ಮಲ್ಲಾಪೂರ ಸೀಮಾ ಮಲಕನಮರಡಿ ಕೃಷಿಭೂಮಿಯಲ್ಲಿ ನಿತ್ಯವೂ ಚಿರತೆಗಳ ಪ್ರತ್ಯಕ್ಷ!
*ಆಕಳ ಕರುವನ್ನು ತಿಂದು ಮತ್ತೊಂದು ಬೇಟೆಗೆ ಹೊಂಚು ಹಾಕುತ್ತಿರುವ ಚಿರತೆಗಳು.
*ಮಲಕನಮರಡಿ ಸುತ್ತಲಿನ ಗ್ರಾಮಸ್ಥರು.
*ಅರಣ್ಯ ಇಲಾಖೆಗೆ ಮನವಿ ಮಾಡಿದರೂ ನಿರ್ಲಕ್ಷ್ಯ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಪ್ರತಿನಿತ್ಯ ದನ ಕರು ನಾಯಿ ಮತ್ತು ಕುರಿ ಮೇಕೆಗಳನ್ನು ತಿನ್ನುತ್ತಿರುವ ಚಿರತೆಯ ಕಾಟದಿಂದ ಗ್ರಾಮಸ್ಥರು ಮತ್ತು ಕೃಷಿ ಮಾಡುವ ಕೃಷಿಕರು ಭಯಭೀತರಾಗಿರುವ ಘಟನೆ ತಾಲೂಕಿನ ಮಲ್ಲಾಪುರ ಸೀಮೆಯ ಮಲಕನಮರಡಿ ಗ್ರಾಮದ ಸುತ್ತಲಿನ ಗ್ರಾಮಗಳಲ್ಲಿ ಜರುಗಿದೆ.
ಮಲಕನ ಮರಡಿ ಗ್ರಾಮದ ಬಾಲಾಜಿ ಕ್ರಷರ್ ಮಿಷನ್ ಹತ್ತಿರದ ಬೆಟ್ಟ ಗುಡ್ಡಗಳಲ್ಲಿ ಚಿರತೆಗಳು ನಿತ್ಯವೂ ಗ್ರಾಮಸ್ಥರು, ಕುರಿಗಗಾಯಿಗಳು ಕೃಷಿಕರಿಗೆ ಪ್ರತ್ಯಕ್ಷವಾಗುತ್ತಿದ್ದು ಜನಜಾನುವಾರುಗಳಿಗೆ ಬಹಳ ತೊಂದರೆಯಾಗುತ್ತಿದೆ.
ರವಿವಾರ ಸಂಜೆ ಕರುವೊಂದನ್ನು ಕೊಂದಿರುವ ಚಿರತೆ ಅದನ್ನು ಅರ್ಧಂಬರ್ಧ ತಿಂದು ಹೋಗಿದ್ದು ಇದೇ ವಾರದಲ್ಲಿ ಹಲವು ಕುರಿ,ಮೇಕೆ ಮತ್ತು ನಾಯಿಗಳನ್ನು ಹೊತ್ತು ಹೊಯ್ದಿದೆ.
ಈ ಕುರಿತು ಅರಣ್ಯ ಇಲಾಖೆಯವರಿಗೆ ಬೋನು ಇರಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಮಲಕನಮರಡಿ ಗ್ರಾಮದ ಕೃಷಿಕರು ಮನವಿ ಮಾಡಿದರೂ ಅರಣ್ಯ ಮತ್ತು ಕಂದಾಯ,ಪೊಲೀಸ್ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಕೃಷಿಕ ಖಾದ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಿಷ್ಕಿಂಧವಾಣಿ ಸುದ್ದಿ