ಅತ್ಯುತ್ತಮ ರಾಜ್ಯಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ,ಸಾಹಿತಿ ವೆಂಕಟರಾವ್ ಕುಲಕರ್ಣಿ ನಿಧನ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಅತ್ಯುತ್ತಮ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಸಾಹಿತಿ ವೆಂಕಟರಾವ್ ಕುಲಕರ್ಣಿ(೬೮)ಇವರು ವಯೋಸಹಜವಾಗಿ ವಿಜಯನಗರ ಕಾಲೋನಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ನರದ ಸಿಪಿಎಸ್ ಶಾಲೆ ಹಿರೇ ಜಂತಕಲ್ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ ವೆಂಕಟರಾವ್ ದಾಸ ಸಾಹಿತ್ಯದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದರು. ದಾಸಸಾಹಿತ್ಯದ ಕುರಿತು ಹಲವು ಕೃತಿಗಳನ್ನು ಬರೆದು ಮಂತ್ರಾಲಯದ ಪೂಜ್ಯ ಶ್ರೀಗಳಿಂದ ಬಿಡುಗಡೆಗೊಳಿಸಿದ್ದರು. ಕಾರುಣ್ಯ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು.2018 ರಲ್ಲಿ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದರು.ಸಂಘಸಂಸ್ಥೆಗಳು ಇವರಿಗೆ ಹಲವು ಪ್ರಶಸ್ತಿ ನೀಡಿ ಗೌರವಿಸಿವೆ.
ನಿವೃತ್ತಿಯ ನಂತರ ಅಂದಿನ ಶಾಸಕ ಪರಣ್ಣ ಮುನವಳ್ಳಿ ಅವರು ಸರಕಾರಿ ಜೂನಿಯರ್ ಕಾಲೇಜಿನ ಅಭಿನಂದನೆಗಳು ಸಮಿತಿಯ ಉಪಾಧ್ಯಕ್ಷರಾಗಿ ನೇಮಿಸಿದ್ದರು.ಇವರ ಅವರ ಅವಧಿಯಲ್ಲಿ ಜೂನಿಯರ್ ಕಾಲೇಜಿನ ಕೊಠಡಿಗಳ ನಿರ್ಮಾಣ ಕ್ಕೆ
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ವಿಶೇಷ ಅನುದಾನ ಮಂಜೂರು ಮಾಡಿಸುವಲ್ಲಿ ವೆಂಕಟರಾವ್ ಕುಲಕರ್ಣಿ ಪ್ರಮುಖರಾಗಿದ್ದಾರೆ.
ಮೃತರ ಅಂತ್ಯಕ್ರಿಯೆ ನಗರದ ಮುಕ್ತಿಧಾಮದಲ್ಲಿ ಮಂಗಳವಾರ ಸಂಜೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಸಂತಾಪ: ನಿವೃತ್ತ ಶಿಕ್ಷಕ ವೆಂಕಟರಾವ್ ಕುಲಕರ್ಣಿ ನಿಧನಕ್ಕೆ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಲಲಿತಾರಾಣಿ ಶ್ರೀರಂಗದವರಾಯಲು,ಪತ್ರಕರ್ತರಾದ ಕೆ.ಮಲ್ಲಿಕಾರ್ಜುನ ಸಾಣಾಪೂರ, ಕೆ.ನಿಂಗಜ್ಜ, ರಾಮಮೂರ್ತಿ ನವಲಿ,ಎಸ್.ಎಂ.ಪಟೇಲ್, ಪ್ರಸನ್ನ ದೇಸಾಯಿ, ವಿ.ಎಸ್.ಪಾಟೀಲ್,ಸುದರ್ಶನ ವೈದ್ಯ,
ವಾಸುದೇವನವಲಿ, ಗಂಗಾವತಿ ತಾಲೂಕ ಬ್ರಾಹ್ಮಣ ಸಮಾಜ ಅಪಾರ ಶಿಷ್ಯಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ

