ಹಿರಿಯ ಮುತ್ಸದ್ದಿ ಹೆಚ್.ಜಿ.ರಾಮುಲು ಕ್ಷೇಮ ವಿಚಾರಿಸಿದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ. ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಹೆಚ್.ಜಿ. ರಾಮುಲು ರಾಜಕೀಯ ಸೇವೆ ಸಲ್ಲಿಸಿದ್ದಾರೆ: ಕೆ ವಿರೂಪಾಕ್ಷಪ್ಪ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಮಾಜಿ ಸಂಸದ ಹಿರಿಯ ಮುಖಂಡ ಹೆಚ್.ಜಿ. ರಾಮುಲು ಅವರು ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ತಮ್ಮ ರಾಜಕೀಯ ಸೇವೆಯನ್ನು ಮಾಡಿದ್ದಾರೆ.ಅವರ ಆರೋಗ್ಯವನ್ನು ಭಗವಂತ ಇನ್ನಷ್ಟು ಸುಧಾರಿಸುವ ಜೊತೆಗೆ ಹೆಚ್ಚಿನ ಆಯುಷ್ಯ ನೀಡಲಿ ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ದೇವರಲ್ಲಿ ಪ್ರಾರ್ಥಿಸಿದರು.
ಅವರು ಸೋಮವಾರ ಹೆಚ್.ಜಿ ರಾಮುಲು ನಿವಾಸಕ್ಕೆ ತೆರಳಿ ರಾಮುಲು ಅವರ ಯೋಗಕ್ಷೇಮವನ್ನು ವಿಚಾರಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಖಂಡ ರಾಯಚೂರು ಕೊಪ್ಪಳ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರಾಗಿ ಹಿಂದುಳಿದ ವರ್ಗದ ನಾಯಕರು ಬೆಳೆಯಲು ಹೆಚ್.ಜಿ. ರಾಮುಲು ಕಾರಣರಾಗಿದ್ದಾರೆ.ಅವರ ಕುಟುಂಬಕ್ಕೆ ಇನ್ನಷ್ಟು ರಾಜಕೀಯ ಸ್ಥಾನಮಾನ ಸಿಗಬೇಕು. ಪ್ರಸ್ತುತ ರಾಜಕೀಯದಲ್ಲಿ ಜಾತಿ, ಧರ್ಮ, ಸ್ವಜನ ಪಕ್ಷಪಾತ ಹೆಚ್ಚಾಗಿದ್ದು, ಹೆಚ್.ಜಿ ರಾಮುಲು ಅವರು ಎಂದಿಗೂ ಜಾತಿ ರಾಜಕಾರಣ ಮಾಡಲಿಲ್ಲ ಅವರಂತಹ ರಾಜಕಾರಣಿಗಳು ಪ್ರಸ್ತುತ ಬೇಕಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹೆಚ್.ಆರ್.ಶ್ರೀನಾಥ,
ಹಿರಿಯ ಮುಖಂಡರಾದ ಅಪ್ಸಾನಿ ನಾರಾಯಣ ರಾವ್,ಮೋರಿ ದುರುಗಪ್ಪ,ಬಸಾಪಟ್ಟಣ ಶರಣೆಗೌಡ,ವೀರನಗೌಡ,ಶಿವು ಹೊಸಳ್ಳಿ, ವಿರೂಪಾಕ್ಷಪ್ಪ ರೇಷ್ಮೆ,ಅಯ್ಯಪ್ಪ ಹೊಸಳ್ಳಿ, ಭಾಗಣ್ಣ,
ರಾಮನಾಯಕ ಸೇರಿದಂತೆ ಅನೇಕರಿದ್ದರು.

