Breaking News
ಹಿರಿಯ ಮುತ್ಸದ್ದಿ ಹೆಚ್.ಜಿ.ರಾಮುಲು ಕ್ಷೇಮ‌ ವಿಚಾರಿಸಿದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ. ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಹೆಚ್.ಜಿ. ರಾಮುಲು ರಾಜಕೀಯ ಸೇವೆ ಸಲ್ಲಿಸಿದ್ದಾರೆ: ಕೆ ವಿರೂಪಾಕ್ಷಪ್ಪ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಮಾಜಿ ಸಂಸದ ಹಿರಿಯ ಮುಖಂಡ ಹೆಚ್‍.ಜಿ. ರಾಮುಲು ಅವರು ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ತಮ್ಮ ರಾಜಕೀಯ ಸೇವೆಯನ್ನು ಮಾಡಿದ್ದಾರೆ.ಅವರ ಆರೋಗ್ಯವನ್ನು ಭಗವಂತ ಇನ್ನಷ್ಟು ಸುಧಾರಿಸುವ ಜೊತೆಗೆ ಹೆಚ್ಚಿನ ಆಯುಷ್ಯ ನೀಡಲಿ ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ದೇವರಲ್ಲಿ ಪ್ರಾರ್ಥಿಸಿದರು.
ಅವರು ಸೋಮವಾರ ಹೆಚ್.ಜಿ ರಾಮುಲು ನಿವಾಸಕ್ಕೆ ತೆರಳಿ ರಾಮುಲು ಅವರ ಯೋಗಕ್ಷೇಮವನ್ನು ವಿಚಾರಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಖಂಡ ರಾಯಚೂರು ಕೊಪ್ಪಳ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರಾಗಿ ಹಿಂದುಳಿದ ವರ್ಗದ ನಾಯಕರು ಬೆಳೆಯಲು ಹೆಚ್.ಜಿ. ರಾಮುಲು ಕಾರಣರಾಗಿದ್ದಾರೆ.ಅವರ ಕುಟುಂಬಕ್ಕೆ ಇನ್ನಷ್ಟು ರಾಜಕೀಯ ಸ್ಥಾನಮಾನ ಸಿಗಬೇಕು. ಪ್ರಸ್ತುತ ರಾಜಕೀಯದಲ್ಲಿ ಜಾತಿ, ಧರ್ಮ, ಸ್ವಜನ ಪಕ್ಷಪಾತ ಹೆಚ್ಚಾಗಿದ್ದು, ಹೆಚ್‍.ಜಿ ರಾಮುಲು ಅವರು ಎಂದಿಗೂ ಜಾತಿ ರಾಜಕಾರಣ ಮಾಡಲಿಲ್ಲ ಅವರಂತಹ ರಾಜಕಾರಣಿಗಳು ಪ್ರಸ್ತುತ ಬೇಕಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹೆಚ್.ಆರ್.ಶ್ರೀನಾಥ,
ಹಿರಿಯ ಮುಖಂಡರಾದ ಅಪ್ಸಾನಿ ನಾರಾಯಣ ರಾವ್,ಮೋರಿ ದುರುಗಪ್ಪ,ಬಸಾಪಟ್ಟಣ ಶರಣೆಗೌಡ,ವೀರನಗೌಡ,ಶಿವು ಹೊಸಳ್ಳಿ, ವಿರೂಪಾಕ್ಷಪ್ಪ ರೇಷ್ಮೆ,ಅಯ್ಯಪ್ಪ ಹೊಸಳ್ಳಿ, ಭಾಗಣ್ಣ,
ರಾಮನಾಯಕ ಸೇರಿದಂತೆ ಅನೇಕರಿದ್ದರು.

ಆ.11,ರಂದು ಟಿಬಿ ಡ್ಯಾಂ ನೀರಾವರಿ ಸಲಹಾ ಸಮಿತಿ ಸಭೆ

 

 

ಕಿಷ್ಕಿಂಧವಾಣಿ ಸುದ್ದಿ

 

ಗಂಗಾವತಿ: 2026-27ನೇ ಸಾಲಿನ ತುಂಗಭದ್ರಾ ಜಲಾಶಯದ ಮುಂಗಾರು ಹಂಗಾಮಿಗೆ ಲಭ್ಯವಿರುವ ನೀರನ್ನು ಒದಗಿಸುವ ಕುರಿತು ನಿರ್ಣಯಿಸಲು ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಸಭೆಯನ್ನು ಮುನಿರಾಬಾದ ಕಾಡಾ ಕಚೇರಿ ಸಭಾಂಗಣದಲ್ಲಿ ಆ.11 ರಂದು ಮಧ್ಯಾನ್ಹ 3.30.ಕ್ಕೆ ಸಂಪುಟದರ್ಜೆ ಸಚಿವರಾದ ಶಿವರಾಜ ಎಸ್. ತಂಗಡಗಿ ನೇತೃತ್ವದಲ್ಲಿ

ಕರೆಯಲಾಗಿದೆ.

ಅಚ್ಚುಕಟ್ಟು ಪ್ರದೇಶದ

ಸಚಿವರುಗಳು, ಲೋಕಸಭಾ,ರಾಜ್ಯಸಭಾ ಸದಸ್ಯರುಗಳು, ವಿಧಾನಸಭಾ ಸದಸ್ಯರುಗಳು, ವಿಧಾನ ಪರಿಷತ್ ಸದಸ್ಯರುಗಳು, ಹಾಗೂ ನೀರಾವರಿ ಸಲಹಾ ಸಮಿತಿಯ ಸದಸ್ಯರುಗಳು ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಮತ್ತು ಅಧೀಕ್ಷಕ ಅಭಿಯಂತರ ಹಾಗೂ ಸದಸ್ಯ ಕಾರ್ಯದರ್ಶಿ ಎಸ್.ಬಿ.ಮಲ್ಲಿಗವಾಡ ಕೋರಿದ್ದಾರೆ.

ಅನ್ಸಾರಿಯವರು ಮೊದಲು ತಾವು ಗೆದ್ದು ತೋರಿಸಲಿ, ನಂತರ ಮತ್ತೊಬ್ಬರನ್ನು ಸೋಲಿಸಲಿ:ಸಚಿವ ಶಿವರಾಜ್ ತಂಗಡಗಿ

*ನಾನು ಸೇರಿ ಹಿಟ್ನಾಳಫ್ಯಾಮಿಲಿ ಹಾಗೂ ರಾಯರೆಡ್ಡಿಯವರು ಯಾರನ್ನು ಸೋಲಿಸಲು ಯತ್ನಿಸಿಲ್ಲ

*ಸಚಿವ ತಂಗಡಗಿಯವರಿಗೆ ಶಾಮೀದ್ ಮನಿಯಾರ್ ಹಾಗೂ ಆಸೀಫ್ ನೇತೃತ್ವದಲ್ಲಿ ಭವ್ಯ ಸ್ವಾಗತ

*ಕರ್ನೂಲ್‌ಬಾಬಾದರ್ಗಾ, ದುರುಗಮ್ಮನಗುಡಿ ಹಾಗೂ ತಾತನಮಠದಲ್ಲಿ ಮಳೆಗಾಗಿ ಪ್ರಾರ್ಥಿಸಿದ ತಂಗಡಗಿ

*ಬೃಹತ್ ಹೂವಿನ ಹಾರವನ್ನು ಜೆಸಿಬಿ ಮೂಲಕ ತಂಗಡಗಿಯವರಿಗೆ ಹಾಕಿ ಖುಷಿಪಟ್ಟ ಕಾರ್ಯಕರ್ತರು.

 

ಕಿಷ್ಕಿಂಧವಾಣಿ ಸುದ್ದಿ

 

ಗಂಗಾವತಿ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರು ತಾವು ಮೊದಲು ಚುನಾವಣೆಯ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಪ್ರಚಾರಕ್ಕೆ ಹೋಗಿ ಗೆದ್ದು ತೋರಿಸಬೇಕು. ಅದು ಬಿಟ್ಟು ಎರಡು ನಿಮಿಷದಲ್ಲಿ ತಂಗಡಗಿ, ಹಿಟ್ನಾಳ ಫ್ಯಾಮಿಲಿ ಹಾಗೂ ರಾಯರೆಡ್ಡಿಯವರನ್ನು ಸೋಲಿಸುವ ಚಾಲೆಂಜ್ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಹೇಳಿದರು.

ಅವರು ಸಚಿವರಾದ ನಂತರ ಗಂಗಾವತಿಯ ಗ್ರಾಮದೇವತೆ ಶ್ರೀದುರುಗಮ್ಮ, ಶ್ರೀಚನ್ನಬಸವತಾತಾನ ಮಠ ಹಾಗೂ ಭಾವೈಕ್ಯತೆಯ ಕೇಂದ್ರ ಕರ್ನೂಲ್ ಬಾಬಾ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜನರ ಹತ್ತಿರ ಬಂದು ಮಾತನಾಡಿದೇ ಮೊಬೈಲ್ ಗಳಲ್ಲಿ ರಿಕಾರ್ಡ್ ಮಾಡಿ ಹಾಕುವುದು ಮತ್ತು ಆಡಿಯೋ ಮೂಲಕ ಹಲವರನ್ನು ಟೀಕಿಸುವ ಅನ್ಸಾರಿಯವರು ಕಾಂಗ್ರೆಸ್ ಮುಂಡರು ಹಾಗೂ ಕಾರ್ಯಕರ್ತರ ಜತೆ ಹೇಗೆ ವರ್ತಿಸಿದ್ದಾರೆ ನೋಡಿ ಕೊಳ್ಳಲಿ,

2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಇಕ್ಬಾಲ್ ಅನ್ಸಾರಿಯವರಿಗೆ ಟಿಕೇಟ್ ನೀಡಿತ್ತು. ನಾನು ಹಾಗೂ ಮಾಜಿ ಸಚಿವ ಅಮರೇಗೌಡ ಭಯ್ಯಾಪೂರ ಸೇರಿ ಕಾಂಗ್ರೆಸ್ ಹಿರಿಯ ಮುಖಂಡರು ಗಂಗಾವತಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸಿ ಅನ್ಸಾರಿಯವರ ಮನೆಯಲ್ಲಿ ತಾಸುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇತ್ತು. ಪ್ರಚಾರದ ಕೊರತೆ ಕುರಿತು ಅನ್ಸಾರಿಯವರಿಗೆ ಕಿವಿ ಮಾತು ಹೇಳಿದರೆ ನನ್ನ ಚಿಂತೆ ಬೇಡ ತಂಗಡಗಿಯವರೇ ನಿಮ್ಮ ಗೆಲುವಿನ ಬಗ್ಗೆ ಯೋಚಿಸಿ ಎಂದು ಹೇಳುವ ಮೂಲಕ ನಮಗೆ ಬುದ್ಧಿವಾದ ಹೇಳುತ್ತಿದ್ದರು. ಈಗ ನನ್ನ ಸೋಲಿಗೆ ತಂಗಡಗಿ ಕಾರಣ ಎನ್ನುವುದು ಸರಿಯಲ್ಲ. ನನ್ನನ್ನೂ ಜನರು ಸೋಲಿಸಿದ್ದರು, ಸೋಲಿನ ಕುರಿತು ನಾನು ಯಾರನ್ನೂ ಹೊಣೆ ಮಾಡಲಿಲ್ಲ. ಸೋಲು ಗೆಲುವು ಕೊಡುವವರು ಮತದರಾರರಾಗಿದ್ದು ಚುನಾವಣೆಯಲ್ಲಿ ಹಗಲು ರಾತ್ರಿ ಎನ್ನದೇ ಪ್ರಚಾರ ಮಾಡಬೇಕು. ಅನ್ಸಾರಿಯವರು ಮನೆ ಬಿಟ್ಟು ಪ್ರಚಾರಕ್ಕೆ ಹೋಗದೇ ಇನ್ನೊಬ್ಬರ ಮೇಲೆ ಹರಿಹಾಯುವುದು ಸರಿಯಲ್ಲ.

ಕೆ.ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರೆಡ್ಡಿ ಹಾಗೂ ನಾನು ಆತ್ಮೀಯರಾಗಿದ್ದು ರಾಯರೆಡ್ಡಿ ಹಾಗೂ ನನಗೆ ಮಂತ್ರಿ ಸ್ಥಾನ ಲಭಿಸಿದ್ದು ರಾಘವೇಂದ್ರ ಅವರಿಗೆ ಬೇರೆ ಸ್ಥಾನಮಾನಗಳು ಸಿಗುವ ಭರವಸೆ ಇದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆಪತ್ಯಕ್ಕೆ ಸರಿಯಲು ಸಾಧ್ಯವಿಲ್ಲ, ರಾಜ್ಯದ ಸಿಎಂ ಆಗಿ ಎರಡು ಭಾರಿ ಅತ್ಯುತ್ತಮ ಆಡಳಿತ ನೀಡಿ ಶೋಷಿತ ಸಮುದಾಯದ ಶಕ್ತಿಯಾಗಿದ್ದರು. ನಾವೆಲ್ಲರೂ ಅವರ ಆಶೀರ್ವಾದದಿಂದ ಸ್ಥಾನಮಾನಗಳನ್ನು ಕಂಡಿದ್ದೇವೆ, ಮುಂದೆಯೂ ಅವರ ಮಾರ್ಗದರ್ಶನ ಈ ಸರಕಾರಕ್ಕೆ ಇರುತ್ತದೆ.

ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ಕ್ಷೇತ್ರಗಳ ಜನರ ಆಶೀರ್ವಾದಿಂದ ನಾಲ್ಕನೇಯ ಸಲ ಮಂತ್ರಿಯಾಗಿದ್ದು ಗಂಗಾವತಿಯಲ್ಲಿ ಶಾಮೀದ್ ಮನಿಯಾರ್ ಹಾಗೂ ಯುವಕಾಂಗ್ರೆಸ್ ಮುಖಂಡ ಆಸೀಫ್ ಹುಸೇನ್ ಸೇರಿ ನಿಷ್ಠಾವಂತ ಕಾಂಗ್ರೆಸ್ಸಿಗರು ಸದಾ ನನ್ನ ಶ್ರೇಯಸ್ಸನ್ನು ಬಯಸಿದ್ದಾರೆ. ಮಂತ್ರಿ ಸ್ಥಾನ ಸಿಗಲೆಂದು ಕಿಷ್ಕಿಂಧಾ ಅಂಜನಾದ್ರಿ, ಕರ್ನೂಲ್ ಬಾಬಾ ದರ್ಗಾ, ಶ್ರೀದುರುಗಮ್ಮ, ಶ್ರೀಚನ್ನಬಸವಸ್ವಾಮಿ ಹಾಗೂ ತಿರುಪತಿಗೂ ತೆರಳಿ ಪೂಜೆ ಮಾಡಿದ್ದಾರೆ. ಅವರೆಲ್ಲರ ಋಣ ನನ್ನ ಮೇಲಿದ್ದು ಜನಸಾಮಾಮನ್ಯರಿಗೆ ಒಳಿಗಾಗುವಂತೆ ಯಾವುದೇ ದ್ವೇಷ ಭಾವನೆ ಇಲ್ಲದೇ ಜಾತಿ, ಪಕ್ಷ ಬೇಧ ಮರೆತು ಬಡವರ ಕೆಲಸ ಕಾರ್ಯ ಮಾಡುತ್ತೇನೆ ಎಂದರು.

ಕರ್ನೂಲ್‌ಬಾಬಾ ದರ್ಗಾ ಹತ್ತಿರ ಸಾವಿರಾರು ಅಭಿಮಾನಿಗಳ ಮಧ್ಯೆ ಬೃಹತ್ ಹೂವಿನ ಹಾರವನ್ನು ಜೆಸಿಬಿ ಮೂಲಕ ಸಚಿವ ಶಿವರಾಜ್ ತಂಗಡಗಿಯವರಿಗೆ ಹಾಕಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದೊಡ್ಡಪ್ಪ ದೇಸಾಯಿ, ಶಾಮೀದ ಮನಿಯಾರ್,ಅಸೀಫ್ ಹುಸೇನ್, ಅಜಗರಲಿ ಇದ್ಲಿ, ಮಲ್ಲಿಕಾರ್ಜುನ ದೇವರಮನಿ,ರೆಡ್ಡಿ ಶ್ರೀನಿವಾಸ, ಶರಣೇಗೌಡ, ಸಿದ್ದಪ್ಪ ನೀರಲೂಟಿ, ರೇಣುಕನಗೌಡ, ಅಮರೇಶ ಗೋನಾಳ, ಮಹಮದ್ ರಫಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಶಿವರಾಜ್ ತಂಗಡಗಿ ಅಭಿಮಾನಿಗಳಿದ್ದರು.

***

ಬಿ.ನಾಗೇಂದ್ರ ಅವರು ಬೇಲ್ ಮೇಲೆ ಇದ್ದು ಕಾಂಗ್ರೆಸ್ ಹೈಕಮಾಂಡ್ ಹೇಗೆ ಸಚಿವ ಸ್ಥಾನ ಕೊಟ್ಟಿದೆ ಎಂದು ಕೇಳುವ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಮೇಲೆ ಎಷ್ಟು ಕೇಸ್ ಗಳಿವೆ ಎನ್ನುವುದನ್ನು ನೋಡಿಕೊಳ್ಳಲಿ,ಒಂದು ಬೆರಳು ಬಿ.ನಾಗೇಂದ್ರ ಅವರನ್ನು ತೋರಿಸಿದರೆ ಉಳಿದ ಮೂರು ಬೆರಳುಗಳು ರೆಡ್ಡಿ ಅವರನ್ನು ತೋರಿಸುತ್ತವೆ. ಬಿಜೆಪಿಯವರು ಟೀಕೆಗಾಗಿ ಟೀಕೆ ಮಾಡದೇ ಜನರ ಸಮಸ್ಯೆಗಳನ್ನು ಸರಕಾರಕ್ಕೆ ತೋರಿಸಿ ಕೆಲಸ ಮಾಡಿಸಬೇಕು.

-ಶಿವರಾಜ್ ಎಸ್ ತಂಗಡಗಿ ಸಚಿವರು.

ಟಿಬಿ ಡ್ಯಾಂ ಗೆ ಲಕ್ಷಕ್ಕೂ ಹೆಚ್ಚು ಒಳಹರಿವು.

ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳ ಜತೆ ಸಮಾಲೋಚಿಸಿ ಕಾಲುವೆಗಳಿಗೆ ನೀರು: ಸಚಿವ ರಾಮಲಿಂಗಾರೆಡ್ಡಿ.

*ಜಲಾನಯನ ಪ್ರದೇಶದಲ್ಲಿ ಅತ್ಯುತ್ತಮ ಮಳೆ ತುಂಗಾ ಡ್ಯಾಂ ನಿಂದ ಲಕ್ಷ ಕ್ಯೂಸೆಕ್ಸ್ ನೀರು ನದಿಗೆ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಅತ್ಯುತ್ತಮ ಮಳೆಯಾಗುತ್ತಿರುವುದರಿಂದ ತುಂಗಾ ಡ್ಯಾಂ ನಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರನ್ನು ನದಿಯ ಮೂಲಕ ಬಿಡಲಾಗುತ್ತಿದ್ದು ಶೀಘ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು ಮತ್ತು ರೈತರ ಜತೆ ಸಮಾಲೋಚಿಸಿ ಕಾಲುವೆಗಳಿಗೆ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಅವರು ಕಿಷ್ಕಿಂಧವಾಣಿ ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ 45 ದಿನಗಳಿಂದ ಶೃಂಗೇರಿ, ತೀರ್ಥಹಳ್ಳಿ, ಆಗುಂಬೆ,ಶಿವಮೊಗ್ಗ ಸೇರಿದಂತೆ ತುಂಗಭದ್ರಾ ಜಲಾ ನಯನ ಪ್ರದೇಶದಲ್ಲಿ ಅತ್ಯುತ್ತಮ ಮಳೆಯಾಗುತ್ತಿರುವುದು ಸಂತೋಷದ ಸಂಗತಿ, ಜೊತೆಗೆ ವರದಾ ನದಿ ಸಹ ತುಂಬಿ ಹರಿಯುತ್ತಿದ್ದು, ತುಂಗಭದ್ರಾ ಡ್ಯಾಂ ಗೆ ಪ್ರಸ್ತುತ ಮಂಗಳವಾರ ಸಂಜೆ ವರೆಗೆ 55 ಟಿಎಂಸಿ ನೀರು ಸಂಗ್ರಹವಾಗಿದ್ದು ಪ್ರಸ್ತುತ ಒಂದು ಲಕ್ಷ ಕ್ಯೂಸೆಕ್ಸ್ ನೀರು ಒಳಹರಿವು ಇದ್ದು, ಇದು ನಾಲ್ಕೈದು ದಿನ ಮುಂದುವರಿದರೆ ಸುಮಾರು 70-80 ಟಿಎಂಸಿ ನೀರು ಸಂಗ್ರಹವಾಗುವ ಸಾಧ್ಯತೆ ಇದ್ದು ಕುಡಿಯುವ ನೀರಿನ ಸಂಗ್ರಹವಿಟ್ಟುಕೊಂಡು ಮುಂಗಾರು ಬೆಳೆಗೆ ನೀರು ಬಿಡುವ ಕುರಿತು ನೀರಾವರಿ ಸಭೆಯಲ್ಲಿ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು,ರೈತರ ಮುಖಂಡರ ಸಲಹೆ,ಸೂಚನೆ ಪಡೆದು ನೀರು ಹರಿಸಲಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಕರ್ನಾಟಕ ಎಸ್ಸಿ/ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಪ್ರತಿಷ್ಠಿತ ರಾಜ್ಯ ಮಟ್ಟದ ವಾರ್ಷಿಕ ದತ್ತಿಪ್ರಶಸ್ತಿ -2025 ಪ್ರಕಟ.

 

ಕಿಷ್ಕಿಂಧವಾಣಿ ಸುದ್ದಿ

 

ಬೆಂಗಳೂರು: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘವು ಕಳೆದ 26 ವರ್ಷಗಳಿಂದ ರಾಜ್ಯದಲ್ಲಿ ಕರ್ನಾಟಕ ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿನ ದಲಿತರ ಮಾಲಿಕತ್ವ/ಸಂಪಾದಕತ್ವದ ಪತ್ರಿಕೆಗಳ ಹಿತ ಕಾಯುವ ಮತ್ತು ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಸಹಭಾಗಿತ್ವವನ್ನು ಬಲಪಡಿಸುವಲ್ಲಿ ಹಾಗೂ ದಲಿತ ಪತ್ರಕರ್ತರ ಬೌದ್ಧಿಕ ಉನ್ನತೀಕರಣದಂತಹ ರಚನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಇದರ ಭಾಗವಾಗಿ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರು ,ಶೋಷಿತರ ಪರವಾಗಿ ಅಹರ್ನಿಶಿ ದುಡಿದ ದಲಿತರು ಮತ್ತು ದಲಿತ ಸಂವೇದನೆಯುಳ್ಳ ದಲಿತೇತರ ಹಿರಿಯ ಮತ್ತು ಉದಯೋನ್ಮುಖ ವೃತ್ತಿಪರ ಪತ್ರಕರ್ತರನ್ನು, ಹೋರಾಟಗಾರರನ್ನು ಗುರುತಿಸಿ ಗೌರವಿಸುವ ಮತ್ತು ಪ್ರೋತ್ಸಾಹಿಸುವ ಜವಬ್ದಾರಿಯನ್ನು ನಿರ್ವಹಿಸುತ್ತಾ ಬರಲಾಗುತ್ತಿದೆ.

ಈ ಭಾಗವಾಗಿ ಸಂವಿಧಾನ ಶಿಲ್ಪಿ , ನಿಷ್ಪಕ್ಷಪಾತ ಪತ್ರಿಕೋದ್ಯಮದ ನೈತಿಕ ಮೌಲ್ಯವೇ ಆಗಿದ್ದ *ಡಾ. ಬಾಬಾ ಸಾಹೇಬ್‌ಅಂಬೇಡ್ಕರ್*, ದಲಿತ ಚಳವಳಿಯ ಕಟ್ಟಿದ *ಪ್ರೊ.ಬಿ.ಕೃಷ್ಣಪ್ಪ,* ದಲಿತರ ಸ್ವಾಭಿಮಾನ, ಹಕ್ಕುಗಳಿಗೆ ರಾಜಕೀಯ ಶಕ್ತಿ ಧಾರೆ ಎರೆದ ಮಾಜಿ ಸಚಿವರಾದ *ಬಿ. ಬಸವಲಿಂಗಪ್ಪ*, ಮಾಜಿ ಸಚಿವ *ಬಿ.ರಾಚಯ್ಯ,* ಅವರುಗಳ ಹೆಸರಿನಲ್ಲಿ ಸ್ಥಾಪಿಸಲಾಗಿರುವ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ.

ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ -2025 ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಘೋಷಿಸಿಸಲಾಗಿದೆ.

ಇದೇ ಸಂದರ್ಭದಲ್ಲಿ ಪತ್ರಿಕೆಗಳನ್ನು ನಡೆಸುತ್ತಿರುವ ಪರಿಶಿಷ್ಟ ಜಾತಿ/ವರ್ಗಗಳ ಸಾಧಕ ಸಂಪಾದಕರುಗಳನ್ನು ಗುರುತಿಸಿ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.ಸೆ. 17 ರಂದು ಸರ್ಕಾರಿ ನೌಕರರ ಸಂಘದ ಆಡಿಟೋರಿಯಂ ಕಬ್ಬನ್ ಪಾರ್ಕ್ ಬೆಂಗಳೂರು ಇಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. *ರಾಜ್ಯ ಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳು-2025* ( ತಲಾ 10 ಸಾವಿರ ರೂ. ನಗದು,ಪ್ರಶಸ್ತಿಫಲಕಗಳನ್ನೊಳಗೊಂಡಿರುತ್ತದೆ.)

1.*ಡಾ.ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ* **ಕೆ. ದೀಪಕ್*ಸಂಪಾದಕರು ’ವಿಜಯ ಕಾಲ’ ಕನ್ನಡ ದಿನಪತ್ರಿಕೆ ಪ್ರಗತಿಪರ ಚಿಂತಕರು, ಮೈಸೂರು.

 

2.*ಪ್ರೊ.ಬಿ . ಕೃಷ್ಣಪ್ಪ ದತ್ತಿ ಪ್ರಶಸ್ತಿ*ಗುರುಪ್ರಸಾದ್ ಕೆರಗೋಡು ರಾಜ್ಯ ಸಂಚಾಲಕರು ಕರ್ನಾಟಕ ದಲಿತ ಸಂಘರ್ಷ ಸಮಿತಿ. ಮಂಡ್ಯ.*

3 *ಬಿ.ರಾಚಯ್ಯ ದತ್ತಿ ಪ್ರಶಸ್ತಿ**ಬದ್ರುದ್ದೀನ್. ಕೆ ಆಯುಕ್ತರು,ಮಾಹಿತಿ ಆಯೋಗ ಬೆಂಗಳೂರು ಹಿರಿಯ ಪತ್ರಕರ್ತರು.

4.*ಬಿ. ಬಸವಲಿಂಗಪ್ಪ ದತ್ತಿ ಪ್ರಶಸ್ತಿ* *ಯತಿರಾಜ್ ಬಿ ಸಿ* (ಯತಿರಾಜ್ ಬ್ಯಾಲಹಳ್ಳಿ) ಪತ್ರಕರ್ತರು ಬೆಂಗಳೂರು.

*ಸಂಪಾದಕರುಗಳಿಗೆ ಗೌರವ ಪ್ರಶಸ್ತಿ-2025* (ಪ್ರಶಸ್ತಿ ಫಲಕ ಮತ್ತು ಗೌರವ ಸ್ಮರಣಿಕೆ) 1.*ಚಂದ್ರಣ್ಣ* ಸಂಪಾದಕರು ’ಕರ್ನಾಟಕ ಎಕ್ಸ್ ಪ್ರೆಸ್’ ದಾವಣಗೆರೆ.

2. *ದೇವೇಂದ್ರಪ್ಪ ಕಪ್ಪನೂರು* ಸಂಪಾದಕರು ’ಬುದ್ಧಲೋಕ’ ಗುಲ್ಬರ್ಗಾ. 3.*ಬಿ ಓ ಕರಿಯಮ್ಮ* ಸಂಪಾದಕರು ’ ಜಗಳೂರು ವಾಯ್ಸ್’ ದಾವಣಗೆರೆ. 4.*ಸುಭಾಷ್ ಹೊದ್ಲೂರು* ಸಂಪಾದಕರು ’ಸುದಿನ’ ಕನ್ನಡ ದಿನಪತ್ರಿಕೆ ಬಾಗಲಕೋಟೆ. 4.*ಅನೂಪ್ ಕುಮಾರ್* ಕಾರ್ಯನಿರ್ವಾಹಕ ಸಂಪಾದಕರು ’ಬಳ್ಳಾರಿ ಬೆಳಗಾಯಿತು’ ಬಳ್ಳಾರಿ ಇವರುಗಳಿಗೆ ಪ್ರಶಸ್ತಿ ಪ್ರದಾನ ಜರುಗಲಿದ್ದು ರಾಜ್ಯದ ಎಲ್ಲಾ ಪತ್ರಕರ್ತರು ಆಗಮಿಸುವಂತೆ ಕೋರಲಾಗಿದೆ .

error: Content is protected !!