ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿಯಿಂದ ಪ್ರಥಮವಾಗಿ ಚುನಾಯಿತ ಜನಪ್ರತಿನಿಧಿಯಾಗಿದ್ದ ಕೆ ವೆಂಕಟರಾವ್ ಕಲ್ಗುಡಿ ನಿಧನ. *ತಾ.ಪಂ.ಮೂಲಕ ಬಿಜೆಪಿ ಜಿಲ್ಲೆಯಲ್ಲಿ ಖಾತೆ ಆರಂಭಕ್ಕೆ ಕಾರಣರಾಗಿದ್ದರು
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಭಾರತೀಯ ಜನತಾ ಪಕ್ಷದಿಂದ ತಾ.ಪಂ.ಚುನಾವಣೆಯಲ್ಲಿ ಗೆದ್ದು ಬಿಜೆಪಿ ಖಾತೆ ಆರಂಭಿಸಿದ್ದ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ವೆಂಕಟರಾವ್ ಜಂಗಮರ ಕಲ್ಗುಡಿ(69) ಇವರು ಜಂಗಮರ ಕಲ್ಗುಡಿ ಗ್ರಾಮದ ತಮ್ಮ ನಿವಾಸದಲ್ಲಿ ಬುಧವಾರ ಸಂಜೆ 07 ಗಂಟೆಗೆ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, ಒರ್ವ ಪುತ್ರ,ಪುತ್ರಿ ಇದ್ದಾರೆ.
2000 ಇಸವಿಯಲ್ಲಿ ಜರುಗಿದ್ದ ತಾ.ಪಂ.ಜಿ.ಪಂ.ಚುನಾವಣೆಯಲ್ಲಿ ಬಿಜೆಪಿ ಬಿ ಫಾರಂ ಪಡೆದು ಗೆಲುವು ಪಡೆದು ಇಡೀ ಜಿಲ್ಲೆಯಲ್ಲಿ ಬಿಜೆಪಿ ಖಾತೆ ಆರಂಭಕ್ಕೆ ಕಾರಣರಾಗಿದ್ದರು.
ಮೃತರ ಅಂತ್ಯಕ್ರಿಯೆ ಮಾ.05 ರಂದು ಬೆಳಗ್ಗೆ 8:00ಗೆ ಅಂತ್ಯಕ್ರಿಯೆ ಜಂಗಮರ ಕಲ್ಗುಡಿ ಗ್ರಾಮದಲ್ಲಿ ನೆರವೇರಲಿದೆ.
ಸಂತಾಪ: ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ ಖಾತೆಯನ್ನು ಆರಂಭಿಸಿ ಢಣಾಪುರ ತಾಲೂಕ ಪಂಚಾಯತಿನಿಂದ ಬಿಜೆಪಿ ಸದಸ್ಯರಾಗಿ ಗೆಲುವು ಪಡೆದಿದ್ದ ವೆಂಕಟರಾವ್ ನಿಧನಕ್ಕೆ ಶಾಸಕ ಗಾಲಿ ಜನಾರ್ದನ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ದಡೆಸೂಗೂರು ಬಸವರಾಜ, ಮಾಜಿ ಸಂಸದರಾದ ಶಿವರಾಮಗೌಡ, ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ಜಿ.ವೀರಪ್ಪ, ಮುಖಂಡರಾದ ಸಿಂಗನಾಳ ವಿರುಪಾಕ್ಷಪ್ಪ,ಯಡ್ಲಪಲ್ಲಿ
ಆನಂದರಾವ್ ,ಟಿ.ವಿ.ಸತ್ಯನಾರಾಯಣ, ಎಂ.ಸತ್ಯನಾರಾಯಣ, ಜಾನಕೀರಾಮ್
ಸೇರಿ ಬಿಜೆಪಿ ಮುಖಂಡರು, ಜಂಗಮರ ಕಲ್ಗುಡಿ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

