Breaking News
ಟಿಬಿ ಡ್ಯಾಂ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕರು ಜಲ ಸಮಾಧಿ.

 

ಕಿಷ್ಕಿಂಧವಾಣಿ ಸುದ್ದಿ

 

ಹಗರಿಬೊಮ್ಮನಹಳ್ಳಿ :- ತಾಲೂಕಿನ ತಂಬ್ರಹಳ್ಳಿ ಗ್ರಾಮದ ಸಮೀಪವಿರುವ ತುಂಗಭದ್ರಾ ಡ್ಯಾಂ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ಮೂವರು ಯುವಕರು ಜಲ ಸಮಾಧಿಯಾದ ಘಟನೆ ಮಂಗಳವಾರ ಸಂಜೆ ಜರುಗಿದೆ. ನಾಪತ್ತೆಯಾಗಿದ್ದ ಮೂವರ ಬಗ್ಗೆ ಓರ್ವನ ಶವ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮುಳುಗಡೆಯಾದ ಯುವಕರನ್ನು ಒಂದೇ ಕುಟುಂಬದ ಮಡಿವಾಳರ ರಾಜ ( 22) ಮಡಿವಾಳರ ಯಮುನಪ್ಪ( 20 )ಹಾಗೂ ಮಡಿವಾಳರ ರಾಜಪ್ಪ( 26 ) ಎಂದು ಗುರುತಿಸಲಾಗಿದೆ. ಮೂವರೂ ಸೇರಿ ಮಂಗಳವಾರ ಮಧ್ಯಾನ್ಹ ತುಂಗಭದ್ರಾ ಡ್ಯಾಂ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದರು . ಆದರೆ ಸಂಜೆಯಾದರೂ ಮೂವರು ಮನೆಗೆ ಬಾರದ ಕಾರಣ, ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಬಳಿಕ ಸಂಬಂಧಿಕರು ಹಾಗೂ ಕುಟುಂಬಸ್ಥರು ನದಿಯ ಸುತ್ತಮುತ್ತ ಅವರಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಗರಿ ಬೊಮ್ಮನಹಳ್ಳಿ ಹಾಗೂ ತಂಬ್ರಹಳ್ಳಿ ಪೊಲೀಸರು ಮತ್ತು ಸ್ಥಳೀಯರು ಹಿನ್ನೀರಿನಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಬಳಿಕ ಎಸ್. ಡಿ. ಆರ್. ಎಫ್. ತಂಡವು ಸ್ಥಳಕ್ಕೆ ಧಾವಿಸಿ ತುಂಗಭದ್ರಾ ಡ್ಯಾಂ ಹಿನ್ನಿರಿನಲ್ಲಿ ಶೋಧಕ ನಡೆಸುತ್ತಿದೆ. ಈ ವೇಳೆ ನಾಪತ್ತೆಯಾಗಿದ್ದ ಮೂವರ ಪೈಕಿ ಓರ್ವ ಯುವಕರ ಶವ ಪತ್ತೆಯಾಗಿದೆ ಉಳಿದ ಇಬ್ಬರು ಯುವಕರಿಗಾಗಿ ತಂಡ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿ ಮುಂದುವರಿಸಿದ್ದಾರೆ. ಹಗರಿಬೊಮ್ಮನಹಳ್ಳಿ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಮಾಡಿ ನಾಪತ್ತೆಯಾದ ಯುವಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ತಂಬ್ರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕರು ನಾಪತ್ತೆಯಾಗಿರುವ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ನದಿಯಲ್ಲಿ ಮೀನು ಹಿಡಿಯಲು ತೆರಳಿದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಸ್ಥಳಕ್ಕೆ.ಪಿ.ಜಾಹ್ನವಿ, ತಹಸೀಲ್ದಾರ್ ಆರ್.ಕವಿತಾ,

ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ,ಸಿಪಿಐ ವಿಕಾಸ್ ಲಂಬಾಣಿ ಧಾವಿಸಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!