Breaking News
ಸ್ಥಳೀಯ ನ್ಯಾಯಾಲಯಕ್ಕೆ ನ್ಯಾಯಮೂರ್ತಿ ಸಿಎಂ ಪೂಣಚ್ಚ ಭೇಟಿ.

*ಎರಡನೇ ಹಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪನೆ, ವಕೀಲರ ಭವನ ನಿರ್ಮಾಣಕ್ಕೆ ಮನವಿ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ನ್ಯಾಯಾಲಯಕ್ಕೆ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಸಿಎಂ ಪೂಣಚ್ಚ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ್ ಸಿ, ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಕುಮಾರ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್, ಹಿರಿಯ ಶ್ರೇಣಿ ನ್ಯಾಯಾಧೀಶ ಜಿಬಿ ಹಳ್ಳಕಾಯಿ, ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ್ ಪಾಟೀಲ್, ಸಿವಿಲ್ ನ್ಯಾಯಾಧೀಶೆ ಮೇಘ ಸೋಮಣ್ಣನವರ್,

ವಕೀಲರ ಸಂಘದ ಅಧ್ಯಕ್ಷ ಶರಣಬಸಪ್ಪ ನಾಯಕ ಕಾರ್ಯದರ್ಶಿ ಹೆಚ್ ಎಂ ಮಂಜುನಾಥ್ ಉಪಾಧ್ಯಕ್ಷ ಪ್ರಕಾಶ್ ಕುಸಬಿ,

ಲೋಕೋಪಯೋಗಿ ಇಲಾಖೆಯ ಇಇ

ಹೇಮಂತ್ ರಾಜ್, ಎಇಇ ವಿಶ್ವನಾಥ, ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗಂಗಾವತಿ ವಕೀಲರ ಸಂಘವತಿಯಿಂದ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಕ ಮಾಡಲು, ಎರಡನೇ ಹಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪಿಸಲು ಮತ್ತು ವಕೀಲರ ಭವನ ನಿರ್ಮಾಣ ಮಾಡಲು ಮನವಿ ಮಾಡಲಾಯಿತು.

ಗಂಗಾವತಿ: ರಾಷ್ಟ್ರೀಯ ಲೋಕ ಅದಾಲತ್- ನಾಲ್ಕು ನ್ಯಾಯಾಲಯಗಳಲ್ಲಿ 617 ಕೇಸ್ ಗಳ ಇತ್ಯರ್ಥ!

*8.48 ಕೋಟಿ ರೂ. ಸರಕಾರಕ್ಕೆ ಜಮೆ,ವೈಮನಸ್ಸು ಬಿಟ್ಟು ಒಂದಾದ ಮೂರು ಜೋಡಿ ದಂಪತಿಗಳು.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ:.ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ನಾಲ್ಕು ನ್ಯಾಯಾಲಯಗಳ ಅದಾಲತ್ ನಲ್ಲಿ 617 ಪ್ರಕರಣ ಇತ್ಯರ್ಥಹೊಂಡಿದ್ದು, 8.48 ರೂ. ಕೋಟಿ ಸರಕಾರಕ್ಕೆ ಜಮೆಯಾಗಿದೆ. ಮೂವರು ದಂಪತಿಗಳು ವೈಷಮ್ಯ ಬಿಟ್ಟು ಒಂದಾಗಿರುವುದು ಇಂದಿನ ಲೋಕ ಅದಾಲತ್ ನ ವಿಶೇಷವಾಗಿದೆ.
ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿಯಿಂದ ಮಾಹಿತಿ ನೀಡಲಾಗಿದೆ. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಅಧ್ಯಕ್ಷರು ಆಗಿರುವ ಸದಾನಂದ ನಾಗಪ್ಪ ನಾಯ್ಕ್, ಹಿರಿಯ ಸಿವಿಲ್ ನ್ಯಾಯಾಧೀಶ ಗುಡದಪ್ಪ ಬಸವಣೆಪ್ಪ ಹಳ್ಳಾಕಾಯಿ, ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮೇಘಾ ಸೋಮಣ್ಣವರ ಉಪಸ್ಥಿತಿಯಲ್ಲಿ ನಡೆದ ಲೋಕ ಅದಾಲತ್ ನಲ್ಲಿ ನಾಲ್ಕು ತಾಲೂಕ ನ್ಯಾಯಾಲಯದಲ್ಲಿ ಒಟ್ಟು 10884 ಬಾಕಿ ಪ್ರಕರಣಗಳಿದ್ದು ಸದರಿ ರಾಷ್ಟ್ರೀಯ ಲೋಕ ಅದಾಲತನಲ್ಲಿ ಅಪಘಾತ ವಿಮೆ, ನೀರಿನ ಬಿಲ್, ಬ್ಯಾಂಕ ಸಾಲ ವಸೂಲಿ, ಮನೆ ಕರ, ಕೌಟಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ, ಜನನ ಮರಣ, ಮತ್ತು ಕ್ರಿಮಿನಲ್ ಕೇಸಸ್ ಗಳನ್ನು ಸೇರಿ 1438 ಪ್ರಕಣಗಳನ್ನು ರಾಜೀ ಸಂಧಾನಕ್ಕೆ ಅಹ್ವಾನಿಸಲಾಗಿತ್ತು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 51 ಮೋಟಾರು ವಾಹನ ಇತರೆ ಪ್ರಕರಣಗಳು 60 ಒಟ್ಟು 111 ಪ್ರಕರಣಗಳು ಇತ್ಯರ್ಥ. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 20 ಮೋಟಾರು ವಾಹನ 02 ವೈವಾಹಿಕ ಪ್ರಕರಣ 03 ಬ್ಯಾಂಕ ಪ್ರಕರಣ 10 ಚೆಕ್ ಬೌನ್ಸ್ 04 ಇನ್ನಿತರ ಪ್ರಕರಣಗಳು ಸೇತಿ ಒಟ್ಟು 39 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 21 ಚೆಕ್ ಬೌನ್ಸ್ 01 ಕೌಟಂಬಿಕ ದೌರ್ಜನ್ಯ 182 ಜನನ ಮರಣ 86 ಕ್ರೀಮಿನಲ್ ಸೇರಿ ಇನ್ನಿತರ 16 ಪ್ರಕರಣಗಳು ಒಟ್ಟು 306 ಪ್ರಕರಣಗಳು ಇತ್ಯರ್ಥಪಡಿಸಿದೆ. ಮತಗತು ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 04 ಚೆಕ್ ಬೌನ್ಸ , ಕೌಟಂಬಿಕ ದೌರ್ಜನ್ಯ 101 ಜನನ ಮರಣ 33 ಕ್ರೀಮಿನಲ್ ಕೇಸಸ್ ಇನ್ನಿತರ 23 ಪ್ರಕರಣಗಳು ಸೇರಿ ಒಟ್ಟು 161 ಪ್ರಕರಣಗಳು ಇತ್ಯರ್ಥಪಡಿಸಿದ್ದು, ನಾಲ್ಕು ನ್ಯಾಯಾಲಯಗಳು ಸೇರಿ ಲೋಕದ ಅದಾಲತನಲ್ಲಿ ಒಟ್ಟು 617 ಪ್ರಕರಣಗಳು ಇತ್ಯರ್ಥಗೊಂಡಿರುತ್ತದಲವೆ. ಹಾಗೂ ನಾಲ್ಕು ನ್ಯಾಯಾಲಯದಲ್ಲಿ ಸೇರಿ 8,48,25,621.00 ರೂ. ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡಲಾಗಿದೆ. ಸದರಿ ಲೋಕ ಅದಾಲತನಲ್ಲಿ ವಕೀಲರು ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಸಂಘದ ಸದಸ್ಯರು ಮತ್ತು ವಕೀಲರಗಳು ಲೋಕ ಅದಾಲತನಲ್ಲಿ ಭಾಗವಹಿಸಿ ಲೋಕ ಯಶಸ್ವಿಗೊಳಿಸಿದ್ದಾರೆ.

**
ಅಪಘಾತ ವಿಮೆ‌ ರೂ.90.00 ಲಕ್ಷ ಪರಿಹಾರ ವಿತರಣೆ
ವ್ಯಾಜ್ಯ ಪೂರ್ವ 1739 ಪ್ರಕಣಗಳನ್ನು ರಾಜೀ ಸಂಧಾನಕ್ಕೆ ಅಹ್ವಾನಿಸಲಾಗಿದೆ. ಸದರಿ ಲೋಕದ ಅದಾಲತನಲ್ಲಿ ಒಟ್ಟು 30 ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ. 25,97,642.00 ಸರ್ಕಾರಕ್ಕೆ ಜಮಾ ಮಾಡಲಾಗಿದೆ. MVC 557/25 ರ ಪ್ರಕರಣದಲ್ಲಿ ಬಿ. ಅಂಜಿನಪ್ಪ ಮತ್ತು ಶ ಸಿದ್ರಾಮಸ್ವಾಮಿ ಆರ್ ಹಿರೇಮಠ ವಕೀಲರು ಇವರು HDFC ERGO Insurance ಕಂಪನಿಯ ಪರವಾಗಿ ಈ ಪ್ರಕರಣದ ಅರ್ಜಿದಾರರು ವಾಯು ವಿವಾಹರಕ್ಕೆ ಹೋಗುವಾಗ ಹಿಂದುಗಡೆಯಿಂದ ಮೋಟರ್ ಸೈಕಲ್ ವಾಹನ ಬಂದು ಅಪಘಾತ ಮಾಡಿದು ಅರ್ಜಿದಾರರು ಗುತ್ತಿಗೆದಾರರಾಗಿದ್ದು ಸದರಿ ಅರ್ಜಿದಾರ ಹುಲುಗಪ್ಪ ತಂದೆ ಸುಬಾಸ್ ಕಂದಕುರರು ಮೃತ ಪಟ್ಟಿರುತ್ತಾರೆ. ಮೃತರ ವಾರಸ್ತುದಾರರಿಗೆ ರಾಷ್ಟ್ರೀಯ ಲೋಕ ಅದಾಲತನಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ರಾಜಿ ಸಂಧಾನ ಮೂಲಕ ರೂ. 90,00,ಲಕ್ಷ ರೂ.ಗಳ ಪರಿಹಾರ ನೀಡಲಾಯಿತು

ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ನ್ಯಾಯಾಧೀಶರ ಭೇಟಿ!

*ಅನ್ನದಲ್ಲಿ ಕಲ್ಲು,,ಗಾಜು,ಹುಳು,ಉಪ್ಪಡಿ

ವಿದ್ಯಾರ್ಥಿನಿಯರ ಹೇಳಿಕೆ.

*ಊಟ ಬಡಿಸಲು ಎರಡನೇ ಚಮಚ,ನೂರಾರು ವಿದ್ಯಾರ್ಥಿನಿಯರಿಗೆ ಮೂರೇ ದಿನಪತ್ರಿಕೆ.

*ಅಡುಗೆದಾರರ ಬದಲಿಸುವಂತೆ ಎಜೆನ್ಸಿಗೆ ನ್ಯಾಯಾಧೀಶರ ಸೂಚನೆ.

*ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ನ್ಯಾಯಾಲಯಕ್ಕೆ ಆಗಮಿಸುವಂತೆ ಸೂಚನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ಕಾಲೇಜು ಹಾಸ್ಟೆಲ್ ಗೆ ಒಂದನೆಯ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಧೀಶರ ತಂಡ ಭೇಟಿ ನೀಡಿ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರಿಂದ ಸಮಸ್ಯೆಗಳನ್ನು ಆಲಿಸಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಸಮಸ್ಯೆಗಳ ಸುರಿಮಳೆಯನ್ನೇ ನ್ಯಾಯಾಧೀಶರ ಮುಂದೆ ಹೇಳಿ ತಮ್ಮ ಅಳಲನ್ನು ತೋಡಿಕೊಂಡರು.

ಗ್ರಾಮೀಣ ಭಾಗದ ಎಸ್ ಸಿ ಎಸ್ ಟಿ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ಉನ್ನತ ವಿದ್ಯಾಭ್ಯಾಸ ಮಾಡಲು ನಗರ ಪ್ರದೇಶಕ್ಕೆ ಆಗಮಿಸಿ ಸಮಾಜ ಕಲ್ಯಾಣ ಇಲಾಖೆಯ ಕಾಲೇಜು ಹಾಸ್ಟೆಲ್ ನಲ್ಲಿ ವಸತಿ ಇದ್ದು ಸರ್ಕಾರ ಕಲ್ಪಿಸುವ ಸೌಲಭ್ಯದ ಊಟ, ಮೂಲಸೌಕರ್ಯದ ಓದಿ ಬದುಕು ಕಟ್ಟಿಕೊಳ್ಳುವ ಉದ್ದೇಶವನ್ನು ನಿರಾಸೆಗೊಳಿಸುವಂತೆ ಹಾಸ್ಟೆಲ್ ವಾರ್ಡನ್, ಅಡುಗೆದಾರರು ಕಾರ್ಯನಿರ್ವಹಿಸುತ್ತಿರುವ ಕುರಿತು ನ್ಯಾಯಾಧೀಶರುಗಳ ಮುಂದೆ ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಹೇಳಿಕೊಂಡರು.

ಅನ್ನದಲ್ಲಿ ಕಲ್ಲು,ಗಾಜು,ಹುಳು, ಉಪ್ಪಡಿಗಳು ಬರುತ್ತಿವೆ,ಅನ್ನ ಸಾಂಬಾರ ಬಡಿಸಲು ಎರಡು ಚಮಚಗಳಿವೆ, ೧೮೦ ವಿದ್ಯಾರ್ಥಿನಿಯರಿದ್ದು ಕೇವಲ ಮೂರು ದಿನಪತ್ರಿಕೆಗಳನ್ನು ತೋರಿಸಲಾಗುತ್ತದೆ ಇದರಿಂದ ಎಲ್ಲರೂ ಪೇಪರ್ ಓದಲು ಆಗುತ್ತಿಲ್ಲ ಎಂದು ಹಾಸ್ಟೆಲ್ ನಲ್ಲಿದ್ದ ಮೂಲಸೌಕರ್ಯಗಳ ಕೊರತೆಗಳ ಕುರಿತು ಹೇಳಿಕೊಂಡರು.

ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರಿಗೆ ಸರಿಯಾದ ಊಟ ಪೂರೈಸಬೇಕು.ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ರಾಜ್ಯ,ಜಿಲ್ಲಾ ಮಟ್ಟದ ದಿನಪತ್ರಿಕೆಗಳನ್ನು ತರಿಸಬೇಕು.ಅಡುಗೆದಾರರನ್ನು ಬದಲಿಸಬೇಕು,ಸಮಸ್ಯೆಗಳನ್ನು ಚರ್ಚಿಸಲು ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ನ್ಯಾಯಾಲಯಕ್ಕೆ ಆಗಮಿಸಿ ವಿವರಣೆ ನೀಡುವಂತೆ ನ್ಯಾಯಾಧೀಶರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ

ಒಂದನೇಯ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ, ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್ ಸೇರಿ ಹಾಸ್ಟೆಲ್ ವಾರ್ಡನ್ ಸಿಬ್ಬಂದಿಯವರಿದ್ದರು.

ತಳುವಗೇರಾ ಜಾತ್ರೆಯ ಹತ್ಯೆ ಪ್ರಕರಣ ತೀರ್ಪು ಪ್ರಕಟ: 15 ಅಪರಾಧಿಗಳಿಗೆ 7 ವರ್ಷ ಕಠಿಣ ಶಿಕ್ಷೆ ಪ್ರಕಟ

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ: 2019ರಲ್ಲಿ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದ ಜಾತ್ರೆಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಒಟ್ಟು 15 ಅಪರಾಧಿಗಳಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ

ತುಳುವಗೇರಾ ಗ್ರಾಮದ ಜಾತ್ರೆಯಲ್ಲಿ ಜಗದೀಶ ಹವಾಲ್ದಾರ ಹಾಗೂ ಅವರ ಸ್ನೇಹಿತರು ಪಿಪಿ ಹಾಗೂ ಬಲೂನಗಳನ್ನು ಖರೀದಿಸಿಕೊಂಡು ದುರುಗಮ್ಮ ಗುಡಿಯ ಹತ್ತಿರದಿಂದ ಸಾಗುತ್ತಿದ್ದ ವೇಳೆ, ನಾಗಪ್ಪ ಹುಂಡಿ ಮನೆ ಮುಂದೆ 17 ಜನ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಬಡಿಗೆ, ಕ್ರಿಕೆಟ್ ಸ್ಟಂಪ್, ಕಲ್ಲು ಹಾಗೂ ಖಾರದ ಪುಡಿ ಹಿಡಿದು ಜಗಳಕ್ಕೆ ಮುಂದಾಗಿದ್ದರು. ಈ ವೇಳೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಮಲ್ಲಪ್ಪ ತಂದೆ ಮಲ್ಲಿಕಾರ್ಜುನ ಕಂದಕೂರ ಅವರನ್ನು ಕ್ರಿಕೆಟ್ ಸ್ಟಂಪ್ ಹಾಗೂ ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಜೊತೆಗೆ ಜಗದೀಶ ಹವಾಲ್ದಾರ ಸೇರಿದಂತೆ ಇತರರಿಗೆ ತೀವ್ರ ಹಾಗೂ ಸಾಧಾರಣ ಗಾಯಗಳಾಗಿದ್ದವು. ಮಹಿಳಾ ಆರೋಪಿತರು ಖಾರದ ಪುಡಿ ಉಗ್ಗಿ ಜೀವ ಬೆದರಿಕೆ ಪ್ರಕರಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಚಂದ್ರಶೇಖರ ತೀರ್ಪು ಪ್ರಕಟಿಸಿ ಆರೋಪಿತರಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ರೂ. 4,12,500 ಗಳ ದಂಡ ವಿಧಿಸಿದ್ದಾರೆ. ಈ ದಂಡದ ಮೊತ್ತದಲ್ಲಿ ಶೇ.40 ಅಂದರೆ ರೂ. 1,65,000 ಗಳನ್ನು ಮೃತ ಮಲ್ಲಪ್ಪ ಅವರ ತಂದೆ-ತಾಯಿಗೆ ಪರಿಹಾರವಾಗಿ ನೀಡಲು ಹಾಗೂ ತೀವ್ರ ಗಾಯಗೊಂಡ ಶಿವಪ್ಪ ಕಂದಕೂರ ಅವರಿಗೆ ಶೇ.15 ಅಂದರೆ ರೂ. 62,000 ಗಳನ್ನು ನೀಡಲು ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಪ್ರಕರಣದಲ್ಲಿ ಕಳಕಪ್ಪ ತಂದೆ ಬಾಳಪ್ಪ ಹುಂಡಿ, ದೊಡ್ಡಪ್ಪ ತಂದೆ ಬಾಳಪ್ಪ ಹುಂಡಿ, ನಾಗಪ್ಪ ತಂದೆ ಬಾಳಪ್ಪ ಹುಂಡಿ, ರಮೇಶ @ ಕೆಂಪಣ್ಣ ತಂದೆ ಕಳಕಪ್ಪ ಹುಂಡಿ, ಕೃಷ್ಣ ತಂದೆ ದೊಡ್ಡಪ್ಪ ಹುಂಡಿ, ಚಿದಾನಂದ ತಂದೆ ಹನುಮಪ್ಪ ಹುಂಡಿ, ಶರಣಪ್ಪ ಬಾಲಪ್ಪ ಹುಂಡಿ, ಬಸವರಾಜ ತಂದೆ ದೊಡ್ಡಪ್ಪ ಹುಂಡಿ, ಮಂಜುನಾಥ ತಂದೆ ಹನುಮಪ್ಪ ಹುಂಡಿ, ಅಮರಪ್ಪ ಬಾಲಪ್ಪ ಹುಂಡಿ, ನೀಲಪ್ಪ ತಂದೆ ಅಮರಪ್ಪ ಹುಂಡಿ, ಚಂದ್ರಶೇಖರ ತಂದೆ ದೊಡ್ಡಪ್ಪ ಹುಂಡಿ, ಯಮನೂರಪ್ಪ ತಂದೆ ಭೀಮಪ್ಪ ಹುಂಡಿ, ತಿಪ್ಪಣ್ಣ ತಂದೆ ಬಾಲನಗೌಡ ಮಾಲಿಪಾಟೀಲ ಹಾಗೂ ಮುತ್ತಪ್ಪ ತಂದೆ ಹನುಮಪ್ಪ ಹುಂಡಿ ಇವರ ವಿರುದ್ಧ ಆರೋಪಗಳು ಸಾಬೀತಾಗಿದ್ದು ಶಿಕ್ಷೆ ವಿಧಿಸಲಾಗಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ ಕೊಂತವ್ವ ಗಂಡ ದೊಡ್ಡಪ್ಪ ಹುಂಡಿ ಹಾಗೂ ರೇಣವ್ವ ಗಂಡ ನಾಗಪ್ಪ ಹುಂಡಿ, ಇವರ ಮೇಲಿನ ಆರೋಪ ಸಾಬೀತಾಗದ ಕಾರಣ ಅವರನ್ನು ಬಿಡುಗಡೆಗೊಳಿಸಲಾಗಿದೆ.

ಪ್ರಕರಣದ ತನಿಖೆಯನ್ನು ಸಿಪಿಐ ಸುರೇಶ್ ತಳವಾರ ನಡೆಸಿ, ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಂ.ಎ. ಪಾಟೀಲ್ ವಾದ ಮಂಡಿಸಿದ್ದು, ಸಾಕ್ಷಿದಾರರನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಕುಷ್ಟಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹನುಮೇಶ ಜಗ್ಗಲ್ ಸಹಕರಿಸಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಎಂ.ಎ. ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.