ಗಂಗಾವತಿ ಪುಟ್ ಪಾತ್ ರಸ್ತೆ ಒತ್ತುವರಿ, ನ್ಯಾಯಾಲಯದಿಂದ ಸ್ವಯಂ ಪ್ರೇರಿತ ದೂರು ದಾಖಲು, ನಗರಸಭೆಯಿಂದ ಬೆಳ್ಳಂಬೆಳ್ಳಗ್ಗೆ ತೆರವು ಕಾರ್ಯಾಚರಣೆಗೆ ಚಾಲನೆ!

*ಪೌರಾಯುಕ್ತ ಆರ್ ವಿರೂಪಾಕ್ಷ ಮೂರ್ತಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ!
*ಡೇಲಿ ಮಾರ್ಕೆಟ್,ಗಣೇಶ, ಗಾಂಧಿ ಸರ್ಕಲ್ ಸೇರಿದಂತೆ ಹಲವೆಡೆ ಜೆಸಿಬಿ ಘರ್ಜನೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ನಗರದ ವ್ಯಾಪ್ತಿಯಲ್ಲಿ ಅಮೃತ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಪಾದಚಾರಿಗಳ ಸಂಚಾರಿ ಪುಟ್ ಪಾತ್ ರಸ್ತೆಗಳನ್ನು ಅಂಗಡಿಗಳ ಮಾಲೀಕರು ಒತ್ತುವರಿ ಮಾಡಿಕೊಂಡು ತಮ್ಮ ವ್ಯಾಪಾರ ವಹಿವಾಟು ಕಳೆದ 20 ವರ್ಷಗಳಿಂದ ಮಾಡುತ್ತಿದ್ದು, ನಗರಸಭೆಯಿಂದ ಹಲವು ಬಾರಿ ಪುಟ್ ಪಾತ್ ತೆರವು ಮಾಡುವಂತೆ ನೋಟಿಜ್ ಜಾರಿ ಮಾಡಿದರೂ ಅಂಗಡಿ ಮಾಲೀಕರು ನಿರ್ಲಕ್ಷ್ಮ ವಹಿಸಿದ್ದರಿಂದ ನಗರಸಭೆಯ ಪೌರಾಯುಕ್ತ ಆರ್. ವಿರೂಪಾಕ್ಷ ಮೂರ್ತಿ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಜಿಸಿಬಿಯೊಂದಿಗೆ ನಗರದ ಡೇಲಿ ಮಾರ್ಕೆಟ್, ಗಣೇಶ,ಗಾಂಧಿ ಸರ್ಕಲ್ ಸೇರಿದಂತೆ ಹಲವೆಡೆ ಪುಟ್ ಪಾತ್ ಮೇಲೆ ಅಳವಡಿಸಿದ್ದ ತಗಡು ಸೇರಿ ಕಟ್ಟಡಗಳ ತೆರವು ಕಾರ್ಯಾಚರಣೆ ಬುಧವಾರ ಬೆಳಗಿನ ಜಾವ ಆರಂಭಿಸಲಾಗಿದೆ.

ಈ ಮಧ್ಯೆ ನಗರದ ಕಾನೂನು ಸೇವಾ ಸಮಿತಿಯು ನ್ಯಾಯಾಲಯದಲ್ಲಿ ಪುಟ್ ಪಾತ್ ಒತ್ತುವರಿ ಹಾಗೂ ಪಾದಚಾರಿಗಳ ತೊಂದರೆ ಕುರಿತು ಸ್ವಯಂ ಪ್ರೇರಿತವಾಗಿ ನಗರಸಭೆ,ಪೊಲೀಸ್ ಇಲಾಖೆ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು ಏ.17 ನೇಯ ದಿನಾಂಕದೊಳಗೆ ಒತ್ತುವರಿ ತೆರವುಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಸೂಚನೆ ನೀಡಿದರೂ ನಗರಸಭೆಯವರು ಕಾರ್ಯಾ ಪ್ರವೃತ್ತರಾಗದೇ ಇರುವುದರಿಂದ ಮೇ.02 ರಂದು ಸ್ವಯ ಪ್ರೇರಿತ ಕೇಸ್ ಬಗ್ಗೆ ವಿಚಾರಣೆ ನಡೆಸಲು ಸಮಯ ನಿಗದಿ ಮಾಡಿದೆ.
ಇದರಿಂದ ಎಚ್ಚೆತ್ತ ನಗರಸಭೆ ಮತ್ತು ಪೊಲೀಸ್ ಇಲಾಖೆಯವರು ಬುಧವಾರ ಪುಟ್ ಪಾತ್ ತೆರವು ಕಾರ್ಯಾಚರಣೆ ಆರಂಭಿಸಿದ್ದು ಇಡೀ ನಗರದಲ್ಲಿ ಪುಟ್ ಪಾತ್ ಒತ್ತುವರಿ ತೆರವು ನಡೆಸಲಾಗುತ್ತದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
***

ಕಳೆದ 20 ವರ್ಷಗಳ ಹಿಂದೆ ಅಮೃತಯೋಜನೆಯಡಿಯಲ್ಲಿ ನಗರದ ಪುಟ್ ಪಾತ್ ನಿರ್ಮಿಸಲಾಗಿದೆ. ತಮ್ಮ ಅಂಗಡಿ ಮುಂದಿನ ಪುಟ್ ಪಾತ್ ಒತ್ತುವರಿ ಮಾಡಿಕೊಂಡು ತಗಡು ಹಾಕಿದ್ದಾರೆ, ಇನ್ನೂ ಕೆಲವೆಡೆ ಕಟ್ಟಡ ನಿರ್ಮಾಣ ಮಾಡಿದ್ದು ಈಗಾಗಲೇ ಹಲವು ಬಾರಿ ಎಚ್ಚರಿಕೆ ನೋಟೀಸ್ ಕೊಟ್ಡರೂ ಪ್ರಯೋಜನವಾಗಿಲ್ಲ.ಜತೆಗೆ ನ್ಯಾಯಾಲಯದಲ್ಲಿ ಸ್ವಂ ಮೋಟ್ ಕೇಸ್ ದಾಖಲಿಸಿಕೊಂಡಿದ್ದು ಅಧಿಕಾರಿಗಳ ಮೇಲೆ ಕ್ರಮವಾಗಲಿದೆ.ಆದ್ದರಿಂದ ನಿರಂತರವಾಗಿ ಕಾರ್ಯಾಚರಣೆ ಮೂಲಕ ಪುಟ್ ಪಾತ್ ತೆರವು ಮಾಡಿ ನ್ಯಾಯಾಲಯಕ್ಕೆ ವರದಿ ನೀಡಲಾಗುತ್ತದೆ. ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಪುಟ್ ಪಾತ್ ತೆರವು ಮಾಡಿಕೊಳ್ಳಬೇಕು.
-ಆರ್ ವಿರೂಪಾಕ್ಷ ಮೂರ್ತಿ.

