ಕುವೆಂಪು ವಿಶ್ವವಿದ್ಯಾಲಯದಿಂದ ಕೃಷ್ಣಕುಮಾರ್ ಮೈಲಾ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ:ನಗರದ ಕಲ್ಮಠ ವಿಜ್ಞಾನ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಕುಮಾರ್ ಮೈಲಾ ಅವರು ತಮ್ಮ ಸಂಶೋಧನೆಗಾಗಿ ಕುುವೆಂಪು ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ಪಡೆದುಕೊಂಡಿದ್ದಾರೆ. ಕೃಷ್ಣಕುಮಾರ್ ಅವರು ಮಾರ್ಗದರ್ಶಕ ಡಾ. ಶ್ವೇತಾ ಅಳವಂಡಿ ಅವರ ಮಾರ್ಗದರ್ಶನದಲ್ಲಿ ”ಕರ್ನಾಟಕದ ಗಂಗಾವತಿ ತಾಲೂಕಿನ ಹನುಮನಹಳ್ಳಿ ಪ್ರದೇಶದಲ್ಲಿ ಅವಿಫೌನಾಗಳ (Avifauna) ವೈವಿಧ್ಯತೆ ಮತ್ತು ವಿತರಣೆಯ ಕುರಿತು ಅಧ್ಯಯನಗಳು – ಜೇನುನೊಣ ತಿನ್ನುವವರಿಗೆ ವಿಶೇಷ ಉಲ್ಲೇಖದೊಂದಿಗೆ (ಮೆರಾಪ್ಸ್ ಫಿಲಿಪಿನಸ್ ಮತ್ತು ಮೆರಾಪ್ಸ್ ಓರಿಯಂಟಲಿಸ್)” ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿದ್ದಕ್ಕೆ ಡಾಕ್ಟರೇಟ್ ಪದವಿ ದೊರಕಿದೆ. ಏಪ್ರಿಲ್ 6, 2026 ರಂದು ನಡೆದ ಕುುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವದಲ್ಲಿ ಕೃಷ್ಣಕುಮಾರ್ ಮೈಲಾ ಅವರಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.

