Breaking News
ಪುಟ್ ಪಾತ್ ಒತ್ತುವರಿ ತೆರವು ಹಿನ್ನೆಲೆ,ಗುಂಡಮ್ಮಕ್ಯಾಂಪ್ ಹೊಸ ಮಾರ್ಕೆಟ್ ಗೆ ಬೀದಿ ಬದಿ ಬಂಡಿ ವ್ಯಾಪಾರಿಗಳ ಸ್ಥಳಾಂತರ ಯಶಸ್ವಿ.

 

*ಸುಮಾರು ೩೦ಕ್ಕೂ ಹೆಚ್ಚು ಬಂಡಿಗಳಲ್ಲಿ ತರಕಾರಿ,ಹಣ್ಣು ಮಾರಾಟ ಮಾಡುವವರು ನೂತನ ಮಾರ್ಕೆಟ್ ಗೆ ಆಗಮನ

*ಬೀದಿಬದಿ ವ್ಯಾಪಾರಿಗಳು ಮತ್ತು ವ್ಯಾಪಾರಿಗಳು ಗುಂಡಮ್ಮ ಕ್ಯಾಂಪ್ ಮಾರ್ಕೆಟಿಗೆ ಸ್ಥಳಾಂತರಿಸಿದ ಬಗ್ಗೆ ನಗರಸಭೆಯಿಂದ ಇನ್ನಷ್ಟು ಪ್ರಚಾರ ಅಗತ್ಯ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ; ತಾಲೂಕು ಕಾನೂನು ಸೇವಾ ಸಮಿತಿಯ ಸು-ಮೋಟೋ ಪ್ರಕರಣ ದಾಖಲು ಹಿನ್ನೆಲೆಯಲ್ಲಿ ಗಂಗಾವತಿ ನಗರದ ಪುಟ್ ಪಾತ್ ಒತ್ತುವರಿ ಮಾಡಿದ್ದ ಬೀದಿಬದಿ ವ್ಯಾಪಾರಿಗಳು ಹಾಗೂ ಅಂಗಡಿ ಮಾಲೀಕರ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಕಳೆದ ಒಂದು ವಾರದಿಂದ ನಗರಸಭೆ ಭರದಿಂದ ನಡೆಸಿದ್ದು ಗಣೇಶ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್, ಮಹಾವೀರ ಸರ್ಕಲ್ ಸೇರಿದಂತೆ ಬೀದಿ ಬದಿಯಲ್ಲಿ ಬಂಡಿಗಳನ್ನು ಇಟ್ಟುಕೊಂಡು ತರಕಾರಿ, ಹಣ್ಣು ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ಗುಂಡಮ್ಮ ಕ್ಯಾಂಪಿನಲ್ಲಿರುವ ನೂತನ ಮಾರ್ಕೆಟ್ಗೆ ಸ್ಥಳಾಂತರಗೊಂಡು ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ.

ಗಂಗಾವತಿ ನಗರದ ಬಹುತೇಕ ಪುಟ್ಪಾತ್ಗಳನ್ನು ಒತ್ತುವರಿ ಮಾಡಿ ಬೀದಿಬದಿ ವ್ಯಾಪಾರಿಗಳು ಮತ್ತು ಅಂಗಡಿಗಳ ಮಾಲೀಕರು ತಮ್ಮ ಸಾಮಾನು ಸರಂಜಾಮಗಳನ್ನು ಇಟ್ಟು ಪಾದಚಾರಿಗಳು ಸಂಚಾರ ಮಾಡಲು ಆಗದಂತೆ ತೊಂದರೆ ಕೊಟ್ಟಿದ್ದರು.

ಪದೇಪದೇ ನಗರಸಭೆಯವರು ಈ ಕುರಿತು ನೋಟಿಸ್ ನೀಡಿದರು ಮತ್ತು ಮೈಕ್ ನಲ್ಲಿ ಈ ಬಗ್ಗೆ ಎಚ್ಚರಿಕೆ ಮೂಡಿಸಿದ್ದರು ಫಲಪ್ರದವಾಗಿರಲಿಲ್ಲ. ಸ್ಥಳೀಯ ನ್ಯಾಯಾಲಯ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸು-ಮೊಟೊ ಪ್ರಕರಣ ದಾಖಲಿ ಒತ್ತುವರಿ ತೆರವು ಮಾಡುವ ಕುರಿತು ನಗರಸಭೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಜವಾಬ್ದಾರಿ ಮಾಡಿ ಪ್ರಕರಣ ದಾಖಲಿಸಿದ ನಂತರ ಕಳೆದ ಐದು ದಿನಗಳಿಂದ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ನಡೆದಿದೆ.

ಕೆಲವು ಶ್ರೀಮಂತರು ಮತ್ತು ಅಂಗಡಿ ಮಾಲೀಕರು ಕೆಲ ರಾಜಕಾರಣಿಗಳ ಮುಖಾಂತರ ಒತ್ತಡ ಹೇರಿಸಿದರೂ ಅದನ್ನು ಅಧಿಕಾರಿಗಳು ಗಮನಕ್ಕೆ ತೆಗೆದುಕೊಳ್ಳದೆ ಸಂಪೂರ್ಣವಾಗಿ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ.ಪ್ರಮುಖವಾಗಿ ಮಹಾತ್ಮ ಗಾಂಧಿ ಸರ್ಕಲ್, ಓ ಎಸ್ ಬಿ ರೋಡ್, ಎಂಜಿ ರೋಡ್, ಬಸ್ ನಿಲ್ದಾಣ ರಸ್ತೆ ಪಂಪಾ ನಗರ ಸರ್ಕಲ್ ಹೀಗೆ ಪ್ರತಿಯೊಂದು ರಸ್ತೆಯಲ್ಲಿ ಇರುವ ಫುಟ್ ಪಾತ್ ಅನ್ನು ಅಲ್ಲಿಯ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದರು. ಜೊತೆಗೆ ರಸ್ತೆಯಲ್ಲಿ ಸಂಚರಿಸುವ ಜನಸಾನ್ಯರಿಗೆ ತಗಲುವಂತೆ ತಗಡುಗಳನ್ನು ಬಳಸಿ ಹಾಕಿ ಶೆಡ್ ಗಳ ನಿರ್ಮಿಸಿಕೊಂಡಿದ್ದಾರೆ.

ನಗರಸಭೆಯವರು ಕಳೆದ ಒಂದು ಐದು ದಿನಗಳಿಂದ ಕಾರ್ಯಾಚರಣೆ ಮುಖಾಂತರ ಅಕ್ರಮ ಕಟ್ಟಡಗಳು ಹಾಗೂ ಬೀದಿಬದಿಯ ಬಂಡಿಗಳನ್ನು ತೆರವು ಮಾಡಿ ಪಾದಚಾರಿಗಳಿಗೆ ಸಂಚಾರಕ್ಕೆ ಸುಗಮಗೊಳಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಮುಖ ಸರ್ಕಲ್ ಗಳಲ್ಲಿ ಸ್ವಯಂ ಪ್ರೇರಣೆಯಿಂದ ತಮ್ಮ ಅಂಗಡಿಯ ಮುಂಗಟ್ಟುಗಳನ್ನು ಮತ್ತು ಬಂಡಿಗಳನ್ನು ಗುಂಡಮ್ಮ ಕ್ಯಾಂಪನಲ್ಲಿರುವ ನೂತನ ಮಾರ್ಕೆಟಿಗೆ ಸ್ಥಳಾಂತರ ಮಾಡಿಕೊಳ್ಳುತ್ತಿದ್ದು, ಗುಂಡಮ್ಮಕ್ಯಾಂಪ್ ನೂತನ ಮಾರ್ಕೆಟ್ ಗೆ ವ್ಯಾಪಾರ ವಹಿವಾಟು ಸ್ಥಳಾಂತರ ಆಗಿರುವ ಕುರಿತು ಜನರಿಗೆ ಮಾಹಿತಿ ಇಲ್ಲದ ಕಾರಣ

ಬಹಳಷ್ಟು ಜನ ಗ್ರಾಹಕರು ಬರುವುಲ್ಲ.

ನಗರಸಭೆಯವರು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡಿದರೆ ಗುಂಡಮ್ಮಕ್ಯಾಂಪ್ ಕ ಮಾರ್ಕೆಟ್ ಗೆ ಜನರು ಆಗಮಿಸಿ ತಮಗೆ ಅಗತ್ಯವಾಗಿ ಬೇಕಿರುವ ವಸ್ತುಗಳನ್ನು ಖರೀದಿ ಮಾಡುತ್ತಾರೆ ಮತ್ತು ನಗರದಲ್ಲಿ ಎಲ್ಲೆಂದರಲ್ಲಿ ಬಂಡಿಗಳು ನಿಲ್ಲದಂತೆ ಮುಂದೆಯೂ ಎಚ್ಚರಿಕೆ ವಹಿಸಬೇಕು. ಪ್ರತಿಯೊಂದು ಬಂಡಿ ಪ್ರತಿಯೊಂದು ವ್ಯಾಪಾರಿ ವ್ಯಕ್ತಿಯನ್ನು ನೂತನ ಮಾರ್ಕೆಟ್ ನಲ್ಲಿ ಬಂದು ವ್ಯಾಪಾರ ವಹಿವಾಟು ನಡೆಸಲು ನಗರ ಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

 

**

ನಗರದಲ್ಲಿ ಪುಟ್ ಪಾತುಗಳನ್ನು ತೆರವು ಮಾಡಲಾಗುತ್ತಿದೆ. ಬೀದಿಬದಿಯಲ್ಲಿ ವ್ಯಾಪಾರ ಮಾಡದೇ ಬಂಡಿ ವ್ಯಾಪಾರಿಗಳು ಹಾಗೂ ಸಣ್ಣ ಪುಟ್ಟ ವ್ಯಾಪಾರಸ್ಥರು ಗುಂಡಮ್ಮ ಕ್ಯಾಂಪ್ ನಲ್ಲಿ ನಿರ್ಮಿಸಿರುವ ನೂತನ ಮಾರ್ಕೆಟಿಗೆ ಸ್ಥಳಾಂತರಗೊಂಡು ಅಲ್ಲಿ ವ್ಯಾಪಾರ ವಹಿವಾಟು ಮಾಡಬೇಕು. ಜೊತೆಗೆ ನಗರದ ಜನರು ಪ್ರತಿಯೊಂದು ವಸ್ತುವನ್ನು ನೂತನ ಮಾರುಕಟ್ಟೆ ಗುಂಡಮ್ಮ ಕ್ಯಾಂಪಿಗೆ ತೆರಳಿ ಖರೀದಿ ಮಾಡುವ ಮುಖಾಂತರ ಬೀದಿಬದಿಯ ವ್ಯಾಪಾರಿಗಳು ಗುಂಡಮ್ಮಕ್ಯಾಂಪ್ ಮಾರ್ಕೆಟ್ ನಲ್ಲಿ ಉಳಿಯುವಂತೆ ನೋಡಿಕೊಳ್ಳಬೇಕಿದೆ.

ಈಗಾಗಲೇ ಗುಂಡಮ್ಮ ಕ್ಯಾಂಪಿನ ಮಾರ್ಕೆಟಿಯಲ್ಲಿ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದ ಚಿಕ್ಕಪುಟ್ಟ ಅಂಗಡಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.

-ಆರ್.ವಿರೂಪಾಕ್ಷ ಮೂರ್ತಿ ಪೌರಾಯುಕ್ತರು.