ಗಂಗಾವತಿ; ಏಳು ಗುಡ್ಡ ಪ್ರದೇಶದಲ್ಲಿರುವ ಹುಲಿ ಇದೀಗ ಆನೆಗೊಂದಿ ಭಾಗದಲ್ಲಿ ಸಂಚಾರ ಮಾಡುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು,ಇದರಿಂದಾಗಿ ಆನೆಗೊಂದಿ, ಕಡೆಬಾಗಿಲು,ಚಿಕ್ಕರಾಂಪೂರ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ.
ಆನೆಗೊಂದಿ ಹೊರವಲಯದ ಬೆಟ್ಟದ ಯಲ್ಲಮ್ಮ ದೇವಸ್ಥಾನದ ಹತ್ತಿರ ಇರುವ ಪ್ರದೇಶದಲ್ಲಿ ಹುಲಿ ಹೆಜ್ಜೆಗಳು ಮೂಡಿವೆ ಎನ್ನುವ ಮಾಹಿತಿ ಸ್ಥಳೀಯರು ನೀಡಿದ್ದು ಆನೆಗೊಂದಿ ಗ್ರಾಮದ ಕಲ್ಯಾಣಕರ್ ರಮೇಶ ಎನ್ನುವ ರೈತನ ಹೊಲದ ಪಕ್ಕದಲ್ಲಿ ದನಗಾಯಿಗಳು ದನಗಳ ಹಟ್ಟಿ ಹಾಕಿದ್ದು
ಹುಲಿ ದನ ಕರುಗಳ ಬೇಟೆಯಾಡಲು ಬಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಹುಲಿ ಏಳುಗುಡ್ಡ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿಂದ ಅಲ್ಲಲ್ಲಿ ಪ್ರತ್ಯಕ್ಷವಾಗುತ್ತಿದ್ದು, ಈಗಾಗಲೇ ತೆಂಬಾ ಮತ್ತು ಉಪ್ಪಾರ ತಿಮ್ಮಪ್ಪ ಬಯಲು ಹಾಗೂ ಜಂಗ್ಲಿ ರಂಗಾಪೂರ ಪ್ರದೇಶದಲ್ಲಿ ಇದುವರೆಗೆ 12 ಕ್ಕೂ ಹೆಚ್ಚು ಆಕಳುಗಳು,ಕೋಣ ಮತ್ತು ಎಮ್ಮೆಗಳನ್ನು ಹುಲಿ ಕೊಂದು ತಿಂದಿದೆ.
ಅರಣ್ಯ ಇಲಾಖೆಯವರು ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಿರಂತರವಾಗಿ ಮಾಡುತ್ತಿದ್ದಾರೆ.
**
ಆನೆಗೊಂದಿ ಮಲಯ್ ದೇವರ ದೇವಾಲಯದ ಹಿಂಭಾಗದಲ್ಲಿ ಹೊಲ ಗದ್ದೆಗಳಲ್ಲಿ ಹೆಜ್ಜೆಗಳು ಮೂಡಿದ್ದು,ಈ ಹೆಜ್ಜೆಗಳು ಚಿರತೆ ಅಥವಾ ಕರಡಿ ಹೆಜ್ಜೆಗಳಿಗಿಂತ ದೊಡ್ಡ ಗಾತ್ರದಲ್ಲಿ ಇವೆ.ಆದ್ದರಿಂದ ಹುಲಿ ಹೆಜ್ಜೆ ಇರಬಹುದು ಎನ್ನುವ ಶಂಕೆ ವ್ಯಕ್ತವಾಗುತ್ತಿದ್ದು, ಹೆಜ್ಜೆಗಳ ಪೋಟೋಗಳನ್ನು ಅರಣ್ಯ ಇಲಾಖೆಯವರಿಗೆ ಕಳಿಸಲಾಗಿದೆ. ಜನರು ಭಯಭೀತರಾಗಿದ್ದು,ಅರಣ್ಯ ಇಲಾಖೆಯವರು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ತೀವ್ರಗೊಳಿಸಬೇಕಿದೆ.