಸಕರು ಹಾಗೂ ಭೋವಿ ಸಮಾಜದ ಮುಖಂಡರಾದ ಶಿವರಾಜ್ ಎಸ್ ತಂಗಡಗಿ ಅವರಿಗೆ ಸಚಿವ ಸ್ಥಾನ ಕಲ್ಪಿಸುವಂತೆ ಪ್ರಾರ್ಥಿಸಿ ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದಲ್ಲಿ ತಂಗಡಗಿ ಅಭಿಮಾನಿಗಳು ಶ್ರೀ ಆಂಜನೇಯನ ಸನ್ನಿಧಿಯಲ್ಲಿ ಹನುಮಾನ್ ಚಾಲೀಸಾ ಪಠಣ ಹಾಗೂ ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಎನ್ನುವ ಭಜನೆ ಮಾಡುವ ಮೂಲಕ ಪೂಜೆ ಮಾಡುವ ಮೂಲಕ ಬೇಡಿಕೆಯ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಶಿವರಾಜ್ ತಂಗಡಗಿ ಅವರ ಅಭಿಮಾನಿಗಳು ಬೆಳಗಿನ ಜಾವ ಅಂಜನಾದ್ರಿಯನ್ನು ಹತ್ತಿ ಶ್ರೀ ಆಂಜನೇಯನಿಗೆ ಅಖಂಡ ಪೂಜ ಸಲ್ಲಿಸಿದರು.
ಕಾರಟಗಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ದೇವಪ್ಪ ಬಾವಿಕಟ್ಟಿ
ರಮೇಶ ನಾಯಕ,ಅಮರೇಶ ಗೋನಾಳ,
ಕಾಂಗ್ರೆಸ್ ಮುಖಂಡರಾದ ಶರಣೇಗೌಡ,ಪರಕೀ ಶರಣಪ್ಪ, ನಾಗರಾಜ ಬರಗೂರು,ಮುಸ್ಟೂರು ಕ್ಯಾಂಪ್ ಸತೀಶ,ಕಲ್ಗುಡಿ ಪ್ರಸಾದ,ರವಿನಂದನ್,ಸೋಮನಾಥ ದೊಡ್ಮನಿ, ಅರಳಿ ಬಸಣ್ಣ,ವಿರುಪಣ್ಣ,ದುರುಗೇಶ,ಇನಾಯತ್ ಸೇರಿ ಅನೇಕರಿದ್ದರು

