

*ಅಪ್ಪಟ ಖರ್ಗೆ ಭಂಟನಿಗೊಲಿದ ಡಿಸಿಸಿ ಅಧ್ಯಕ್ಷ ಸ್ಥಾನ.
*ಗಂಗಾವತಿಯಲ್ಲಿ 25 ವರ್ಷಗಳಿಂದ ಕಾಂಗ್ರೆಸ್ ಗೆ ಇಲ್ಲ ಅಧಿಕಾರ.
*ಅನ್ಸಾರಿ, ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ ಬಣ
ಹಾಗೂ ತಟಸ್ಥ ಕಾಂಗ್ರೆಸ್ ಬಣಗಳ ಮೇಲಾಟ.
*25 ವರ್ಷಗಳಿಂದ ಗಂಗಾವತಿಯ ನಿಷ್ಠಾವಂತ ಕಾರ್ಯಕರ್ತರಿಗಿಲ್ಲ ಅಧಿಕಾರ.
ಕಿಷ್ಕಿಂಧವಾಣಿ ವಿಶೇಷ
ಕೆ.ನಿಂಗಜ್ಜ
ಗಂಗಾವತಿ: ಮನೆಯೊಂದು ಹಲವು ಬಾಗಿಲು ಎನ್ನುವಂತಿರುವ ಗಂಗಾವತಿ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ಗೆ ಕೊನೆಗೂ ಮಾಜಿ ಸಚಿವ ಅಪ್ಪಟ ಕಾಂಗ್ರೆಸ್ಸಿಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಬಲಗೈ ಬಂಟ ಎಂ ಮಲ್ಲಿಕಾರ್ಜುನ ನಾಗಪ್ಪ ಅಧ್ಯಕ್ಷರಾಗಿ ನೇಮಕಗೊಂಡಿದ್ದು ಗಂಗಾವತಿಯಲ್ಲಿ ಕಳೆದ 25 ವರ್ಷಗಳಿಂದ ನೆಲೆ ಕಳೆದುಕೊಂಡಿದ್ದ ಕಾಂಗ್ರೆಸ್ ಮತ್ತು ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ಮೂಡಿದೆ.
ಮಲ್ಲಿಕಾರ್ಜುನ ನಾಗಪ್ಪ ಅವರು ಗಂಗಾವತಿ ನಿವಾಸಿಯಾಗಿದ್ದರು ಎರಡು ಬಾರಿ ಕನಕಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಎಸ್ಎಂ ಕೃಷ್ಣ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿಯವರ ಮಹತ್ವದ ಯೋಜನೆಯಂತೆ ದೇಶದ 3000ಕ್ಕೂ ಹೆಚ್ಚು ಜಿಲ್ಲಾ ಕಾಂಗ್ರೆಸ್ ಸಾರಥಿಗಳನ್ನು ಬದಲಿಸುವ ನಿಟ್ಟಿನಲ್ಲಿ ಇದೀಗ ಕೊಪ್ಪಳ ಜಿಲ್ಲೆಗೂ ಹೊಸ ಸಾರಥಿ ದೊರಕಿದ್ದಾರೆ.
ಮಲ್ಲಿಕಾರ್ಜುನ ನಾಗಪ್ಪ 2013-18ರ ವರೆಗಿನ ಸಿದ್ದರಾಮಯ್ಯನ ಸರ್ಕಾರದಲ್ಲಿ ಕರ್ನಾಟಕ ಕೈಮಗ್ಗ ನಿಗಮದ ಅಧ್ಯಕ್ಷರಾಗಿ ಕಾರ್ಯ ಮಾಡಿದ್ದು , ವಿಧಾನಸಭೆ, ಲೋಕಸಭೆ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲಿ ಬೇರೆ, ಬೇರೆ ಜಿಲ್ಲೆಗಳ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಗಂಗಾವತಿಯಲ್ಲಿ ಎರಡು ಬಾರಿ ಜೆಡಿಎಸ್ ನಿಂದ ಗೆದ್ದು ಶಾಸಕರಾಗಿದ್ದ ಇಕ್ಬಾಲ್ ಅನ್ಸಾರಿಯವರು ನಂತರ ಕಾಂಗ್ರೆಸ್ ಪ್ರವೇಶದ ನಂತರ ಎರಡೂ ಸಲವು ಸೋಲನ್ನು ಕಂಡಿದ್ದಾರೆ.
ನಂತರ ವಿವಿಧ ರಾಜಕೀಯ ಕಾರಣಕ್ಕಾಗಿ ಗಂಗಾವತಿಯಲ್ಲಿ ಅನ್ಸಾರಿ ಬಣ,ಹೆಚ್.ಆರ್ ಶ್ರೀನಾಥ ಬಣ,ಎಂ. ಮಲ್ಲಿಕಾರ್ಜುನ್ ನಾಗಪ್ಪನವರ ಬಣ ಎಂದು ಕಾಂಗ್ರೆಸ್ ಕಾರ್ಯಕರ್ತರು ವಿಂಗಡಣೆಯಾಗಿ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದು ಗಂಗಾವತಿಯಲ್ಲಿ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಗೆಲುವು ಕಂಡಿಲ್ಲ. ಸಂಘ ಪರಿವಾರ ಮತ್ತು ಬಿಜೆಪಿ ಅಯ್ಯಪ್ಪಸ್ವಾಮಿ ದೇಗುಲ ದ್ವಂಸ,ಗಣೇಶನ ವಿಸರ್ಜನೆ ಗಲಾಟೆ ಪ್ರಕರಣ, ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ಹಾಗೂ ಹಿಂದುತ್ವವನ್ನು ಮುನ್ನೆಲೆಗೆ ತರುವ ಮೂಲಕ ಗಂಗಾವತಿ ಕ್ಷೇತ್ರದ ಮತಗಳನ್ನು ವಿಭಜಿಸಿ ಎರಡು ಬಾರಿ ಬಿಜೆಪಿ ಮತ್ತು ಕಳೆದ 2023ರಲ್ಲಿ ಗಾಲಿ ಜನಾರ್ದನ ರೆಡ್ಡಿ ಪ್ರತ್ಯೇಕವಾಗಿ ಕೆ ಆರ್ ಪಿ ಪಿ ಪಕ್ಷ ಸ್ಥಾಪಿಸುವ ಮೂಲಕ ಶಾಸಕರಾಗಿ ಗೆಲುವು ಪಡೆದಿದ್ದಾರೆ.
ಇಕ್ಬಾಲ್ ಅನ್ಸಾರಿ ಸೋಲಿ ನಂತರ ಈ ಸೋಲಿಗೆ ನೇರವಾಗಿ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಶಿವರಾಜ್ ತಂಗಡಗಿ, ಬಸವರಾಜ್ ರಾಯರೆಡ್ಡಿ ಮತ್ತು ಹಿಟ್ನಾಳ್ ಕುಟುಂಬದವರು ಕಾರಣ ಎಂದು ಆರೋಪ ಮಾಡುವ ಮೂಲಕ ಪಕ್ಷದಲ್ಲಿ ಪ್ರತೇಕ ಬಣವನ್ನಿ ಅನ್ಸಾರಿ ಹೊಂದಿದ್ದು,
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಾರಥ್ಯವನ್ನು ಎಂ. ಮಲ್ಲಿಕಾರ್ಜುನ ನಾಗಪ್ಪನವರಿಗೆ ಪಕ್ಷದ ಹೈಕಮಾಂಡ್ ವಹಿಸಿದೆ.
2008ರವರೆಗೂ ಕೊಪ್ಪಳ ಬಳ್ಳಾರಿ, ರಾಯಚೂರು, ಜಿಲ್ಲೆಗಳು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದವು ನಂತರದ ಸಂದರ್ಭದಲ್ಲಿ ಬಿಜೆಪಿ ಕಾಂಗ್ರೆಸ ನ ಭದ್ರಕೋಟೆಯನ್ನು ಛಿದ್ರ ಮಾಡಿದ್ದು 2013 ರಿಂದ 18 ಮತ್ತು ಪ್ರಸ್ತುತ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಮುಂಬರುವ ವಿಧಾನಸಭಾ,ಲೋಕಸಭಾ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಳ್ಳಲು ಎಂ. ಮಲ್ಲಿಕಾರ್ಜುನ ನಾಗಪ್ಪ ಬಣಗಳನ್ನು ಒಂದುಗೂಡಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡುವ ಅನಿವಾರ್ಯತೆ ಇದೆ.
ಸ್ವಪಕ್ಷದ ಸಚಿವರು, ಶಾಸಕರ ವಿರುದ್ಧವೇ ಬಹಿರಂಗ ಸಮರ ಸಾರಿರುವ ಇಕ್ಬಾಲ್ ಅನ್ಸಾರಿ ಹಾಗೂ ಅವರ ಆಪ್ತರ ಅವರನ್ನು ಮನವೊಲಿಸಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಕ್ಷವನ್ನು ಜಿಲ್ಲೆಯಲ್ಲಿ ಬಲಿಷ್ಠ ಮಾಡುವ ದೊಡ್ಡ ಟಾಸ್ಕ್ ಮಲ್ಲಿಕಾರ್ಜುನ್ ನಾಗಪ್ಪ ಅವರ ಮೇಲಿದೆ ,
ಈ ಎಲ್ಲಾ ಕಾರ್ಯಗಳನ್ನು ಹೇಗೆ ಮಾಡುತ್ತಾರೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.
**
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕಳೆದ ಐದು ದಶಕಗಳಿಂದ ಕೆಲಸ ಮಾಡುತ್ತಿದ್ದು,ಪಕ್ಷ ನಿಷ್ಠೆಗೆ ಜಿಲ್ಲಾ ಅಧ್ಯಕ್ಷ ಸ್ಥಾನ ನನಗೆ ಹೈಕಮಾಂಡ್ ವಹಿಸಿದೆ, ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಸಂಘಟಿಸಿ ಭದ್ರಕೋಟೆಯನ್ನಾಗಿ ಮಾಡುವ ಕಾರ್ಯ ಎಲ್ಲಾ ಮುಖಂಡರವನ್ನು ವಿಶ್ವಾಸವನ್ನು ತೆಗೆದುಕೊಂಡು ಮಾಡಲಾಗುತ್ತದೆ.
ಪಕ್ಷದಲ್ಲಿ ಬಣಗಳಿಲ್ಲ, ಅಭಿಪ್ರಾಯ ಬೇಧಗಳಿವೆ ಅವುಗಳನ್ನು ಸರಿ ಮಾಡುವ ಕಾರ್ಯವನ್ನು ಪಕ್ಷದ ಹಿರಿಯ ಮುಖಂಡರ ಸಲಹೆ ಸೂಚನೆ ಪಡೆದು ಮಾಡುತ್ತೇನೆ.
*ಎಂ.ಮಲ್ಲಿಕಾರ್ಜುನ ನಾಗಪ್ಪ ಜಿಲ್ಲಾ ಕಾಂಗ್ರೆಸ್ ಘೋಷಿತ ನೂತನ ಅಧ್ಯಕ್ಷರು ಕೊಪ್ಪಳ.