Breaking News
ಆಧುನಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಅನ್ವೇಷಣೆಯ ಮನೋಭಾವ ಬೆಳೆಸುವುದು ಅವಶ್ಯವಾಗಿದೆ:ಜಾನ ಪಾಲ್.

* ಶ್ರೀರಾಮನಗರದ ಬಿರ್ಲಾ ಓಪನ್ ಮೈಂಡ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಪದವಿ ಪ್ರದಾನ.

* ನೃತ್ಯ ,ಸಂಸ್ಕೃತಿಕ ಪ್ರದರ್ಶನದ ಮೂಲಕ ಪಾಲಕರ ಗಮನ ಸೆಳೆದ ಮಕ್ಕಳು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಆಧುನಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಅನ್ವೇಷಣೆಯ ಮನೋಭಾವ ಬೆಳೆಸುವುದೇ ಶಿಕ್ಷಣವಾಗಿದೆ. ಪಾಲಕರು, ಶಿಕ್ಷಕರು ಈ ನಿಟ್ಟಿನಲ್ಲಿ ಕಾರ್ಯ ಮಾಡುವುದು ಅವಶ್ಯ ಎಂದು ಬಿರ್ಲಾ ಓಪನ್ ಮೈಂಡ್ ಇಂಟರ್ನ್ಯಾಷನಲ್ ಸ್ಕೂಲ್ ನ ಅಧ್ಯಕ್ಷ ಜಾನ ಪಾಲ್ ಹೇಳಿದರು. ಅವರು ತಾಲೂಕಿನ ಶ್ರೀರಾಮನಗರದ ಬಿರ್ಲಾ ಓಪನ್ ಮೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಆಯೋಜಿಸಿದ್ದ ಪದವಿ ಪ್ರಧಾನ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಮಸ್ಯೆಗಳ ಕುರಿತು ಯಶಸ್ವಿಯಾಗಿ ಕಾರ್ಯನಿರ್ವಹಿಸುವುದೇ ಜೀವನ, ಪ್ರತಿಯೊಬ್ಬರ ಬದುಕಿನಲ್ಲೂ ಕಷ್ಟ, ಸುಖ, ನೋವು, ನಲಿವುಗಳು ಇರುತ್ತವೆ. ಅವುಗಳನ್ನು ಮೀರಿ ಅನ್ವೇಷಣೆಯ ಮೂಲಕ ಸಮಸ್ಯೆಗಳನ್ನು ಪರಿಹಾರ ಮಾಡಬೇಕು. ಶಿಕ್ಷಣದ ಮಹತ್ವದ ಗುರಿ ಇದಾಗಿದ್ದು, ಜಪಾನ್ ದೇಶ ಮತ್ತು ಇಸ್ರೇಲ್ ದೇಶಗಳ ಜನರು ಇಡೀ ವಿಶ್ವದಲ್ಲಿ ನಿತ್ಯವೂ ಸಮಸ್ಯೆಗಳನ್ನು ಎದುರಿಸುತ್ತಾ ಯಶಸ್ವಿ ಜೀವನ ನಡೆಸುತ್ತಿದ್ದಾರೆ. ಅವರ ಮಾದರಿಯನ್ನು ತೆಗೆದುಕೊಂಡು ಪ್ರತಿಯೊಬ್ಬ ಪಾಲಕ ತಮ್ಮ ಮಕ್ಕಳಿಗೆ ಅನ್ವೇಷಣೆ ಮಾಡುವ ಮನೋಭಾವ ಬೆಳೆಸಬೇಕು. ಬಿರ್ಲಾ ಓಪನ್ ಮೈಂಡ್ ಇಂಟರ್ನ್ಯಾಷನಲ್ ಸ್ಕೂಲ್ ಈ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದೆ. ಪಾಲಕರ ಸಹಕಾರದಿಂದ ಸಂಸ್ಥೆ ಮಹತ್ವದ ಬೆಳವಣಿಗೆ ಕಂಡಿದೆ ಎಂದರು.  ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಿರಿಯ ಪತ್ರಕರ್ತ ಕೆ ನಿಂಗಜ್ಜ ಮಾತನಾಡಿ ಶಿಕ್ಷಣದ ಮುಖ್ಯ ಗುರಿ ಮಾನವೀಯತೆ ಮತ್ತು ಬದುಕುವ ಮಾರ್ಗವನ್ನು ಕಲಿಸುತ್ತದೆ. ಪ್ರತಿಯೊಬ್ಬ ಪಾಲಕ ಮಕ್ಕಳನ್ನು ನೌಕರಿಗಾಗಿ ಓದಿಸದೆ,ಮಾನವೀಯ ಮೌಲ್ಯಗಳನ್ನು ಹೊಂದುವಂತೆ ಮಕ್ಕಳ ಮೇಲೆ ಪ್ರಭಾವ ಬೀರಬೇಕು. ಈ ನಿಟ್ಟಿನಲ್ಲಿ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆಗಳು ಆಗುತ್ತಿದ್ದು, ಇದರಲ್ಲಿ ಬಾಲಕ ,ಪಾಲಕ, ಶಿಕ್ಷಕ ಮತ್ತು ಸಮುದಾಯ ಮಹತ್ವದ ಪಾತ್ರ ವಹಿಸುತ್ತವೆ. ಅತ್ಯಾಧುನಿಕ ಮತ್ತು ಡಿಜಿಟಲ್ ಪರಿಣಾಮವಾಗಿ ಶಿಕ್ಷಣದ ದಿಕ್ಸೂಚಿಯ ಬದಲಾಗಿದ್ದು, ಅದನ್ನು ಪಾಲಕರು ಕಾಲಕ್ಕೆ ತಕ್ಕಂತೆ ತಮ್ಮ ಯೋಚನೆಗಳನ್ನು ಬದಲಾಯಿಸಿಕೊಂಡು ಮಕ್ಕಳ ಭವಿಷ್ಯ ರೂಪಿಸುವಂತೆ ಸಲಹೆ ನೀಡಿದರು ಕಾರ್ಯಕ್ರಮದಲ್ಲಿ  ಪ್ರಾಚಾರ್ಯರು ಪಾಲಕರು ಮತ್ತು ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು