ಗಂಗಾವತಿ ನಗರ ಪೊಲೀಸ್ ಠಾಣೆಗೆ ಪಿಐ ಆಗಿ ಪ್ರಕಾಶ ಆರ್ ಯಾತನೂರು ವರ್ಗಾವಣೆ!

*ಎರಡು ದಿನಗಳ ಹಿಂದೆ ಗಂಗಾವತಿ ಗೆ ವರ್ಗವಾಗಿದ್ದ ಹಾಲೇಶ ಎಂ ನಾಯಕ ಇವರ ಬದಲಿಗೆ ಪ್ರಕಾಶ ಆರ್ ಯಾತನೂರು ಆಗಮನ.
*ಕಾಂಗ್ರೆಸ್ ಮುಖಂಡರ ಹಾವು ಏಣಿ ಆಟದಲ್ಲಿ ಫೈನಲ್ ಗೆಲ್ಲುವವರು ಯಾರು?
*ಶಾಮೀದ್ ಮನಿಯಾರ್ ಸೇರಿ ಪ್ರಮುಖ ಕಾಂಗ್ರೆಸ್ ಮುಖಂಡರ ಸೋಶಿಯಲ್ ಮೀಡಿಯಾದಲ್ಲಿ ಪಿಐ ವರ್ಗಾವಣೆ ಮತ್ತು ರದ್ದು ಆದೇಶ ಪ್ರತಿ ಲಭ್ಯ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಗಂಗಾವತಿ ಪೊಲೀಸ್ ನಗರ ಠಾಣೆಗೆ ಪಿ ಐ ಆಗಿ ವರ್ಗವಾಗಿದ್ದ ಹೊಸಪೇಟೆಯ ಹಾಲೇಶ್ ಎಂ ನಾಯಕ ಇವರ ವರ್ಗಾವಣೆಯನ್ನು ರದ್ದುಗೊಳಿಸಿ ಪ್ರಕಾಶ ಆರ್ ಯಾತನೂರು ಇವರನ್ನು ಗಂಗಾವತಿ ಠಾಣೆಯ ಪಿಐ ಆಗಿ ವರ್ಗಾವಣೆ ಮಾಡಿ
ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ನಾ ಪೊಲೀಸ್ ಸೌಮೇಂದು ಮುಖರ್ಜಿ ಬುಧವಾರ ಹೊಸ ಆದೇಶ ಮಾಡಿದ್ದಾರೆ.
ರಾಜ್ಯದ 87 ಸಿಪಿಐ ಮತ್ತು ಪಿಐ ಗಳನ್ನು ವರ್ಗಾವಣೆ ಮಾಡಿ ಕಳೆದ ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರದ ಗೃಹ ಇಲಾಖೆ ಆದೇಶ ಮಾಡಿದ್ದು ಗಂಗಾವತಿ ಸೇರಿದಂತೆ ರಾಜ್ಯದ ಕೆಲ ಗ್ರಾಮೀಣ ಮತ್ತು ನಗರ ಠಾಣೆಗಳ ಸಿಪಿಐ ಹಾಗೂ ಪಿಎ ಗಳ ವರ್ಗಾವಣೆ ಜನಪ್ರತಿನಿಧಿಗಳು ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಹಾವು ಏಣಿಯ ಸ್ಪರ್ಧೆಯನ್ನು ಮಾಡಿತ್ತು. ಪುನಹ ಬುಧವಾರ 87 ಸಿಪಿಐ ಕೆಲವು ಅಧಿಕಾರಿಗಳ ವರ್ಗಾವಣೆಯಲ್ಲಿ ಕೆಲ ಬದಲಾವಣೆ ಮಾಡಿ ಹೊಸದಾಗಿ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಗಂಗಾವತಿ ನಗರ ಪೊಲೀಸ್ ಠಾಣೆಗೆ ಹಾಲೇಶ್ ಎಂ ನಾಯಕ ಎನ್ನುವ ಅಧಿಕಾರಿಯನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು ಇದೀಗ ವರ್ಗಾವಣೆ ರದ್ದು ಮಾಡಿ ಗುಲ್ಬರ್ಗ ಮೂಲದ ಪ್ರಕಾಶ ಆರ್ ಯಾತನೂರು ಇವರನ್ನು ಗಂಗಾವತಿ ನಗರ ಠಾಣೆ ಪಿ ಐ ಆಗಿ ವರ್ಗಾವಣೆ ಮಾಡಲಾಗಿದೆ.
ಈ ಮಧ್ಯೆ ಹಾಲೇಶ ಎಂ ನಾಯಕ ಅವರು ಬೆಂಗಳೂರಿನಲ್ಲಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಿ ಗಂಗಾವತಿಗೆ ವರ್ಗಾವಣೆ ಮಾಡಲ ಕಾರಣರಾಗಿದ್ದಕ್ಕಾಗಿ ಹೂವಿನ ಬೋಕ್ಕೆ
ನೀಡಿ ಶುಭಕೋರಿ ಗಂಗಾವತಿಗೆ ಕರ್ತವ್ಯಕ್ಕೆ ಹಾಜರಾಗಲು ಸಿದ್ಧತೆ ನಡೆಸಿದ್ದರು.
ಈ ಮಧ್ಯ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಮುಖಂಡರು ಮತ್ತು ಜನಪ್ರತಿನಿಧಿಗಳು ಹಾಲೇಶ್ ಎಂ ನಾಯಕ ಇವರು ಗಂಗಾವತಿ ಠಾಣೆಗೆ ಪಿಐ ಆಗದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿ
ದ್ದರಿಂದ ಹಾಲೇಶ್ ಎಂ ನಾಯಕ ಇವರ ವರ್ಗಾವಣೆ ರದ್ದು ಮಾಡಿ, ಪ್ರಕಾಶ ಆರ್ ಯಾತನೂರು ಇವರನ್ನು ಗಂಗಾವತಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ.
ವರ್ಗಾವಣೆಯ ಆದೇಶ ಪತ್ರ ಗಂಗಾವತಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಾಮೀದ್ ಮನಿಯಾರ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಈ ಹಿಂದೆ ಗಂಗಾವತಿ ತಾಲೂಕ ತಹಸಿಲ್ದಾರ್ ವರ್ಗಾವಣೆ ಸಂದರ್ಭದಲ್ಲಿ ಇಂತಹದ್ದೇ ಸನ್ನಿವೇಶ ಸೃಷ್ಟಿಯಾಗಿತ್ತು. ಕೊನೆಗೂ ಯು.ವಸಂತಕುಮಾರಿ 15 ದಿನಗಳ ನಂತರ ಗಂಗಾವತಿ ಆಗಮಿಸಿ ಅಧಿಕಾರ ಸ್ವೀಕರಿಸಿದ್ದರು.

