ತಂಗಡಗಿ,ರಾಯರೆಡ್ಡಿ ಮತ್ತು ಹಿಟ್ನಾಳ ಕುಟುಂಬದವರು ಅನ್ಸಾರಿಗೆ ಬಗ್ಗೆ ಸಿಎಂಗೆ ಸುಳ್ಳು ಹೇಳ್ತಾರೆ

*ಅನ್ಸಾರಿಯವರ ಅಭಿಮಾನಿಗಳು ಹೆದರದಂತೆ ಅನ್ಸಾರಿ ಧೈರ್ಯ
*ಬಿಎಲ್‌ಎ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ತಂಗಡಗಿ ಯಿಂದ ನೇಮಕ
*ಹುಸಿಯಾದ ಎಂಪಿ ಎಲೆಕ್ಷನ್ ಭರವಸೆ, 224 ಕ್ಷೇತ್ರಗಳಲ್ಲಿ ಅನ್ಸಾರಿಯವರ ಮಾತಿಗೆ ಬೆಲೆ ಇದೆ
*ಸೋಶೀಯಲ್ ಮೀಡಿಯಾದಲ್ಲಿ ಪುನಹ ವೈರಲ್ ಆಯ್ತು ಅನ್ಸಾರಿ ಆಪ್ತನ ಪತ್ರ
ಕಿಷ್ಕಿಂಧವಾಣಿ ವಿಶೇಷ
ಗಂಗಾವತಿ : ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಎಲ್‌ಎ ಆಗಿ ಸಂಸದ ಕೆ.ರಾಜಶೇಖರ ಹಿಟ್ನಾಳ ನೇಮಕಾತಿಯ ನಂತರ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಸೋಶೀಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದು ಅನ್ಸಾರಿಯವರ ಆಪ್ತ ಪುನೀತ್ ಎನ್ನುವ ವ್ಯಕ್ತಿ ಅಭಿಮಾನಿಗಳ ವಿಷಯವನ್ನು ಇಕ್ಬಾಲ್ ಅನ್ಸಾರಿಯವರಿಗೆ ತಿಳಿಸಿ ಅವರಿಂದ ಬಂದ ಸಂದೇಶವನ್ನು ಸೋಶಿಯಲ್ ಮೀಡಿಯಾದ ಮೂಲಕ ಅನ್ಸಾರಿ ಅಭಿಮಾನಿಗಳಿಗೆ ಮನವರಿಕೆ ಮಾಡಿದ್ದಾರೆ.
ಬಿಎಲ್‌ಎ ನೇಮಕಾತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಹಾಗೂ ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮಾಡಿಸಿದ್ದಾರೆ. ಸಣ್ಣ ಪುಟ್ಟ ಹುದ್ದೆಗಳಿಗೆ ಅನ್ಸಾರಿಯವರು ತಲೆ ಕೆಡಿಸಿಕೊಳ್ಳುವುದಿಲ್ಲ, ಲೋಕಸಭಾ ಚುನಾವಣೆಯಲ್ಲಿ ಕೆ.ರಾಜಶೇಖರ ಹಿಟ್ನಾಳ ಪರವಾಗಿ ಅನ್ಸಾರಿಯವರು ಕೆಲಸ ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಂಗಾವತಿಯಲ್ಲಿ ಅನ್ಸಾರಿಯವರ ಮನೆಗೆ ಆಗಮಿಸಿ ಗಂಗಾವತಿ ಕೆಲಸ ಕಾರ್ಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಗಂಗಾವತಿ ನಿಂದೇ ಯಾರು ಮಧ್ಯೆ ಬರುವುದಿಲ್ಲ ಎಂದು ಭರವಸೆ ಕೊಟ್ಟಿದ್ದರು. ಆದರೆ ಈಗ ಸಚಿವ ಶಿವರಾಜ್ ತಂಗಡಗಿ, ಬಸವರಾಜ ರಾಯರೆಡ್ಡಿ ಹಾಗೂ ಹಿಟ್ನಾಳ ಕುಟುಂಬದವರು ಮುಖ್ಯಮಂತ್ರಿಗಳಿಗೆ ಅನ್ಸಾರಿಯವರ ಬಗ್ಗೆ ಸುಳ್ಳು ಹೇಳಿದ್ದಾರೆ.
ತಂಗಡಗಿ, ರಾಯರೆಡ್ಡಿ ಹಾಗೂ ಹಿಟ್ನಾಳ ಕುಟುಂಬದವರಿಗೆ ಗಂಗಾವತಿ ಏನು ಸಂಬಂಧವಿಲ್ಲದಿದ್ದರೂ ಅನ್ಸಾರಿ ಸೋತಿದ್ದಾರೆಂದು ಇವರೆಲ್ಲಾ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕೆಪಿಸಿಸಿ ಅನ್ಸಾರಿಯವರ ಕುರಿತು ಸುಳ್ಳು ಮಾತು ಕೇಳಿ ಬಿಎಲ್‌ಎ ಬದಲಾಯಿಸಿದ್ದು ನಮ್ಮ ಅನ್ಸಾರಿ ಸಾಹೇಬರು 224 ಕ್ಷೇತ್ರಗಳಲ್ಲಿ ಹೋಗಿ ಮತದಾರರಿಗೆ ಮನವರಿಕೆ ಮಾಡುವ ಶಕ್ತಿ ಹೊಂದಿದ್ದಾರೆ. ಅಭಿಮಾನಿಗಳು ನಿರೀಕ್ಷೆಯಲ್ಲಿರಿ.
ಗಂಗಾವತಿಯಲ್ಲಿ ಜನಪರ ಕೆಲಸ ಮಾಡಲು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದರೆ ಇವರಿಗೇನು ತೊಂದರೆಯಾಗುತ್ತದೆ. ಶೀಘ್ರವೇ ಅನ್ಸಾರಿಯವರು ಮನೆಮನೆ ಆಗಮಿಸಿ ಸಂಘಟನೆ ಮಾಡಲಿದ್ದಾರೆ ಎಂದು ಪುನೀತ್ ಸ್ಟೇಟಸ್ ಹಾಕಿ ಅನ್ಸಾರಿ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.


