Breaking News
ಹೊಸಪೇಟೆ: ಶ್ರೀ ಸಾಯಿಬಾಬಾ ಗುಡಿಯಿಂದ ಕನಕದಾಸ ವೃತ್ತದ ವರೆಗಿನ ರಸ್ತೆಗೆ ಪ್ರಥಮ ಶಾಸಕ ಡಾ.ನಾಗನಗೌಡ ಹೆಸರು  ನಾಮಕರಣಕ್ಕೆ ಮನವಿ.

 

 

ಕಿಷ್ಕಿಂಧವಾಣಿ ಸುದ್ದಿ

 

ಹೊಸಪೇಟೆ:ನಗರದ ಸಾಯಿಬಾಬಾಮಂದಿರದಿಂದ ಕನಕದಾಸರ ವೃತ್ತದ ವರೆಗಿನ ಬೈಪಾಸ್ ರಸ್ತೆಗೆ ಪ್ರಥಮ ಶಾಸಕ ಡಾ.ಆರ್.ನಾಗನಗೌಡ ಇವರ ಹೆಸರನ್ನು ನಾಮಕರಣ ಮಾಡುವಂತೆ ಅಖಿಲ ಕರ್ನಾಟಕ ಕುರುಬರ ಮಹಾಸಭಾ ವತಿಯಿಂದ

ಹೊಸಪೇಟೆ ನಗರದ ನಗರಸಭಾ ಅಧ್ಯಕ್ಷ ರೂಪೇಶ್ ಕುಮಾರ್ ಇವರಿಗೆ ಸಂಘಟನೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಇವರ ನೇತೃತ್ವದಲ್ಲಿ ಮನವಿಪತ್ರ ಸಲ್ಲಿಸಲಾಯಿತು.

 

ಹೊಸಪೇಟೆಯ ಪ್ರಥಮ ಶಾಸಕ ಹಾಗೂ

ಭಾರತದ ಗವರ್ನರ್ ಜನರಲ್ ಮತ್ತು ಮದ್ರಾಸ್ ಪ್ರಾಂತ್ಯದ ಮಾಜಿ ಮುಖ್ಯಮಂತ್ರಿ ಸಿ ರಾಜಗೋಪಾಲಾಚಾರಿ ಇವರ ಮಂತ್ರಿಮಂಡಲದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಡಾ. ಆರ್ ನಾಗನಗೌಡ ಇವರು ಕೃಷಿ ಕ್ಷೇತ್ರದಲ್ಲಿ ಎಂಎಸ್ಸಿ ಮತ್ತು ಪಿ ಎಚ್ ಡಿ ಪದವಿಯನ್ನು ಅಮೆರಿಕ ಯುನಿವರ್ಸಿಟಿಯಲ್ಲಿ ಪಡೆದು ಮದ್ರಾಸ್ ಪ್ರಾಂತ್ಯ ಹಾಗೂ ಮೈಸೂರ್ ರಾಜ್ಯದ ಕೃಷಿ ಸಚಿವರಾಗಿದ್ದರು. ಮೈಸೂರು ಪ್ರಾಂತ್ಯದ ಸರ್ಕಾರದಲ್ಲಿ ಅವರು ರಾಜ್ಯದ ಮೊದಲ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು.

1952, 1957 ಹಾಗೂ 1967ರಲ್ಲಿ ಹೊಸಪೇಟೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ ಜನಸೇವೆ ಸಲ್ಲಿಸಿದ್ದಾರೆ.

ಮೈಸೂರು ರಾಜ್ಯ ಸರ್ಕಾರದಲ್ಲಿ ಕೃಷಿ, ಅರಣ್ಯ ಹಾಗೂ ಪಶುಸಂಗೋಪನೆಗೆ ಸಂಬಂಧಿಸಿದ ಸಚಿವರಾಗಿ ಸೇವೆ ಸಲ್ಲಿಸಿದ್ದು, ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ರೈತರ ಹಿತಾಸಕ್ತಿಗಾಗಿ ಮಹತ್ವದ ಕೆಲಸಗಳನ್ನು ನಿರ್ವಹಿಸಿದ್ದಾರೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಸಲುವಾಗಿ ಮಾನದಂಡಗಳನ್ನು ರೂಪಿಸುವ ಉದ್ದೇಶದಿಂದ ಮೈಸೂರು ಸರ್ಕಾರ 1960ರಲ್ಲಿ ಡಾ. ಆರ್. ನಾಗನಗೌಡ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಸಮಿತಿಯನ್ನು ರಚಿಸಿತ್ತು. ಇದು ಕರ್ನಾಟಕದ ಹಿಂದುಳಿದ ವರ್ಗಗಳ ನೀತಿಯ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ.

ಈ ಸಮಿತಿಯ ಉದ್ದೇಶಗಳ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿಯೂ ಸ್ಪಷ್ಟ ಉಲ್ಲೇಖವಿದೆ.

ಸ್ಥಳೀಯ ರೈತರಿಗೆ ಅನುಕೂಲವಾಗುವಂತೆ ಚಿತ್ತವಾಡಿಗಿ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಅವರು ನೀಡಿದ ಕೊಡುಗೆ ಈ ಭಾಗದ ಕೃಷಿ ಹಾಗೂ ರೈತ ಸಮುದಾಯದ ಇತಿಹಾಸದಲ್ಲಿ ಸ್ಮರಣೀಯವಾಗಿದೆ.

ಹೊಸಪೇಟೆ ನಗರದ ಅಭಿವೃದ್ಧಿಯೊಂದಿಗೆ ಅವರ ಸೇವೆಯನ್ನು ಅಮೋಘವಾಗಿದೆ.

ಶ್ರೀ ಸಾಯಿಬಾಬಾ ಗುಡಿಯಿಂದ ಅನಂತಶಯನಗುಡಿಯವರೆಗೆ, ಕನಕದಾಸ ವೃತ್ತದ ಮಾರ್ಗವಾಗಿ ಸಾಗುವ ಈಗಿನ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಡಾ.ನಾಗನಗೌಡ ಕಾರಣರಾಗಿದ್ದು ಈ ರಸ್ತೆಗೆ “ಡಾ. ಆರ್. ನಾಗನಗೌಡ ರಸ್ತೆ”

ಎಂದು ನಾಮಕರಣ ಮಾಡಲು ಕೋರಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಏ ಎಸ್ ಐ ನಾಗಪ್ಪ, ವೆಂಕಟೇಶ್ ಅಯ್ಯಾಳಿ, ನಾಗರಾಜ್, ಕೆ.ದೇವರಾಜ್,ರಮೇಶ, ಈರಣ್ಣ, ವಿರುಪಾಕ್ಷಿ, ಹೊಸಪೇಟೆ ತಾಲೂಕಿನ ಕುರುಬ ಮಹಾಸಭಾ ಅಧ್ಯಕ್ಷ ರಾಮು, ರವಿಶಂಕರ್, ನಿವೃತ್ತ ಏಎಸ್ಐ ರಮಾಲಿ ಇದ್ದರು.

ಕಿಷ್ಕಿಂಧಾ ಅಂಜನಾದ್ರಿ ಹುಂಡಿ ಎಣಿಕೆ,46 ದಿನಗಳಲ್ಲಿ 44.15ಲಕ್ಷ ರೂ.ಸಂಗ್ರಹ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ದೇವಾಲಯದ ಭಕ್ತರ ಕಾಣಿಕೆಯ ಹುಂಡಿಯನ್ನು ಮಂಗಳವಾರ ಎಣಿಕೆ ಮಾಡಲಾಗಿದ್ದು 46 ದಿನಗಳಲ್ಲಿ 44,15,590 ರೂ.ಗಳು ಸಂಗ್ರಹವಾಗಿದೆ.
ಜು.07 ರಿಂದ ಆ.18 ವರೆಗಿನ ಅವಧಿಯಲ್ಲಿ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆಯನ್ನು ಮಂಗಳವಾರ ಕಂದಾಯ,ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳ ನೇತೃತ್ವದಲ್ಲಿ ವಿಡಿಯೋ ರೆಕಾರ್ಡಿಂಗ್ ನಲ್ಲಿ ಎಣಿಕೆ ಮಾಡಲಾಯಿತು.
ಎಣಿಕೆಯ ಸಂದರ್ಭದಲ್ಲಿ
ನೇಪಾಳ, ಅಮೇರಿಕಾ,ಪನಾಮ, ನೆದರ್ಲ್ಯಾಂಡ್ ದೇಶ ಕರೆನ್ಸಿಗಳು ಹುಡಿಯಲ್ಲಿದ್ದವು.
ಹುಂಡಿಯ ಎಣಿಕೆಯ ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಶಿರಸ್ತೆದಾರರಾದ ಪ್ರಕಾಶ ನಾಯಕ, ಕ್ರಿಷ್ಣವೇಣಿ ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ, ಮಹೇಶ ದಲಾಲ್, ಕಂದಾಯ ಮಂಜುನಾಥ್, ರಶ್ಮಿ, ನಾಗರತ್ನ, ಪ್ರಭುಸ್ವಾಮಿ, ಸುಧ, ಕವಿತಾ, ಕವಿತಾ, ಗಾಯತ್ರಿ, ಸುಪ್ರಿಯ, ನವಾಜ್.ಯಶ್‌ವಂತ, ಶರಣಪ್ಪ,ರಾಜೇಶ್ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ನವೀನ್ ಕುಮಾರ, ಕಮೀಟಿ ಮ್ಯಾನೇಜರ್ ಮಡಿವಾಳ ವೆಂಕಟೇಶ ಹಾಗೂ ದೇವಸ್ಥಾನದ ಸಿಬ್ಬಂದಿವರ್ಗವರಿದ್ದರು

ಯುವಜನರನ್ನು ಕಾರ್ಯಶೀಲರನ್ನಾಗಿಸಲು ಭಾರತ ಜೋಡೋ ಯುವ ಸಂಘಗಳ ಸ್ಥಾಪನೆ:ಆರ್.ವಿರೂಪಾಕ್ಷಮೂರ್ತಿ

 

*ಗಂಗಾವತಿಯ 35 ವಾರ್ಡುಗಳ ಪೈಕಿ 13 ಯುವ ಸಂಘ ಸ್ಥಾಪನೆ,100ಕ್ಕೂ ಹೆಚ್ಚು ಸದಸ್ಯರು,15 ಪದಾಧಿಕಾರಿಗಳ ನೇಮಕ

 

ಕಿಷ್ಕಿಂಧವಾಣಿ ಸುದ್ದಿ

 

ಗಂಗಾವತಿ: ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಮಹತ್ವಾಕಾಂಕ್ಷೆಯ ಭಾರತ ಜೋಡೋ ಯುವಸಂಘಗಳ ಸ್ಥಾಪನೆಗೆ ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯ ಆರಂಭಿಸಿದ್ದು ಪ್ರತಿ ಎರಡು ವಾರ್ಡುಗಳನ್ನು ಜೋಡಿಸಿ ಒಟ್ಟು 13 ಭಾರತಜೋಡೋ ಯುವ ಸಂಘಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ನಗರಸಭೆಯ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಹೇಳಿದರು.

ಅವರು ನಗರಸಭೆಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕರ್ನಾಟಕ ಸರ್ಕಾರವು ರಾಜ್ಯದ ಯುವಜನತೆಯ ಸಬಲೀಕರಣಕ್ಕಾಗಿ ‘ಭಾರತ್ ಜೋಡೋ ಯುವ ಸಂಘ’ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಡಿ ರಾಜ್ಯಾದ್ಯಂತ 10,000 ಯುವ ಸಂಘಗಳನ್ನು ಸ್ಥಾಪಿಸಲು ಅಧಿಕೃತ ಆದೇಶ ಹೊರಡಿಸಲಾಗಿದೆ.

ಆರ್ಥಿಕ ಸಹಾಯ: ಅನುಮೋದನೆ ಪಡೆದ ಪ್ರತಿಯೊಬ್ಬ ಭಾರತ್ ಜೋಡೋ ಯುವ ಸಂಘಕ್ಕೆ ವಾರ್ಷಿಕವಾಗಿ ₹10 ಲಕ್ಷ ಅನುದಾನವನ್ನು 3 ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಿದೆ.

ಪ್ರತಿ ಸಂಘದ ಒಬ್ಬ ತರಬೇತುದಾರರಿಗೆ (ತರಬೇತಿದಾರ) ವಾರ್ಷಿಕವಾಗಿ ₹ 24,000 ಗೌರವಧನ (ಟಿಂಗೆಗಳಿಗೆ ₹ 2,000) ವೆಚ್ಚವಾಗುತ್ತದೆ.

ಈ ಬೃಹತ್ ಯೋಜನೆಗಾಗಿ ಕರ್ನಾಟಕ ಸರ್ಕಾರವು ₹1,010 ಕೋಟಿ ಹಣವನ್ನು ಮೀಸಲಿಟ್ಟಿದೆ.

16 ರಿಂದ 35 ವರ್ಷದೊಳಗಿನ ಯುವಕ-ಯುವತಿಯರು ಈ ಸಂಘದ ಸದಸ್ಯರಾಗಬಹುದು. ಪ್ರತಿ ಯುವ ಸಂಘದಲ್ಲಿ ಕನಿಷ್ಠ 100 ರಿಂದ 250 ಸದಸ್ಯರು ಇರಬೇಕು. ಸಂಘವನ್ನು ಮುನ್ನಡೆಸಲು 15 ಜನರ ಕಾರ್ಯಕಾರಿ ಸಮಿತಿ ಇರುತ್ತದೆ. ಇದರಲ್ಲಿ ಕನಿಷ್ಠ 5 ಜನ ಮಹಿಳೆಯರು ಇರಬೇಕು ಮತ್ತು ಅಧ್ಯಕ್ಷ ಅಥವಾ ಉಪಾಧ್ಯಕ್ಷ ಹುದ್ದೆಗಳಲ್ಲಿ ಕಡ್ಡಾಯವಾಗಿ ಮಹಿಳೆಯಾಗಿರಬೇಕು. ಪ್ರತಿ ಸಂಘವನ್ನು ‘ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960’ ರ ಅಡಿಯಲ್ಲಿ ರಿಜಿಸ್ಟರ್ ಮಾಡಲಾಗಿದೆ. 1. ಆನ್ಲೈನ್ ಮೂಲಕ: ನೀವು ಅಧಿಕೃತ ಬಿಜೆಯೆಸ್ ಪೋರ್ಟಲ್ ಅಥವಾ ಮೊಬೈಲ್ ಆಪ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಬಳಕೆ ಬರದಿದ್ದರೆ ನಿಮ್ಮ ಹತ್ತಿರದ ಗ್ರಾಮ್ ಒನ್ (ಗ್ರಾಮ್ ಒನ್), ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಬಹುದು.

ನೋಂದಣಿಗೆ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಪ್ರತಿ ಸದಸ್ಯನ ನೋಂದಣಿಗೆ ಕೇವಲ ₹10 ನೋಂದಣಿ ಶುಲ್ಕ ಇರುತ್ತದೆ. ಇದರೊಂದಿಗೆ ಸದಸ್ಯರಿಗೆ ಗುರುತಿನ ಚೀಟಿ (ಐಡಿ ಕಾರ್ಡ್) ಕೂಡ ಸಿಗುತ್ತದೆ. ಸರ್ಕಾರ ನೀಡುವ ₹10 ಲಕ್ಷ ಹಣವನ್ನು ಕೇವಲ ಕ್ರೀಡೆ, ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಮೂಲಸೌಕರ್ಯಗಳಿಗೆ ಮಾತ್ರ ಬಳಸಬೇಕು. ಗ್ರಾಮೀಣ ಕ್ರೀಡಾಕೂಟಗಳು, ಯೋಗ ಶಿಬಿರಗಳು ಮತ್ತು ಸಾಂಪ್ರದಾಯಿಕ ಆಟಗಳ ಆಯೋಜನೆ ಮಾಡಬೇಕು. ಕೆರೆ-ಕಲ್ಯಾಣಿಗಳ ಸ್ವಚ್ಛತೆ ಮತ್ತು ಸ್ವಚ್ಛತಾ ಜಾಗೃತಿಯ ಅಭಿಯಾನಗಳು. ಸಸಿ ನೆಡುವುದು ಮತ್ತು ಪರಿಸರ ಸಂರಕ್ಷಣೆ ಜಾಗೃತಿ. ರಕ್ತದಾನ ಶಿಬಿರಗಳು ಮತ್ತು ಉಚಿತ ಆರೋಗ್ಯ ತಪಾಸಣೆ. ಯುವಕರಿಗೆ ಡಿಜಿಟಲ್ ಸಾಕ್ಷರತೆ, ಕಂಪ್ಯೂಟರ್ ತರಬೇತಿ ಮತ್ತು ಜೀವನ ಕೌಶಲ್ಯಗಳ ಅಭಿವೃದ್ಧಿ. ಮಾದಕ ವಸ್ತುಗಳ ವಿರೋಧಿ ಅಭಿಯಾನಗಳನ್ನು ನಡೆಸುವುದು.

ವಾರ್ಡ್ನಲ್ಲಿ ಯುವಕರ ತಂಡವನ್ನು ಕಟ್ಟಿಕೊಂಡು ಸಮಾಜಮುಖಿ ಕೆಲಸ ಮಾಡಲು ಇದು ಅತ್ಯುತ್ತಮ ಅವಕಾಶವಾಗಿದೆ.ಪ್ರತಿ ಸಂಘಕ್ಕೂ ನಗರಸಭೆಯ ಅಧಿಕಾರಿಗಳು ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆಂದರು.

ಈ ಸಂದರ್ಭದಲ್ಲಿ ಮ್ಯಾನೇಜರ್ ಷಣ್ಮುಖಪ್ಪ, ಸಮುದಾಯ ಅಧಿಕಾರಿ ವಿಜಯಲಕ್ಷಿö್ಮ ಸೇರಿ ನಗರಸಭೆಯ ಅಧಿಕಾರಿಗಳಿದ್ದರು.

error: Content is protected !!