Breaking News
ಮರಕುಂಬಿ ಪ್ರಕರಣದ ಮುಂಚೂಣಿ ನಾಯಕ ನಿತ್ಯಾನಂದ ಸ್ವಾಮಿ ನಿಧನ ನುಡಿ ನಮನ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಮುರುಕುಂಬಿಯ ಅಸ್ಪೃಶ್ಯರ ಮೇಲಿನ ದೌರ್ಜನ ಖಂಡಿಸಿ ನಡೆದ ದಶಕಗಳ ಹೋರಾಟದ ಮುಂಚೂಣಿ ನಾಯಕರಾಗಿದ್ದ ಸಿಪಿಐಎಂ ಪಕ್ಷದ ನಿತ್ಯಾನಂದ ಸ್ವಾಮಿ ಅವರು ಭೂಮಿ ಚಳವಳಿ ಸೇರಿದಂತೆ ಗಂಗಾವತಿಯ ಪ್ರಮುಖ ಚಳುವಳಿಯಲ್ಲಿ ಹೋರಾಟದ ನೆನಪುಗಳು ಜೀವಂತವಾಗಿವೆ ಎಂದು ಸಿಐಟಿಯು ರಾಜ್ಯ ಮುಖಂಡ ಎಂ ನಿರುಪಾದಿ ಬೆಣಕಲ್ ಹೇಳಿದರು ಅವರು ಸಿಪಿಐಎಂ ಕಚೇರಿಯಲ್ಲಿ ನಿತ್ಯಾನಂದ ಸ್ವಾಮಿ ಅವರ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಿತ್ಯಾನಂದ ಸ್ವಾಮಿ ವಯೋ ಸಹಜ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಿಪಿಐಎಂ ಪಕ್ಷವು ಹಮ್ಮಿಕೊಳ್ಳುವ ಎಲ್ಲಾ ಹೋರಾಟಗಳಲ್ಲಿ ಭಾಗವಹಿಸಿ ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ನ್ಯಾಯವನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು ಎಂದರು.

ಸಿಪಿಐಎಂ ಪ್ರಧಾನ ಕಾರ್ಯಾಲಯದಲ್ಲಿ ಮತ್ತು ಎಪಿಎಂಸಿ ಗಂಜ್ ಕಾರ್ಯಲಯದಲ್ಲಿ ಪಕ್ಷದ ಧ್ವಜವನ್ನು ಅರ್ಧಕ್ಕೆ ಇಳಿಸುವುದರ ಮೂಲಕ ಗೌರವ ಸಲ್ಲಿಸಿ ಸಂತಾಪವನ್ನು ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಸಿಪಿಐಎಂ ನಾಯಕರುಗಳಾದ ಎಂ.ನಿರುಪಾದಿ ಬೆಣಕಲ್, ಬಸವರಾಜ್ ಮರಕುಂಬಿ, ಹುಸೇನಪ್ಪ,

ಗಂಜ್ ಹಮಾಲರ ಸಂಘದ ಕಾರ್ಯದರ್ಶಿ ಕೃಷ್ಣನಾಯಕ ಸೇರಿದಂತೆ ಅನೇಕರಿದ್ದರು

 

ಪೌರ ಸೇವಾ ನೌಕರರ ಸಮಸ್ಯೆ ಹಂತ ಹಂತವಾಗಿ ಪರಿಹಾರಕ್ಕೆ ಯತ್ನ:ಶೈಲಾ ಕೆ.ಡಿ. * ಪೌರ ಸೇವಾ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ಪೌರ ಸೇವಾ ನೌಕರರ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ನೂತನ ರಾಜ್ಯಾಧ್ಯಕ್ಷೆ ಶೈಲಾ ಕೆ.ಡಿ. ಹೇಳಿದರು. ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಪೌರ ಸೇವಾ ನೌಕರರ ರಾಜ್ಯಮಟ್ಟದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.,

 

ಪೌರ ಸೇವಾ ನೌಕರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಅರಿವು ನನಗಿದೆ. ಎಲ್ಲ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಹಂತ ಹಂತವಾಗಿ ಅವುಗಳನ್ನು ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು

 

ಸಂಸದ ರಾಜಶೇಖರ್ ಹಿಟ್ನಾಳ್ ಮಾತನಾಡಿ ನಗರ, ಪಟ್ಟಣಗಳನ್ನು ಸ್ವಚ್ಛವಾಗಿಟ್ಟು ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆದು, ಸಾಮಾಜದ ಆರೋಗ್ಯಕ್ಕೆ ಅಡಿಪಾಯವಾಗಿದ್ದ ಪೌರಕಾರ್ಮಿಕರು ‘ನೈರ್ಮಲ್ಯ ಸೈನ್ನಿಕ’ರಾಗಿದ್ದಾರೆ ಎಂದರು.

 

ಪೌರ ಕಾರ್ಮಿಕರು ಸಮಾಜದ ಸ್ವಾಸ್ಯ್ಯ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಅನನ್ಯ ಮತ್ತು ಅವಶ್ಯಕ ಕೊಡುಗೆ ನೀಡುತ್ತಾರೆ. ಪ್ರತಿದಿನ ಬೆಳಿಗ್ಗೆ ಮಳೆ,ಚಳಿ, ಬಿಸಲೆನ್ನದೇ ಸ್ವಚ್ಛತೆ, ತ್ಯಾಜ್ಯನಿರ್ವಣೆ ಮತ್ತು ರಸ್ತೆಗಳ ನಿರ್ವಹಣೆ ಮೂಲಕ ಹರಡುವ ರೋಗಗಳನ್ನು ತಡೆಗಟ್ಟಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುತ್ತಾರೆ. ಕೋವಿಡ್ ಸಮಯದಲ್ಲಿ ಇವರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಸಾರ್ವಜನಿಕರ ಪ್ರಾಣ ಉಳಿಸಿದ್ದಾರೆ. ಇವರ ಸೇವೆ ಸಮಾಜಕ್ಕೆ ಕನ್ನಡಿಯಾಗಿದೆ. ಇವರ ಕುಟುಂಬಗಳ ಕಲ್ಯಾಣಕ್ಕಾಗಿ ಸರ್ಕಾರ ಇವರೆಲ್ಲಾ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತಗತಿಯಲ್ಲಿ ಈಡೇರಿಸಬೇಕಾಗಿದೆ ಎಂದರು.

 

ಕಾರ್ಯಕ್ರಮದಲ್ಲಿ ಗಜಾನನ ನಾಯಕ, ಆರೋಗ್ಯ ನೀರಿಕ್ಷಕ ನಾಗರಾಜ್, ವ್ಯವಸ್ತಾಪಕ ಷಣ್ಮುಖ, ತಾಲೂಕ ಅದ್ಯಕ್ಷ ವಹೀದ್ ಖಾನ್, ರಮೇಶ, ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರಗಡಪ್ಪ ಹುಲಿಹೈದರ್, ಜಂಟಿ ಕಾರ್ಯದರ್ಶಿ ಲಾಲಸಾಬ್ ಎಂ. ಮನಿಯಾರ್, ಮಹಿಬೂಬು ಪಾಷಾ, ರಾಮಣ್ಣ ಕಳ್ಳಿಮನಿ, ಮತ್ತು ಸಂಘದ ಎಲ್ಲಾ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

ಮಾ.03 ರಂದು ಚಂದ್ರ ಗ್ರಹಣ: ಅರ್ಧ ದಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಗುಡಿ ಬಂದ್

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ : ಚಂದ್ರ ಗ್ರಹಣದ ಪ್ರಯುಕ್ತ ಸುಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಕೊಪ್ಪಳ ಜಿಲ್ಲೆಗೆ ಶ್ರೀ ಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಹುಣ್ಣಿಮೆ ದಿನವಾದ ಮಾ.03 ರಂದು ಮಧ್ಯಾಹ್ನ 12 ಗಂಟೆಯೊಳಗೆ ಮಾತ್ರ ಶ್ರೀ ಹುಲಿಗೆಮ್ಮ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಶ್ರೀ ವಿಶ್ವಾವಸು ನಾಮ ಸಂವತ್ಸರ ಪಾಲ್ಗುಣ ಶುಕ್ಲ ಹುಣ್ಣಿಮೆ ಮಾ. 3ರ ಮಂಗಳವಾರ ಪೂರ್ವ ನಕ್ಷತ್ರ ಸಿಂಹರಾಶಿ ಗ್ರದ್ಯೋದಿತ ಚಂದ್ರ ಗ್ರಹಣ ಇರುವುದರಿಂದ ಅಂದು ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಭಕ್ತರಿಗೆ ಶ್ರೀ ಹುಲಿಗೆಮ್ಮ ದೇವಿಯವರ ದರ್ಶನದ ವ್ಯವಸ್ಥೆ ಇರುತ್ತದೆ. ನಂತರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಗ್ರಹಣ ಆಚರಣೆ ಇರುವುದರಿಂದ ದೇವರ ದರ್ಶನ ಇರುವುದಿಲ್ಲ. ಗ್ರಹಣ ಮೋಕ್ಷವಾದ ಅಂದು ಸಂಜೆ 7 ಗಂಟೆಯ ನಂತರ ದೇವಾಲಯದ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳು ನೆರವೇರುತ್ತವೆ ಎಂದು ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಅಪ್ರಾಪ್ತೆಗೆ ಹೆರಿಗೆ, ಪೋಕ್ಸೋ ಕೇಸ್ ದಾಖಲು ಸೋದರ ಮಾವನಿಂದ ಕೃತ್ಯ.

ಅಪ್ರಾಪ್ತೆಗೆ ಹೆದರಿಸಿ ಆತ್ಯಾಚಾರ,ಬೇರೆಯವರಿಗೆ ಹೇಳದಂತೆ ತಾಕೀತು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ಗ್ರಾಮೀಣ ಭಾಗದ ಅಲ್ಪಸಂಖ್ಯಾತರ ಕಾಲೇಜಿನ

ವಸತಿ ನಿಲಯದಲ್ಲಿ ಅಪ್ರಾಪ್ತೆ ಹೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ

ಬಾಧಿತೆಯ ತಾಯಿ ಅಣ್ಣ ಅನ್ವರಬಾಷಾ ಇವರ ಪುತ್ರ ಅಲ್ಪಪಬಾಷಾ (21) ಈತನು ಅಪ್ರಾಪ್ತೆಯನ್ನು ಪುಸಲಾಯಿಸಿ ಕಳೆದ ಅಕ್ಟೋಬರ್ ತಿಂಗಳಿಂದ ಲೈಂಗಿಕ ದೌರ್ಜನ್ಯವೆಸಗಿದ್ದು

ಲೈಂಗೀಕ ದೌರ್ಜನ್ಯವೆಸಗಿರುವ ಕುರಿತು ದೂರಿನಲ್ಲಿ ತಿಳಿಸಲಾಗಿದೆ.

ಫೆಬ್ರುವರಿ 19 ನೇ ತಾರೀಖಿನಂದು ರಾತ್ರಿ ಜಾಸ್ತಿ ರಕ್ತ ಸ್ರಾವವಾಗಿದ್ದು ಹಾಸ್ಟೆಲ್ ವಾರ್ಡನ್ ಅವರಿಗೆ ತಿಳಿಸಿದಾಗ ಬಾಲಕಿಯ ತಂದೆ-ತಾಯಿಯವರಿಗೆ ಫೋನ್ ಮಾಡಿ ಕರೆಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರ ಜತೆ ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೃತ್ಯವೆಸಗಿದ ಅಲ್ಲಪಾಬಾಷಾ ಹೊಸ ಮಲಪನಗುಡಿ ಈತನ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.