Breaking News
ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಕ್ರಸ್ಟಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ

ಕಿಷ್ಕಿಂಧವಾಣಿ ಸುದ್ದಿ

ಬೆಂಗಳೂರು: ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಕ್ರಸ್ಟ್ ಗೇಟ್ ಗಳ ಬದಲಾವಣೆ ಕಾರ್ಯವನ್ನು ನಮ್ಮ ಸರ್ಕಾರ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದ್ದು, ಬರುವ ಮೇ ವೇಳೆಗೆ ಪೂರ್ಣಗೊಳಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಜೆಡಿಎಸ್ ನ ಎಂಎಲ್ಸಿ

ಟಿ.ಎ. ಶರವಣ ಅವರು ಟಿಬಿ ಅಣೆಕಟ್ಟು ಕ್ರೇಸ್ಟ್ ಗೇಟ್ ಅಳವಡಿಕೆ ವಿಚಾರ ಪ್ರಸ್ತಾಪಿಸಿದಾಗ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಹೀಗೆ ಪ್ರತಿಕ್ರಿಯಿಸಿದರು.

ತುಂಗಭದ್ರಾ ಕ್ರಸ್ಟಗೇಟ್ ಅಳವಡಿಕೆ ವಿಚಾರವನ್ನು ಪ್ರಸ್ತಾಪಿಸಿ, ಬೆಂಗಳೂರಿನಲ್ಲಿ ಮನೆ ಹಂಚಿಕೆ, ಕೇರಳದಲ್ಲಿ ಮನೆ ನಿರ್ಮಾಣ ಸೇರಿದಂತೆ ಅನೇಕ ಬೇರೆ ಬೇರೆ ವಿಚಾರಗಳನ್ನು ಎಳೆದು ತಂದಿದ್ದಾರೆ. ಟಿಬಿ ಅಣೆಕಟ್ಟಿನ ಕ್ರಸ್ಟಗೇಟ್ ಅಳವಡಿಕೆ ವಿಚಾರ ಬಹಳ ಗಂಭೀರವಾದದು. ಶರವಣ ಹಾಗೂ ಇತರ ಸದಸ್ಯರನ್ನು ನಾನು ತುಂಗಭದ್ರಾ ಅಣೆಕಟ್ಟೆಗೆ ಕಳುಹಿಸಿ ಕೊಡುತ್ತೇನೆ, ಹೋಗಿ ನೋಡಲಿ. ಅಲ್ಲಿ ಕ್ರಸ್ಟ ಗೇಟ್ ತುಂಡರಿಸಿದಾಗ, ಅಣೆಕಟ್ಟು ಸಂಪೂರ್ಣ ಅಲ್ಲಾಡಿದಂತೆ ಭಾಸವಾಗಿತ್ತು. ನಾವು ಕೇವಲ 7 ದಿನಗಳಲ್ಲಿ ದುರಸ್ತಿ ಮಾಡಿದೆವು. ಆಗ ಜನಾರ್ದನ ರೆಡ್ಡಿ ಏನು ಹೇಳಿಕೆ ಕೊಟ್ಟಿದ್ದರು ಎಂಬುದು ಗೊತ್ತಿದೆ. ಆಗ ನಾನು ‘ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’ ಎಂದು ಹೇಳಿದ್ದೆ. ನಂತರ ನಾವು ರಾಜ್ಯದ ಎಲ್ಲಾ ಅಣೆಕಟ್ಟುಗಳ ಅಧ್ಯಯನ ನಡೆಸಿ ಹಳೇ ಗೇಟ್ ಗಳ ಬದಲಾವಣೆಗೆ ತೀರ್ಮಾನ ಮಾಡಿದೆವು. ಮೊದಲ ಹಂತದಲ್ಲಿ ತುಂಗಭದ್ರಾ ಡ್ಯಾಂ ಕ್ರಸ್ಟಗೇಟ್ ಬದಲಿಸುತ್ತಿದ್ದೇವೆ. ಪತ್ರಿಕೆಯಲ್ಲಿ ಮಾರ್ಚ್ 10ರ ವೆರೆಗೆ 14 ಗೇಟ್ ಬದಲಿಸಲಾಗಿದ್ದು, ತಜ್ಞರ ಪ್ರಕಾರ ಒಂದು ಕ್ರೆಸ್ಟ್ ಗೇಟ್ ಅಳವಡಿಕೆಗೆ 7 ದಿನಗಳ ಕಾಲಾವಕಾಶ ಬೇಕು. ಹಲವು ಗೇಟ್ ಗಳ ಅಳವಡಿಕೆ ಕಾರ್ಯ ನಡೆದರೆ ಈ ಪ್ರಕ್ರಿಯೆ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ” ಎಂದು ತಿಳಿಸಿದರು.

ಎಲ್ಲಾ ಕ್ರಸ್ಟಗೇಟ್ ಬದಲಿಸುವ ತೀರ್ಮಾನ ಮಾಡಿದ್ದು, 19ನೇ ಸ್ಟಾಪ್ ಲಾಗ್ ಗೇಟ್ ತೆರವುಗೊಳಿಸಿ ಸ್ಪಿಲ್ ಗೇಟ್ ಅಳವಡಿಕೆಗೆ 2025 ಏಪ್ರಿಲ್ 24ರಂದು ಅಹಮದಾಬಾದಿನ ಹಾರ್ಡ್ ವೇರ್ ಟೂಲ್ ಅಂಡ್ ಮಷಿನರಿ ಪ್ರಾಜೆಕ್ಟ್ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 34.48 ಕೋಟಿ ರೂ. ವೆಚ್ಚದಲ್ಲಿ ಉಳಿದ 32 ಸ್ಪಿಲ್ ವೇ ಗೇಟ್ ಅಳವಡಿಕೆಯನ್ನು 15 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಸಲು ಇದೇ ಸಂಸ್ಥೆಯೊಂದಿಗೆ ಜೂನ್ 10, 2025ರಲ್ಲಿ ಒಪ್ಪಂದ ಮಾಡಿಕೊಂಡಿದ್ದೇವೆ. 25 ಗೇಟ್ ಗಳ ಫ್ಯಾಬ್ರಿಕೇಶನ್ ಕೆಲಸ ಮುಗಿದಿದ್ದು, 2 ಗೇಟ್ ಗಳ ಕೆಲಸ ನಡೆಯುತ್ತಿದೆ. 26 ಗೇಟ್ ಗಳನ್ನು ತೆಗೆಯಲಾಗಿದ್ದು, 2 ಗೇಟ್ ಗಳ ತೆರವು ಕಾರ್ಯ ನಡೆಯುತ್ತಿದೆ. ಇದರಲ್ಲಿ 14 ಗೇಟ್ ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, 3 ಗೇಟ್ ಗಳ ಕಾರ್ಯ ಪ್ರಕ್ರಿಯೆಯಲ್ಲಿದೆ. ಮೇ ತಿಂಗಳ ಒಳಗಾಗಿ ಎಲ್ಲಾ ಗೇಟ್ ಬದಲಾವಣೆ ಮುಗಿಸಲು ವ್ಯವಸ್ಥೆ ಮಾಡಲಾಗಿದೆ” ಎಂದು ವಿವರಿಸಿದರು.

ನವಲಿ ಸಮನಾಂತರ ಡ್ಯಾಂ: ಆಂಧ್ರ ಚರ್ಚೆಗೆ ಬರುತ್ತಿಲ್ಲ:ಇನ್ನು ನವಲಿ ಸಮತೋಲಿತ ಜಲಾಶಯ ನಿರ್ಮಾಣ ವಿಚಾರದಲ್ಲಿ ಆಂಧ್ರ ಪ್ರದೇಶದವರು ಮಾತುಕತೆಗೆ ಬರುತ್ತಿಲ್ಲ. ಕೆಲವರು ಪರ್ಯಾಯ ಮಾರ್ಗಗಳ ಸಲಹೆ ನೀಡಿದ್ದು, ಆಂಧ್ರ ಸಿಎಂ ಈ ವಿಚಾರವಾಗಿ ಚರ್ಚೆ ಮಾಡಲು ಸಮಯ ನೀಡುತ್ತಿಲ್ಲ. ಈ ಅಣೆಕಟ್ಟು ನಮ್ಮ ಆಸ್ತಿ. ಈ ವಿಚಾರದಲ್ಲಿ ಕೇವಲ ಕರ್ನಾಟಕ ಏಕಾಂಗಿಯಾಗಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಮೂರು ರಾಜ್ಯದವರು ಸೇರಿ ತೀರ್ಮಾನ ಮಾಡಬೇಕು. ನೀರು ಹರಿದು ಸಮುದ್ರಕ್ಕೆ ಹೋಗುತ್ತಿದೆ. ಇದನ್ನು ಉಳಿಸಿ ಜನರಿಗೆ ನೀಡಲು ನಿಮ್ಮೆಲ್ಲರ ರಾಜಕೀಯ ಬದ್ಧತೆ, ಶಕ್ತಿ ನೀಡಿದರೆ ನಾವು ವ್ಯವಸ್ಥೆ ಮಾಡಬಹುದು. ಕ್ರಸ್ಟಗೇಟ್ ಬದಲಾವಣೆ ವಿಚಾರವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗಿದೆ” ಎಂದು ತಿಳಿಸಿದರು.

ಕಾಂಗ್ರೆಸ್ ಅಧ್ಯಕ್ಷರಾಗಿ 6ವರ್ಷ ಪೂರೈಸಿದ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಶುಭಾಶಯ.

ಕಿಷ್ಕಿಂಧವಾಣಿ ಸುದ್ದಿ

ಬೆಂಗಳೂರು:

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಉಪಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ

ಅಭಿನಂದಿಸಿದ್ದಾರೆ.

ಶಿವಕುಮಾರ್ ಅವರ ಸಂಘಟನಾ ಚಾತುರ್ಯ, ಸೈದ್ಧಾಂತಿಕ ಬದ್ದತೆ ಮತ್ತು ಕಠಿಣ ಶ್ರಮ ನಮ್ಮ ಪಕ್ಷದ ಎಲ್ಲ ಯುವನಾಯಕರಿಗೆ ಮಾದರಿಯಾದುದು.

ವಿರೋಧ ಪಕ್ಷವಾದ ಬಿಜೆಪಿ ಸುಳ್ಳು ಕೇಸ್ ಗಳನ್ನು ಹಾಕಿ ಬಗೆಬಗೆಯ ಕಿರುಕಳ ನೀಡಿದರೂ ಶಿವಕುಮಾರ್ ಅವರು ಮಣಿಯದೆ ಪಕ್ಷಕ್ಕೆ ನಿಷ್ಠರಾಗಿ ಉಳಿದಿರುವುದು ಕಾಂಗ್ರೆಸ್ ಪಕ್ಷದ ಬಗ್ಗೆ ಅವರಲ್ಲಿರುವ ರಾಜಿಯಿಲ್ಲದ ನಿಷ್ಠೆಗೆ ಸಾಕ್ಷಿಯಾಗಿದೆ.. ಇದು ಕಾಂಗ್ರೆಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಸ್ಪೂರ್ತಿದಾಯಕ ನಡವಳಿಕೆ ಆಗಿದೆ.

ಕೋಮುವಾದಿ ಶಕ್ತಿಗಳನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜೊತೆಯಲ್ಲಿ ಡಿ.ಕೆ. ಶಿವಕುಮಾರ್ ಹಗಲಿರುಳು ದುಡಿದಿದ್ದಾರೆ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಮತ್ತೆ ಕಟ್ಟುವಲ್ಲಿ ಶಿವಕುಮಾರ್ ನನ್ನ ಹೆಗಲಿಗೆ ಹೆಗಲಾಗಿ ನಿಂತಿದ್ದಾರೆ.

ನನಗಿಂತ ಕಿರಿಯರಾದ ಶಿವಕುಮಾರ್ ಅವರಿಗೆ ಉಜ್ವಲವಾದ ರಾಜಕೀಯ ಭವಿಷ್ಯವಿದೆ. 2028ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವುದು ನಮ್ಮೆಲ್ಲರ ಬಯಕೆಯಾಗಿದೆ. ಇದಕ್ಕಾಗಿ ನಡೆಯುವ ಪಕ್ಷದ ಸಂಘಟನೆ ಮತ್ತು ಹೋರಾಟದಲ್ಲಿ ನಾನು ಕೂಡಾ ಜೊತೆಯಿರುತ್ತೇನೆ ಎಂದು ಶುಭ ಕೋರಿದ್ದಾರೆ.

ಅಪೂರ್ಣವಾಗಿರುವ ವಾಲ್ಮೀಕಿ ಭವನಗಳಿಗೆ ೨ಕೋಟಿ ರೂ.ಅನುದಾನ ಕ್ಕೆ ಶಾಸಕ ರೆಡ್ಡಿ ಆಗ್ರಹ.

 *ವಿಧಾನಸಭೆಯ ಅಧಿವೇಶನದಲ್ಲಿ ಸರಕಾರಕ್ಕೆ ಪ್ರಶ್ನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2021-22 ಸಾಲಿನಲ್ಲಿ ಅಂದಿನ ಬಿಜೆಪಿ ಸರಕಾರ 10 ವಾಲ್ಮೀಕಿ ಭವನ ನಿರ್ಮಿಸಲು ಶೇ. 25ರಷ್ಟು ಅನುದಾನವನ್ನು ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿತ್ತು.ಅನುದಾನದ ಕೊರತೆಯಿಂದಾಗಿ ಇಂದಿನವರೆಗೂ ವಾಲ್ಮೀಕಿ ಭವನದ ಕಾಮಗಾರಿ ಅಪೂರ್ಣವಾಗಿದೆ. ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ವಾಲ್ಮೀಕಿ ಭವನ ನಿರ್ಮಾಣಕ್ಕೆ ಒಂದು ರೂಪಾಯಿ ಅನುದಾನವನ್ನು ಸಹ ಬಿಡುಗಡೆ ಮಾಡಿಲ್ಲ,ಕೂಡಲೇ ಅಗತ್ಯವಿರುವ ಎರಡು ಕೋಟಿ ರೂಗಳನ್ನು ಬಿಡುಗಡೆ ಮಾಡಿ ವಾಲ್ಮೀಕಿ ಭವನ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರಕ್ಕೆ ಪ್ರಶ್ನೆ ಕೇಳಿದರು. ಇದಕ್ಕೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಉತ್ತರ ನೀಡಿ ಈಗಾಗಲೇ ಅಪೂರ್ಣಗೊಂಡಿರುವ ವಾಲ್ಮೀಕಿ ಭವನಗಳಿಗೆ ಅಗತ್ಯವಿರುವ ಎರಡು ಕೋಟಿ ರೂಗಳನ್ನು ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸುವ ಭರವಸೆ ನೀಡಿದರು. ವಾಲ್ಮೀಕಿ ನಿಗಮದ ಹಗರಣದ ಎಲ್ಲಾ ಹಣವನ್ನು ಸರ್ಕಾರ ವಸೂಲಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯ ಅಧವೇಶನದಲ್ಲಿ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ವಾಲ್ಮೀಕಿ ನಿಗಮದ ಅನುದಾನದಲ್ಲೇ ಗಂಗಾವತಿ ವಿಧಾನಸಭಾ ಕ್ಷೇತ್ರದ ಎಲ್ಲಾ ಅಪೂರ್ಣ ವಾಲ್ಮೀಕಿ ಭವನಗಳ ಕಾಮಗಾರಿಯನ್ನು ಪೂರ್ಣಗೊಳಿಸಲು ಕೂಡಲೇ ಹಣ ಬಿಡುಗಡೆ ಮಾಡುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಸರ್ಕಾರದ ಗಮನ ಸೆಳೆದರು.

ಮಾಜಿ ಸಚಿವ ಶ್ರೀರಂಗದೇವರಾಯಲು ಜಯಂತಿ ಆಚರಣೆ ನೀರಾವರಿ, ಶಿಕ್ಷಣ, ವಸತಿ ಮತ್ತು ಮೂಲಸೌಕರ್ಯಕ್ಕೆ ಶ್ರೀರಂಗದೇವರಾಯಲು ಕೊಡುಗೆ ಅಪಾರ *ರಾಜಾ ಶ್ರೀರಂಗದೇವರಾಯಲು ಪ್ರತಿಷ್ಠಾನಕ್ಕೆ ಪ್ರತಿಯೊಬ್ಬರ ಸಹಕಾರ ಇರುತ್ತದೆ *ಶಾಸಕ ಗಾಲಿ ಜನಾರ್ದನರೆಡ್ಡಿಯವರಿಂದ ಶ್ರೀರಂಗದೇವರಾಯಲು ಸರ್ಕಲ್ ಅಭಿವೃದ್ಧಿ ಭರವಸೆ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಐದು ಭಾರಿ ಶಾಸಕರಾಗಿ ಸಚಿವರಾಗಿದ್ದ ಸರಳ, ಸಜ್ಜನರಾಜಕಾರಣಿ ರಾಜಾ ಶ್ರೀರಂಗದೇವರಾಯಲು ಅವರು ದೂರದೃಷ್ಠಿಯಿಂದ ಗಂಗಾವತಿ ಕ್ಷೇತ್ರದಲ್ಲಿ ನೀರಾವರಿ, ಶಿಕ್ಷಣ,ವಸತಿ ಸೇರಿ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಮಾಡಿದ್ದರು ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ತಾಲೂಕಿನ ಆನೆಗೊಂದಿಯ ಶ್ರೀರಂಗದೇವರಾಯಲು ಸ್ಮಾರಕ ಸ್ಥಳದಲ್ಲಿ ಅವರ ಅಭಿಮಾನಿಗಳು ಹಾಗೂ ಕುಟುಂಬದವರು ಆಯೋಜಿಸಿದ್ದ ರಾಜಾ ಶ್ರೀರಂಗದೇವರಾಯಲು ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಂದಿನ ದಿನಗಳಲ್ಲಿ ರಾಜಾ ಶ್ರೀರಂಗದೇವರಾಯಲು ಅವರ ಹೆಸರಿನಲ್ಲಿ ರಚಿಸುವ ಪ್ರತಿಷ್ಠಾನಕ್ಕೆ ತಾವು ಸಂಪೂರ್ಣ ಸಹಕಾರ ನೀಡುವ ಜತೆಗೆ ಪ್ರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.ಹಂಪಿಯAತೆ ಆನೆಗೊಂದಿಯಲ್ಲೂ ಉತ್ಸವ ನಡೆದು ಇಲ್ಲಿಯ ಇತಿಹಾಸ, ಸ್ಮಾರಕಗಳ ಕುರಿತು ಇತರೆ ಭಾಗದ ಜನರಿಗೆ ಮನವರಿಕೆಯಾಗುವ ಕಾರ್ಯವಾಗಬೇಕೆಂದು ಶ್ರೀರಂಗದೇವರಾಯಲು ಅನೇಕ ಸಲ ಸಲಹೆ ನೀಡಿದ್ದರೆಂದರು.
ಜಿ.ಪಂ.ಮಾಜಿ ಸದಸ್ಯ ಎಚ್.ಎಂ.ಸಿದ್ದರಾಮಸ್ವಾಮಿ ಮಾತನಾಡಿ, ನನಗೆ ರಾಜಕೀಯ ಪಟ್ಟುಗಳನ್ನು ಜನರ ಸೇವೆಯ ಕುರಿತು ರಾಜಕೀಯ ಗುರುವಾಗಿ ಶ್ರೀರಂಗದೇವರಾಯಲು ಇದ್ದರು, ಅವರಂತೆ ನಾನು ಜನಸೇವೆ ಮಾಡಲು ಆರಂಭಿಸಿ ಆನೆಗೊಂದಿ ವ್ಯಾಪ್ತಿಚಿiÀÄ ಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಯಕ ಮಾಡಿದೆ ಎಂದರು.
ನ್ಯಾಯವಾದಿ ಎಚ್.ಸಿ.ಯಾದವ ಮಾತನಾಡಿ, ಜನಪರ ಕಾಳಜಿಯುಳ್ಳ ನಾಯಕ ಶ್ರೀರಂಗದೇವರಾಯಲು ಅವರಿಗೆ ನಾನು ರಾಜವಂಶಸ್ಥ ಎನ್ನುವ ಹಮ್ಮುಬಿಮ್ಮು ಇರಲಿಲ್ಲ, ಬಸ್ ನಿಲ್ದಾಣದ ಹತ್ತಿರ ಅವರ ಮನೆಗೆ ಗ್ರಾಮೀಣ ಭಾಗದ ಜನರು, ವಿದ್ಯಾರ್ಥಿಗಳು ಬಸ್ ಇಲ್ಲ ಎಂದು ಹೋದರೆ ತಾವೇ ಅವರೊಂದಿಗೆ ಬಸ್ ಡಿಪೋ ಅಥವಾ ಬಸ್ ನಿಲ್ದಾಣಕ್ಕೆ ಆಗಮಿಸಿ ಗ್ರಾಮಗಳಿಗೆ ಬಸ್ ಬಿಡುವ ಮೂಲಕ ಜನರ ನಿಜವಾದ ಸೇವಕರಾಗಿದ್ದರು ಎಂದರು.
ಬಾಪಿರೆಡ್ಡಿ ಕ್ಯಾಂಪ್ ಟಿ.ವಿ.ಸತ್ಯನಾರಾಯಣ ಮಾತನಾಡಿ, ಹಿಟ್ನಾಳ ಮತ್ತು ಆನೆಗೊಂದಿ ಭಾಗದ ರೈತರು ಎಡದಂAಡೆ ಕಾಲುವೆಯ 11ಎ ವಿತರಣಾ ಕಾಲುವೆ ಪ್ರದೇಶದಲ್ಲಿ 11 ತಿಂಗಳು ನೀರಾವರಿ ಸೌಲಭ್ಯ ಪಡೆಯುತ್ತಿರುವುದು ಶ್ರೀರಂಗದೇವರಾಯಲು ಅವರ ಶ್ರಮದಿಂದಾಗಿ, ಬಸ್ ನಿಲ್ದಾಣ, ಸರ್ಕ್ಯೂಟ್ ಹೌಸ್, ದೇವಘಾಟದಿಂದ ಗಂಗಾವತಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ, ಸರಕಾರಿ ಮಹಾವಿದ್ಯಾಲಯ, ಕೃಷಿ ವಿಜ್ಞಾನಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಬಸ್ ಡಿಪೋ, ಒಳಚರಂಡಿ ಯೋಜನೆ ಅನುಷ್ಠಾನ ಮತ್ತು ಕೆರೆ ತುಂಬಿಸುವ ಯೋಜನೆ ಶ್ರೀರಂಗದೇವರಾಲು ಕಾಲದಲ್ಲಿ ಅನುಷ್ಠಾನವಾಗಿವೆ ಎಂದರು.
ರಾಜಾ ನರಸಿಂಹದೇವರಾಯಲು, ಎಚ್.ಹನುಮಂತಯ್ಯ, ಡಾ.ವಿ.ಎಸ್.ನ.ರಾಯಲು, ವಿಶ್ವನಾಥರಾಜು, ಕಡೆಬಾಗಿಲು ಪ್ರಸಾದ, ಸಾಣಾಪೂರ ವೆಂಕಟನಾರಾಯಣ, ಪತ್ರಕರ್ತ ಕೆ.ಮಲ್ಲಿಕಾರ್ಜುನ ಸಾಣಾಪೂರ ಮಾತನಾಡಿದರು.
ಕುಮಾರಿ ಬಿಂದು ಆನೆಗೊಂದಿಯವರು ಭರತ ನಾಟ್ಯದ ಮೂಲಕ ರಾಜಾ ಶ್ರೀರಂಗದೇವರಾಯಲು ಅವರು ಜಯಂತೋತ್ಸವಕ್ಕೆ ಎಲ್ಲರನ್ನು ಸ್ವಾಗತಿಸಿದ್ದು ಆಕರ್ಷಕವಾಗಿತ್ತು.
ಕಾರ್ಯಕ್ರಮದಲ್ಲಿ ಆದಿಶಕ್ತಿ ದೇವಾಲಯದ ಪೂಜ್ಯ ಬ್ರಹ್ಮಯ್ಯಸ್ವಾಮಿ, ಲಲಿತಾರಾಣಿ ಶ್ರೀರಂಗದೇವರಾಯಲು, ಕುಪ್ಪರಾಜು, ಕೃಷ್ಣದೇವರಾಯಲು,ಚಿತ್ರನಟ ವಿಷ್ಣುಜೋಶಿ ಆದಾಪೂರ,ನರಸಿಂಹಲು ಸಾಣಾಪೂರ, ಕೆ.ತಿರುಕಪ್ಪ, ಬಾಳೆಕಾಯಿ ತಿಮ್ಮಪ್ಪ, ಯುವರಾಜ, ಯೇಸಣ್ಣ, ಭತ್ತದ ಚಂದ್ರಶೇಖರ, ಪ್ರದೀಪ್, ಶಿವಚಿiÀÄ್ಯ, ಎ.ನಾಗಪ್ಪ, ಅಂಜನಾದೇವಿ, ಮೆಟ್ರಿ ಗುರಪ್ಪ, ರಾಮಕೃಷ್ಣಯ್ಯ ಇಲ್ಲೂರು,ರಾಮಕೃಷ್ಣಗೌಡ,ಎಂ.ವೆAಕಟೇಶ,ಬಾಲಯ್ಯ,ನಾಗಮುನಿರೆಡ್ಡಿ,ಲಕ್ಷಿö್ಮನಾರಾಯಣ,ರಜನೀಕಾAತ,ಅAಬಿಗೇರ ಅಂಜೀನಪ್ಪ ಸೇರಿ ಅನೇಕರಿದ್ದರು.
ಬಾಕ್ಸ್
ಶ್ರೀರಂಗದೇವರಾಯಲು ಅವರು ಕುಟುಂಬಕ್ಕಿAತಲೂ ಜನಸಾಮಾನ್ಯರ ಜತೆಗೆ ಅತೀ ಹೆಚ್ಚು ಕಾಲ ಕಲೇಯುತ್ತಿದ್ದರು. ರೈತರು, ಕೂಲಿಕಾರ್ಮಿಕರು, ಮಹಿಳೆಯರಿಗಾಗಿ ಅವರ ಅವಧಿಯಲ್ಲಿ ಹೆಚ್ಚು ಕೆಲಸಗಳಾಗಿದ್ದು ಜನ ಸಾಮಾನ್ಯರೇ ಸೇರಿಕೊಂಡು ರಾಜಾ ಶ್ರೀರಂಗದೇವರಾಯಲು ಪ್ರತಿಷ್ಠಾನ ರಚನೆ ಮಾಡಿ ಹಲವಾರು ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿರುವುದು ಶ್ಲಾಘನೀಯವಾಗಿದೆ. ಈಗಾಗಲೇ ಆನೆಗೊಂದಿ ಕಡೆಬಾಗಿಲು ವೃತ್ತಕ್ಕೆ ರಾಜಾ ಶ್ರೀರಂಗದೇವರಾಯಲು ವೃತ್ತ ಎಂದು ನಾಮಕರಣ ಮಾಡಲಾಗಿದ್ದು ಶಾಸಕರಾದ ಗಾಲಿ ಜನಾರ್ದನರೆಡ್ಡಿಯವರು ಸರ್ಕಲ್ ಅಭಿವೃದ್ಧಿ ಕುರಿತು ನನ್ನ ಹತ್ತಿರ ಪ್ರಸ್ತಾಪ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯಡಿ ವಾಹನಗಳ ಸಂಚಾರಕ್ಕೆ ತೊಂದರೆಯಾಗದAತೆ ರಾಜಾ ಶ್ರೀರಂಗದೇವರಾಯಲು ಸರ್ಕಲ್ ನಿರ್ಮಾಣ ಮಾಡುವ ಯೋಜನೆ ಇದೆ.
-ಲಲಿತಾರಾಣಿ ಶ್ರೀರಂಗದೇವರಾಯಲು ರಾಜವಂಶಸ್ಥರು.
ಬಾಕ್ಸ್
ರಾಜಾ ಶ್ರೀರಂಗದೇವರಾಲು ಜಯಂತಿಯಲ್ಲಿ ವಿಶ್ವ ಮಹಿಳಾ ದಿನದ ನಿಮಿತ್ತ ಪರಿಸರ ಪ್ರೇಮಿ ಹಾಗೂ ನರ್ಸರಿಯ ಮೂಲಕ ಪರಿಸರ ಜಾಗೃತಿ ಮೂಡಿಸುವ ವಡ್ಡರಹಟ್ಟಿ ಗುಡ್ಡದ ಕ್ಯಾಂಪಿನ ಹುಲಿಗೆಮ್ಮ ಇವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ ನಗದು ಬಹುಮಾನ ನೀಡಲಾಯಿತು.

ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿಯಿಂದ ಪ್ರಥಮ‌ವಾಗಿ ಚುನಾಯಿತ ಜನಪ್ರತಿನಿಧಿಯಾಗಿದ್ದ ಕೆ ವೆಂಕಟರಾವ್ ಕಲ್ಗುಡಿ ನಿಧನ. *ತಾ.ಪಂ.ಮೂಲಕ ಬಿಜೆಪಿ ಜಿಲ್ಲೆಯಲ್ಲಿ ಖಾತೆ ಆರಂಭಕ್ಕೆ ಕಾರಣರಾಗಿದ್ದರು

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಭಾರತೀಯ ಜನತಾ ಪಕ್ಷದಿಂದ ತಾ.ಪಂ.ಚುನಾವಣೆಯಲ್ಲಿ ಗೆದ್ದು ಬಿಜೆಪಿ ಖಾತೆ ಆರಂಭಿಸಿದ್ದ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ವೆಂಕಟರಾವ್ ಜಂಗಮರ ಕಲ್ಗುಡಿ(69) ಇವರು ಜಂಗಮರ ಕಲ್ಗುಡಿ ಗ್ರಾಮದ ತಮ್ಮ ನಿವಾಸದಲ್ಲಿ ಬುಧವಾರ ಸಂಜೆ 07 ಗಂಟೆಗೆ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, ಒರ್ವ ಪುತ್ರ,ಪುತ್ರಿ ಇದ್ದಾರೆ.
2000 ಇಸವಿಯಲ್ಲಿ ಜರುಗಿದ್ದ ತಾ.ಪಂ.ಜಿ.ಪಂ.ಚುನಾವಣೆಯಲ್ಲಿ ಬಿಜೆಪಿ ಬಿ ಫಾರಂ ಪಡೆದು ಗೆಲುವು ಪಡೆದು ಇಡೀ ಜಿಲ್ಲೆಯಲ್ಲಿ ಬಿಜೆಪಿ ಖಾತೆ ಆರಂಭಕ್ಕೆ ಕಾರಣರಾಗಿದ್ದರು.
ಮೃತರ ಅಂತ್ಯಕ್ರಿಯೆ ಮಾ.05 ರಂದು ಬೆಳಗ್ಗೆ 8:00ಗೆ ಅಂತ್ಯಕ್ರಿಯೆ ಜಂಗಮರ ಕಲ್ಗುಡಿ ಗ್ರಾಮದಲ್ಲಿ ನೆರವೇರಲಿದೆ.
ಸಂತಾಪ: ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ ಖಾತೆಯನ್ನು ಆರಂಭಿಸಿ ಢಣಾಪುರ ತಾಲೂಕ ಪಂಚಾಯತಿನಿಂದ ಬಿಜೆಪಿ ಸದಸ್ಯರಾಗಿ ಗೆಲುವು ಪಡೆದಿದ್ದ ವೆಂಕಟರಾವ್ ನಿಧನಕ್ಕೆ ಶಾಸಕ ಗಾಲಿ ಜನಾರ್ದನ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ದಡೆಸೂಗೂರು ಬಸವರಾಜ, ಮಾಜಿ ಸಂಸದರಾದ ಶಿವರಾಮಗೌಡ, ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ಜಿ.ವೀರಪ್ಪ, ಮುಖಂಡರಾದ ಸಿಂಗನಾಳ ವಿರುಪಾಕ್ಷಪ್ಪ,ಯಡ್ಲಪಲ್ಲಿ
ಆನಂದರಾವ್ ,ಟಿ.ವಿ.ಸತ್ಯನಾರಾಯಣ, ಎಂ.ಸತ್ಯನಾರಾಯಣ, ಜಾನಕೀರಾಮ್
ಸೇರಿ ಬಿಜೆಪಿ ಮುಖಂಡರು, ಜಂಗಮರ ಕಲ್ಗುಡಿ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

ನವ ಬೃಂದಾವನ ಗಡ್ಡಿಯ ಯತಿವರ್ಯರ ದರ್ಶನಕ್ಕೆ ಆಗಮಿಸಿದ ನವರಸ ನಾಯಕ,ರಾಜ್ಯಸಭಾ ಸದಸ್ಯ ಜಗ್ಗೇಶ್.

*ನಟ ಅಪ್ಪಟ ರಾಯರ ಭಕ್ತ

*ರಾಯರನ್ನು ನಂಬಿದರೆ ಕಷ್ಟಗಳು ದೂರ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಕನ್ನಡ ಚಿತ್ರರಂಗದ ನವರಸ ನಾಯಕ ಎಂದು ಖ್ಯಾತಿ ಪಡೆದ ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿರುವ ನಟ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ತಾಲೂಕಿನ ಆನೆಗೊಂದಿಯ ಐತಿಹಾಸಿಕ ನವೃಂದಾವನಗಡ್ಡಿಗೆ ಆಗಮಿಸಿ ಯತಿವರ್ಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿ ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು ಆಗಿದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾದೈವ ಅವರು, ನಾನು ಚಿಕ್ಕಂದಿನಿಂದಲೂ ರಾಯರ ಭಕ್ತನಾಗಿದ್ದು ನಬೃಂದಾವನ ಗಡ್ಡಿಯಲ್ಲಿರುವ 9 ಯತಿಗಳ ದರ್ಶನ ಮಾಡುವ ಬಯಕೆ ಬಹಳ ವರ್ಷಗಳಿಂದ ಇದ್ದು,ಇಂದು ಆಸೆ ಈಡೇರಿದೆ ಪ್ರತಿಯೊಬ್ಬರೂ ಭಕ್ತಿಯ ಹಾದಿಯಲ್ಲಿ ನಡೆದು ದೇವರ ಸ್ಮರಣೆಯ ಮೂಲಕ ತಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬೇಕು ಧರ್ಮದ ದಾರಿ ಬಿಟ್ಟು ನಡೆದರೆ ದೇವರು ಮೆಚ್ಚುವುದಿಲ್ಲ ನವ ಬೃಂದಾವನ ಗಡ್ಡಿ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು 9 ಯತಿಗಳು ಇಲ್ಲಿ ಲೀನರಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ ಇಲ್ಲಿಗೆ ಬಂದಿದ್ದು ಬಹಳ ಸಂತೋಷವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಸದ ಎನ್. ಪದ್ಮನಾಭರಾಜು, ಗೋಪಿನಾಥ್, ಹೆಚ್ ಎಂ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪ್ರದೀಪ್ ಹೊಸಪೇಟೆ ಇತರರಿದ್ದರು.