ಸೂಗೂರೇಶ್ವರ ದೇವಸ್ಥಾನ ಅಭಿಷೇಕಕ್ಕೆ 1250 ರೂ. ಶುಲ್ಕ,ಭಕ್ತರರಿಂದ ಆಕ್ರೋಶ.

*ಹಣ ಪಡೆದು ರಸೀದಿ ಕೊಟ್ಟು ವಾಪಸ್ ಪಡೆಯುತ್ತಿರುವ ಅರ್ಚಕರು.
ಕಿಷ್ಕಿಂಧವಾಣಿ ಸುದ್ದಿ
ರಾಯಚೂರು: ಜಿಲ್ಲೆಯ ಆರಾಧ್ಯ ದೈವವಾಗಿರುವ ದೇವಸುಗೂರು ಶಕ್ತಿನಗರದ ಶ್ರೀ ಸೂಗೂರೇಶ್ವರ ದೇವಸ್ಥಾನದಲ್ಲಿ ಅಭಿಷೇಕ ಕಾರ್ಯಕ್ರಮಕ್ಕೆ 1250ರೂ. ಶುಲ್ಕವನ್ನು ಭಕ್ತರಿಂದ ಪಡೆದು ರಸೀದಿ ಕೊಟ್ಟು ನಂತರ ಅರ್ಚಕರೇ ರಶೀದಿಯನ್ನು ವಾಪಸ್ ಪಡೆದುಕೊಳ್ಳುತ್ತಿರುವುದು ಅನುಮಾನಕ್ಕೀಡು ಮಾಡಿದೆ ಎಂದು ಸೂಗೂರೇಶ್ವರ ದೇವಸ್ಥಾನದ ಗಂಗಾವತಿ ಭಕ್ತರಾದ ಬಸವರಾಜ್ ಇಂಗಳಗಿ, ಶರಣಪ್ಪ ಇಂಗಳಗಿ ಇತರ ಭಕ್ತರು ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಶ್ರಾವಣ ಮಾಸದ ನಿಮಿತ್ಯ ರಾಯಚೂರು ಕೊಪ್ಪಳ ಬಳ್ಳಾರಿ ಯಾದಗಿರಿ ಸೇರಿದಂತೆ ಆಂಧ್ರಪ್ರದೇಶದಿಂದ ಸಾವಿರಾರು ಭಕ್ತರು ಸೂಗೂರೇಶ್ವರ ದೇವಸ್ಥಾನಕ್ಕೆ ಆಗಮಿಸಿ ತಮ್ಮ ಭಕ್ತಿ ಸೇವೆಯನ್ನು ಮಾಡುತ್ತಾರೆ.
ಈ ಹಿಂದೆ ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರದಂತೆ ದೇವಸ್ಥಾನ 2000 ರೂ. ಗಳ ಅಜೀವ ಸದಸ್ಯತ್ವ ಪಡೆದ ಭಕ್ತರಿಗೆ ಉಚಿತವಾಗಿ ದೇವರ ಅಭಿಷೇಕ ಮಾಡುವ ಪದ್ದತಿ ಇದ್ದು, ಅಜೀವ ಸದಸ್ಯತ್ವ ಹೊಂದದೇ ಇರುವವರು 250 ರೂ.ಗಳ ಕೊಟ್ಟು ರಸೀದಿ ಪಡೆದು ಅಭಿಷೇಕ ಮಾಡಿಸಬೇಕಿದ್ದು ಈ ಭಾರಿ ಏಕಾಏಕಿ 1250 ರೂ.ಗಳನ್ನು ಅಭಿಷೇಕ ಶುಲ್ಕ ಎಂದು ರಸೀದಿ ನೀಡಿ ಅದನ್ನು ಭಕ್ತರಿಗೆ ಕೊಡದೇ ವಾಪಸ್ ಅರ್ಚಕರು ಪಡೆದುಕೊಳ್ಳುತ್ತಿದ್ದು ಹಲವು ಅನುಮಾನಗಳಿಗೆ ಅಸ್ಪದ ಮಾಡಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ದೇವಾಲಯದ ಧಾರ್ಮಿಕ ವೃತ್ತಿ ಅಧಿಕಾರಿಗಳನ್ನು ಕೇಳಿದರೆ ಅಧಿಕಾರಿಗಳು ನಿರ್ಲಕ್ಷದ ಉತ್ತರ ನೀಡಿದ್ದಾರೆ. ಶ್ರಾವಣ ಮಾಸದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಾವಿರಾರು ಜನ ಭಕ್ತರು ಆಗಮಿಸುತ್ತಿರುವುದರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿಯಾಗುತ್ತಿದ್ದು, ಭಕ್ತರಿಗೆ ರಶೀದಿ ನೀಡದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಕುರಿತು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳಿಗೆ ಫೋನ್ ಮುಖಾಂತರ ಸಂಪರ್ಕಿಸಿದರು ಅವರು ಫೋನ್ ಕರೆಯನ್ನು ಸ್ವೀಕಾರ ಮಾಡುತ್ತಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
****
ಶ್ರೀಸೂಗೂರೇಶ್ವರ ದೇವಾಲಯದಲ್ಲಿ ಹಣ ವಸೂಲಿ ಕುರಿತು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು,ನಮ್ಮ ಕುಟುಂಬದ ಸದಸ್ಯರು ಶ್ರಾವಣ ಸೋಮವಾರ ದೇವಾಲಯಕ್ಕೆ ತೆರಳಿ ಅಭಿಷೇಕ ಮಾಡಲು ರಸೀದಿ ಪಡೆಯಲು ಹೋದ ಸಂದರ್ಭದಲ್ಲಿ 1250ರೂ.ವಸೂಲಿ ಮಾಡಿ ರಸೀದಿ ನೀಡಿ ನಂತರ ಗರ್ಭಗುಡಿಯಲ್ಲಿ ರಸೀದಿ ವಾಪಸ್ ಪಡೆಯಲಾಗಿದೆ.
ಇದು ಅನುಮಾನಕ್ಕೀಡು ಮಾಡಿದ್ದು ಕೂಡಲೇ ಧಾರ್ಮಿಕ ದತ್ತಿ ಇಲಾಖೆಯವರು ತನಿಖೆ ನಡೆಸಿ ಹೆಚ್ಚುವರಿ ಹಣ ಪಡೆಯುತ್ತಿರುವವರನ್ನು ತಡೆಯಬೇಕಿದೆ.ಭಕ್ತರ ನಂಬಿಕೆ ಉಳಿಸಬೇಕು.
-ಅಮರೇಶಪ್ಪ ಇಂಗಳಗಿ ಅಜೀವ ಅಭಿಷೇಕ ಸೇವಾಕರ್ತರು ಗಂಗಾವತಿ.














