Breaking News
ನಗರ ಠಾಣೆಯ ಪಿಐ ಆಗಿ ಪ್ರಕಾಶ ಆರ್.ಯಾತನೂರ ಆಗಮನ; ಪ್ರಕಾಶ್ ಮಾಳೆ ಅವರಿಗೆ ಬೀಳ್ಕೊಡುಗೆ.

 

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಗಂಗಾವತಿ ನಗರ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿರುವ ಪಿ.ಐ ಪ್ರಕಾಶ ಆರ್.ಯಾತನೂರ ಅವರು ಅಧಿಕಾರ ಸ್ವೀಕರಿಸಿದರು. ವರ್ಗವಾಗಿರುವ ಪಿಐ ಪ್ರಕಾಶ ಮಾಳೆಯವರನ್ನು ಪೊಲೀಸ್ ಸಿಬ್ಬಂದಿ ವರ್ಗದವರು ಬಿಳ್ಕೋಟ್ಟರು.
ನೂತನ ಪಿಐ ಪ್ರಕಾಶ ಆರ್ ಯಾತನೂರು ಇವರನ್ನು ತಾಲೂಕು ಗುಜರಿ ವ್ಯಾಪಾರಿಗಳ ಸಂಘದ ವತಿಯಿಂದ ಸನ್ಮಾನಿಸಿ ಸ್ವಾಗತಿಸಲಾಯಿತು.
ನೂತನ ಪಿ ಐ ಪ್ರಕಾಶ್ ಆರ್ ಯಾತನೂರು ಮಾತನಾಡಿ, ನಗರದಲ್ಲಿ ಶಾಂತಿ ಸೌಹಾರ್ದತೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಪೊಲೀಸ್ ಇಲಾಖೆ ನಾಗರಿಕರ ಸಹಕಾರದಿಂದ ಸರ್ವ ಧರ್ಮಿಯರು ಪರಸ್ಪರ ಭಾವೈಕ್ಯತೆಯಿಂದ ಸಹಬಾಳ್ವೆ ನಡೆಸುವಂತೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಪ್ರಸ್ತುತ ಡಿಜಿಟಲ್ ಅಪರಾಧಗಳು ಹೆಚ್ಚಾಗಿದ್ದು ಮೊಬೈಲ್ ಬಳಕೆ ಮತ್ತು ಕಂಪ್ಯೂಟರ್ ಇಂಟರ್ನೆಟ್ ಬಳಕೆ ಮೂಲಕ ಅಪರಾಧಗಳು ಹೆಚ್ಚಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ. ಯುವಕರು ಮೊಬೈಲ್ ಗಿಳಿಗಡ ಬೀಳದೆ ಸಾಮಾಜಿಕ ಜಾಲತಾಣದಲ್ಲಿ ಅನವಶ್ಯಕ ಫೋಟೋ, ಸ್ಟೇಟಸ್ ಗಳು ಶಾಂತಿ ಕದಡುವ ವಿಷಯಗಳನ್ನು ಹಾಕದೆ ಸಮಾಜದ ಸ್ವಾಸ್ಥವನ್ನು ಕಾಪಾಡುವಂತೆ ಕರೆ ನೀಡಿದರು. ನಶೆ ಭರಿಸುವ ದುಷ್ಟ ಚಟಗಳನ್ನು ಬಿಟ್ಟು ವಿದ್ಯಾಭ್ಯಾಸದ ಕಡೆಗೆ ಗಮನವಿಟ್ಟು ಪಾಲಕರ ಕನಸನ್ನು ನನಸ ಮಾಡಬೇಕು. ಪಾಲಕರು ಸಹ ತಮ್ಮ ಮಕ್ಕಳ ಚಲನ ವಲನಗಳ ಬಗ್ಗೆ ಪ್ರತಿನಿತ್ಯವೂ ಗಮನಹರಿಸುವಂತೆ ಮನವಿ ಮಾಡಿದರು.
ಲೋಕಾಯುಕ್ತಕ್ಕೆ ವರ್ಗವಾಗಿರುವ ಪಿಐ ಪ್ರಕಾಶ್ ಮಾಳೆ ಅವರು ಮಾತನಾಡಿ ಗಂಗಾವತಿ ನಗರದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ತಾವು ಕರ್ತವ್ಯ ನಿರ್ವಹಿಸಿದ್ದು ಇಲ್ಲಿಯ ಜನರು ಬಹಳ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ಜನರಾಗಿದ್ದಾರೆ ತಮ್ಮ ಅಧಿಕಾರ ಅವಧಿಯಲ್ಲಿ ಎಲ್ಲಾ ಸಮಾಜ ಬಾಂಧವರ ಸಹಕಾರದಲ್ಲಿ ಶಾಂತಿ ಸ್ವಭಾವದತಿಯನ್ನು ಕಾಪಾಡಲಾಗಿದೆ ಜೊತೆಗೆ ಅಪರಾಧ ಮನೋಭಾವ ಮಾಡಿದವರಿಗೆ ಸೂಕ್ತ ಶಿಕ್ಷೆಯನ್ನು ಸಹ ಕೊಡಿಸಲಾಗಿದೆ ಮುಂದೆ ಸಹ ನೂತನ ಪಿಐ ಅವರಿಗೆ ಸಲಹೆ ಸಾಕಾರ ಜೊತೆಗೆ ಗಂಗಾವತಿಯ ಶಾಂತಿ, ಸೌಹಾರ್ದಕ್ಕೆ ಪ್ರತಿಯೊಬ್ಬರು ಪೊಲೀಸ್ ಇಲಾಖೆ ಜೊತೆಗೆ ಕೈಜೋಡಿಸುವಂತೆ ಮನವಿ ಮಾಡಿದರು.ಇದುವರೆಗೆ ಸಹಕಾರ ನೀಡಿದ ಗಂಗಾವತಿ ನಾಗರೀಕರು, ಸರ್ವ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಮುಖಂಡರಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗುಜರಿ ವ್ಯಾಪಾರಿಗಳ ಸಂಘದ
ತಾಲೂಕು ಅಧ್ಯಕ್ಷ ರಫೀಕ್, ಮಕ್ಬುಲ್ ಹಾಗೂ ಗಾಂಧಿನಗರ ನಿವಾಸಿ ಹಾಗೂ ದಲಿತ ಸಮಾಜದ ಮುಖಂಡ ಹುಸೇನಪ್ಪ ಪೂಜಾರಿ ಇದ್ದರು.