ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಆನೆಗೊಂದಿಯನ್ನು ಕೈಬಿಡುವಂತೆ ಕೊಪ್ಪಳದಲ್ಲಿ ಬೃಹತ್ ಪಾದಯಾತ್ರೆ!

*ಪ್ರತಿಭಟನೆಯ ನಂತರ ಡಿಸಿ ಅವರಿಗೆ ಮನವಿ ಸಲ್ಲಿಕೆ.
*ಲಲಿತಾರಾಣಿ ಶ್ರೀರಂಗದೇವರಾಯಲು,ಶ್ರೀಕೃಷ್ಣದೇವರಾಯ ಸೇರಿ ಪ್ರಮಖರ ನೇತೃತ್ವ
*ಪ್ರಾಧಿಕಾರ ಜೀವಿಸುವ ಹಕ್ಕುಗಳನ್ನು ಕಸಿದುಕೊಂಡಿದೆ.
*20 ವರ್ಷಗಳಿಂದ ಮಾಸ್ಟರ್ ಪ್ಲಾನ್ ರಚನೆಯಾಗಿಲ್ಲ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಮಾರಕಗಳ ರಕ್ಷಣೆಯ ನೆಪದಲ್ಲಿ ಜನಸಾಮಾನ್ಯರ ಜೀವಿಸುವ ಮೂಲಭೂತ ಮತ್ತು ಮಾನವ ಹಕ್ಕುಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರ ಕಸಿದುಕೊಂಡಿದೆ ಆದ್ದರಿಂದ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡುವಂತೆ ಆಗ್ರಹಿಸಿ ಆನೆಗೊಂದಿ ರಾಜ ವಂಶಸ್ಥರ ನೇತೃತ್ವದಲ್ಲಿ 15 ಗ್ರಾಮಗಳ ಗ್ರಾಮಸ್ಥರು ರೈತರು ಮಹಿಳೆಯರು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಆನೆಗೊಂದಿ ರಾಜ ವಂಶಸ್ಥರಾದ ಲಲಿತಾರಾಣಿ ಶ್ರೀರಂಗದೇವರಾಯಲು ಹಾಗೂ ಶ್ರೀ ಕೃಷ್ಣದೇವರಾಯಲು ಮಾತನಾಡಿ ಐತಿಹಾಸಿಕ ಪ್ರಸಿದ್ಧ ಆನೆಗೊಂದಿ ಕಿಷ್ಕಿಂಧಾ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಕಳೆದ 35 ವರ್ಷಗಳ ಹಿಂದೆ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ತರಲು ಒಪ್ಪಿಕೊಳ್ಳಲಾಗಿತ್ತು ಆದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಇತ್ತೀಚಿನ ಕೆಲ ನಿಯಮಗಳು ಮತ್ತು ಅಧಿಕಾರಿಗಳು ಆನೆಗುಂದಿ ಭಾಗದ ಜನರ ಜೀವಿಸುವ ಹಕ್ಕನ್ನು ಮತ್ತು ಮಾನವ ಹಕ್ಕುಗಳನ್ನು ಕಸಿದುಕೊಂಡಿದೆ.ಇಲ್ಲಿನ ಜನರನ್ನು ಕತ್ತಲಿನಲ್ಲಿ ಬದುಕನ್ನು ದೂಡುವಂತೆ ಮಾಡಿದೆ. ಮನೆಗಳಿಗೆ ಸಣ್ಣಪುಟ್ಟ ವ್ಯಾಪಾರದ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ಖಂಡಿತ ಮಾಡುವುದು, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುವುದು, ಗುಡಿಸಲು, ಮನೆ ನಿರ್ಮಾಣಕ್ಕೆ ಅಡ್ಡಿಪಡಿಸಲಾಗುತ್ತಿದೆ. ಹಂಪಿ ಅಭಿವೃದ್ಧಿ ಭಾಗದ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಆನೆಗೊಂದಿ ಭಾಗದ ಜನರನ್ನು ಅನುಮಾನದಿಂದ ನೋಡುತ್ತಿದ್ದಾರೆ ಅಕ್ರಮದ ಹೆಸರಿನಲ್ಲಿ ಇಲ್ಲಿಯ ಅಂಗಡಿ ಮುಂಗಟ್ಟುಗಳನ್ನು ಮನೆಗಳನ್ನು ಮಾನವೀಯತೆ ಇಲ್ಲದೆ ತೆರವುಗೊಳಿಸಲಾಗುತ್ತಿದೆ.
ಕಳೆದ 20 ವರ್ಷಗಳಿಂದ ಮಹಾಯೋಜನೆ ಮಾಸ್ಟರ್ ಪ್ಲಾನ್ ಘೋಷಣೆಯಾಗಿಲ್ಲ. ಸ್ಮಾರಕಗಳ ಸಂರಕ್ಷಣೆ ಸಾವಿರಾರು ವರ್ಷಗಳಿಂದ ಆನೆಗೊಂದಿ ಭಾಗದ 15 ಹಳ್ಳಿಗ ಜನರೇ ಮಾಡಿದ್ದಾರೆ ಆದರೆ ಸ್ಮಾರಕಗಳ ಸಂರಕ್ಷಣೆ ನೆಪದಲ್ಲಿ ಆನೆಗೊಂದಿ ಭಾಗದ 15 ಗ್ರಾಮಗಳ ಗ್ರಾಮಗಳ ಗ್ರಾಮಸ್ಥರನ್ನು ಒಕ್ಕಲಿಬ್ಬಿಸುವ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಕ್ರಮ ಕಂಡನೀಯವಾಗಿದೆ. ಜನಪ್ರತಿನಿಧಿಗಳು ನಮ್ಮ ಭಾಗದ ಸಮಸ್ಯೆಗಳಿಗೆ ಯಾರು ಸ್ಪಂದಿಸುತ್ತಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಸಣ್ಣಪುಟ್ಟ ಕೆಲಸಗಳಿಗೂ ಅರ್ಜಿ ಸಲ್ಲಿಸಿದರೆ ಆ ಅರ್ಜಿಯನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ನಾಲ್ಕು ಪಂಚಾಯತಿಯ ಪಿಡಿಓಗಳು ರವಾನೆ ಮಾಡುತ್ತಾರೆ ನಂತರ ಪ್ರಾಧಿಕಾರದ ಅಧಿಕಾರಿಗಳು ಇದು ಮಾಡಲು ಬರುವುದಿಲ್ಲ ನಿಯಮಗಳು ಅಡ್ಡಿಯಾಗುತ್ತವೆ ಎಂದು ಶರಬರೆಯುತ್ತಾರೆ. ಇದರಿಂದ ಆನೆಗೊಂದಿ ಗ್ರಾಮದ 15 ಗ್ರಾಮಗಳ ಜನರ ಬದುಕು ಸಂಕಷ್ಟದಿಂದ ಕೂಡಿದೆ, ಆದ್ದರಿಂದ ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಆನೆಗೊಂದಿ ಭಾಗವನ್ನು ಕೈಬಿಡಬೇಕು. ಜೊತೆಗೆ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಸಣ್ಣಪುಟ್ಟ ವ್ಯಾಪಾರಕ್ಕೆ ಟ್ರೇಡ್ ಲೈಸೆನ್ಸ್ ಕೊಡುವ ಅಧಿಕಾರವನ್ನು ಗ್ರಾಮ ಪಂಚಾಯತಿಗಳಿಗೆ ನೀಡಬೇಕು.
ಕೂಡಲೇ ಸಂಸದರು ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಮಟ್ಟದಲ್ಲಿ ಮಾತುಕತೆ ನಡೆಸಿ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಕಾರಿಗನೂರನ್ನು ಕೈ ಬಿಟ್ಟಂತೆ ಆನೆಗೊಂದಿ ಭಾಗದ 15 ಹಳ್ಳಿಗಳನ್ನು ಕೈಬಿಡಬೇಕು.
1961 ರಾಜ್ಯ ಪುರಾತತ್ವ ಮತ್ತು ಪ್ರಾಚ್ಯ ವಸ್ತು ಸಂಬಂಧಿಸಿದಂತೆ ಕಾಯಿದೆಗೆ ವಿಧಾನಸಭೆಯಲ್ಲಿ ತಿದ್ದುಪಡಿ ತಂದು
1988 ಪುರಾತತ್ವ ಮತ್ತು ಪ್ರಾಚ್ಯ ವಸ್ತು ಅಧಿನಿಯಮ ವ್ಯಾಪ್ತಿಗೆ ಆನೆಗೊಂದಿ ಮತ್ತು ವಿರುಪಾಪುರ ಗಡ್ಡಿಯನ್ನು
ಕೆಲವು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಪ್ಪು ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸಿ ಸೇರಿಸಿದ್ದು ಮೊದಲಿಗೆ ಕೋರ್ ಝೋನ್ ನಿಂದ ಆನೆಗೊಂದಿ ಮತ್ತು ವಿರುಪಾಪುರ ಗಡ್ಡಿಯನ್ನು ಕೈಬಿಡಬೇಕು.
ಕೂಡಲೇ ಆನೆಗುಂದಿ ಭಾಗದ 15 ಗ್ರಾಮಗಳ ಗ್ರಾಮಸ್ಥರನ್ನು ರಾಜವಂಶಸ್ಥರನ್ನು ರೈತರನ್ನು ಮಹಿಳೆಯರನ್ನು ಸೇರಿಸಿ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ರಾಜ್ಯ ವಸ್ತು ಇಲಾಖೆ ಹಂಪಿ ಅಭಿವೃದ್ಧಿ ಪ್ರಾಧಿಕಾರದವರು ಸಭೆ ನಡೆಸಿ ಸೂಕ್ತ ಪರಿಹಾರವನ್ನು ನೀಡಬೇಕು ಕೂಡಲೇ ಪ್ರಾಧಿಕಾರದಿಂದ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಕೈಬಿಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಲಲಿತ ರಾಣಿ ಶ್ರೀರಂಗದೇವರಾಯಲು, ಶ್ರೀ ಕೃಷ್ಣದೇವರಾಯಲು, ರತ್ನಶ್ರೀ ರಾಯಲು,
ಆನೆಗೊಂದಿ, ಮಲ್ಲಾಪುರ, ಸಾಣಾಪುರ ಮತ್ತು ಸಂಗಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿ ಪಕ್ಷಾತೀತ,ಜಾತ್ಯತೀತವಾಗಿ ಸಾವಿರಾರು ರೈತರು,ಕೃಷಿ ಕಾರ್ಮಿಕರು, ಬೀದಿಬದಿಯ ವ್ಯಾಪಾರಿಗಳು ಮತ್ತು ಮಹಿಳೆಯರಿದ್ದರು.


