Breaking News
ನೂತನ ತಹಸೀಲ್ದಾರ್ ಯು.ವಸಂತಕುಮಾರಿ ಕರ್ತವ್ಯಕ್ಕೆ ಹಾಜರು.

 

*ನೂತನ ತಹಸೀಲ್ದಾರರಿಗೆ ಅಧಿಕಾರ ಪ್ರಭಾರ ವಹಿಸಿದ ಕನಕಗಿರಿ ತಹಸೀಲ್ದಾರ್ ವಿಶ್ವನಾಥ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಗಂಗಾವತಿಯ ನೂತನ ತಹಶೀಲ್ದಾರ್ ಆಗಿ ಯು ವಸಂತಕುಮಾರ್ ಅವರು ಬುಧವಾರ ಸಂಜೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬೆಂಗಳೂರು ಉತ್ತರ ಜಿಲ್ಲೆಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯು.ವಸಂತ ಕುಮಾರಿ ಅವರನ್ನು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಶಿಫಾರಸಿನ ಮೇರೆಗೆ ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯು.ವಸಂತಕುಮಾರಿ ಅವರನ್ನು ಗಂಗಾವತಿಗೆ ವರ್ಗಾವಣೆ ಮಾಡುವಂತೆ ಕಂದಾಯ ಇಲಾಖೆಯ ಆಧೀನ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದರು. ಕಳೆದ ವಾರ ಗಂಗಾವತಿಯ ತಹಶೀಲ್ದಾರರಾಗಿ ವರ್ಗಾವಣೆಗೊಂಡಿದ್ದ ಯು.ವಸಂತಕುಮಾರಿ ಕಾರಣಾಂತರಗಳಿಂದ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಬುಧವಾರ ಸಂಜೆ ಗಂಗಾವತಿಗೆ ಆಗಮಿಸಿ ತಹಸಿಲ್ ಕಚೇರಿಯಲ್ಲಿ ಪ್ರಭಾರವನ್ನು ವಹಿಸಿಕೊಂಡರು. ಕನಕಗಿರಿಯ ತಹಸಿಲ್ದಾರ್ ವಿಶ್ವನಾಥ್ ಗುಡಿ ಅವರು ನೂತನ ತಹಸಿದ್ದಾರವರಿಗೆ ಪುಷ್ಪಗುಚ್ಛಾವನ್ನು ನೀಡಿ ಪ್ರಭಾರವನ್ನು ವಹಿಸಿದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಸಲ್ದಾರ್ ಮಹಂತ ಗೌಡ ಪಾಟೀಲ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

ಪಡಿತರ ಅಕ್ಕಿ ಅಕ್ರಮ ಸಂಗ್ರಹ:3 ಜನರಿಗೆ ಜೈಲು ಶಿಕ್ಷೆ,ತಲಾ 10ಸಾವಿರ ದಂಡ

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಸರಕಾರ ಬಡ ಜನರಿಗಾಗಿ ಕೊಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಮೂರು ಜನರಿಗೆ ನಗರದ ಪ್ರಧಾನ ಸಿವಿಲ್ ನ್ಯಾಯಾಲಯ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ತಲಾ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

2021 ಏಪ್ರಿಲ್ 29 29ರಂದು ಖಚಿತವಾದ ಮಾಹಿತಿಯ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು ನಗರದ ಮಹಾವೀರ ಸರ್ಕಲ್ ಹತ್ತಿರ ಇರುವ ಡಾ. ವಿವಿ ಸಿನಿವಾಲರ್ ಆಸ್ಪತ್ರೆ ಹಿಂದುಗಡೆ ಅಕ್ರಮವಾಗಿ ಬಡವರಿಗೆ ಕೊಡುವ ಪಡಿತರ (ಪಿಡಿಎಸ್) ಅಕ್ಕಿ ಚೀಲಗಳನ್ನು ಸಂಗ್ರಹಿಸಿ ಇಟ್ಟಿದ್ದ ಆರೋಪಿಗಳಾದ ಗಂಗಾವತಿಯ ಸಂತೆಬೆಯಲು ನಿವಾಸಿ ಮಹಬೂಬ್ (34), ಮೆಹಬೂಬ್ ನಗರದ ಹುಸೇನ್ (21) ಹಾಗೂ ಮಹಬೂಬ್ ನಗರದ ಆಟೋ ಚಾಲಕ ದಾದಾ ಕಲಂದರ್(35) ಇವರನ್ನು ಅಕ್ರಮ ಸಂಗ್ರಹ ಅಕ್ಕಿ ಚೀಲಗಳ ಜೊತೆ ಬಂಧಿಸಿ ನಗರ ಠಾಣೆಯಲ್ಲಿ ಅಗತ್ಯ ವಸ್ತು ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ನಾಗೇಶ್ ಪಾಟೀಲ್ ಅವರು ಬುಧವಾರ ತೀರ್ಪು ನೀಡಿ ಮೂರು ಜನ ಆರೋಪಿತರ ಆರೋಪ ಸಾಬೀತಾಗಿದ್ದು ಇವರಿಗೆ ಅಗತ್ಯ ವಸ್ತು ಕಾಯ್ದೆ 1955 ಕಲಂ 3/7 ರ ಪ್ರಕಾರ ಮೂರು ವರ್ಷ ಸಾದಾ ಜೈಲು ಶಿಕ್ಷೆ ಹಾಗೂ ತಲಾ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸದಾ ಸುದ್ದಿಯಲ್ಲಿರುವ ಕೊಪ್ಪಳ ಆರ್ ಟಿಓ ಕಚೇರಿಯ. ಮೇಲೆ ಲೋಕಾಯುಕ್ತ ದಾಳಿ!

*ಕೊಪ್ಪಳದಲ್ಲಿ ಲಂಚ ಸ್ವೀಕರಿಸುವ ವೇಳೆ ಆರ್‌ಟಿಒ ಸಿಬ್ಬಂದಿ ಲೋಕಾಯುಕ್ತ ಬಲೆಗೆ.

*ಖಾಸಗಿ ಕಂಪನಿಯವರು ಕಚೇರಿ ಕೆಲಸ ಬಿಡಿಸಿ ಡಾಟಾ ಎಂಟ್ರಿ ಮಾತ್ರ ಮಾಡಿಸಬೇಕು.

*ಕಚೇರಿ ಕೆಲ ನೌಕರರು, ನಿವೃತ್ತರು ಹೊರಗಿನವರಿಂದ ತಮಗಾಗದವರ ವಿರುದ್ಧ ಮಾಹಿತಿ ಹಕ್ಕು ಹಾಕಿವುದರ ವಿರುದ್ದ ಸೂಕ್ತ ತನಿಖೆ ನಡೆಸುವಂತೆ ಆಗ್ರಹ.

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ: ಒಂದಿಲ್ಲೊಂದು ಕಾರಣಕ್ಕಾಗಿ ಸದಾ ಸುದ್ದಿಯಲ್ಲಿರುವ ಕೊಪ್ಪಳದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯ ಮೇಲೆ ಶೋರೂಮ್ ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪ್ರತ್ಯೇಕ ಪ್ರಕರಣಗಳಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಹಣದ ಸಮೇತ ಇಬ್ಬರನ್ನು ಬಂಧಿಸಿದ್ದಾರೆ

ಶೋರೂಮ್ ಟ್ರೇಡ್ ಲೈಸನ್ಸ್ ನೀಡಲು ಲಂಚ ಬೇಡಿಕೆ ಇಟ್ಟಿದ್ದ ಆರ್‌ಟಿಒ ಕಚೇರಿಯ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿರುವ ಘಟನೆ ನಡೆದಿದೆ.

ಕೊಪ್ಪಳ ಆರ್‌ಟಿಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಸ್‌ಡಿಎ ರಂಜೀತ್ ಎಂಬಾತನು ಲೈಸನ್ಸ್ ನೀಡಲು ₹21 ಸಾವಿರ ಲಂಚ ಕೇಳಿದ್ದನು. ಈ ಸಂಬಂಧ ನಯೀಮ್ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದ್ದರು.

ದೂರು ಆಧರಿಸಿ ಲೋಕಾಯುಕ್ತರು ಟ್ರ್ಯಾಪ್ ಕಾರ್ಯಾಚರಣೆ ನಡೆಸಿ, ನಯೀಮ್ ಅವರು ಹಣ ನೀಡುವ ವೇಳೆ ರಂಜೀತ್‌ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು.

ಶೋರೂಮ್ ಆರಂಭಿಸಲು ನಯೀಮ್ ಅವರು ಮೂರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ, ಲೈಸನ್ಸ್ ನೀಡಲು ವಿಳಂಬ ಮಾಡುತ್ತಾ ಲಂಚಕ್ಕೆ ಒತ್ತಾಯ ಮಾಡಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ನಡೆಸಲಾಗಿದೆ. ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ದೂರುದಾರರು ಕುಷ್ಟಗಿ, ಕಾರಟಗಿ ಮತ್ತು ಹುಲಿಗಿ ಪ್ರದೇಶಗಳಲ್ಲಿ ಶೋರೂಮ್ ತೆರೆಯಲು ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದ್ದರೆಂದು ತಿಳಿದುಬಂದಿದೆ.

ಖಾಸಗಿ ಸಿಬ್ಬಂದಿಗಳದ್ದೇ ಅಧಿಕಾರ: ಸಾರಿಗೆ ಇಲಾಖೆಯ ಕೆಲ ನಿಯಮಗಳಿಂದಾಗಿ ಸರ್ಕಾರದ ಕಚೇರಿಗಳು ಖಾಸಗಿಯವರ ದರ್ಬಾರು ನಡೆಸುವ ಅಡ್ಡಗಳಂತಾಗಿದೆ. ಕೊಪ್ಪಳದ ಆರ್‌ಟಿಓ ಕಚೇರಿಯಲ್ಲಿ ಖಾಸಗಿ ಕಂಪನಿಯಿಂದ ಕಂಪ್ಯೂಟರ್ ಆಪರೇಟರ್ ಆಗಿ ಡಾಟಾ ಎಂಟ್ರಿ ಮಾಡಲು ಖಾಸಗಿ ಸಂಸ್ಥೆಯಿಂದ ನೇಮಕಗೊಂಡಿರುವ ಸಿಬ್ಬಂದಿಯವರು ನೇರವಾಗಿ ಲೈಸೆನ್ಸ್ ಮಾಡಿಸಲು ಬರುವ ಸಾರ್ವಜನಿಕರಿಂದ ಫೈಲ್ ಅನ್ನು ಪಡೆದು ಅವರೇ ಫಿಲ್ಡಿಗೆ ಇಳಿದು ಕೆಲಸ ಮಾಡಿಕೊಟ್ಟು ಹಣ ಪಡೆಯುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಇಲ್ಲಿಯ ಆರ್ ಟಿ ಓ ಅವರು ಖಾಸಗಿ ಕಂಪನಿಯ ಸಿಬ್ಬಂದಿಯವರು ತರುವ ಮಾತ್ರ ಕಡತಗಳನ್ನು ಪಡೆದು ಲೈಸೆನ್ಸ್ ಮಂಜೂರಿ ಮತ್ತು ನೋಂದಣಿ ಮಾಡಿ ನಂಬರ್ ಹಂಚಿಕೆ ಮಾಡುತ್ತಾರೆನ್ನುವ ಆರೋಪ ವ್ಯಾಪಕವಾಗಿದೆ.

ಒಂದೇ ನಂಬರ್ ಎರಡು ವಾಹನಗಳಿಗೆ ಹಂಚಿಕೆ ಮಾಡಿದ ಆರೋಪವೂ ಕೊಪ್ಪಳದ ಆರ್ ಟಿಓ ಕಚೇರಿಯಲ್ಲಿ ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದು ಸೂಕ್ತ ತನಿಖೆ ಮಾಡಿ ಆರೋಪಿತರ‌ ಮೇಲೆ ಕ್ರಮ ಕೈಗೊಳ್ಳಬೇಕಿದೆ.

ಖಾಸಗಿ ಸಿಬ್ಬಂದಿಯವರು ಹೇಳಿದ ಕೆಲಸ ಮಾಡದಿದ್ದರೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಲಾಗುತ್ತಿದೆ.

ಆದ್ದರಿಂದ ಸಾರಿಗೆ ಇಲಾಖೆ ಉನ್ನತ ಅಧಿಕಾರಿಗಳು ಕೊಪ್ಪಳ ಆರ್ ಟಿ ಓ ಕಚೇರಿಯ ಖಾಸಗಿ ಸಿಬ್ಬಂದಿಯವರ ಸೇವೆ ಸ್ಥಗಿತ ಮಾಡಬೇಕು. ಕಚೇರಿಯ ಕೆಲ ಹಾಲಿ ಮತ್ತು ನಿವೃತ್ತ ನೌಕರರು ಕೆಲ ಸಂಘಟನೆಗಳ ಮುಖಂಡರ ಮೂಲಕ ತಮಗೆ ಆಗದವರ ವಿರುದ್ದ ಮಾಹಿತಿ ಹಕ್ಕು ಮತ್ತು ಮೂಕ ಅರ್ಜಿ ಹಾಕಿಸಯವ ಮೂಲಕ ಕೆಲಸ ಮಾಡುವ ನೌಕರರ ಮೇಲೆ ನಡೆಸುತ್ತಿರುವ ದೌರ್ಜನ್ಯ ತಡೆಯಲು ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಹೊರಗಿನವರ ದೌರ್ಜನ್ಯ ತಡೆದು ಕಳೆದ 15 ವರ್ಷಗಳಿಂದ ನಡೆದಿರುವ ಅಂದಾದುಂದಿ ತಡೆಯವ ಅವಶ್ಯಕತೆ ಇದೆ.ಜತೆಗೆ ನಿವೃತ್ತರಾದ ಸಾರಿಗೆ ಇಲಾಖೆಯ ಮೂಲ ಮತ್ತು ಹಾಲಿ ಇರುವ ಆಸ್ತಿ ಕುರಿತು ಇಲಾಖೆಯವರು ಪ್ರತೇಕ ಸಂಸ್ಥೆಯಿಂದ ತನಿಖೆ ನಡೆಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.

ಹಿರಿಯ ಶಾಸಕ ಹಿಂದುಳಿದ ವರ್ಗದ ಕೆ.ರಾಘವೇಂದ್ರ ಹಿಟ್ನಾಳ ಅವರಿಗೆ ಸಚಿವ ಸ್ಥಾನ ಕಲ್ಪಿಸುವಂತೆ ಬೆಟ್ಟಪ್ಪ ಹುರಕಡ್ಲಿ ಆಗ್ರಹ.

*ಕಾಂಗ್ರೆಸ್ ಬೆಂಬಲಿಸಿರುವ ಜಿಲ್ಲೆಯ ಕುರುಬ ಸಮಾಜದವರಿಗೆ ನಿಗಮ,ಮಂಡಳಿಗೆ ನೇಮಕ ಮಾಡಬೇಕು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಕೊಪ್ಪಳ ಜಿಲ್ಲೆಯ ಹಿರಿಯ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿರುವ ಹಿಂದುಳಿದ ವರ್ಗದ ಕೆ. ರಾಘವೇಂದ್ರ ಹಿಟ್ನಾಳ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಬೆಟ್ಟಪ್ಪ ಹುರಕಡ್ಲಿ ಮನವಿ ಮಾಡಿದ್ದಾರೆ.

ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವ ರಾಘವೇಂದ್ರ ಹಿಟ್ನಾಳ್ ಅವರು ಕೊಪ್ಪಳ ಜಿಲ್ಲೆಯ ಸಮಗ್ರ ಮಾಹಿತಿಯನ್ನು ಬಲ್ಲವರಾಗಿದ್ದಾರೆ ಜೊತೆಗೆ ಕೊಪ್ಪಳ ಕ್ಷೇತ್ರವನ್ನು ವಿವಿಧ ನೀರಾವರಿ ಯೋಜನೆಗಳ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಕುಡಿಯುವ ನೂರು ರಸ್ತೆ ವಸತಿ ಯೋಜನೆ ಸೇರಿದಂತೆ ಶೈಕ್ಷಣಿಕವಾಗಿ ಇಡೀ ಕ್ಷೇತ್ರವನ್ನು ಮುಂದುವರಿಯುವಂತೆ ಮಾಡಿದ್ದಾರೆ ಆದ್ದರಿಂದ ರಾಘವೇಂದ್ರ ಹಿಟ್ನಾಳ್ ಅವರು ರಾಜ್ಯ ಸಚಿವ ಸಂಪುಟದಲ್ಲಿ ಇದ್ದರೆ ಇಡೀ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋಗಲು ಅಳಿಲು ಸೇವೆ ಮಾಡಲಿದ್ದಾರೆ ಆದ್ದರಿಂದ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸಂಪುಟದಲ್ಲಿ ಹಿಟ್ನಾಳ್ ಅವರಿಗೆ ಸ್ಥಾನ ಕಲ್ಪಿಸಬೇಕು.

ಜೊತೆಗೆ ಕೊಪ್ಪಳ ಜಿಲ್ಲೆಯಲ್ಲಿರುವ ಹಾಲುಮತ ಕುರುಬ ಸಮಾಜದ ಯುವ ಮುಖಂಡರು ಮತ್ತು ಹಿರಿಯರಿಗೆ ನಿಗಮ ಮಂಡಳಿ ಸೇರಿದಂತೆ ವಿವಿಧ ಸ್ಥಾನಮಾನಗಳನ್ನು ಕಲ್ಪಿಸಬೇಕು. ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಇಡೀ ಸಮಾಜ ಕಾಂಗ್ರೆಸ್ ಪಕ್ಷದ ಪರವಾಗಿದ್ದು ಹೆಚ್ಚು ಸ್ಥಾನ ಗೆಲ್ಲುವಲ್ಲಿ ನೆರವಾಗಿದೆ. ಆದ್ದರಿಂದ ಹಾಲುಮತ ಕುರುಬ ಸಮಾಜದವರಿಗೆ ರಾಜಕೀಯ ಸ್ಥಾನಮಾನ ಕೊಡುವುದು ಅವಶ್ಯವಾಗಿದೆ ಎಂದು ಬೆಟ್ಟಪ್ಪ ಬಲ್ಲವಕಲ್ಪಿಸಬೇಕು.

ಗಂಗಾವತಿ ಪುಟ್ ಪಾತ್ ರಸ್ತೆ ಒತ್ತುವರಿ, ನ್ಯಾಯಾಲಯದಿಂದ ಸ್ವಯಂ ಪ್ರೇರಿತ ದೂರು ದಾಖಲು, ನಗರಸಭೆಯಿಂದ ಬೆಳ್ಳಂಬೆಳ್ಳಗ್ಗೆ ತೆರವು ಕಾರ್ಯಾಚರಣೆಗೆ ಚಾಲನೆ!

*ಪೌರಾಯುಕ್ತ ಆರ್ ವಿರೂಪಾಕ್ಷ ಮೂರ್ತಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ!

*ಡೇಲಿ ಮಾರ್ಕೆಟ್,ಗಣೇಶ, ಗಾಂಧಿ ಸರ್ಕಲ್ ಸೇರಿದಂತೆ ಹಲವೆಡೆ ಜೆಸಿಬಿ ಘರ್ಜನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ವ್ಯಾಪ್ತಿಯಲ್ಲಿ ಅಮೃತ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಪಾದಚಾರಿಗಳ ಸಂಚಾರಿ ಪುಟ್ ಪಾತ್ ರಸ್ತೆಗಳನ್ನು ಅಂಗಡಿಗಳ ಮಾಲೀಕರು ಒತ್ತುವರಿ ಮಾಡಿಕೊಂಡು ತಮ್ಮ ವ್ಯಾಪಾರ ವಹಿವಾಟು ಕಳೆದ 20 ವರ್ಷಗಳಿಂದ ಮಾಡುತ್ತಿದ್ದು, ನಗರಸಭೆಯಿಂದ ಹಲವು ಬಾರಿ ಪುಟ್ ಪಾತ್ ತೆರವು ಮಾಡುವಂತೆ ನೋಟಿಜ್ ಜಾರಿ ಮಾಡಿದರೂ ಅಂಗಡಿ ಮಾಲೀಕರು ನಿರ್ಲಕ್ಷ್ಮ ವಹಿಸಿದ್ದರಿಂದ ನಗರಸಭೆಯ ಪೌರಾಯುಕ್ತ ಆರ್. ವಿರೂಪಾಕ್ಷ ಮೂರ್ತಿ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಜಿಸಿಬಿಯೊಂದಿಗೆ ನಗರದ ಡೇಲಿ ಮಾರ್ಕೆಟ್‌, ಗಣೇಶ,ಗಾಂಧಿ ಸರ್ಕಲ್ ಸೇರಿದಂತೆ ಹಲವೆಡೆ ಪುಟ್ ಪಾತ್ ಮೇಲೆ ಅಳವಡಿಸಿದ್ದ ತಗಡು ಸೇರಿ ಕಟ್ಟಡಗಳ ತೆರವು ಕಾರ್ಯಾಚರಣೆ ಬುಧವಾರ ಬೆಳಗಿನ ಜಾವ ಆರಂಭಿಸಲಾಗಿದೆ.

ಈ ಮಧ್ಯೆ ನಗರದ ಕಾನೂನು ಸೇವಾ ಸಮಿತಿಯು ನ್ಯಾಯಾಲಯದಲ್ಲಿ ಪುಟ್ ಪಾತ್ ಒತ್ತುವರಿ ಹಾಗೂ ಪಾದಚಾರಿಗಳ ತೊಂದರೆ ಕುರಿತು ಸ್ವಯಂ ಪ್ರೇರಿತವಾಗಿ ನಗರಸಭೆ,ಪೊಲೀಸ್ ಇಲಾಖೆ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು ಏ.17 ನೇಯ ದಿನಾಂಕದೊಳಗೆ ಒತ್ತುವರಿ ತೆರವುಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಸೂಚನೆ ನೀಡಿದರೂ ನಗರಸಭೆಯವರು ಕಾರ್ಯಾ ಪ್ರವೃತ್ತರಾಗದೇ ಇರುವುದರಿಂದ ಮೇ.02 ರಂದು ಸ್ವಯ ಪ್ರೇರಿತ ಕೇಸ್ ಬಗ್ಗೆ ವಿಚಾರಣೆ ನಡೆಸಲು ಸಮಯ ನಿಗದಿ ಮಾಡಿದೆ.

ಇದರಿಂದ ಎಚ್ಚೆತ್ತ ನಗರಸಭೆ ಮತ್ತು ಪೊಲೀಸ್ ಇಲಾಖೆಯವರು ಬುಧವಾರ ಪುಟ್ ಪಾತ್ ತೆರವು ಕಾರ್ಯಾಚರಣೆ ಆರಂಭಿಸಿದ್ದು ಇಡೀ ನಗರದಲ್ಲಿ ಪುಟ್ ಪಾತ್ ಒತ್ತುವರಿ ತೆರವು ನಡೆಸಲಾಗುತ್ತದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

 

***

ಕಳೆದ 20 ವರ್ಷಗಳ ಹಿಂದೆ ಅಮೃತಯೋಜನೆಯಡಿಯಲ್ಲಿ ನಗರದ ಪುಟ್ ಪಾತ್ ನಿರ್ಮಿಸಲಾಗಿದೆ. ತಮ್ಮ ಅಂಗಡಿ ಮುಂದಿನ ಪುಟ್ ಪಾತ್ ಒತ್ತುವರಿ ಮಾಡಿಕೊಂಡು ತಗಡು ಹಾಕಿದ್ದಾರೆ, ಇನ್ನೂ ಕೆಲವೆಡೆ ಕಟ್ಟಡ ನಿರ್ಮಾಣ ಮಾಡಿದ್ದು ಈಗಾಗಲೇ ಹಲವು ಬಾರಿ ಎಚ್ಚರಿಕೆ ನೋಟೀಸ್ ಕೊಟ್ಡರೂ ಪ್ರಯೋಜನವಾಗಿಲ್ಲ.ಜತೆಗೆ ನ್ಯಾಯಾಲಯದಲ್ಲಿ ಸ್ವಂ ಮೋಟ್ ಕೇಸ್ ದಾಖಲಿಸಿಕೊಂಡಿದ್ದು ಅಧಿಕಾರಿಗಳ ಮೇಲೆ ಕ್ರಮವಾಗಲಿದೆ.ಆದ್ದರಿಂದ ನಿರಂತರವಾಗಿ ಕಾರ್ಯಾಚರಣೆ ಮೂಲಕ ಪುಟ್ ಪಾತ್ ತೆರವು ಮಾಡಿ ನ್ಯಾಯಾಲಯಕ್ಕೆ ವರದಿ ನೀಡಲಾಗುತ್ತದೆ. ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಪುಟ್ ಪಾತ್ ತೆರವು ಮಾಡಿಕೊಳ್ಳಬೇಕು.

-ಆರ್ ವಿರೂಪಾಕ್ಷ ಮೂರ್ತಿ.

ಎಸ್ಸೆಸೆಲ್ಸಿ ಫಲಿತಾಂಶ: ತನ್ನದೇ ಸ್ಥಾನ‌ ಉಳಿಸಿಕೊಂಡ ಲಿಟಲ್ ಹಾರ್ಟ್ ಶಾಲೆ.

 

*ನವ್ಯ ಕುಲಕರ್ಣಿ ಟಾಫರ್ 612 ಅಂಕ ಗಳಿಕೆ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಎಸ್ಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ನಗರದ ಪ್ರತಿಷ್ಠಿತ ಲಿಟಲ್ ಹಾರ್ಟ್ ಶಾಲೆ ತನ್ನ ಆದಂತಹ ಸಾಧನೆ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷೆಗೆ ಕುಳಿತ 143 ಮಕ್ಕಳ ಪೈಕಿ ಡಿಸ್ಟಿಂಕ್ಷನ್ 70,ಪ್ರಥಮ 53,ದ್ವಿತೀಯ 15 ಹಾಗೂ ತೃತೀಯ ಸ್ಥಾನದಲ್ಲಿ 04 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ನವ್ಯ ಕುಲಕರ್ಣಿ 612 ಅಂಕ ಪಡೆದು ಶೇ. 97.09, ಪೂಜಾ 607 ಅಂಕ ಶೇ.97.1, ಸಮನ ಸಿದ್ದಾಂತಿ 605 ಅಂಕ ಶೇ. 96.8 ರಷ್ಟು ಸಾಧನೆ ಮಾಡಿದ್ದಾರೆ. ಸಾಧಕರಿಗೆ ಹಾಗೂ ಮಾರ್ಗದರ್ಶಿ ಶಿಕ್ಷಕ,ಶಿಕ್ಷಕಿಯರ ವರ್ಗದವರು ಹಾಗೂ ಪಾಲಕರಿಗೆ ಸಂಸ್ಥೆಯಿಂದ ಅಭಿನಂದಿಸುವುದಾಗಿ ಮುಖ್ಯಶಿಕ್ಷಕಿ ಪ್ರಿಯಾ ಕುಮಾರಿ ತಿಳಿಸಿದ್ದಾರೆ.