Breaking News
ಅಕ್ರಮ ಇಟ್ಮಂಗಿ ಭಟ್ಟಿಗಳಿಗೆ ಅಕ್ರಮ ಮಣ್ಣು ಸಾಗಾಣಿಕೆ ತಡೆಯುವಂತೆ ಆಗ್ರಹ

*ಅಕ್ರಮವಾಗಿ ಮಣ್ಣು ಸಾಗಾಟ :ಜನಪ್ರತಿನಿಧಿಗಳ ಹಿಂಬಾಲಕರು, ಅಧಿಕಾರಿಗಳು ಶಾಮೀಲು

*ಅಕ್ರಮದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದವರನ್ನು ಟಾರ್ಗೆಟ್ ಮಾಡುತ್ತಿರುವ ಡಿವೈಎಸ್ಪಿ ಆಮಾನತ್ತಿಗೆ ಆಗ್ರಹ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಇಟ್ಟಂಗಿ ಭಟ್ಟಿಗಳನ್ನು ನಡೆಸಲಾಗುತ್ತಿದ್ದು ಈ ಇಟ್ಟಂಗಿ ಭಟ್ಟಿ ಗಳಿಗೆ ಅಕ್ರಮವಾಗಿ ತುಂಗಭದ್ರಾ ಡ್ಯಾಮಿನ ಹಿಂಭಾಗದಿಂದ ಫಲವತ್ತಾದ ಮಣ್ಣನ್ನು ತಂದು ಉಪಯೋಗಿಸಲಾಗುತ್ತಿದೆ. ವೆಂಕಟಗಿರಿ ಭಾಗದ ಪರಿಸರ ವ್ಯಾಪಕವಾಗಿ ಹಾನಿ ಮತ್ತು ರಾಜ್ಯ ಸರ್ಕಾರಕ್ಕೆ ರಾಜಧನ ನಷ್ಟವಾಗುತ್ತಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಹೋರಾಟಗಾರರನ್ನೇ ಡಿ ಎಸ್ ಪಿ ಅವರು ಟಾರ್ಗೆಟ್ ಮಾಡುತ್ತಿದ್ದು ಅವರನ್ನು ಅಮಾನತು ಮಾಡುವಂತೆ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಅಜಯ್‌ಕುಮಾರ ಚಲುವಾದಿ ಒತ್ತಾಯಿಸಿದ್ದಾರೆ.

ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ 15-20 ವರ್ಷಗಳಿಂದ ಕೊಪ್ಪಳ ತಾಲೂಕಿನ ತುಂಗಭದ್ರಾ ಜಲಾಶಯದ ಹಿಂಭಾಗದಲ್ಲಿ ಅಕ್ರಮವಾಗಿ ಮಣ್ಣು ಅಗೆದು ಗಂಗಾವತಿ ತಾಲೂಕಿನ ವೆಂಕಟಗಿರಿ ಸಮೀಪ ಇರುವ ಇಟ್ಟಿಗೆ ಭಟ್ಟಿಗಳಿಗೆ ಸಾಗಾಟ ಮಾಡಲಾಗುತ್ತಿದೆ. ರಾತ್ರೋ ರಾತ್ರಿ ಹತ್ತಾರು ಟಿಪ್ಪರುಗಳು, ಲಾರಿಗಳು ಪ್ರತಿ ದಿನಾಲೂ ಮಣ್ಣು ಸಾಗಾಟ ಮಾಡುತ್ತಿದ್ದು, ಡ್ಯಾಂ ಹಿಂಭಾಗದಲ್ಲಿ ದೊರೆಯುವ ಫಲವತ್ತತ್ತೆಯಿಂದ ಕೂಡಿದ ಮಣ್ಣನ್ನು ರೈತರ ಜಮೀನುಗಳಿಗೆ ಹಾಕುವುದು ಬಿಟ್ಟು, ದುಬಾರಿ ಹಣಕ್ಕೆ ಕೆಲ ಪ್ರಭಾವಿಗಳು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಈ ದಂಧೆವು ಕೆಲ ಹಲವು ವರ್ಷಗಳಿಂದ ನಡೆಯುತ್ತಿದೆ. ಮಾರ್ಚ್ 04,2026 ರಂದು ಸಂಘಟನೆಯ ಕಾರ್ಯಕರ್ತರು ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿಯ ಮಾಹಿತಿಯನ್ನು 112 ಗೆ ಕರೆ ಮಾಡಿ, ಮಾಹಿತಿ ನೀಡಲಾಗಿತ್ತು. ಆಗ ಲಾರಿ ಮಾಲೀಕರು ಸಂಘಟನೆಯ ಕಾರ್ಯಕರ್ತರಿಗೆ ಹಣ ಆಮಿಷವನ್ನು ನೀಡಿದ್ದಾರೆ. ಕಾರ್ಯಕರ್ತರು ಹಣದ ಆಮಿಷಕ್ಕೆ ಮಣಿಯದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಷ್ಟೇಲ್ಲ ಆದರೂ ಗಂಗಾವತಿ ಡಿವೈಎಸ್ಪಿಯವರು ಟಿಪ್ಪರು ಲಾರಿಗಳನ್ನು ಹಿಡಿಯಲು ನಿಮಗೆ ಏನು ಅಧಿಕಾರವಿದೆ. ನಿಮ್ಮ ಮೇಲೆಯೇ ರಾಬರಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಕಾರ್ಯಕರ್ತರಿಗೆ ಧಮ್ಕಿ ಹಾಕಿರುವುದು ಅತ್ಯಂತ ಖಂಡನೀಯವಾಗಿದೆ. ಈ ರೀತಿಯಾಗಿ ಅಕ್ರಮ ಮಣ್ಣು ಸಾಗಾಟ ಮಾಡುವುದನ್ನು ತಡೆಯಲು ಮುಂದಾಗಿರುವ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿರುವುದು ಅಧಿಕಾರಿಗಳ ನಡೆಯ ಮೇಲೆ ಅನುಮಾನ ಉಂಟಾಗುತ್ತಿದೆ. ಕೂಡಲೇ ಎಸ್ಪಿಯವರು,ಐಜಿಯವತು ಅಕ್ರಮವಾಗಿ ಡ್ಯಾಂನ ಮಣ್ಣನ್ನು ಅಕ್ರಮವಾಗಿ ಇಟ್ಡಂಗಿ ಭಟ್ಟಿಗಳಿಗೆ ಸಾಗಾಟ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಹಾಗೂ ಹೋರಾಟಗಾರರಿಗೆ

ಧಮ್ಕಿ ಹಾಕಿರುವ ಡಿವೈಎಸ್ಪಿ ಅವರನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ

ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಯಮನೂರ ಮಾದಿಗ,ಪ್ರಮುಖರಾದ ಮರ್ದಾನ ಅಲಿ, ಉಮೇಶ ನಾಯಕ, ಶಿವಕುಮಾರ ಹಾಗೂ ಇತರರಿದ್ದರು.