Breaking News
ಹಗರಿಬೊಮ್ಮನಹಳ್ಳಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಕೆ‌.ರೇಷ್ಮಾ ಸಿಕಂದರ್ ಆಯ್ಕೆ.

*ಜಿದ್ದಾಜಿದ್ದಿನ ಚುನಾವಣೆ ಬಹುಮತ ಇಲ್ಲದಿದ್ದರೂ ಬಿಜೆಪಿ ಸ್ಪರ್ಧೆ.

*ಬಿಜೆಪಿ ಪರವಾಗಿ ಶಾಸಕ ನೇಮಿರಾಜ್,ಕಾಂಗ್ರೆಸ್ ಪರವಾಗಿ ಸಂಸದ ಈ ತುಕಾರಾಂ ಮತ ಚಲಾವಣೆ.

ಕಿಷ್ಕಿಂಧವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ.

ಪುರಸಭೆಯ ಅಧ್ಯಕ್ಷರ ಚುನಾವಣೆಯಲ್ಲಿ ಸದಸ್ಯೆ ಕೆ.ರೇಷ್ಮಾ ಸಿಕಂದರ್ ಅವರು ಎರಡನೆಯ ಅವಧಿಗೆ ನೂತನ ಅಧ್ಯಕ್ಷರಾಗಿ 13 ಮತಗಳು ಪಡೆದು ಚುನಾಯಿತರಾದರು.

ಅಧ್ಯಕ್ಷರಾಗಿದ್ದ ಎಂ.ಮರಿರಾಮಪ್ಪ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಏ. 30 ರಂದು ಚುನಾವಣೆ ನಡೆಸಲಾಯಿತು. ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಬಣಕಾರ್ ಸುರೇಶ್, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ರೇಷ್ಮಾ ಸಿಕಂದರ್ ನಾಮಪತ್ರ ಸಲ್ಲಿಸಿದ್ದರು.

ಒಟ್ಟು 23 ಸದಸ್ಯ ಸ್ಥಾನ ಹೊಂದಿರುವ ಪುರಸಭೆಯಲ್ಲಿ ಕೆ.ರೇಷ್ಮಾ ಸಿಕಂದರ್ ಪರ 13 ಮತಗಳು ಪಡೆದರು, ಬಣಕಾರ್ ಸುರೇಶ್ ಪರ 9 ಮತಗಳ ಪಡೆದು ಪರಾಜಿತರಾದರು. ಅಧ್ಯಕ್ಷರ ಚುನಾವಣೆ ತೀವ್ರ ಪ್ರತಿಷ್ಠೆಯ ಪರಿಣಾಮ ಶಾಸಕ ಕೆ.ನೇಮಿರಾಜ್ ನಾಯಕ್ ಬಿಜೆಪಿ ಪರ ಹಾಗೂ ಸಂಸದ ಈ.ತುಕಾರಾಂ ಇವರು ಕಾಂಗ್ರೆಸ್ ಪರ ಮತ ಚಲಾಯಿಸಿದರು.

ಮೊದಲನೆಯ ಅವಧಿಗೆ ಅಧ್ಯಕ್ಷರಾಗಿ ಎಂ.ಮರಿರಾಮಪ್ಪ, ಉಪಾಧ್ಯಕ್ಷರಾಗಿ ಅಂಬಿಕಾ ದೇವೆಂದ್ರಪ್ಪ ಆಯ್ಕೆ ಆಗಿದ್ದರು.

ಈ ವೇಳೆ ಉಪಾಧ್ಯಕ್ಷೆ ಸೆರೆಗಾರ ನೇತ್ರಾವತಿ, ಸದಸ್ಯರಾದ ಪವಾಡಿ ಹನುಮಂತಪ್ಪ, ರಾಜೇಶ್ ಬ್ಯಾಡಗಿ, ಅಜೀಜುಲ್ಲಾ, ಖಾಜಾಬನ್ನಿ ಅಲ್ಲಾಭಕ್ಷಿ, ಗುಂಡ್ರು ಸರಸ್ವತಿ, ಮಂಜುಳಾ ಕೃಷ್ಣನಾಯ್ಕ, ಅಂಬಿಕಾ ದೇವೆಂದ್ರಪ್ಪ, ತೆಲಗಿ ಇಸ್ಮಾಯಿಲ್, ಜೋಗಿ ಹನುಮಂತ, ಕೆ.ಎಂ.ನವೀನ್, ದೀಪಕ್ ಕಠಾರೆ, ಬಣಕಾರ್ ಸುರೇಶ್, ಬಿ.ಗಂಗಾಧರ, ಆರ್.ಕಮಲಮ್ಮ, ಅಂಬಳಿ ಮಂಗಳ ರವೀಂದ್ರಗೌಡ, ನಾಗರಾಜ ಚುನಾವಣೆಯಲ್ಲಿ ಹಾಜರಿದ್ದರು.

ಬಿಜೆಪಿ ಸದಸ್ಯರಾದ ಮಲ್ಲೇಶ್ವರಿ ಭರತ್, ಎಚ್.ಎಂ.ಚೆನ್ನಮ್ಮ ವಿಜಯಕುಮಾರ್, ಭೋವಿ ವೀರೇಶ್ ಗೈರಾಗಿದ್ದರು.

ಬಿಜೆಪಿ ಅಭ್ಯರ್ಥಿ ಪರವಾಗಿ ಶಾಸಕ ಕೆ.ನೇಮಿರಾಜನಾಯ್ಕ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಸಂಸದ ಈ.ತುಕಾರಾಂ ಮತ ಚಲಾಯಿಸಿದರು.

ಭಾರಿ ಪೊಲೀಸ್ ಬಿಗಿ ಬಂದೋಬಸ್ತ್ : ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ವಿಕಾಸ್ ಲಮಾಣಿ ನೇತೃತ್ವದಲ್ಲಿ 5 ಸಿಪಿಐ ಸೇರಿದಂತೆ 6 ಪಿಎಸ್ಐಗಳು ಹಾಗೂ 100 ಪೇದೆಗಳನ್ನು ನಿಯೋಜಿಸಲಾಗಿತ್ತು.

ಸಂಸದ ಈ ತುಕಾರಾಂ ಹಾಗೂ ಮಾಜಿ ಶಾಸಕ ಭೀಮಾ ನಾಯಕ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ನ್ನು ನೂತನ ಅಧ್ಯಕ್ಷೆ ಕೆ.ರೇಷ್ಮಾ ಅಭಿನಂದಿಸಿದರು.

ಹೊಸಳ್ಳಿ ಸರಕಾರಿ ಶಾಲೆಗೆ ದಾನ ನೀಡಿದ ಭೂಮಿ ವಾಪಸ್ ಪಡೆಯಲು ಯತ್ನ.ಸರಕಾರದ ದಾಖಲೆ ತಿದ್ದಿದ ಅಧಿಕಾರಿಗಳ ವಿರುದ್ಧ ಕ್ರಮ ಆಗ್ರಹಿಸಿ ಕಂದಾಯ ಸಚಿವರಿಗೆ ಮನವಿ ಸಲ್ಲಿಕೆ.

*ಐದು ಎಕರೆ ದಾನ ನೀಡಿದ ಭೂಮಿಯಲ್ಲಿ ಮೂರು ಎಕರೆ ವಾಪಸ್ ಪಡೆಯಲು ಯತ್ನ.

*ಕೃತ್ಯಕ್ಕೆ ಸಹಕರಿಸಿ ಶಿಕ್ಷಣ ಮತ್ತು ಕಂದಾಯ ಇಲಾಖೆಯ ಅಧಿಕಾರ ಅಮಾನತ್ತಿಗೆ ಆಗ್ರಹ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ತಾಲೂಕಿನ ಹೊಸಳ್ಳಿ ಗ್ರಾಮದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಈ ಹಿಂದಿನ ಕಲ್ಮಠದ ಪೂಜ್ಯರು ಸರ್ಕಾರಿ ಶಾಲೆಗೆ ಐದು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಪ್ರಸ್ತುತ ಇರುವ ಮಠಾಧೀಶರು ಐದು ಎಕರೆ ಭೂಮಿಯಲ್ಲಿ ಮೂರು ಎಕರೆಯ ಭೂಮಿಯನ್ನು ವಾಪಸ್ ಪಡೆಯಲು ದಾಖಲಾತಿ ತಿದ್ದುವ ಯತ್ನ

ನಡೆಸಿದ್ದು ಸರ್ಕಾರಿ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಆದ್ದರಿಂದ ಕೂಡಲೇ ಕಂದಾಯ ಮತ್ತು ಶಿಕ್ಷಣ ಸಚಿವರು ಮಧ್ಯಪ್ರವೇಶ ಮಾಡಿ ಸರ್ಕಾರಿ ಶಾಲೆಗೆ ಐದು ಎಕರೆ ಭೂಮಿಯನ್ನು ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡುವಂತೆ ಕಂದಾಯ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಹೊಸಳ್ಳಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ದಲಿತ ಸಂಘಟನೆಗಳ ಮುಖಂಡರು ಬೆಂಗಳೂರಿನಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಬೆಂಗಳೂರಿನಲ್ಲಿ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.

ಹೊಸಳ್ಳಿ ಗ್ರಾಮದಲ್ಲಿರುವ ಸರ್ಕಾರ ಶಾಲೆಯ 5 ಎಕರೆ ಭೂಮಿ (ಸರ್ವೇ ನಂ. 16/2/4) ಕಬಳಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ.

ಕಲ್ಮಠದ ಪ್ರಸ್ತುತ ಪೀಠಾಧಿಪತಿಯಾಗಿರುವ ಡಾ.

ಕೊಟ್ಟೂರ ಸ್ವಾಮಿಗಳವರಿಂದ ಶಾಲೆಯ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ವಿಷಯವನ್ನು ಸಚಿವರ ಗಮನಕ್ಕೆ ತರಲಾಯಿತು. ವಿಷಯದ ಗಂಭೀರತೆಯನ್ನು ಅರಿತ ಸಚಿವರು ತಕ್ಷಣ ತಹಶೀಲ್ದಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಪ್ರಕರಣವನ್ನು ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಮತ್ತು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಅಪರ ಮುಖ್ಯಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಅವರು ಪ್ರತ್ಯೇಕವಾಗಿ ಮನವಿ ಪತ್ರ ಸ್ವೀಕರಿಸಿ ಸರ್ಕಾರ ಶಾಲೆಯ ಭೂಮಿಯನ್ನು ಯಾವುದೇ ರೀತಿಯ ಕಬಳಿಕೆಯಿಂದ ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಗ್ರಾಮದ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಸರ್ಕಾರ ಶಾಲೆಯ ಭೂಮಿಯನ್ನು ಉಳಿಸುವುದು ಅತ್ಯಂತ ಅವಶ್ಯಕವಾಗಿದ್ದು, ಯಾವುದೇ ರೀತಿಯ ಅನಧಿಕೃತ ಕಬಳಿಕೆಯನ್ನು ಸಹಿಸಲಾಗುವುದಿಲ್ಲ.

ಈ ಸಂಬಂಧ ತಕ್ಷಣ ಸೂಕ್ತ ಕ್ರಮ ಕೈಗೊಂಡು ಶಾಲೆಯ ಭೂಮಿಯನ್ನು ರಕ್ಷಿಸಬೇಕೆಂದು ಸರ್ಕಾರವನ್ನು ಸಂಘಟನೆಯ ವತಿಯಿಂದ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಮಾರ್ಗ) ರಾಜ್ಯಾಧ್ಯಕ್ಷ ನಾರಾಯಣ ಎಂ., ಕಲಬುರಗಿ ವಿಯತ್ ಅಧ್ಯಕ್ಷ ಮಂಜುನಾಥ ಸಾಸಲಮರಿ ಹಾಗೂ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮಹೇಶ್ ಡಿ,

ಸೇರಿದಂತೆ ಹೊಸಳ್ಳಿ ಗ್ರಾಮಸ್ಥರಿದ್ದರು.

ಬಿಜೆಪಿ ಮುಖಂಡ ಕುರುಬರ್ ವೆಂಕಟೇಶ ಕೊಲೆ ಪ್ರಕರಣದ ಆರು ಆರೋಪಿಗಳಿಗೆ ಗಲ್ಲು ಶಿಕ್ಷೆ ಪ್ರಕಟ!.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಕುರುಬರ್ ವೆಂಕಟೇಶ್ ಕುರುಬರ ಬರ್ಬರ ಹತ್ಯೆ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದ್ದು, ಆರು ಜನ ಅಪರಾಧಿಗಳಿಗೆ ನ್ಯಾಯಾಲಯವು ಮರಣದಂಡನೆ ವಿಧಿಸಿ ಐತಿಹಾಸಿಕ ಆದೇಶ ನೀಡಿದೆ.

ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರು ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.

ಕಳೆದ 2025 ಅಕ್ಟೋಬರ್ 7, ರಂದು ಹಳೇ ದ್ವೇಷದ ಹಿನ್ನೆಲೆಯಲ್ಲಿ ವೆಂಕಟೇಶ್ ಅವರನ್ನು ಗಂಗಾವತಿ ನಗರದಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ಕೊಲೆಯಾದ ಕುರುಬರ ವೆಂಕಟೇಶ್ ಪಾಲಕರಿಂದ ಕೇಸು ಪಡೆದ ನಗರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣದ ಆರೋಪಿಗಳಿಗಾಗಿ ತಮಿಳುನಾಡು ಆಂಧ್ರಪ್ರದೇಶ ಕೇರಳ ಸೇರಿದಂತೆ ದಕ್ಷಿಣ ಭಾರತದ ತುಂಬಾ ಸಂಚಾರ ಮಾಡಿ ಆರೋಪಿಗಳನ್ನು ಬಂಧಿಸಿದ್ದರು.

ನಂತರ ನ್ಯಾಯಾಲಯವು ಪ್ರತಿದಿನವೂ ಪ್ರಕರಣದ ವಿಚಾರಣೆಯನ್ನು ನಡೆಸಿ ಸಾಕ್ಷಿ ಸಂಗ್ರಹಿಸಿ ಅಂತಿಮವಾಗಿ ಇದೀಗ ಪ್ರಕರಣದ 12 ಜನ ಆರೋಪಿಗಳ ಪೈಕಿ ಆರು ಜನರಿಗೆ ಗೆಲ್ಲು ಶಿಕ್ಷೆ ವಿಧಿಸಿದೆ.

ಪ್ರಕರಣದ ತನಿಖೆ ನಡೆಸಿದ್ದ ನಗರ ಪೊಲೀಸರು 997 ಪುಟಗಳ ಬೃಹತ್ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದ ರವಿ ಕುರುಬರ್, ವಿಜಯ್ ಅಲಿಯಾಸ್ ಮೈಲಾರಿ, ಧನರಾಜ್, ಭೀಮ್ ಅಲಿಯಾಸ್ ಭರತ್, ಸಲೀಮ್ ಮಹಮ್ಮದ್ ರಫೀಕ್ ಮತ್ತು ಗಂಗಾಧರ ಗೌಳಿ ಎಂಬ ಆರು ಜನರನ್ನು ದೋಷಿಗಳೆಂದು ಪರಿಗಣಿಸಿ ಗಲ್ಲು ಶಿಕ್ಷೆ ಹಾಗೂ ತಲಾ 3 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಕಾರ್ತಿಕ್, ದಾದಪೀರ್ ಸೇರಿದಂತೆ ಇತರ ಆರು ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನಿರ್ದೋಷಿಗಳೆಂದು ಘೋಷಿಸಿ ನ್ಯಾಯಾಲಯವು ಖುಲಾಸೆಗೊಳಿಸಿದೆ