ಕೊಲೆ ಪ್ರಕರಣ:20ವರ್ಷ ತಲೆ ಮರೆಸಿಕೊಂಡಿದ್ದ ಆರೋಪಿಗೆ ಜೀವವಾಧಿ ಶಿಕ್ಷೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ;ಕೊಲೆ ಮತ್ತು ಮರಣಾಂತಿಕ ಹಲ್ಲೆ ಪ್ರಕರಣದಲ್ಲಿ ಸುಮಾರು ೨೦ ವರ್ಷಗಳಿಂದಲೂ ತಲೆ ಕರೆಸಿಕೊಂಡಿದ್ದ ಕನಕಗಿರಿ ತಾಲೂಕಿನ ಬೈಲ್ ಲಖಂಪೂರದ ನಿವಾಸಿ ಪರಶುರಾಮ ಅಲಿಯಾಸ್ ರಾಮಣ್ಣ ತಾಯಿ ದುರುಗಮ್ಮ
(49) ಈತನಿಗೆ ಒಂದನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಜ ಇವರು ತೀರ್ಪು ನೀಡಿ ಜೀವಾವಧಿ ಶಿಕ್ಷೆ ಮತ್ತು 35 ಸಾವಿರ ರೂ.ಗಳ ದಂಡ ವಿಧಿಸಿದ್ದಾರೆ.
ಪ್ರಕರಣ:ದಿನಾಂಕ 15-01-2004 ರ ಮಧ್ಯಾನ್ಹ 3 ಗಂಟೆ ಸುಮಾರಿಗೆ ದುರುಗಪ್ಪ ನಾಯಕ ಹಾಗೂ ಆರೋಪಿತನ ಹೆಂಡತಿ ದುರುಗಪ್ಪ ನಾಯಕ ಮೇಲೆ ಬಲವಾಗಿ ಚಾಕುವಿನಿಂದ ಬಲ ಪಕ್ಕೆಗೆ ಇರಿದು ತೀವ್ರ ಗಾಯಗೊಳಿಸಿ ಕೊಲೆ ಮಾಡಿ ನಂತರ ಸ್ಥಳದಲ್ಲಿದ್ದ ಆರೋಪಿತನ ಹೆಂಡತಿ ಗೆ ಹೊಟ್ಟೆ ಭಾಗದಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆಯ ಕುರಿತ ಪ್ರಕರಣ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಡಿ ಸಲ್ಲಿಸಲಾಗಿತ್ತು.ಪ್ರಕರಣ ವಿಚಾರಣಾ ಹಂತದಲ್ಲಿ ಇದ್ದ ಸಂದರ್ಭದಲ್ಲಿ ಸದ್ರಿ ಆರೋಪಿ ತಲೆ ಮರೆಸಿಕೊಂಡು ಬೇರೆ ಹೆಸರುಗಳಿಂದ ತನ್ನ ಇರುವಿಕೆಯನ್ನು ಮರೆಮಾಚಿ ಬೆಂಗಳೂರಿನಲ್ಲಿ ವಾಸವಾಗಿದ್ದ ಸದ್ರಿ ಆರೋಪಿತನ ಬಗ್ಗೆ ಕನಕಗಿರಿ ಪೊಲೀಸರು ಶೋಧ ನಡೆಸಿ ಆರೋಪಿತನನ್ನು 2025 ರಲ್ಲಿ ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ನಾಗಲಕ್ಷ್ಮಿ ವಾದ ಮಂಡಿಸಿದ್ದಾರೆ. ಇದೀಗ ಆರೋಪಿ ಪರಶುರಾಮ ಅಲಿಯಾಸ್ ರಾಮಣ್ಣ ಇವರಿಗೆ ಜೀವಾವಧಿ ಶಿಕ್ಷೆ ಘೋಷಣೆಯಾಗಿದೆ.

