Breaking News
ವಿಶ್ವಕಪ್ ಕ್ರಿಕೆಟ್ ಮ್ಯಾಚ್: ಮೂರನೇ ಭಾರಿಗೆ ಭಾರತದ ಮಡಿಲಿಗೆ ವಿಶ್ವ ಕಪ್.!! * ಬ್ಯಾಟಿಂಗ್ ನಲ್ಲಿ ಅಭಿಷೇಕ್ ಶರ್ಮಾ, ಈಶನ್ ಕಿಶನ್ ೬ಓವರ್ ನಲ್ಲಿ ೯೩ ರನ್ ಗಳಿಕೆ. *೧೫ಓವರ್ ಗಳಲ್ಲಿ ೨೦೩ ರನ್ ಗಳಿಕೆ.

ವಿಶ್ವಕಪ್ ಕ್ರಿಕೆಟ್ ಮ್ಯಾಚ್: ಮೂರನೇ ಭಾರಿಗೆ ಭಾರತದ ಮಡಿಲಿಗೆ ವಿಶ್ವ ಕಪ್.!!
* ಬ್ಯಾಟಿಂಗ್ ನಲ್ಲಿ ಅಭಿಷೇಕ್ ಶರ್ಮಾ, ಈಶನ್ ಕಿಶನ್ ೬ಓವರ್ ನಲ್ಲಿ ೯೩ ರನ್ ಗಳಿಕೆ.
*೧೫ಓವರ್ ಗಳಲ್ಲಿ ೨೦೩ ರನ್ ಗಳಿಕೆ
ಕಿಷ್ಕಿಂಧವಾಣಿ ಸುದ್ದಿ
ಅಹಮದಾಬಾದ್: 2026ರ ವಿಶ್ವಕಪ್ ಟಿ20 ಪಂದ್ಯಾವಳಿಯ ಫೈನಲ್ ಪಂದ್ಯ ಗುಜರಾತಿನ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರವಿವಾರ ಸಂಜೆ ಜರುಗಿತು. ಗೆಲುವಿನ ಗುರಿಯೊಂದಿಗೆ ಭಾರತ ತಂಡದವರು ೫ ವಿಕೇಟ್‌ ಗಳ ನಷ್ಟಕ್ಕೆ 255 ರನ್ ಗಳ ಸವಾಲನ್ನು ನ್ಯೂಜಿಲೆಂಡ್ ತಂಡಕ್ಕೆ ಹಾಕಿದರು.
ಬ್ಯಾಟಿಂಗ್ ನಲ್ಲಿ ಹಿಂದೂ ಅಮೋಘ ಪ್ರದರ್ಶನವನ್ನು ನೀಡಿದ ಅಭಿಷೇಕ್ ಶರ್ಮ ಹಾಗೂ ಕಿಶನ್ ಕಿಶನ್ ಆರು ಓವರ್ ಗಳಲ್ಲಿ 92 ರನ್ ಗಳಿಸುವ ಮೂಲಕ ಭರ್ಜರಿ ಶುಭಾರಂಭ ಮಾಡಿದರು.ರನ್ ಗಳ ಗಳಿಕೆಯನ್ನು ಮುಂದುವರಿಸಿದವರು ಸಂಜು ಸ್ಯಾಮ್ಸನ್ ೪೬ ಎಸೆತಗಳ(ಬಾಲ್)ಲ್ಲಿ ೮೯ ರನ್ ಗಳಿಸುವ 15 ಓವರ್ ಗಳಲ್ಲಿ ಎರಡು ನೂರು ರನ್ನುಗಳ ಗಡಿಯನ್ನು ದಾಟಿಸಲಾಯಿತು.ನ್ಯೂಜಿಲೆಂಡ್ ನ ಜೇಮ್ಸ್ ನಿಶಾಮ್ ಒಂದು ಒವರ್ ನಲ್ಲಿ ಮೂರು ವಿಕೇಟ್‌ ಪಡೆದು ರನ್ ಗಳ ಗಳಿಕೆ ಪ್ರಮಾಣವನ್ನು ತಡೆದರು.ಶಿವಂ ದುಬೇ ೮ ಬಾಲ್ ನಲ್ಲಿ ೨೬ ರನ್ ಒಡೆಯುವ ಮೂಲಕ ರನ್ ಗಳಿಕೆ ಹೆಚ್ಚು ಮಾಡಿದತು.
ಭಾರತದ೨೫೫ ರನ್ ಗಳ ಗುರಿಯನ್ನು ಬೆನ್ನು ಹಟ್ಟಿದ ನ್ಯೂಜಿಲೆಂಡ್ ತಂಡದ ಬ್ಯಾಟ್ಸ್ ಮ್ಯಾನ್ ಗಳು ಅಕ್ಷರ ಪಟೇಲ್ ಮತ್ತು ಜಶ್ಪ್ರೀತ್ ಬೂಮ್ರಾ ಬಾಲಿಂಗ್ ಮತ್ತು ಈಶನ್ ಕಿಶನ್ ಉತ್ತಮ ಪಿಲಿಂಡ್ ಗೆ ಭಾರತಕ್ಕೆ ಟಿ20 ವಿಶ್ವಕಪ್ ಬರಲು ಪ್ರಮುಖ ಕಾರಣವಾಯಿತು

ಹಿರೇಬೆಣಕಲ್ ಮೋರ್ಯರ ಬೆಟ್ಟದ ಶಿಲಾಸಮಾಧಿ ಸ್ಥಳ ಪ್ರವಾಸಿ ತಾಣವಾಗಿಸಲು ಯೋಜನೆ:ಡಾ.ಸುರೇಶ ಇಟ್ನಾಳ. *ಬೃಹತ್ ಶಿಲಾಯುಗದ ನೆಲೆ ಸಂರಕ್ಷಣೆಗೆ ಅಗತ್ಯ ಅನುದಾನ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ಹಿರೇಬೆಣಕಲ್ ನಲ್ಲಿ ಮೋರ್ಯರ ಬೆಟ್ಟದ ಪ್ರಾಚೀನ ಬೃಹತ್ ಶಿಲಾಯುಗದ (ಮೆಗಾಲಿಥಿಕ್) ನೆಲೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸುರೇಶ್ ಬಿ. ಇಟ್ನಾಳ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭಾನುವಾರ ಹಿರೇಬೆಣಕಲ್ ನಲ್ಲಿರುವ ಐತಿಹಾಸಿಕ ನೆಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ ದರು. ಈ ತಾಣವನ್ನು ಪ್ರವಾಸಿಗರ ಮತ್ತು ಪರಿಸರ ಸ್ನೇಹಿಯಾಗಿ, ಅಭಿವೃದ್ಧಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ

“ನಾಡಿನ ಹೆಮ್ಮೆಯ ಈ ಬೃಹತ್ ಶಿಲಾಯುಗದ ನೆಲೆ ಕೊಪ್ಪಳ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿ. ಈ ತಾಣದ ಸಂರಕ್ಷಣೆಗೆ ನಾವು ಮೊದಲ ಆದ್ಯತೆ ನೀಡಿದ್ದೇವೆ. ಶಿಥಿಲಾವಸ್ಥೆಯಲ್ಲಿರುವ ಸ್ಮಾರಕಗಳ ರಕ್ಷಣೆ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಈಗಾಗಲೇ 80 ಲಕ್ಷ ರೂಪಾಯಿಗಳ ಅನುದಾನ ಮೀಸಲಿರಿಸಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಿಂದ ಹಿರೇಬೆಣಕಲ್ ನೆಲೆಯ ಕೆಳ ಭಾಗದವರೆಗೆ ಸುಗಮ ರಸ್ತೆ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗುವುದು. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸುವಂತೆ ಜಿಲ್ಲಾ ಅರಣ್ಯ ಅಧಿಕಾರಿ ನಿರ್ಮಲಾ ಅವರಿಗೆ ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಮುರಳಿಧರ, ಮಾರ್ಗದರ್ಶಕ ಮಂಜುನಾಥ ಗುಡ್ಲಾನೂರ, ದಂತ ವೈದ್ಯ ಶಿವಕುಮಾರ ಮಾಲಿಪಾಟೀಲ, ವೀರೇಶ ಅಂಗಡಿ, ಬಸನಗೌಡ ಹೊಸಹಳ್ಳಿ, ಮಂಜುನಾಥ ಡಿ, ಚಂದ್ರಶೇಖರ, ಹೆಚ್. ಭಾಷಾ,ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಉಪವಲಯ ಅರಣ್ಯ ಅಧಿಕಾರಿ ಉಮೇಶ್ವರ್, ಅರಣ್ಯಪಾಲಕ ಮಂಜುನಾಥ ನರೇರ, ಶಿವಕುಮಾರ ವಾಲಿ, ಶಿವಾನಂದ ತಳವಾರ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಮಾಜಿ ಸಚಿವ ಶ್ರೀರಂಗದೇವರಾಯಲು ಜಯಂತಿ ಆಚರಣೆ ನೀರಾವರಿ, ಶಿಕ್ಷಣ, ವಸತಿ ಮತ್ತು ಮೂಲಸೌಕರ್ಯಕ್ಕೆ ಶ್ರೀರಂಗದೇವರಾಯಲು ಕೊಡುಗೆ ಅಪಾರ *ರಾಜಾ ಶ್ರೀರಂಗದೇವರಾಯಲು ಪ್ರತಿಷ್ಠಾನಕ್ಕೆ ಪ್ರತಿಯೊಬ್ಬರ ಸಹಕಾರ ಇರುತ್ತದೆ *ಶಾಸಕ ಗಾಲಿ ಜನಾರ್ದನರೆಡ್ಡಿಯವರಿಂದ ಶ್ರೀರಂಗದೇವರಾಯಲು ಸರ್ಕಲ್ ಅಭಿವೃದ್ಧಿ ಭರವಸೆ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಐದು ಭಾರಿ ಶಾಸಕರಾಗಿ ಸಚಿವರಾಗಿದ್ದ ಸರಳ, ಸಜ್ಜನರಾಜಕಾರಣಿ ರಾಜಾ ಶ್ರೀರಂಗದೇವರಾಯಲು ಅವರು ದೂರದೃಷ್ಠಿಯಿಂದ ಗಂಗಾವತಿ ಕ್ಷೇತ್ರದಲ್ಲಿ ನೀರಾವರಿ, ಶಿಕ್ಷಣ,ವಸತಿ ಸೇರಿ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಮಾಡಿದ್ದರು ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ತಾಲೂಕಿನ ಆನೆಗೊಂದಿಯ ಶ್ರೀರಂಗದೇವರಾಯಲು ಸ್ಮಾರಕ ಸ್ಥಳದಲ್ಲಿ ಅವರ ಅಭಿಮಾನಿಗಳು ಹಾಗೂ ಕುಟುಂಬದವರು ಆಯೋಜಿಸಿದ್ದ ರಾಜಾ ಶ್ರೀರಂಗದೇವರಾಯಲು ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಂದಿನ ದಿನಗಳಲ್ಲಿ ರಾಜಾ ಶ್ರೀರಂಗದೇವರಾಯಲು ಅವರ ಹೆಸರಿನಲ್ಲಿ ರಚಿಸುವ ಪ್ರತಿಷ್ಠಾನಕ್ಕೆ ತಾವು ಸಂಪೂರ್ಣ ಸಹಕಾರ ನೀಡುವ ಜತೆಗೆ ಪ್ರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.ಹಂಪಿಯAತೆ ಆನೆಗೊಂದಿಯಲ್ಲೂ ಉತ್ಸವ ನಡೆದು ಇಲ್ಲಿಯ ಇತಿಹಾಸ, ಸ್ಮಾರಕಗಳ ಕುರಿತು ಇತರೆ ಭಾಗದ ಜನರಿಗೆ ಮನವರಿಕೆಯಾಗುವ ಕಾರ್ಯವಾಗಬೇಕೆಂದು ಶ್ರೀರಂಗದೇವರಾಯಲು ಅನೇಕ ಸಲ ಸಲಹೆ ನೀಡಿದ್ದರೆಂದರು.
ಜಿ.ಪಂ.ಮಾಜಿ ಸದಸ್ಯ ಎಚ್.ಎಂ.ಸಿದ್ದರಾಮಸ್ವಾಮಿ ಮಾತನಾಡಿ, ನನಗೆ ರಾಜಕೀಯ ಪಟ್ಟುಗಳನ್ನು ಜನರ ಸೇವೆಯ ಕುರಿತು ರಾಜಕೀಯ ಗುರುವಾಗಿ ಶ್ರೀರಂಗದೇವರಾಯಲು ಇದ್ದರು, ಅವರಂತೆ ನಾನು ಜನಸೇವೆ ಮಾಡಲು ಆರಂಭಿಸಿ ಆನೆಗೊಂದಿ ವ್ಯಾಪ್ತಿಚಿiÀÄ ಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಯಕ ಮಾಡಿದೆ ಎಂದರು.
ನ್ಯಾಯವಾದಿ ಎಚ್.ಸಿ.ಯಾದವ ಮಾತನಾಡಿ, ಜನಪರ ಕಾಳಜಿಯುಳ್ಳ ನಾಯಕ ಶ್ರೀರಂಗದೇವರಾಯಲು ಅವರಿಗೆ ನಾನು ರಾಜವಂಶಸ್ಥ ಎನ್ನುವ ಹಮ್ಮುಬಿಮ್ಮು ಇರಲಿಲ್ಲ, ಬಸ್ ನಿಲ್ದಾಣದ ಹತ್ತಿರ ಅವರ ಮನೆಗೆ ಗ್ರಾಮೀಣ ಭಾಗದ ಜನರು, ವಿದ್ಯಾರ್ಥಿಗಳು ಬಸ್ ಇಲ್ಲ ಎಂದು ಹೋದರೆ ತಾವೇ ಅವರೊಂದಿಗೆ ಬಸ್ ಡಿಪೋ ಅಥವಾ ಬಸ್ ನಿಲ್ದಾಣಕ್ಕೆ ಆಗಮಿಸಿ ಗ್ರಾಮಗಳಿಗೆ ಬಸ್ ಬಿಡುವ ಮೂಲಕ ಜನರ ನಿಜವಾದ ಸೇವಕರಾಗಿದ್ದರು ಎಂದರು.
ಬಾಪಿರೆಡ್ಡಿ ಕ್ಯಾಂಪ್ ಟಿ.ವಿ.ಸತ್ಯನಾರಾಯಣ ಮಾತನಾಡಿ, ಹಿಟ್ನಾಳ ಮತ್ತು ಆನೆಗೊಂದಿ ಭಾಗದ ರೈತರು ಎಡದಂAಡೆ ಕಾಲುವೆಯ 11ಎ ವಿತರಣಾ ಕಾಲುವೆ ಪ್ರದೇಶದಲ್ಲಿ 11 ತಿಂಗಳು ನೀರಾವರಿ ಸೌಲಭ್ಯ ಪಡೆಯುತ್ತಿರುವುದು ಶ್ರೀರಂಗದೇವರಾಯಲು ಅವರ ಶ್ರಮದಿಂದಾಗಿ, ಬಸ್ ನಿಲ್ದಾಣ, ಸರ್ಕ್ಯೂಟ್ ಹೌಸ್, ದೇವಘಾಟದಿಂದ ಗಂಗಾವತಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ, ಸರಕಾರಿ ಮಹಾವಿದ್ಯಾಲಯ, ಕೃಷಿ ವಿಜ್ಞಾನಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಬಸ್ ಡಿಪೋ, ಒಳಚರಂಡಿ ಯೋಜನೆ ಅನುಷ್ಠಾನ ಮತ್ತು ಕೆರೆ ತುಂಬಿಸುವ ಯೋಜನೆ ಶ್ರೀರಂಗದೇವರಾಲು ಕಾಲದಲ್ಲಿ ಅನುಷ್ಠಾನವಾಗಿವೆ ಎಂದರು.
ರಾಜಾ ನರಸಿಂಹದೇವರಾಯಲು, ಎಚ್.ಹನುಮಂತಯ್ಯ, ಡಾ.ವಿ.ಎಸ್.ನ.ರಾಯಲು, ವಿಶ್ವನಾಥರಾಜು, ಕಡೆಬಾಗಿಲು ಪ್ರಸಾದ, ಸಾಣಾಪೂರ ವೆಂಕಟನಾರಾಯಣ, ಪತ್ರಕರ್ತ ಕೆ.ಮಲ್ಲಿಕಾರ್ಜುನ ಸಾಣಾಪೂರ ಮಾತನಾಡಿದರು.
ಕುಮಾರಿ ಬಿಂದು ಆನೆಗೊಂದಿಯವರು ಭರತ ನಾಟ್ಯದ ಮೂಲಕ ರಾಜಾ ಶ್ರೀರಂಗದೇವರಾಯಲು ಅವರು ಜಯಂತೋತ್ಸವಕ್ಕೆ ಎಲ್ಲರನ್ನು ಸ್ವಾಗತಿಸಿದ್ದು ಆಕರ್ಷಕವಾಗಿತ್ತು.
ಕಾರ್ಯಕ್ರಮದಲ್ಲಿ ಆದಿಶಕ್ತಿ ದೇವಾಲಯದ ಪೂಜ್ಯ ಬ್ರಹ್ಮಯ್ಯಸ್ವಾಮಿ, ಲಲಿತಾರಾಣಿ ಶ್ರೀರಂಗದೇವರಾಯಲು, ಕುಪ್ಪರಾಜು, ಕೃಷ್ಣದೇವರಾಯಲು,ಚಿತ್ರನಟ ವಿಷ್ಣುಜೋಶಿ ಆದಾಪೂರ,ನರಸಿಂಹಲು ಸಾಣಾಪೂರ, ಕೆ.ತಿರುಕಪ್ಪ, ಬಾಳೆಕಾಯಿ ತಿಮ್ಮಪ್ಪ, ಯುವರಾಜ, ಯೇಸಣ್ಣ, ಭತ್ತದ ಚಂದ್ರಶೇಖರ, ಪ್ರದೀಪ್, ಶಿವಚಿiÀÄ್ಯ, ಎ.ನಾಗಪ್ಪ, ಅಂಜನಾದೇವಿ, ಮೆಟ್ರಿ ಗುರಪ್ಪ, ರಾಮಕೃಷ್ಣಯ್ಯ ಇಲ್ಲೂರು,ರಾಮಕೃಷ್ಣಗೌಡ,ಎಂ.ವೆAಕಟೇಶ,ಬಾಲಯ್ಯ,ನಾಗಮುನಿರೆಡ್ಡಿ,ಲಕ್ಷಿö್ಮನಾರಾಯಣ,ರಜನೀಕಾAತ,ಅAಬಿಗೇರ ಅಂಜೀನಪ್ಪ ಸೇರಿ ಅನೇಕರಿದ್ದರು.
ಬಾಕ್ಸ್
ಶ್ರೀರಂಗದೇವರಾಯಲು ಅವರು ಕುಟುಂಬಕ್ಕಿAತಲೂ ಜನಸಾಮಾನ್ಯರ ಜತೆಗೆ ಅತೀ ಹೆಚ್ಚು ಕಾಲ ಕಲೇಯುತ್ತಿದ್ದರು. ರೈತರು, ಕೂಲಿಕಾರ್ಮಿಕರು, ಮಹಿಳೆಯರಿಗಾಗಿ ಅವರ ಅವಧಿಯಲ್ಲಿ ಹೆಚ್ಚು ಕೆಲಸಗಳಾಗಿದ್ದು ಜನ ಸಾಮಾನ್ಯರೇ ಸೇರಿಕೊಂಡು ರಾಜಾ ಶ್ರೀರಂಗದೇವರಾಯಲು ಪ್ರತಿಷ್ಠಾನ ರಚನೆ ಮಾಡಿ ಹಲವಾರು ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿರುವುದು ಶ್ಲಾಘನೀಯವಾಗಿದೆ. ಈಗಾಗಲೇ ಆನೆಗೊಂದಿ ಕಡೆಬಾಗಿಲು ವೃತ್ತಕ್ಕೆ ರಾಜಾ ಶ್ರೀರಂಗದೇವರಾಯಲು ವೃತ್ತ ಎಂದು ನಾಮಕರಣ ಮಾಡಲಾಗಿದ್ದು ಶಾಸಕರಾದ ಗಾಲಿ ಜನಾರ್ದನರೆಡ್ಡಿಯವರು ಸರ್ಕಲ್ ಅಭಿವೃದ್ಧಿ ಕುರಿತು ನನ್ನ ಹತ್ತಿರ ಪ್ರಸ್ತಾಪ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯಡಿ ವಾಹನಗಳ ಸಂಚಾರಕ್ಕೆ ತೊಂದರೆಯಾಗದAತೆ ರಾಜಾ ಶ್ರೀರಂಗದೇವರಾಯಲು ಸರ್ಕಲ್ ನಿರ್ಮಾಣ ಮಾಡುವ ಯೋಜನೆ ಇದೆ.
-ಲಲಿತಾರಾಣಿ ಶ್ರೀರಂಗದೇವರಾಯಲು ರಾಜವಂಶಸ್ಥರು.
ಬಾಕ್ಸ್
ರಾಜಾ ಶ್ರೀರಂಗದೇವರಾಲು ಜಯಂತಿಯಲ್ಲಿ ವಿಶ್ವ ಮಹಿಳಾ ದಿನದ ನಿಮಿತ್ತ ಪರಿಸರ ಪ್ರೇಮಿ ಹಾಗೂ ನರ್ಸರಿಯ ಮೂಲಕ ಪರಿಸರ ಜಾಗೃತಿ ಮೂಡಿಸುವ ವಡ್ಡರಹಟ್ಟಿ ಗುಡ್ಡದ ಕ್ಯಾಂಪಿನ ಹುಲಿಗೆಮ್ಮ ಇವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ ನಗದು ಬಹುಮಾನ ನೀಡಲಾಯಿತು.