Breaking News
ರಾಜ್ಯಮಟ್ಟದ ಉತ್ತಮ‌ ಶಿಕ್ಷಕ-ಶಿಕ್ಷಕಿ ಪ್ರಶಸ್ತಿ ಪ್ರಕಟ.

 

*ಗಂಗಾವತಿಯ ಶಿಕ್ಷಕ ಮೈಲಾರಪ್ಪ ಬೂದಿಹಾಳ ಗೂ ಪ್ರಶಸ್ತಿ.

 

ಕಿಷ್ಕಿಂಧವಾಣಿ ಸುದ್ದಿ

 

ಬೆಂಗಳೂರು: 2026-27ನೇ ಸಾಲಿನ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ’ ಪಟ್ಟಿಯನ್ನು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ. ಈ ಸಾಲಿನಲ್ಲಿ ಪ್ರಾಥಮಿಕ ಶಾಲಾ ವಿಭಾಗದಿಂದ 20 ಹಾಗೂ ಪ್ರೌಢಶಾಲಾ ವಿಭಾಗದಿಂದ (ಓರ್ವ ವಿಶೇಷ ಶಿಕ್ಷಕರೂ ಸೇರಿದಂತೆ) 11 ಶಿಕ್ಷಕರು ಸೇರಿ ಒಟ್ಟು 31 ಶಿಕ್ಷಕರು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 

ಸೆಪ್ಟೆಂಬರ್ 5ರಂದು ನಡೆಯಲಿರುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಶೇಷವೆಂದರೆ, ಆಯ್ಕೆಯಾಗಿರುವ ಮಹಿಳಾ ಶಿಕ್ಷಕಿಯರಿಗೆ ಅಕ್ಷರ ಮಾತೆ ‘ಸಾವಿತ್ರಿಬಾಯಿ ಫುಲೆ’ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ಆದೇಶಿಸಿದೆ.

 

ಪ್ರಶಸ್ತಿಗೆ ಭಾಜನರಾದ ಪ್ರತಿಯೊಬ್ಬ ಶಿಕ್ಷಕರಿಗೂ ತಲಾ 25,000 ರೂ. ನಗದು ಪುರಸ್ಕಾರ ನೀಡಲಾಗುತ್ತಿದ್ದು, ಒಟ್ಟು 7.75 ಲಕ್ಷ ರೂ. ನಗದು ಬಹುಮಾನವನ್ನು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ಭರಿಸಲಾಗುವುದು ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

ಪ್ರಶಸ್ತಿ ಪುರಸ್ಕೃತರ ವಿವರ:

 

ಪ್ರಾಥಮಿಕ ಶಾಲಾ ವಿಭಾಗ (20 ಶಿಕ್ಷಕರು):

 

ಸಿ. ಉಮಾ – ಸ.ಕಿ.ಪ್ರಾ. ಶಾಲೆ ಕೆಂಪತಿಮ್ಮನಹಳ್ಳಿ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ

 

ಬಸಪ್ಪ ಪರಪ್ಪ ಪಾಟೀಲ – ಕೆ.ಹೆಚ್.ಪಿ.ಎಸ್. ಹಲ್ಲೂರು ಕ್ರಾಸ್, ಮೂಡಲಗಿ, ಚಿಕ್ಕೋಡಿ ಜಿಲ್ಲೆ

 

ಅಶೋಕ – ಸ.ಹಿ.ಪ್ರಾ. ಶಾಲೆ ಹೆಸಕುತ್ತೂರು, ಕುಂದಾಪುರ, ಉಡುಪಿ ಜಿಲ್ಲೆ

 

ಸುರೇಶ ಕೆ. – ಸ.ಕಿ.ಪ್ರಾ. ಶಾಲೆ ಗುಂಡೇರದೊಡ್ಡಿ, ದೇವದುರ್ಗ, ರಾಯಚೂರು ಜಿಲ್ಲೆ

 

ಹಣಮಂತ ಕಲ್ಲಪ್ಪ ಕಾತರಕಿ – ಸ.ಹಿ.ಪ್ರಾ. ಶಾಲೆ ಕೆಂಗಲಗುತ್ತಿ, ವಿಜಯಪುರ ಗ್ರಾಮಾಂತರ

 

ಉಷಾ ವಿ. ನಾಯಕ – ಸ.ಹಿ.ಪ್ರಾ. ಶಾಲೆ ನಂ.1, ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ.

 

ಮಸ್ತಾನ್ ವಲಿ – ಸ.ಕಿ.ಪ್ರಾ. ಶಾಲೆ ಗುಟ್ಟಹಳ್ಳಿ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ

 

ಪ್ರಭಾವತಿ ಬಾಳಪ್ಪಾ ಹಾಲೆನ್ನವರ (ಮುಖ್ಯ ಶಿಕ್ಷಕರು) – ಮರಾಠಿ ಹಿ.ಪ್ರಾ. ಶಾಲೆ ಜಾಫರವಾಡಿ, ಕಡೋಲಿ, ಬೆಳಗಾವಿ ಜಿಲ್ಲೆ.

 

ಸರೋಜಮ್ಮ – ಸ.ಹಿ.ಪ್ರಾ. ಶಾಲೆ ಸತ್ತೇಗಾಲ ಅಗ್ರಹಾರ, ಕೊಳ್ಳೇಗಾಲ, ಚಾಮರಾಜನಗರ ಜಿಲ್ಲೆ.

 

ನಿಂಗಪ್ಪಾ (ಮುಖ್ಯ ಶಿಕ್ಷಕರು) – ಸ.ಹಿ.ಪ್ರಾ. ಶಾಲೆ ಗುಂಜಬಬಲಾದ, ಆಳಂದ, ಕಲಬುರಗಿ ಜಿಲ್ಲೆ.

 

ರತ್ನಮ್ಮ ಎನ್.ಎಂ. – ಸ.ಹಿ.ಪ್ರಾ. ಶಾಲೆ ಕೆಂಬತ್ತಹಳ್ಳಿ, ಬೆಂಗಳೂರು ದಕ್ಷಿಣ-3

 

ನೇಮಣ್ಣ ಬಮ್ಮಣ್ಣ ಜಮಖಂಡಿ – ಶ್ರೀ ಜಿನಸೇನಾಚಾರ್ಯ ಹಿ.ಪ್ರಾ. ಶಾಲೆ ತೇರದಾಳ, ಜಮಖಂಡಿ, ಬಾಗಲಕೋಟೆ ಜಿಲ್ಲೆ.

 

ರಾಮಚಂದ್ರ ಈ. ನಾಯ್ಕ – ಸ.ಹಿ.ಪ್ರಾ. ಶಾಲೆ ಗಣಪತಿಗಲ್ಲಿ, ಯಲ್ಲಾಪುರ, ಶಿರಸಿ ಜಿಲ್ಲೆ

 

ಮಾಲಿನಿ ಎಂ. – ಸ.ಕಿ.ಪ್ರಾ. ಶಾಲೆ ಮುದಿಗೌಡನಹಟ್ಟಿ, ಕೊರಟಗೆರೆ, ಮಧುಗಿರಿ ಜಿಲ್ಲೆ

 

ಕುಮಾರನಾಯ್ಕ ಬಿ.ಡಿ. – ಸ.ಕಿ.ಪ್ರಾ. ಶಾಲೆ ಚಿಕ್ಕಮಾಗಡಿ ತಾಂಡಾ, ಶಿಕಾರಿಪುರ, ಶಿವಮೊಗ್ಗ ಜಿಲ್ಲೆ

 

ಕೃಷ್ಣಮೂರ್ತಿ ಕೆ.ಎಸ್. – ಸ.ಮಾ.ಪ್ರಾ. ಶಾಲೆ ಗೃಹಲಕ್ಷ್ಮೀ ಬಡಾವಣೆ, ಬೆಂಗಳೂರು ಉತ್ತರ-1

 

ಮಲ್ಲಿಕಾರ್ಜುನ ಬಡಿಗೇರ – ಸ.ಕಿ.ಪ್ರಾ. ಶಾಲೆ ಸದಾಶಿವಪುರ, ಹೊನ್ನಾಳಿ, ದಾವಣಗೆರೆ ಜಿಲ್ಲೆ

 

ಪ್ರೇಮಕುಮಾರ್ ವಿ.ಎಸ್. – ಸ.ಹಿ.ಪ್ರಾ. ಶಾಲೆ ಹೆಗ್ಡೆರೆ, ತುರುವೇಕೆರೆ, ತುಮಕೂರು ಜಿಲ್ಲೆ

 

ದುರಗಪ್ಪ ಹೆಚ್. – ಸ.ಹಿ.ಪ್ರಾ. ಮತ್ತು ಪ್ರೌಢಶಾಲೆ ಕೊಂಚಿಗೇರಿ, ಸಿರಗುಪ್ಪ, ಬಳ್ಳಾರಿ ಜಿಲ್ಲೆ

 

ಮೈಲಾರಪ್ಪ ಬೂದಿಹಾಳ ಸ.ಹಿ.ಪ್ರಾ.ಶಾಲೆ ಹಣವಾಳ ಗಂಗಾವತಿ ಕೊಪ್ಪಳ ಜಿಲ್ಲೆ

 

ಪ್ರೌಢಶಾಲಾ ವಿಭಾಗ (11 ಶಿಕ್ಷಕರು):

 

ಬಿರಾದಾರ ಸಿದ್ದಪ್ಪ ವೀರಭದ್ರಪ್ಪ (ಸಹ ಶಿಕ್ಷಕರು) – ಸ.ಪ್ರೌಢಶಾಲೆ ಚಿಬ್ಬಲಗೇರಿ, ಹಳಿಯಾಳ, ಶಿರಸಿ ಜಿಲ್ಲೆ

 

ಶೈನಾಕುಮಾರಿ ಎಂ. (ಸಹ ಶಿಕ್ಷಕರು) – ಕೆಪಿಎಸ್ (ಪ್ರೌಢಶಾಲೆ ವಿಭಾಗ), ಜೀವನ್‌ ಭೀಮಾನಗರ, ಬೆಂಗಳೂರು

 

ಕುಬೇರನಾಯ್ಕ ಬಿ. (ಸಹ ಶಿಕ್ಷಕರು) – ಸ.ಪ್ರೌಢಶಾಲೆ ತಮ್ಮಡಿಹಳ್ಳಿ, ಶಿವಮೊಗ್ಗ ಜಿಲ್ಲೆ

 

ನೀಲಕಂಠ ಗಾವಂಕರ್ (ಮುಖ್ಯ ಶಿಕ್ಷಕರು) – ಸ.ಪ.ಪೂ. ಕಾಲೇಜು (ಪ್ರೌಢಶಾಲೆ ವಿಭಾಗ), ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ

 

ವಿ. ವೆಂಕಟೇಶ (ಮುಖ್ಯ ಶಿಕ್ಷಕರು) – ಸ.ಪ್ರೌಢಶಾಲೆ ಗೂಳೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆ

 

ಮಮತಾ ನಾಯ್ಕ (ಮುಖ್ಯ ಶಿಕ್ಷಕರು) – ಸ.ಹಿ.ಪ್ರಾ. ಶಾಲೆ ಅಗನಾಶಿನಿ (ಆರ್.ಎಂ.ಎಸ್.ಎ), ಕುಮಟಾ, ಉತ್ತರ ಕನ್ನಡ.

 

ರೋಶನ್ ಅಲೆಕ್ಸಾಂಡರ್ (ಸಹ ಶಿಕ್ಷಕರು) – ಕಾರ್ಮೆಲ್ ಹೈಸ್ಕೂಲ್, ಮೋದನಕಾಪು, ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆ

 

ಜಯಶೀಲ (ದೈಹಿಕ ಶಿಕ್ಷಕರು) – ಸರ್ಕಾರಿ ಆದರ್ಶ ವಿದ್ಯಾಲಯ, ಮೈಸೂರು ದಕ್ಷಿಣ, ಮೈಸೂರು ಜಿಲ್ಲೆ

 

ಮಥಾಯಿ ಟಿ. (ಸಹ ಶಿಕ್ಷಕರು) – ಸ.ಪ್ರೌಢಶಾಲೆ ಮುತ್ತಿನಕೊಪ್ಪ, ಎನ್.ಆರ್. ಪುರ, ಚಿಕ್ಕಮಗಳೂರು ಜಿಲ್ಲೆ

 

ಜಯಪ್ಪ ಕೆ.ಟಿ. (ಸಹ ಶಿಕ್ಷಕರು) – ಸ.ಹಿ.ಪ್ರಾ. ಶಾಲೆ ನಿಟ್ಟುವಳ್ಳಿ (ಆರ್.ಎಂ.ಎಸ್.ಎ), ದಾವಣಗೆರೆ ಜಿಲ್ಲೆ

 

ಆನಂದ ಮಾದೇವ ಝಂಡೆ (ವಿಶೇಷ ಶಿಕ್ಷಕರು) – ಸ.ಪ್ರೌಢಶಾಲೆ ಟಕ್ಕಲಕಿ, ವಿಜಯಪುರ ಜಿಲ್ಲೆ

ದ್ವಿಚಕ್ರ ವಾಹನ, ಹಣ, ಮೊಬೈಲ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ರೂ. 12.91 ಲಕ್ಷ ಮೌಲ್ಯದ ಸ್ವತ್ತು ವಶ, ಆರೋಪಿಗಳ ಬಂಧನ:ಎಸ್ಪಿ ಸಾಹಿಲ್ ಬಾಗ್ಲಾ.

 

*ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕಳ್ಳತನ ಪ್ರಕರಣದ ಮಾಹಿತಿ.

 

ಕಿಷ್ಕಿಂಧವಾಣಿ ಸುದ್ದಿ

 

 

ಕೊಪ್ಪಳ: ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ದ್ವಿಚಕ್ರ ವಾಹನ, ಹಣ ಮತ್ತು ಮೊಬೈಲ್ ಕಳ್ಳತನ ಪ್ರಕರಣಗಳನ್ನು ಕೊಪ್ಪಳ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಈ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿ, ರೂ. 12.91 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ತಿಳಿಸಿದರು.

ಅವರು ಎಸ್ಪಿ ಕಚೇರಿಯಲ್ಲಿ

ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

*16 ದ್ವಿಚಕ್ರ ವಾಹನಗಳ ವಶ:*

ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣದ ದ್ವಿ-ಚಕ್ರ ವಾಹನದ ಪಾರ್ಕಿಂಗ್ ಸ್ಥಳದಲ್ಲಿ ದಿನಾಂಕ: 21.08.2026 ರಂದು ಬೆಳಗ್ಗೆ 9-15 ಗಂಟೆಯಿಂದ ಸಂಜೆ 5 ಗಂಟೆಯ ನಡುವಿನ ಅವಧಿಯಲ್ಲಿ ಫಿರ್ಯಾದಿದಾರರು ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಅಂ.ಕಿ. ರೂ 90,000 ಬೆಲೆಬಾಳವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಗವಿಸಿದ್ದಪ್ಪ ಕೇರಿ ಸಾ: ಹಿರೆಕಾಸಕಂಡಿ ರವರು ನೀಡಿದ ದೂರಿನ ಮೇಲಿಂದ ದಿನಾಂಕ: 25.08.2026 ರಂದು ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 113/2026 ಕಲಂ.303(2) ಭಾರತೀಯ ನ್ಯಾಯ ಸಂಹಿತೆ-2023 ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರಕರಣದ ಪತ್ತೆ ಕುರಿತು ರಚಿಸಿದ ವಿಶೇಷ ತಂಡವು ತಕ್ಷಣ ಕಾರ್ಯ ಪ್ರವೃತ್ತರಾಗಿ ವಿವಿಧ ಆಯಾಮಗಳಿಂದ ಮಾಹಿತಿಯನ್ನು ಮತ್ತು ಸಾಕ್ಷಾಧಾರಗಳನ್ನು ಸಂಗ್ರಹಿಸಿ ಸಂಶಯಾಸ್ಪದ ವ್ಯಕ್ತಿ ಮೊಹಮ್ಮದ್ ಇರ್ಫಾನ್ ತಂದೆ ಖಾಜಾಹುಸೇನ್, ವಯ: 20ವರ್ಷ, ಉ: ಬೈಕ್ ಮೆಕ್ಯಾನಿಕ್, ಸಾ: ಕೌಲ್ ಬಜಾರ್, ಬಳ್ಳಾರಿ ಹಾ:ವಾ: ಹೊಸಪೇಟೆ, ವಿಜಯನಗರ ಜಿಲ್ಲೆ. ಎಂಬುವವನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮೋಟಾರ್ ಸೈಕಲ್‌ಗಳನ್ನು ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದು, ಆಪಾದಿತ ವ್ಯಕ್ತಿಯನ್ನು ದಸ್ತಗಿರಿ ಮಾಡಿ, ಅವನಿಂದ ಅಂದಾಜು ಕಿಮ್ಮತ್ತು 11,90,000 ರೂ. ಬೆಲೆಬಾಳುವ ವಿವಿಧ ಕಂಪನಿಯ 16 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಕೊಪ್ಪಳ ಉಪ-ವಿಭಾಗ, ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯ ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಕೊಪ್ಪಳ ಜಿಲ್ಲಾ ಬೋಧಕ ಆಸ್ಪತ್ರೆಯಲ್ಲಿ ದಿನಾಂಕ: 14-07-2026 ರಂದು ರಾತ್ರಿ 11 ಗಂಟೆಯಿಂದ ದಿನಾಂಕ: 29-07-2026 ರಂದು ಬೆಳಗ್ಗೆ 10-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮಗಳ ಚಿಕಿತ್ಸೆಗೆಂದು ಬಂದಿದ್ದ ಫಿರ್ಯಾದಿದಾರರ ಮೊಬೈಲ್ ಕಳ್ಳತನ ಮಾಡಿ, ಆ ಮೊಬೈಲ್‌ನ ಬ್ಯಾಕ್ ಕವರ್‌ನಲ್ಲಿದ್ದ ಎ.ಟಿ.ಎಮ್ ಕಾರ್ಡ್ನಿಂದ ರೂ. 99,500 ಗಳನ್ನು ಬಿಡಿಸಿಕೊಂಡ ಬಗ್ಗೆ ದಿನಾಂಕ: 09-08-2026 ರಂದು ಸೀಮಣ್ಣ ಗಬ್ಬೂರು ರವರು ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:105/2026 ಕಲಂ:303(2) ಬಿ.ಎನ್.ಎಸ್-2023 ರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರಕರಣದ ಪತ್ತೆ ಕುರಿತು ರಚಿಸಿದ ವಿಶೇಷ ತಂಡವು ತಕ್ಷಣ ಕಾರ್ಯ ಪ್ರವೃತ್ತರಾಗಿ ವಿವಿಧ ಆಯಾಮಗಳಿಂದ ಮಾಹಿತಿಯನ್ನು ಮತ್ತು ಸಾಕ್ಷಾಧಾರಗಳನ್ನು ಸಂಗ್ರಹಿಸಿ ಸಂಶಯಾಸ್ಪದ ವ್ಯಕ್ತಿ ಮಂಜುನಾಥ ತಂದೆ ಚಿನ್ನಪ್ಪ ಚಕ್ರಸಾಲಿ ವಯ: 32ವರ್ಷ, ಉ: ಹೋಟೆಲ್ ಕೆಲಸ, ಸಾ: ಬೂದಗುಂಪಾ ಎಂಬುವವನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮೋಟಾರ್ ಸೈಕಲ್‌ಗಳನ್ನು ಕಳ್ಳತನ ಮಾಡಿಕೊಂಡಿರುವದಾಗಿ ಒಪ್ಪಿಕೊಂಡಿದ್ದು, ಆಪಾದಿತ ವ್ಯಕ್ತಿಯನ್ನು ದಸ್ತಗಿರಿ ಪತ್ತೆ ಮಾಡಿ, ಈ ಆರೋಪಿತನಿಂದ ರೂ. 99,500 ಮತ್ತು ಒಂದು ಓಪ್ಪೋ ಮೊಬೈಲ್ ಫೋನ್‌ನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಎಲ್ಲಾ ಪ್ರಕರಣಗಳ ಪತ್ತೆ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಎಸ್.ಪಿ ಮತ್ತು ಡಿ.ವೈಎಸ್.ಪಿ ಕೊಪ್ಪಳ ರವರ ಮಾರ್ಗದರ್ಶನದಲ್ಲಿ ಕೊಪ್ಪಳ ನಗರ ಠಾಣೆಯ ಪಿ.ಐ. ಮತ್ತು ಪಿ.ಎಸ್.ಐ (ಕಾಹಿಸು) ಹೀರಪ್ಪ, ಎ.ಎಸ್.ಐ ಶಂಕ್ರಯ್ಯ ಸಾರಂಗಮಠ, ಸಿಬ್ಬಂದಿಯವರಾದ ಹೆಚ್‌ಸಿ ಖಾಜಾಸಾಬ, ಗಂಗಾಧರ, ಗಣೇಶ ಮತ್ತು ಸಿಪಿಸಿ ರವರಾದ ಮಂಜುನಾಥ, ಮಂಗಳೇಶ, ಗೂಡಸಾಬ, ಮಲ್ಲಿಕಾರ್ಜುನ, ತನಿಖಾ ಸಹಾಯಕರಾದ ಕುಮಾರಸ್ವಾಮಿ, ಲಕ್ಷ್ಮಿದೇವಿ ಕೆ. ಮಪಿಸಿ, ಬಸಯ್ಯ, ಶಂಕ್ರಪ್ಪ ಎಪಿಸಿ ಮತ್ತು ಡಿಪಿಓ ತಾಂತ್ರಿಕ ವಿಭಾಗದ ಪ್ರಸಾದ್ ಎಪಿಸಿ, ಮಂಜುನಾಥ ಎಪಿಸಿ ಇವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು ಎಂದರು.

ಈ ಎರಡು ಸ್ವತ್ತಿನ ಪ್ರಕರಣದಲ್ಲಿ ಆಪಾದಿತರನ್ನು ಪತ್ತೆ ಮಾಡಿ, ರೂ. 11,90,000 ಮೌಲ್ಯದ 16 ಮೋಟಾರ್ ಸೈಕಲ್, ರೂ. 2000 ಮೌಲ್ಯದ ಮೊಬೈಲ್ ಮತ್ತು 99,500 ರೂ. ನಗದು ಹಣ ಒಟ್ಟು 12,91,500 ಮೌಲ್ಯದ ಕಳ್ಳತನವಾದ ಸ್ವತ್ತು ನಗದು ಹಣ ವಶಪಡಿಸಿಕೊಂಡು, ಪ್ರಕರಣವನ್ನು ಪತ್ತೆ ಮಾಡಿ, ಉತ್ತಮ ಪತ್ತೆ ಕಾರ್ಯ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಾಹಿಲ್ ಬಾಗ್ಲಾ ಅವರು ಇದೇ ವೇಳೆ ಪ್ರಶಂಸೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ, ಕೊಪ್ಪಳ ಡಿ.ವೈಎಸ್.ಪಿ ಮುತ್ತಣ್ಣ ಸರವಗೋಳ, ಕೊಪ್ಪಳ ನಗರ ಪೊಲೀಸ್ ಠಾಣೆಯ ಪಿ.ಐ ಸುರೇಶ ಡಿ. ಇದ್ದರು.

error: Content is protected !!