Breaking News
ಶ್ರೀರಾಘವೇಂದ್ರಸ್ವಾಮಿಗಳನ್ನು ಸ್ಮರಿಸಿದರೆ ಕಷ್ಟಗಳು ಪರಿಹಾರ: ವಿಜಯೀಂದ್ರ ಆಚಾರ್ಯಶ್ರೀ

ಶ್ರೀ ರಾಘವೇಂದ್ರ ಸ್ವಾಮಿಗಳವರ ವರ್ಧಂತೋತ್ಸವ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ಕಲಿಯುಗದ ಕಾಮಧೇನು ಭಕ್ತ ರಕ್ಷಕರಾದ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳನ್ನು ಸ್ಮರಣೆ ಮಾತ್ರದಿಂದ ಸಂಕಷ್ಟಗಳು ದೂರವಾಗುತ್ತವೆ ಎಂದು ಮೈಸೂರಿನ ಡಾ. ಬೆ.ನಾ..ವಿಜಯೀಂದ್ರ ಆಚಾರ್ಯ ಹೇಳಿದರು.

ಅವರು ನಗರದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಧ್ವ ಸಂಘದ ವತಿಯಿಂದ ಏರ್ಪಡಿಸಿದ್ದ ಶ್ರೀರಾಘವೇಂದ್ರಸ್ವಾಮಿಗಳ 431ನೇ ವರ್ಧಂತಿ ಮಹೋತ್ಸವ ಹಾಗು ಶ್ರೀ ಮಧ್ ಭಾಗವತ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಮಹಿಮೆ ಪ್ರವಚನದ ಸಮಾರೋಪದಲ್ಲಿ ಮಾತನಾಡಿದರು. ರಾಘವೇಂದ್ರಸ್ವಾಮಿಗಳು ಇಂದಿಗೆ ಜನ್ಮ ತಾಳಿ 431 ವರ್ಷಗಳು ಕಳೆದವು. ಅವರ ಪವಾಡಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು. ಗುರು ಸಾರ್ವಭೌಮರು ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎನಿಸಿಕೊಂಡಿದ್ದಾರೆ.ಭಕ್ತರ ಆಶೋತ್ತರಗಳನ್ನು ಈಡೇರಿಸುವ ಮಹಾಮಹಿಮರಾಗಿದ್ದಾರೆ. ಮಂತ್ರಾಲಕ್ಕೆ ಹೋಗಿ ರಾಘವೇಂದ್ರರನ್ನು ಯಾರು ಸ್ಮರಣೆ ಮಾಡುತ್ತಾರೆ ಅಂತವರಿಗೆ ಪರಿಹಾರ, ಕಷ್ಟ ನಾಶ, ಹಾಗು ಆರ್ಥಿಕವಾಗಿ ಪ್ರಬಲರಾಗಲು ಆಶೀರ್ವಾದ ಮಾಡುವ ಶಕ್ತಿ ಶ್ರೀಗಳಲ್ಲಿದೆ ಎಂದರು.

ಗಂಗಾವತಿಯಲ್ಲಿರುವ ಭಕ್ತರು ಧಾರ್ಮಿಕತೆ ಹೊಂದಿದವರಾಗಿದ್ದಾರೆ. ಗಂಗಾವತಿಯಲ್ಲಿರುವ ರಾಘವೇಂದ್ರಸ್ವಾಮಿಗಳ ಮಠ ಎರಡನೇ ಮಂತ್ರಾಲಯ ಎನಿಸಿಕೊಂಡಿದೆ. ಇದಕ್ಕೆ ಸಾಕ್ಷಿ ಇಲ್ಲಿ ನೆರೆದಿರುವ ಭಕ್ತರೆ ಸಾಕ್ಷಿಯಾಗಿದೆ.

ಕಳೆದ ಒಂದು ವಾರದಿಂದ ಶ್ರೀಮದ್ ಭಾಗವತ ಮತ್ತು ಶ್ರೀರಾಘವೇಂದ್ರಸ್ವಾಮಿಗಳವರ ಮಹಿಮೆಯನ್ನು ಕೇಳಿದ್ದೀರಿ. ಇಲ್ಲಿ ಕೇಳಿದ ಮಹಿಮೆಯನ್ನು ಅರ್ಥೈಸಿಕೊಂಡು ಮಕ್ಕಳಿಗೆ, ಕುಟಂಬಕ್ಕೆ ಸಂಸ್ಕಾರ ಜೊತೆಗೆ ಸಂಸ್ಕ್ರತಿ ತಿಳಿ ಹೇಳ ಬೇಕೆಂದರು.

ಇದೇ ಸಂದರ್ಭದಲ್ಲಿ ಮಧ್ವ ಸಂಘ ಹಾಗು ಶ್ರೀ ರಾಘವೇಂದ್ರಸ್ವಾಮಿಗಳ ಮಠದಿಂದ ಡಾ. ಬೆ.ನಾ.ವಿಜಯೀಂದ್ರಚಾರ ಅವರನ್ನು ಮಧ್ವ ಸಂಘದಿಂದ ಗೌರವಿಸಲಾಯಿತು.

ವರ್ಧಂತೋತ್ಸವದ ಅಂಗವಾಗಿ ಶ್ರೀರಾಘವೇಂದ್ರಸ್ವಾಮಿಗಳ ವೃಂದಾವನಕ್ಕೆ ವೆಂಕಟೇಶ್ವರ ಸ್ವಾಮಿಯ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಪಂಚಮೃತಭಿಷೇಕ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ಧಾರ್ಮೀಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಬ್ರಾಹ್ಮಣ ಸಮಾಜದ ಮುಖಂಡ ನವಲಿ ಗುರುರಾಜ್ ರಾವ್, ಮಧ್ವ ಸಂಘದ ಅದ್ಯಕ್ಷ ವಾಮನರಾವ್ ಮುಖ್ತೆದಾರ, ಮಠದ ವ್ಯವಸ್ಥಾಪಕ ಸಾಮಾವೇಧ ಗುರುರಾಜ ಆಚಾರ, ಪ್ರಲ್ಹಾದರಾವ್ ಹೇರೂರು, ನಾಗರಾಜ್ ಚಾರ ಸರ್ ಜೋಷಿ, ಗುರುರಾಜ ಅಯೋದ್ಯ, ನ್ಯಾಯವಾದಿ ಕೃಷ್ಣ ದೇಶಪಾಂಡೆ, ರಾಮಮೂರ್ತಿ ನವಲಿ, ಲಕ್ಷ್ಮಣರಾವ್ ಬೆಳ್ಳುಬ್ಬಿ, ಸುಧೀರ್ ನವಲಿ, ರಾಮಕೃಷ್ಣ ಜಾಹಗಿರದಾರ, ಉದಯ ಜಾಹಗೀರದಾರ

ಅರ್ಚಕ ಭೀಮಸೇನಾಚಾರ್ಯ, ಶಿಕ್ಷಕ ವೇಣುಗೋಪಾಲ್ , ಶ್ರೀನಿವಾಸ ದಾಸನಾಳ, ವಿಜಯೀಂದ್ರಚಾರ ಜೋಷಿ ಆದಾಪುರ,ಪತ್ರಕರ್ತ ರಾಮಮೂರ್ತಿ ನವಲಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.