ಭತ್ತದ ಚೀಲಗಳನ್ನು ಸಾಗಿಸುತ್ತಿದ್ದ ಟ್ರಾಕ್ಟರ್ ಶ್ರೀರಾಮನಗರದ ಹತ್ತಿರ ಪಲ್ಟಿ!

*ಚಾಲಕನಿಗೆ ತೀವ್ರ ಗಾಯ,ಎರಡು ತಾಸಿಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್.
*ಮಣ್ಣೂರು-ಸೂಗೂರಿನಿಂದ ಕಾರಟಗಿ ರೈಸ್ ಮಿಲ್ ಗೆ ಭತ್ತ ಸಾಗಾಣಿಕೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: 15 ಟನ್ ಭತ್ತದ ಚೀಲಗಳನ್ನು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ ಯಾಗಿ ಬಿದ್ದು ಚಾಲಕನಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಶ್ರೀರಾಮನಗರದ ಹತ್ತಿರ ಶಿವರಾಮಕೃಷ್ಣ ಪೆಟ್ರೋಲ್ ಬ್ಯಾಂಕ್ ಹತ್ತಿರ ಬುಧವಾರ ಮಧ್ಯಾನ್ಹ ಜರುಗಿದೆ.
ಕಂಪ್ಲಿ ತಾಲೂಕಿನ ಮಣ್ಣೂರ ಸೂಗೂರಿನಿಂದ ಕಾರಟಗಿ ರೈಸ್ ಮಿಲ್ ಟ್ರಾಕ್ಟರ್ ನಲ್ಲಿ 15 ಟನ್ ಭತ್ತದ ಚೀಲಗಳನ್ನು ಸಾಗಿಸುವ ಸಂದರ್ಭದಲ್ಲಿ ಶ್ರೀರಾಮನಗರದ ಹತ್ತಿರ ಗಂಗಾವತಿ ರಾಯಚೂರು ಜಿಲ್ಲಾ ಹೆದ್ದಾರಿಯಲ್ಲಿ ಶಿವರಾಮ ಕೃಷ್ಣ ಪೆಟ್ರೋಲ್ ಬಂಕ್ ಹತ್ತಿರ ಟ್ರಾಲಿಯ ಲಿಂಕ್ ಕಟ್ ಆಗಿ ಏಕಾಏಕಿ ಟ್ರಾಲಿ ಪಲ್ಟಿಯಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಭತ್ತದ ಚೀಲಗಳು ರಸ್ತೆಯಲ್ಲಿ ಚಲ್ಲಾ ಪಿಲ್ಲಿಯಾಗಿದ್ದು ಈ ಸಂದರ್ಭದಲ್ಲಿ ವಾಹನಗಳ ಸಂಚಾರ ಇರದೇ ಇದ್ದ ಕಾರಣ ಭಾರಿ ಪ್ರಮಾಣದ ಅನಾವುತ ತಪ್ಪಿದೆ.
ಅಪಘಾತ ಜರುಗಿ ಎರಡು ತಾಸಿಗೂ ಸಮಯ ಕಳೆದರೂ ಮರಳಿ ಹತ್ತಿರ ಇರುವ ಟೋಲ್ ಕೇಂದ್ರದ ಸಿಬ್ಬಂದಿ ಹಾಗೂ ವೈದ್ಯಕೀಯ ನೆರವು ನೀಡುವ ವಾಹನ ಬಾರದೇ ಕಂಡು ಬಂತು.
ಟ್ರಾಕ್ಟರ್ ಚಾಲಕ ವಿಶ್ವನಾಥ (32) ಮುಖ ಹಾಗೂ ಕೈಗಳಿಗೆ ಮತ್ತು ಬೆನ್ನಿಗೆ ತೀವ್ರ ಗಾಯಗಳಾಗಿದ್ದವು.
ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

