Breaking News
ತುಂಗಭದ್ರಾ ಎಡದಂಡೆ ಕಾಲುವೆ ಅವೈಜ್ಞಾನಿಕ ಸಾಮರ್ಥ್ಯಕ್ಕಿಂತ ಹೆಚ್ಚು ನೀರು !

 

 

 

*ಕಾಲುವೆ ಒಡೆಯುವ ಭೀತಿಯಲ್ಲಿ ರಾಂಪೂರ, ಮಲ್ಲಾಪೂರ ಗ್ರಾಮಸ್ಥರು.

*ತುರ್ತಾಗಿ ಕಾಲುವೆಯಲ್ಲಿ ನೀರು ಕಡಿತ ಮಾಡದಿದ್ದರೆ ರಾಂಪೂರ ಮತ್ತೊಂದು ‘ನೇಪಾಳ’ವಾಗುವ ಆತಂಕ!

 

ಕಿಷ್ಕಿಂಧವಾಣಿ ವಿಶೇಷ

 

ಕೆ.ನಿಂಗಜ್ಜ

 

ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಕಾಲುವೆಯ ಸಾಮರ್ಥ್ಯಕ್ಕಿಂತ ಅವೈಜ್ಞಾನಿಕವಾಗಿ ಹೆಚ್ಚಿನ ನೀರನ್ನು ಹರಿಸುತ್ತಿರುವುದರಿಂದ ತಾಲೂಕಿನ ರಾಂಪುರ ಮಲ್ಲಾಪುರ ಹತ್ತಿರ ಕಾಲುವೆಯ ಮೇಲ್ಭಾಗದಲ್ಲಿ ನೀರು ಹರಿದು ಹೆಚ್ಚಿನ ಪ್ರಮಾಣದ ನೀರು ಪೋಗುತ್ತಿದೆ. ಇದರಿಂದ ಕಾಲುವೆಯ ಬಲಭಾಗದ ಮಣ್ಣು ನೀರಿನ ಕೊರತಕ್ಕೆ ಸಿಲುಕಿ ಕಾಲುವೆ ಒಡೆದು ರಾಂಪುರ ಮಲ್ಲಾಪುರಕ್ಕೆ ನುಗ್ಗುವ ಭೀತಿ ಎದುರಾಗಿದ್ದು ಮತ್ತೊಂದು ‘ನೇಪಾಳ’ವಾಗುವ ಭೀತಿಯ ಭಯದಲ್ಲಿ ರಾಂಪೂರ ಮಲ್ಲಾಪೂರ ಗ್ರಾಮಸ್ಥರು ಮತ್ತು ರೈತರು ಜಿಲ್ಲಾಡಳಿತಕ್ಕೆ ಮತ್ತು ನೀರಾವರಿ ಇಲಾಖೆಗೆ ಈಗಾಗಲೇ ಮನವಿ ಪತ್ರ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಕಂಡುಬರುತ್ತದೆ.

ಕಳೆದ ಹಲವು ದಿನಗಳಿಂದ ಕಾಲುವೆಯ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಅಂದರೆ ನಾಲ್ಕುವರೆ ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿರುವ ಕುರಿತು ರೈತರು ಅನುಮಾನ ವ್ಯಕ್ತಪಡಿಸುತ್ತಿದ್ದು ಪಾಪಯ್ಯ

ಟ್ಯಾನಾಲ್ ಒಳಗೆ ಇಷ್ಟು ಪ್ರಮಾಣದ ನೀರು ಹರಿಸಲು ಸಾಧ್ಯವಾಗುತ್ತಿಲ್ಲ.ಇದರಿಂದ ರಾಂಪೂರ ಪವರ್ ಹೌಸ್ ವರೆಗೆ ಕಾಲುವೆ ನೀರು ಎದುರು ನಿಲ್ಲುವುದರಿಂದ ಹೆಚ್ಚಿನ ಪ್ರಮಾಣ ನೀರು ಕಾಲುವೆ ಹೊರಗೆ ಹರಿದು ಕಾಲುವೆಯ ಮಣ್ಣಿನ ಒಡ್ಡು ಸಡಿಲವಾಗಿದ್ದು ಕಾಲುವೆ ದೊಡ್ಡ ಪ್ರಮಾಣದಲ್ಲಿ ಬಿರುಕು ಬೀಳುವ ಆತಂಕವಿದೆ.ಕೂಡಲೇ ಮೇಲ್ಬಾಗದಲ್ಲಿ ಎಸ್ಕೇಪ್ ಗಳ ಮೂಲಕ ನೀರನ್ನು ಹಳ್ಳಗಳಿಗೆ ಹರಿಸಬೇಕಿದೆ.

ಈ ಕುರಿತು ರೈತರು ಜಿಲ್ಲಾಡಳಿತಕ್ಕೆ ನೀರಾವರಿ ಇಲಾಖೆಗೆ ಮನವಿ ಮಾಡಿದರು ನಿರ್ಲಕ್ಷ್ಯ ಮಾಡಲಾಗುತ್ತಿದ್ದು ಆತಂಕದಲ್ಲಿ 2 ಗ್ರಾಮಗಳ ರೈತರು ಮತ್ತು ಗ್ರಾಮಸ್ಥರು ದಿನ ದುಡುತ್ತಿದ್ದಾರೆ

 

ಕಾರಟಗಿ,ಸಿಂಧನೂರು, ರಾಯಚೂರು ಭಾಗದಲ್ಲಿ ಇನ್ನೂ ಸಹ ಕಾಲುವೆ ನೀರು ತಲುಪಿಲ್ಲ .ಈ ಮಧ್ಯೆ ಕಾಲುವೆಯಲ್ಲಿ ನೀರಿನ ನಿರ್ವಾಹಣೆ ಮಾಡಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂಬ ಆರೋಪವಿದೆ.

ಕೂಡಲೇ ಕಾಲುವೆಯ ಸರಿಯಾಗಿ ನಿರ್ವಾಹಣೆ ಮಾಡಿ ಕೊನೆಯ ಭಾಗದ ರೈತರಿಗೆ ನೀರು ತಲುಪಿಸುವ ಕಾರ್ಯವನ್ನು ಹಗಲು ರಾತ್ರಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಮಾಡಬೇಕಿದೆ.

error: Content is protected !!