Breaking News
ಟಿಬಿ ಡ್ಯಾಂ ಗೆ ಲಕ್ಷಕ್ಕೂ ಹೆಚ್ಚು ಒಳಹರಿವು.

ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳ ಜತೆ ಸಮಾಲೋಚಿಸಿ ಕಾಲುವೆಗಳಿಗೆ ನೀರು: ಸಚಿವ ರಾಮಲಿಂಗಾರೆಡ್ಡಿ.

*ಜಲಾನಯನ ಪ್ರದೇಶದಲ್ಲಿ ಅತ್ಯುತ್ತಮ ಮಳೆ ತುಂಗಾ ಡ್ಯಾಂ ನಿಂದ ಲಕ್ಷ ಕ್ಯೂಸೆಕ್ಸ್ ನೀರು ನದಿಗೆ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಅತ್ಯುತ್ತಮ ಮಳೆಯಾಗುತ್ತಿರುವುದರಿಂದ ತುಂಗಾ ಡ್ಯಾಂ ನಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರನ್ನು ನದಿಯ ಮೂಲಕ ಬಿಡಲಾಗುತ್ತಿದ್ದು ಶೀಘ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು ಮತ್ತು ರೈತರ ಜತೆ ಸಮಾಲೋಚಿಸಿ ಕಾಲುವೆಗಳಿಗೆ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಅವರು ಕಿಷ್ಕಿಂಧವಾಣಿ ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ 45 ದಿನಗಳಿಂದ ಶೃಂಗೇರಿ, ತೀರ್ಥಹಳ್ಳಿ, ಆಗುಂಬೆ,ಶಿವಮೊಗ್ಗ ಸೇರಿದಂತೆ ತುಂಗಭದ್ರಾ ಜಲಾ ನಯನ ಪ್ರದೇಶದಲ್ಲಿ ಅತ್ಯುತ್ತಮ ಮಳೆಯಾಗುತ್ತಿರುವುದು ಸಂತೋಷದ ಸಂಗತಿ, ಜೊತೆಗೆ ವರದಾ ನದಿ ಸಹ ತುಂಬಿ ಹರಿಯುತ್ತಿದ್ದು, ತುಂಗಭದ್ರಾ ಡ್ಯಾಂ ಗೆ ಪ್ರಸ್ತುತ ಮಂಗಳವಾರ ಸಂಜೆ ವರೆಗೆ 55 ಟಿಎಂಸಿ ನೀರು ಸಂಗ್ರಹವಾಗಿದ್ದು ಪ್ರಸ್ತುತ ಒಂದು ಲಕ್ಷ ಕ್ಯೂಸೆಕ್ಸ್ ನೀರು ಒಳಹರಿವು ಇದ್ದು, ಇದು ನಾಲ್ಕೈದು ದಿನ ಮುಂದುವರಿದರೆ ಸುಮಾರು 70-80 ಟಿಎಂಸಿ ನೀರು ಸಂಗ್ರಹವಾಗುವ ಸಾಧ್ಯತೆ ಇದ್ದು ಕುಡಿಯುವ ನೀರಿನ ಸಂಗ್ರಹವಿಟ್ಟುಕೊಂಡು ಮುಂಗಾರು ಬೆಳೆಗೆ ನೀರು ಬಿಡುವ ಕುರಿತು ನೀರಾವರಿ ಸಭೆಯಲ್ಲಿ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು,ರೈತರ ಮುಖಂಡರ ಸಲಹೆ,ಸೂಚನೆ ಪಡೆದು ನೀರು ಹರಿಸಲಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!