Breaking News
ಸಣ್ಣಪುಟ್ಟ ವ್ಯಾಪಾರಕ್ಕೆ ಟ್ರೇಡ್ ಲೈಸೆನ್ಸ್ಗೆ ಆಗ್ರಹಿಸಿ ಸಾಣಾಪೂರ ಗ್ರಾ.ಪಂ.ಎದುರು ಗ್ರಾಮಸ್ಥರ ಪ್ರತಿಭಟನೆ

https://youtu.be/iVl7XmdYS5U?si=oQW6r1y1DWEjUNvf

https://youtu.be/iVl7XmdYS5U?si=oQW6r1y1DWEjUNvf

 

*ಚಹಾದಂಗಡಿ, ಸೇರಿ ವ್ಯಾಪಾರ ಮತ್ತು ವಿದ್ಯುತ್ ಸಂಪರ್ಕಕ್ಕೆ ಪ್ರಾಧಿಕಾರದ ಎನ್‌ಓಸಿ ಬೇಡ

*ಸಾಣಾಪೂರ ಭಾಗದಲ್ಲಿಲ್ಲ ಪುರಾತತ್ವ ಇಲಾಖೆಯ ಸ್ಮಾರಕಗಳು ಸ್ಥಳೀಯರ ಪ್ರತಿಪಾದನೆ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ಸಾಣಾಪೂರದಲ್ಲಿ ಸಣ್ಣಪುಟ್ಟ ವ್ಯಾಪಾರ ವಹಿವಾಟು ಮಾಡಲು ಗ್ರಾ.ಪಂ.ಟ್ರೇಡ್ ಲೈಸೆನ್ ಕೊಡದಂತೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ನಿಯಮವನ್ನು ರೂಪಿಸಿದ್ದು ಇದರಿಂದ ಕೂಡಲೇ ಟ್ರೇಡ್ ಲೈಸೆನ್ಸ್ ಕೊಡಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಸಾಣಾಪೂರ ಗ್ರಾಮಸ್ಥರು, ಮಹಿಳೆಯರು ಗ್ರಾ.ಪಂ.ಕಚೇರಿ ಎದುರು ಪ್ರತಿಭಟನೆ ನಡೆಸಿ ಪಿಡಿಓ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಸಾಣಾಪೂರ ಗ್ರಾಮದ ರಸ್ತೆಯ ಅಕ್ಕಪಕ್ಕದಲ್ಲಿರುವ ಮನೆಗಳಲ್ಲಿ ಚಹಾದಂಗಡಿ, ತಂಪುಪಾನೀಯ, ಕಿರಾಣಿ, ಎಳೇನೀರು,ಕಾರಕುಟ್ಟುವ ಮಿಷನ್ ಸೇರಿ ಸಣ್ಣಪುಟ್ಟ ವ್ಯಾಪಾರ ಮಾಡಲು ಗ್ರಾ.ಪಂ.ಹಾಗೂ ಜೆಸ್ಕಾಂ ಅಧಿಕಾರಿಗಳು ನೋಟೀಸ್ ಕೊಟ್ಟು ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಲಕ್ಷಾಂತ ರೂ.ಗಳ ದಂಡ ವಿಧಿಸಿ ನೋಟೀಸ್ ನೀಡುತ್ತಿದ್ದು ಮಾನಸೀಕ ಹಿಂಸೆಯಾಗಿದೆ. ಮನೆಯ ಮುಂದೆ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರಾಧಿಕಾರದ ಎನ್‌ಓಸಿ ಕಡ್ಡಾಯ ಎಂದು ಗ್ರಾ.ಪಂ. ಪಿಡಿಓ ಅವರು ನಿರ್ಮಾಣ ಕಾರ್ಯ ನಿಲ್ಲಿಸುತ್ತಿದ್ದಾರೆ. ಇದರಿಂದ ಬಹಳ ತೊಂದರೆಯಾಗಿದ್ದು ಕೂಡಲೇ ಗ್ರಾಮದ ಪ್ರತಿ ಕಾರ್ಯಕ್ಕೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಎನ್‌ಓಸಿ ಬೇಕೆನ್ನುವ ಗ್ರಾ.ಪಂ ಜೆಸ್ಕಾಂ, ಅರಣ್ಯ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ಸಾಣಾಪೂರ ಭಾಗದ ಜನರನ್ನು ಅವಮಾನಿಸುತ್ತಿದ್ದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಟ್ರೇಡ್ ಲೈಸೆನ್ಸ್ ಇಲ್ಲದೇ ಇನ್ಸೂರೆನ್ಸ್ ಕ್ಲೆöÊಮ್ ಕೂಡ ಆಗುತ್ತಿಲ್ಲ. ಇಲ್ಲಿಯ ಭೂಮಿ, ಮನೆ ಖರೀದಿಗೂ ಕ್ವಾರಿ ಬಿದ್ದಿದ್ದು ಸಾಣಾಪೂರ ಭಾಗದ ಅಭಿವೃದ್ಧಿ ಕುಂಠಿತವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು ಸಾಣಾಪೂರ ಜನಸಾಮಾನ್ಯರು ಸ್ವಾವಲಂಭಿಯಾಗಿ ಬದುಕಲು ಅವಕಾಶ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗ್ರಾ.ಪಂ. ಮಾಜಿ ಸದಸ್ಯರಾದ ಕೋಡಿ ನಾಗೇಶ, ಶೇರಖಾನ್ ಸೇರಿ ಗ್ರಾಮದ ಮಹಿಳೆಯರು, ರೈತರು ಕೂಲಿಕಾರರು ಪಾಲ್ಗೊಂಡಿದ್ದರು.

**

ಸಾಣಾಪೂರ ಗ್ರಾಮವನ್ನು ಅವ್ಶೆಜ್ಞಾನಿಕವಾಗಿ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರ್ಪಡೆ ಮಾಡಿದ್ದು ಇದರಿಂದ ಸಣ್ಣ ಪುಟ್ಟ ವ್ಯಾಪಾರ ವಹಿವಾಟು ಮಾಡಲು ಗ್ರಾ.ಪಂ.ಯಿಂದ ಟ್ರೇಡ್ ಲೈಸೆನ್ಸ್ ಪಡೆಯಲು ಪ್ರಾಧಿಕಾರದ ಎನ್‌ಓಸಿ ಪಡೆಯುವುದು ಕಡ್ಡಾಯವಾಗಿದೆ. ಗ್ರಾಮದಲ್ಲಿ ಶೇ.70ಕ್ಕಿಂತಲೂ ಹೆಚ್ಚು ಕ್ರಮಬದ್ದವಲ್ಲದ ಆಸ್ತಿ(11ಬಿ) ಇದ್ದು ಇದಕ್ಕೆ ಪ್ರಾಧಿಕಾರ ಎನ್‌ಓಸಿ ಕೊಡುವುಲ್ಲ. ಇದರಿಂದ ಗ್ರಾಮದ ಸಣ್ಣ ಪುಟ್ಟ ವ್ಯಾಪಾರಸ್ಥರು ಇನ್ಸೂರೆನ್ಸ್ ಕ್ಲೈಮ್ ಮಾಡಿಕೊಳ್ಳಲು ಆಗುತ್ತಿಲ್ಲ. ಚಹಾದಂಗಡಿ, ಪಂಚರ ಅಂಗಡಿ ಸೇರಿ ಇತರೆ ವ್ಯಾಪಾರ ಮಾಡಲು ಜೆಸ್ಕಾಂ ನವರು ಪ್ರಾಧಿಕಾರದ ಎನ್‌ಓಸಿ ಕೇಳುತ್ತಿದ್ದು ಕಳ್ಳತನದಲ್ಲಿ ಅಂಗಡಿ ಮುಂಗಟ್ಟುಗಳನ್ನು ನಡೆಸಿಕೊಳ್ಳಬೇಕಿದೆ. ಇದರಿಂದ ಜೆಸ್ಕಾಂನವರು ದಾಳಿ ಮಾಡಿ ಲಕ್ಷಾಂತರ ರೂ.ಗಳ ದಂಡ ಹಾಕುತ್ತಿದ್ದಾರೆ.ಜಿಲ್ಲಾಡಳಿತ ಕೂಡಲೇ ಸಮಸ್ಯೆ ಪರಿಹಾರ ಮಾಡಬೇಕು

-ಕೋಡಿ ನಾಗೇಶ ಗ್ರಾ.ಪಂ. ಮಾಜಿ ಸದಸ್ಯ.

ತುಂಗಭದ್ರಾ ಮಂಡಳಿ ಆಸ್ತಿ ಅತಿಕ್ರಮಣ: ಕಾನೂನು ಕ್ರಮದ ಎಚ್ಚರಿಕೆ: ಕಾರ್ಯದರ್ಶಿ ಓಆರ್.ವಿ. ರೆಡ್ಡ

*ಮೇ ಅಂತ್ಯಕ್ಕೆ 33 ಕ್ರಸ್ಟಗೇಟುಗಳ ಜೋಡಣೆ ಪೂರ್ಣ

ಕಿಷ್ಕಿಂಧವಾಣಿ ಸುದ್ದಿ

ಹೊಸಪೇಟೆ: ತುಂಗಭದ್ರಾ ಜಲಾಶಯದ ವ್ಯಾಪ್ತಿಗೆ ಒಳಪಡುವ ನೂರಾರು ಎಕರೆ ಪ್ರದೇಶವು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳ ಜಂಟಿ ಆಸ್ತಿಯಾಗಿದ್ದು, ಇಲ್ಲಿ ನಡೆಯುತ್ತಿರುವ ಯಾವುದೇ ಅನಧಿಕೃತ ಅತಿಕ್ರಮಣಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತುಂಗಭದ್ರಾ ಬೋರ್ಡ್ ಕಾರ್ಯದರ್ಶಿ ಓ.ಆರ್. ವಿ. ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ನಗರದ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

‘ಭಾರತೀಯ ಅಧಿಕೃತ ರಹಸ್ಯಗಳ ಕಾಯ್ದೆ 1923 ರ ಅನ್ವಯ ಜಲಾಶಯದ ಪ್ರದೇಶ, ಪವರ್ ಹೌಸ್ ಮತ್ತು ಸುತ್ತಮುತ್ತಲಿನ ಸ್ಥಳಗಳನ್ನು ‘ನಿಷೇಧಿತ ಪ್ರದೇಶ’ ಎಂದು ಘೋಷಿಸಲಾಗಿದೆ. ಹೊಸಪೇಟೆ ವ್ಯಾಪ್ತಿಯ 207.41 ಎಕರೆ ಹಾಗೂ ಅಮರಾವತಿ ವ್ಯಾಪ್ತಿಯ 488.74 ಎಕರೆ ಸೇರಿದಂತೆ ಒಟ್ಟು 696.15 ಎಕರೆ ಪ್ರದೇಶವು ಮಂಡಳಿಯ ಸ್ವಾಧೀನದಲ್ಲಿದೆ. ಇದರಲ್ಲಿ ಗಾರ್ಡನ್, ಹಿನ್ನೀರು, ನಿಶಾನಿ ಕ್ಯಾಂಪ್, ಅಮರಾವತಿ ಕಾಲೋನಿ ಹಾಗೂ ಹೆಚ್.ಇ.ಎಸ್ ಕಾಲೋನಿ ಪ್ರದೇಶಗಳು ಸಹ ಸೇರಿವೆ. ಪ್ರಸ್ತುತ ಮಂಡಳಿಯ ಜಾಗಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಒಟ್ಟು 23 ಪ್ರಕರಣಗಳು ನ್ಯಾಯಾಲಯದಲ್ಲಿವೆ. ಇದರಲ್ಲಿ ಧಾರವಾಡ ಹೈಕೋರ್ಟ್ ಪೀಠ ಮತ್ತು ಹೊಸಪೇಟೆಯ ಸಿವಿಲ್ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಉಲ್ಲಂಘನೆಯ ಪ್ರಕರಣಗಳೂ ಸಹ ಸೇರಿವೆ. ಜಲಾಶಯದ ಸುರಕ್ಷತೆ ಮತ್ತು ಮಂಡಳಿಯ ಆಸ್ತಿಯನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಅದರಂತೆ ಮಂಡಳಿಯ ಜಾಗವನ್ನು ಅತಿಕ್ರಮಣ ಕುರಿತ ವಿವಿಧ ಹಂತಗಳಲ್ಲಿ ಒಟ್ಟು 23 ಪ್ರಕರಣ ದಾಖಲಾಗಿವೆ. ಈ ಪೈಕಿ ಒಂದು ಪ್ರಕರಣ ಇತ್ಯರ್ಥವಾಗಿದ್ದು, ಇದರಲ್ಲಿ ನಿವೃತ್ತ ನ್ಯಾಯಧೀಶೆ ಜಯಶ್ರೀ ಭಾಗಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆಯ ಜೆ ಎಂ ಎಫ್ ಸಿ ನ್ಯಾಯಾಲಯ ಮಾರ್ಚ್ 28ರಂದು ಮಂಡಳಿಯ ಪರ ಆದೇಶ ನೀಡಿ, ತುಂಗಭದ್ರಾ ಯೋಜನಾ ಪ್ರದೇಶದ ಅತಿಕ್ರಮಣಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಮಂಡಳಿಯು ತನ್ನ ವಶಕ್ಕೆ ಪಡೆಯಲು ಹಸಿರು ನಿಶಾನೆ ತೋರಿದೆ. ಆದ್ದರಿಂದ ಮಂಡಳಿಯ ಅನುಮತಿ ಇಲ್ಲದೆ ಈ ಜಾಗಗಳಲ್ಲಿ ಕಟ್ಟಡ ನಿರ್ಮಾಣ ಅಥವಾ ಇನ್ನಿತರೆ ಯಾವುದೇ ಚಟುವಟಿಕೆ ನಡೆಸುವುದು ಶಿಕ್ಷಾರ್ಹ ಅಪರಾಧ. ಈ ನಿಟ್ಟಿನಲ್ಲಿ ಸಾರ್ವಜನಿಕರು ಇಂತಹ ಅಕ್ರಮ ಅತಿಕ್ರಮಣದಾರರೊಂದಿಗೆ ಯಾವುದೇ ವ್ಯವಹಾರ ನಡೆಸಬಾರದು ಎಂದು ಅವರು ಮನವಿ ಮಾಡಿದರು.

ಮೇ ಅಂತ್ಯಕ್ಕೆ ಎಲ್ಲಾ ಕ್ರಸ್ಟ್ ಗೇಟ್ ಅಳವಡಿಕೆ ಪೂರ್ಣ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದು, ಈಗಾಗಲೇ 22 ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಇನ್ನುಳಿದವು ಇದೇ ತಿಂಗಳಲ್ಲಿ ಮುಕ್ತಾಯವಾಗುವ ಭರವಸೆ ಕೂಡ ಇದೆ. ಅದರ ಜೊತೆಗೆ ಚೈನ್ ಅಳವಡಿಕೆ ಕಾರ್ಯವು ಮೇ ತಿಂಗಳ ಅಂತ್ಯಕ್ಕೆ ಪೂರ್ಣಗೊಂಡು ಜೂನ್ ನಲ್ಲಿ ಬರುವ ಮುಂಗಾರು ಮಳೆ ವೇಳೆಗೆ ಡ್ಯಾಮ್ ಸಂಪೂರ್ಣ ಸಿದ್ಧವಾಗಿರಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಚಂದ್ರಶೇಖರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್. ನಾರಾಯಣ ನಾಯ್ಕ್ ಇತರರು ಇದ್ದರು

ರೈತರ ಒತ್ತಾಯದ ಫಲ: ಸಮರೋಪಾದಿಯಲ್ಲಿ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಜೋಡಣಾ ಕಾಮಗಾರಿ.

*ಪ್ರಸ್ತುತ 21 ಕ್ರಸ್‌ಗೇಟ್‌ಗಳ ಜೋಡಣೆ ಪೂರ್ಣ

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ.

ಗಂಗಾವತಿ: ಕೊಪ್ಪಳ ರಾಯಚೂರು ಬಳ್ಳಾರಿ ಮತ್ತು ತೆಲಂಗಾಣ ಆಂಧ್ರಪ್ರದೇಶದ ಜೀವನದಿಯಾಗಿರುವ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಗಳ ಮರು ಜೋಡಣಾ ಕಾಮಗಾರಿ ಬರದಿಂದ ಸಾಗಿದ್ದು ಸದ್ಯ 21 ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಭರದಿಂದ ಸಾಗಿದೆ. ಒಟ್ಟು 32 ಕ್ರಸ್ಟ್‌ ಗೇಟುಗಳನ್ನು ಬದಲಾಯಿಸುವ ಕಾಮಗಾರಿ ಇದಾಗಿದ್ದು ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರನಿಗೆ ಜೂನ್ ಒಳಗೆ ಅಂದರೆ ಮಳೆಗಾಲ ಆರಂಭಕ್ಕೂ ಮುಂಚೆ ಕ್ರಸ್ಟ್‌ ಗೇಟುಗಳನ್ನು ಜೋಡಣೆ ಮಾಡುವ ಷರತ್ತನ್ನು ಟೆಂಡರ್ ನಲ್ಲಿ ಹಾಕಲಾಗಿದೆ.

ಕಲಕೆದ 2024ರ ಅ.10ರಂದು ಡ್ಯಾಂನ 19ನೇ ಕ್ರಸ್ಟ್ ಗೇಟ್ ಚೈನ್ ಹರಿದುಬಿದ್ದ ಪರಿಣಾಮ ಕ್ರಸ್ಟ್‌ ಗೇಟು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿತ್ತು. ದುರಂತ ಜರುಗಿ ಒಂದು ವರ್ಷದ ನಂತರ (2025ರ ಡಿಸೆಂಬರ್‌ನಲ್ಲಿ) ಗೇಟ್‌ಗಳ ಬದಲಾವಣೆಗೆ ಚಾಲನೆ ನೀಡಲಾಗಿತ್ತು. ಜಲಾಶಯದ ಒಟ್ಟು 33 ಕ್ರಸ್ಟ್‌ಗೇಟ್‌ಗಳ ಪೈಕಿ ಈವರೆಗೆ 21 ಗೇಟ್ ಗಳನ್ನು ಅಳವಡಿಸಲಾಗಿದೆ. ಉಳಿದ ಏಳು ಗೇಟ್ ಗಳ ಅಳವಡಿಕೆ ಕಾರ್ಯ ಚುರುಕಿನಿಂದ ನಡೆಯುತ್ತಿದ್ದು, ಮುಂದಿನ ತಿಂಗಳ ಕೊನೆಯ ವಾರದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ತದನಂತರ ಗೇಟ್‌ಗಳಿಗೆ ಪೇಂಟಿಂಗ್ ನಡೆಯಲಿದ್ದು, ಟೆಂಡರ್ ಷರತ್ತಿನಂತೆ ನಿಗದಿತ ಜಲಾಶಯಕ್ಕೆ ಹೊಸ ನೀರು ಬರುವ ಮುನ್ನವೇ ಕಾರ್ಯ ಮುಗಿಸಬೇಕು.

ಗುಜರಾತ್ ಮೂಲದ ಗುತ್ತಿಗೆದಾರ ಕಾಮಗಾರಿ ಗುತ್ತಿಗೆ ಪಡೆದಿದ್ದು‌ 60 ಕಾರ್ಮಿಕರು ತೊಡಗಿಸಿ ಕೊಂಡಿದ್ದಾರೆ. ಪ್ರತಿ ತಂಡದಲ್ಲಿ ಐದ-ರಿಂದ ಆರು ಜನರಂತೆ ಒಟ್ಟು ಎಂಟತ್ತು ತಂಡಗಳು ಅಳವಡಿಕೆ ಕಾರ್ಯದಲ್ಲಿ ತೊಡಗಿವೆ. 5 2 01, 02, 03, 04, 05, 06, 11. 17. 18, 19, 20, 24, 25, 26, 27, 28, 29, 30, 31, 32 ಮತ್ತು 33ನೇ ಸಂಖ್ಯೆಯ ಕ್ರಸ್ಟ್ ಗೇಟ್ ಗಳ ಅಳವಡಿಕೆ ಪೂರ್ಣಗೊಂಡಿದೆ. ಇವುಗಳಲ್ಲಿ 04, 11, 17, 18, 19, 20, 24 ಹಾಗೂ 31 ಸಂಖ್ಯೆಯ ಗೇಟ್‌ಗಳ ಪ್ರಾಯೋಗಿಕ ಪರೀಕ್ಷೆ

ಯಶಸ್ವಿಯಾಗಿದೆ. ಪ್ರಸ್ತುತ 06, 07, 08, 09, 12, 21 ಮತ್ತು 22ನೇ ಸಂಖ್ಯೆಯ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಶೇ.50 ರಷ್ಟು ಹೊಸ ಕ್ರಸ್ಟ್‌ ಗೇಟುಗಳ ತಯಾರಿಕೆ ಪೈಕಿ ಶೇ.

ಈಗಾಗಲೇ 30 ಹೊಸ ಗೇಟ್‌ಗಳ ತಯಾರಿಕೆ ಮುಗಿದಿದ್ದು ಇವುಗಳ ಪರೀಕ್ಷಾರ್ಥ ಕಾರ್ಯ ಮಾತ್ರ ಬಾಕಿ ಇದೆ. ಜಲಾಶಯದಲ್ಲಿದ್ದ 33 ಹಳೆಯ ಗೇಟ್‌ಗಳ ಪೈಕಿ 29 ಗೇಟ್‌ಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ.

***

ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ನಿಧಾನಗತಿಯಲ್ಲಿ ಸಾಗಿದ್ದರಿಂದ ಈಗಾಗಲೇ ರೈತರಿಗೆ ಒಂದು ಬೆಳೆ ನಷ್ಟವಾಗಿದೆ. ಏಪ್ರಿಲ್ ತಿಂಗಳೊಳಗೆ ಎಲ್ಲಾ 33 ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಂಡರೆ ಮುಂದಿನ ಬೆಳೆಗೆ ರೈತರಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ.

-ಟಿ.ವಿ.ಸತ್ಯನಾರಾಯಣ ಹಾಗೂ ಯಡ್ಲಪಲ್ಲಿ ಆನಂದರಾವ್ ರೈತ ಮುಖಡರು.

 

***

“ಗೇಟ್‌ಗಳ ತಯಾರಿಕೆ ಹಾಗೂ ಆಳವಡಿಕೆ ಕಾರ್ಯ ವೇಗವಾಗಿ ಸಾಗಿದೆ. ಈವರೆಗೆ 21 ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದ್ದು, ಉಳಿದ ಗೇಟ್‌ಗಳ ಕೆಲಸ ಏಪ್ರಿಲ್ ವೇಳೆಗೆ ಮುಕ್ತಾಯವಾಗಲಿದೆ.

ಇನ್ನುಳಿದ ಮೂರು ಹೊಸ ಗೇಟ್ ಗಳ ತಯಾರಿಕೆ ಹಾಗೂ ನಾಲ್ಕು ಹಳೆಯ ಗೇಟ್ ತೆರವು ಕಾರ್ಯ ಒಂದು ವಾರದೊಳಗೆ ಮುಕ್ತಾಯವಾಗಲಿದೆ.

-ಒ.ಆರ್.ಕೆ. ರೆಡ್ಡಿ ಕಾರ್ಯದರ್ಶಿ ತುಂಗಭದ್ರಾ ಬೋರ್ಡ್.

ಭರತ್‌ ಕಂದಕೂರಗೆ ಪ್ರಶಸ್ತಿ 

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ: ಬೆಂಗಳೂರು ಫೋಟೋಗ್ರಾಫಿಕ್‌ ಕ್ಲಬ್‌ ಆಯೋಜಿಸಿದ್ದ ‘ಕರ್ನಾಟಕದ ಜಾತ್ರೆ ಮತ್ತು ಉತ್ಸವಗಳು’ ಕುರಿತ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಹಕ ಭರತ್ ಕಂದಕೂರ ಅವರಿಗೆ ಬಹುಮಾನ ಲಭಿಸಿದೆ.

ದೊಡ್ಡಬಳ್ಳಾಪುರದ ಸುಧೀರ್‌ ಭಜನೆ ಹಟ್ಟಿ ಅವರ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಚಿತ್ರ (ಪ್ರಥಮ ಸ್ಥಾನ), ದೊಡ್ಡಬಳ್ಳಾಪುರದ ಬಿ.ಎನ್‌.ಉಮಾಶಂಕರ್‌ ಅವರ ಗೋಕಾಕದ ಭಂಡಾರ ಜಾತ್ರೆ ಚಿತ್ರ (ದ್ವಿತೀಯ ಸ್ಥಾನ), ಕೊಪ್ಪಳದ ಛಾಯಾಗ್ರಾಹಕ ಭರತ್ ಕಂದಕೂರ ಅವರ ಅಂಜನಾದ್ರಿ ಬೆಟ್ಟದ ಹನುಮ ಮಾಲೆ ಚಿತ್ರ (ತೃತೀಯ ಸ್ಥಾನ) ಪಡೆದಿವೆ.

ಮುಂದಿನ ವರ್ಷದ ಛಾಯಾಚಿತ್ರ ಸ್ಪರ್ಧೆಗೆ ‘ಕನಾಟಕದ ಹಬ್ಬ ಮತ್ತು ಆಚರಣೆಗಳು’ ಎನ್ನುವ ವಿಷಯ ಆಯ್ಕೆ ಮಾಡಲಾಗಿದ್ದು, ಛಾಯಾಗ್ರಾಹಕರು ಭಾಗಿಯಾಗಬಹುದು ಎಂದು ಕ್ಲಬ್‌ ಅಧ್ಯಕ್ಷ ಟಿ.ಕೆಂಪಣ್ಣ ತಿಳಿಸಿದ್ದಾರೆ. ಪ್ರಶಸ್ತಿಯು ನಗದು ಹಾಗೂ ಪುರಸ್ಕಾರ ಒಳಗೊಂಡಿದ್ದು ಏಪ್ರಿಲ್‌ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಬೆಂಗಳೂರಿನ 5 ತಿಂಗಳ ಮಗುವಿನ ಕಾಯಿಲೆ ಚಿಕಿತ್ಸೆಗಾಗಿ ಮಿಡಿದ ಗಂಗಾವತಿ ಯುವತಿಯರು! ಸಾರ್ವಜನಿಕರಿಂದ ದೇಣಿಗೆ ಸಂಗ್ರಹ.

*ಮಾನವೀಯತೆಗಿಲ್ಲ ಜಾತಿ,ಗಡಿ ಸೀಮೆ ಯುವತಿಯರ ಕಾರ್ಯಕ್ಕೆ ಮೆಚ್ಚುಗೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ಮಾನವೀಯತೆಗೆ ಜಾತಿ, ಗಡಿ, ಸೀಮೆ, ಲಿಂಗ ತಾರತಮ್ಯ ಯಾವುದು ಇಲ್ಲ. ಎಲ್ಲಿಯೂ ಒಂದು ಮಗುಕಾಯಿಲೆಯಿಂದ ಬಳಲುತ್ತಿರುವಾಗ ಗಂಗಾವತಿಯ ಕೆಲ ಯುವತಿಯರು ಮಗುವಿನ ಜೀವ ಉಳಿಸಲು ದಾನಿಗಳಿಂದ

ದೇಣಿಗೆ ಸಂಗ್ರಹಿಸುವ ಕಾರ್ಯ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬೆಂಗಳೂರಿನ ಮೋಕ್ಷಜ್ಞ ಎನ್ನುವ ಐದು ತಿಂಗಳ ಮಗುವಿಗೆ ಎಸ್ ಎಂ ಎ ಟೈಪ್ -1 ಕಾಯಿಲೆ ಇದ್ದು ಚಿಕಿತ್ಸೆ ಕೋಟ್ಯಾಂತರ ರೂ.ಗಳು ಬೇಕಾಗಿದ್ದು ಮಗುವಿನ ಪಾಲಕರು ಬಡವರಾದ ಕಾರಣ ಧಾರವಾಡದ ಸಾಮರಸ್ಯ ಟ್ರಸ್ಟ್ ಸಾರ್ವಜನಿಕರಿಂದ ದೇಣಿಗೆಗಳನ್ನು ಸಂಗ್ರಹಿಸಿ ಪಾಲಕರಿಗೆ ಕೊಡುವ ಉದ್ದೇಶ ಹೊಂದಿದ್ದು ಗಂಗಾವತಿಯಲ್ಲಿ ಟ್ರಸ್ಟ್ ಪರವಾಗಿ ಸಿದ್ದಿಕೇರಿಯ ಪದವೀಧರ ಯುವತಿರಾದ ಲಕ್ಷ್ಮಿ, ಚೈತ್ರಾ,ಅಖಿಲಾ ಮತ್ತು ಕುಮಾರ ಪ್ರಜ್ವಲ್ ಕಳೆದೆರಡು ದಿನಗಳಿಂದ ಗಂಗಾವತಿ ನಗರದ ಬೀದಿಗಳಲ್ಲಿ ಸುತ್ತಾಡಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ.

ಮಾನವೀಯ ಕಾರ್ಯದ ಕುರಿತು ತಂಡದಲ್ಲಿರುವ ಅತಿಥಿ ಶಿಕ್ಷಕಿ ಲಕ್ಷ್ಮಿ ಮಾತನಾಡಿ, ಮೋಕ್ಷಜ್ಞ ಚಿಕ್ಕ ಮಗುವಾಗಿದ್ದು ಪಾಲಕರು ಆರ್ಥಿಕವಾಗಿ ಚಿಕಿತ್ಸೆ ಕೊಡಿಸುವಷ್ಟು ಹಣ ಹೊಂದಿಸಲು ಆಗುತ್ತಿಲ್ಲ ಈಗಾಗಲೇ ಅನೇಕ ದಾನಿಗಳು ಮಗುವಿನ ಚಿಕಿತ್ಸೆ ಸ್ಪಂದಿಸಿ ದೇಣಿಗೆ ನೀಡಿದ್ದಾರೆ. ಗಂಗಾವತಿ ಜನರು ಸಹ ಇಡೀ ನಾಡಿನ ಮಠ ಮಾನ್ಯಗಳಿಗೆ ಅಕ್ಕಿಯನ್ನು ದೇಣಿಗೆ ನೀಡಿ ಅನ್ನದಾಸೋಹಕ್ಕೆ ಹೆಸರುವಾಸಿಯಾಗಿದ್ದು ಮಗುವಿನ ಚಿಕಿತ್ಸೆಗೆ ಹಣ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆಯ ಬೇಕಿದ್ದು ಕಳೆದೆರಡು‌ ದಿನಗಳಿಂದ ಜನರ ಸ್ಪಂದನೆ ಅತ್ಯುತ್ತಮವಾಗಿದೆ. ನಾವು ಸಂಗ್ರಹಿಸುವ ಹಣವನ್ನು ಧಾರವಾಡದ ಸಾಮರಸ್ಯ ಟ್ರಸ್ಟ್ ಗೆ ಕಳಿಸಿ ಅಲ್ಲಿಂದ ಮಗುವಿನ‌ ಪಾಲಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೋತಿಗಳ ಹಾವಳಿ ಮೂರು ಜನರಿಗೆ ಗಾಯ!

*ಸಾರ್ವಜನಿಕರ ಆಕ್ರೋಶ,ಅರಣ್ಯ ಇಲಾಖೆಯಿಂದ ಕೋತಿಗಳ ಸೆರೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮನೆ ಹತ್ತಿರ ಇರುವ ಕಾಲೋನಿ ಹಾಗೂ ಬನ್ನಿಗಿಡದ ಕ್ಯಾಂಪ್ ಸೇರಿ ಸುತ್ತಲಿನ ವಾರ್ಡುಗಳಲ್ಲಿ

ಕಳೆದ ಒಂದು ವಾರದಿಂದ ಕೋತಿಗಳ ವಿಪರೀತ ಹಾವಳಿ ಹೆಚ್ಚಾಗಿದ್ದು ಪಾದಚಾರಿಗಳು,ಮನೆ ಮುಂದೆ ಕುಳಿತ ಮಕ್ಕಳು, ಮಹಿಳೆಯರ ಮೇಲೆ ದಾಳಿ ಮಾಡಿ ಮೂರು ಜನರು ಗಾಯಗೊಂಡಿದ್ದಾರೆ.

ಸಾರ್ವಜನಿಕರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಂತರ ಅರಣ್ಯ ಇಲಾಖೆಯವರು ಶನಿವಾರ ರಾತ್ರಿಯಿಂದ ರವಿವಾರ ಬೆಳಗಿನ ಜಾವದವರೆಗೆ ಕೋತಿಗಳನ್ನು ಸೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೋತಿಗಳನ್ನು ಸೆರೆ ಹಿಡಿದಿದ್ದರಿಂದ ಅಲ್ಲಿನ ನಿವಾಸಿಗರು ನಿಟ್ಟು ಉಸಿರು ಬಿಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಬಸವರಾಜ ಪೂಜಾರಿ, ಜಾವೇದ್ ಭಾಷಾ, ಚಂದ್ರಶೇಖರ್ ರಾಥೋಡ್, ಗುಂಡಪ್ಪ, ಎಸ್ಎಂ ಡಿ ಸುಲೇಮಾನ್ ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಶಿವಾನಂದ, ಮಂಜುನಾಥ್, ಶಿವಕುಮಾರ್, ಗ್ಯಾನನಗೌಡ ಗಸ್ತು ಅರಣ್ಯ ಪಾಲಕರು, ಮೌಲಾಸಾಬ್ ಸೇರಿದಂತೆ ಎಲ್ಲರೂ ಸೇರಿಕೊಂಡು ಕೋತಿ ಹಿಡಿದಿರುತ್ತಾರೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಿಂಗನಾಳ ಪಂಪಾಪತಿ,ಕೆ.ಕಾಳಪ್ಪ,

ಮಹಾಬಲೇಶ ಸಿಂಗನಾಳ, ರಾಜಶೇಖರ ಗುಂಡೂರು, ಗೋಪಾಲ ಜಕ್ಕ, ಸಾಗರ ಮುನವಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವೈಭವದಿಂದ ಜರುಗಿದ ಬಾಚಿಗೊಂಡನಹಳ್ಳಿ-2 ಶ್ರೀ ಆಂಜನೇಯ ಸ್ವಾಮಿ ನೂತನ ಮಹಾರಥೋತ್ಸವ.

* ಹೋಮ,ಹವನ,ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನೂತನ ರಥೋತ್ಸವಕ್ಕೆ ಚಾಲನೆ.
* ರಥ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳಿಗೆ ಪೂಜ್ಯರಿಂದ ಸನ್ಮಾನ.

ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ: ವೈಭವ,ಶ್ರದ್ಧೆ, ಭಕ್ತಿಯಿಂದ ಜರುಗಿದ ತಾಲೂಕಿನ ಬಾಚಿಗೊಂಡನಹಳ್ಳಿ-2 ಗ್ರಾಮದ ಆರಾಧ್ಯದೈವ ಶ್ರೀಆಂಜನೇಯಸ್ವಾಮಿ ದೇವರ ನೂತನ ಮಹಾರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ತುಂಗಭದ್ರಾ ಡ್ಯಾಂ ನಿರ್ಮಾಣದ ನಂತರ ಸ್ಥಳಾಂತರಗೊಂಡಿದ್ದ ಬಾಚಿಗೊಂಡನಹಳ್ಳಿ-2 ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ತೇರು ಶೀಥಿಲಾವಸ್ಥೆಯಾಗಿದ್ದರಿಂದ ಗ್ರಾಮಸ್ಥರು ದೇಣಿಗೆ ಸಲ್ಲಿಸುವ ಮೂಲಕ ಭಕ್ತಿ ಮೆರೆದಿದ್ದಾರೆ. ಹಗರಿಬೊಮ್ಮನಹಳ್ಳಿಯ ಸಿದ್ದಪ್ಪ ಚಿತ್ರಗಾರ ಶಿಲ್ಪಿ ಅವರು ವೈಶಿಷ್ಟ್ಯಪೂರ್ಣವಾಗಿ ಸಂಪ್ರದಾಯದಂತೆ
ಆರ್ಷಕವಾಗಿ ತೇರು ನಿರ್ಮಿಸಿದ್ದಾರೆ.
ಶ್ರೀ ರಾಮನವಮಿ ಶುಕ್ರವಾರದಂದು ಬೆಳಗಿನ ಜಾವ ಹೋಮ ಹವನ ರುದ್ರಾಭಿಷೇಕವನ್ನು ಕೈಗೊಂಡು ನಂತರ ದಂಪತಿಗಳ ಸಮೇತ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು ಸಂಜೆ ನಾಡಿನ ಹಲವು ಮಠಾಧೀಶರ ಸಮ್ಮುಖದಲ್ಲಿ ಮಹಾರಥೋತ್ಸವ ಜರುಗಿತು.
ರಥೋತ್ಸವದ ನಂತರ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜ್ಯರಿಂದ ರಥ ನಿರ್ಮಾಣಕ್ಕೆ ಕಾಣಿಕೆ ಸಲ್ಲಿಸಿದ್ದ ದಾನಿಗಳನ್ನು ಸತ್ಕರಿಸಲಾಯಿತು.
ಜಾತ್ರಾ ಮಹೋತ್ಸವದಲ್ಲಿ ನಂದಿಪುರದ ಡಾ. ಮಹೇಶ್ವರ ಸ್ವಾಮಿ, ಹಂಪಸಾಗರದ ಮಹದೇವ ತಾತನವರು, ಕಡ್ಲ ಬಾಳಿನ ಗವಿಮಠದ ಶಾಂತವೀರ ಸ್ವಾಮಿಗಳು, ತೋಂಟದಾರ್ಯ ಮಠದ ಕಿರಿಯ ಸ್ವಾಮೀಜಿ, ಗಾಯಿತ್ರಿ ದೇವಸ್ಥಾನದ ಅರ್ಚಕ ವೆಂಕಟ ರಾಮರಾಜು,
ಗ್ರಾಮದ ಮುಖಂಡರಾದ ಹೊಳಗುಂದಿ ಕೊಟ್ರಪ್ಪ, ನೇತಾಜಿಗೌಡ,
ಶೇಖರಪ್ಪ ,ಶ್ರೀಕಾಂತ ನೇತಾಜಿ ಗೌಡ ವೀರಭದ್ರಪ್ಪ ಸಣ್ಣಬಸಪ್ಪ ಗೊಂಡಬಾಳ,ನೆಂಬದಾರ ಪಿತಾಂಬ್ರಪ್ಪ,ಬಿ.ಸುರೇಶ,ಗೊಂಡಬಾಳ ಮಂಜುನಾಥ,ಗೊಂಡಬಾಳ ನಾಗರಾಜ, ಗೊಂಡಬಾಳ ರುದ್ರಪ್ಪ,
ಜಿ.ಚೆನ್ನಪ್ಪ, ಹೇಮಂತಕುಮಾರ,ಆನಂದ ಹರಿಜನ,ಪರಶುರಾಮ, ಫಕೀರಪ್ಪದುರುಗಪ್ಪ,ದವಲಸಾನ,ರಾಜಸಾಬ,ಚಿತ್ವಾಡಗಿ ವಿರೇಶ,ಚಿತ್ವಾಡಗಿ ದುರುಗಪ್ಪ ಸರ್ವ ಸಮಾಜದವರು ಪಾಲ್ಗೊಂಡಿದ್ದರು.

ವಿದೇಶಿ ಮಹಿಳೆ ಅತ್ಯಾಚಾರ ಕೇಸ್ ಸೇರಿ ಅತೀ ಸೂಕ್ಷ್ಮ ಕೇಸ್ ಗಳಲ್ಲಿ ಕಾರ್ಯ ನಿರ್ವಹಿಸಿ ಯಶಸ್ವಿಯಾದ    ಪಿಐ ಪ್ರಕಾಶ ಎಲ್.ಮಾಳೆಯವರಿಗೆ ಮುಖ್ಯಮಂತ್ರಿ ಪದಕ ಘೋಷಣೆ. 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ರಾಜ್ಯ ಪೊಲೀಸ್‌ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಯನ್ನು ಗುರುತಿಸಿ ನೀಡಲಾಗುವ ಪ್ರತಿಷ್ಠಿತ 2025 ನೇ ಸಾಲಿನ ‘ಮುಖ್ಯಮಂತ್ರಿಗಳ ಚಿನ್ನದ ಪದಕ’ಕ್ಕೆ ಗಂಗಾವತಿ ನಗರದ ಪೊಲೀಸ್ ಠಾಣೆ ಪಿಐ ಪ್ರಕಾಶ ಎಲ್.ಮಾಳೆ ಅವರು ಭಾಜನರಾಗಿದ್ದಾರೆ. ಅವರು ತಮ್ಮ ಕರ್ತವ್ಯದ ಅವಧಿಯಲ್ಲಿ ತೋರಿದ ನಿಷ್ಠೆ ಮತ್ತು ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಇತ್ತೀಚಿಗೆ ಜರುಗಿದ ಸಾಣಾಪುರ ಕೆರೆಯ ಹತ್ತಿರ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಕೋಮು ಸಂಘರ್ಷ ಇತರೆ ಸೂಕ್ಷ್ಮ ಕೇಸ್ ಗಳಲ್ಲಿ ಪ್ರಕಾಶ್ ಮಾಳೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಇತರ ಅಧಿಕಾರಿಗಳ ಜೊತೆಗೆ ಕಾರ್ಯ ಮಾಡಿದ್ದಾರೆ.

ಈಗಾಗಲೇ ವಲಯ ಪೊಲೀಸ್ ಅಧಿಕಾರಿಗಳು ಪ್ರಕಾಶ್ ಮಾಳೆ ಸೇರಿದಂತೆ ಈ ಪ್ರಕರಣಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ ಕಾರಣಕ್ಕಾಗಿ ಸನ್ಮಾನಿಸಿದ್ದಾರೆ.

ಮಾಳೆ ಅವರು ಕೊಪ್ಪಳ,ರಾಯಚೂರು,ಬಳ್ಳಾರಿ ಜಿಲ್ಲೆಯಲ್ಲಿ ಪಿಎಸೈ, ಸಿಪಿಐಯಾಗಿ ಸೇವೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಳೆ ಅವರ ಕರ್ತವ್ಯವನ್ನು ಪೊಲೀಸ್ ಇಲಾಖೆ ಗುರುತಿಸಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿ

ಘೋಷಿಸಿಸಲಾಗಿದೆ.

ಪ್ರಶಸ್ತಿ ಭಾಜನರಾದ ಪ್ರಕಾಶ ಮಾಳೆ ಯವರನ್ನು

ಗಂಗಾವತಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಅಭಿನಂದಸಿ ಸನ್ಮಾನಿಸಿ ಗೌರವಿಸಿದರು.

ಏ 02ಕ್ಕೆ ಪ್ರದಾನ:

ರಾಜ್ಯಾದ್ಯಂತ ಒಟ್ಟು 152 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪದಕ ಲಭಿಸಿದೆ. ಪದಕ ಪುರಸ್ಕೃತರಿಗೆ ಏ. 02 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ.

ಈ ಸಂದರ್ಭದಲ್ಲಿ ಪಿಎಸ್ಐ ಟಿ.ಜಿ.ನಾಗರಾಜ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರಿದ್ದರು.

ಅಕ್ರಮ‌ ಪಿಡಿಎಸ್ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ ಸಂಘಟನೆಗಳ ಮುಖಂಡರು!

*ಮಾನ್ವಿ ಮೂಲದ ಗಣ್ಯ ವ್ಯಕ್ತಿಯೊರ್ವನ ಮಾಲೀಕತ್ವದ ಮಿಲ್ ಗೆ ಪಿಡಿಎಸ್ ಅಕ್ಕಿ ಸಾಗಾಣಿಕೆ ಆರೋಪ.

*ಕೂಕನಪಳ್ಳಿಯಿಂದ ಮಾನ್ವಿ ರೈಸ್ ಮಿಲ್ ಗೆ ಪಿಡಿಎಸ್ ಅಕ್ಕಿ ಸಾಗಾಣಿಕೆ.

*ಅಕ್ರಮ ಕುರಿತು ಪ್ರಭಾವುಗಳ ಕೈವಾಡ,

ಪೊಲೀಸ್ ಕೇಸ್ ದಾಖಲಿಸುವಂತೆ ಸಂಘಟನೆಯ ಮುಖಂಡರ ಆಗ್ರಹ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಗಳನ್ನು ಕನ್ನಡಪರ,ದಲಿತಪರ ಸಂಘಟನೆಗಳ ಮುಖಂಡರು ಹಿಡಿದು ಪೋಲಿಸ್ ಠಾಣೆಗೆ ಒಪ್ಪಿಸಿದ ಘಟನೆ ಗಂಗಾವತಿಯ ವಡ್ಡರಹಟ್ಟಿ ಕ್ಯಾಂಪ್ ಹತ್ತಿರ ಶನಿವಾರ ಬೆಳಗ್ಗೆ ಜರುಗಿದೆ.

ಖಚಿತ ಮಾಹಿತಿಯ ಮೇರೆಗೆ ಸಂಘಟನೆಗಳ ಮುಖಂಡರು ವಡ್ಡರಹಟ್ಟಿ ಕ್ಯಾಂಪ್ ಹತ್ತಿರ ಕೂಕನಪಳ್ಳಿ ಯಿಂದ ಮಾನ್ವಿ ಕಡೆಗೆ ಹೊರಟಿದ್ದ ನಾಲ್ಕು ಲಾರಿಗಳ ಪೈಕಿ ಒಂದನ್ನು ಹಿಡಿದು ದಾಖಲಾತಿ ಪರಿಶೀಲಿಸಿ ನಂತರ ಪೊಲೀಸರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿಯ

ಚೀಲಗಳು ಇರುವ ಕುರಿತು ಮಾಹಿತಿ ನೀಡಿದ್ದಾರೆ.

ಕೂಡಲೇ ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಶೇಖರಪ್ಪ ಹಾಗೂ ಪೊಲೀಸ್ ಇಲಾಖೆಯವರು ಲಾರಿಯನ್ನು ನಗರ ಪೊಲೀಸ್ ಠಾಣೆಗೆ ತಂದು ಅಕ್ಕಿ ಸಾಗಿಸುತ್ತಿದ್ದ ಕುರಿತು ಅಧಿಕೃತ ಬಿಲ್ ಹಾಗೂ ಚಾಲಕನಿಂದ ಮಾಹಿತಿಯನ್ನು ಪಡೆದು 35 ಟನ್ ಅಕ್ಕಿಯಲ್ಲಿ ಪಿಡಿಎಸ್ ಹಾಗೂ ಇತರೆ ಅಕ್ಕಿ ಇರುವ ಕುರಿತು ತಪಾಸಣೆ ನಡೆಸುತ್ತಿದ್ದಾರೆ.

ಒಂದು ಮಾಹಿತಿ ಪ್ರಕಾರ ಮಾನ್ವಿಯ ಕಾಂಗ್ರೆಸ್ ಮುಖಂಡನೊರ್ವನ ಮಾಲೀಕತ್ವದ ರೈಸ್ ಮಿಲ್ ನಲ್ಲಿ ಪಿಡಿಎಸ್ ಅಕ್ಕಿಯನ್ನು ಪಾಲೀಸ್ ಮಾಡಿ ಬೇರೆ ರಾಜ್ಯಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು

ಇದಕ್ಕಾಗಿ ಕೊಪ್ಪಳ ಜಿಲ್ಲೆಯಿಂದ ಅಕ್ಕಿ ತುಂಬಿಸಿಕೊಂಡು ಮಾನ್ವಿಗೆ ಸಾಗಿಸುವ ಕುರಿತು ಮಾಹಿತಿ ಇದೆ.

ಗೊಂದಲ: ಸಂಘಟನೆ ಅವರು ಹೇಳುವ ಪ್ರಕಾರ ಕುಕನಪಳ್ಳಿ

ಯಿಂದ ಮಾನ್ವಿಗೆ 5 ಲಾರಿಗಳಲ್ಲಿ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿತ್ತ, ನಾವು ಬರುವ ವೇಳೆಗೆ ನಾಲ್ಕು ಲಾರಿಗಳು ಪಾಸ್ ಆಗಿದ್ದು ಒಂದು ಲಾರಿಯನ್ನು ಮಾತ್ರ ನಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ.ಲಾರಿಗಳು ಸಂಚಾರ ಮಾಡಿದ ವಿಡಿಯೋ ಹೇಮಗುಡ್ಡ ಮತ್ತು ಮರಳಿ ಟೋಲ್ ನಲ್ಲಿ ಚಿತ್ರೀಕರಣವಾಗಿದ್ದು ಮಾನ್ವಿ ಮೂಲದ ಕೆಲವು ಪ್ರಮುಖರು ಹಾಗೂ ಕಾಂಗ್ರೆಸ್ ಮುಖಂಡರು ಅಕ್ರಮವಾಗಿ ಪಿಡಿಎಫ್ ಅಕ್ಕಿಯನ್ನು ಮಾರಾಟ ಮಾಡುವ ಜಾಲಹೊಂದಿದ್ದು,ಆ ಮೂಲಕ ರಾಯಚೂರು,ಕೊಪ್ಪಳ ಜಿಲ್ಲೆಯಿಂದ ಪಿ ಡಿ ಎಸ್ ಅಕ್ಕಿಯನ್ನು ಸಂಗ್ರಹಿಸಿ ಅಕ್ರಮವಾಗಿ ಪಾಲಿಶ್ ಮಾಡಿ,ಬೇರೆ ರಾಜ್ಯಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದು, ಕೇಸ್ ಆಗದಂತೆ ಮಾನ್ವಿದ ರಾಜ್ಯ ಮಟ್ಟದ ಕಾಂಗ್ರೆಸ್ ಪಕ್ಷದ ರಾಜಕೀಯ ವ್ಯಕ್ತಿಯ ಮೂಲಕ ಪೊಲೀಸ್ ಮೇಲೆ ಒತ್ತಡ ಹಾಕಿದ್ದಾರೆಂದು ಆರೋಪಿಸಿದ್ದಾರೆ.

ಕೇಸ್ ದಾಖಲು:

ಕೆಲವು ಸಂಘಟನೆಯವರು ವಡ್ಡರಹಟ್ಟಿ ಹತ್ತಿರ ಲಾರಿಯೊಂದನ್ನ ತಡೆದು ಅದರಲ್ಲಿ ಪಿ ಡಿ ಎಸ್ ಅಕ್ಕಿಯ ಚೀಲಗಳು ಇವೆ ಎಂದು ಪೊಲೀಸ್ ಠಾಣೆಗೆ ಆಹಾರ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಿಸಿದ್ದು ,ಈ ಕುರಿತು ಪರಿಶೀಲನೆ ಮಾಡಿ ಅಕ್ರಮ ಪಿ ಡಿ ಎಸ್ ಹಾಕಿ ಸಾಗಾಟದ ಕುರಿತು ದೂರು ದಾಖಲಿಸಿಕೊಳ್ಳಲಾಗುತ್ತದೆ ಎಂದು ಡಿವೈಎಸ್ ಪಿ

ಜೆ.ಎಸ್. ನ್ಯಾಮಗೌಡ ತಿಳಿಸಿದ್ದಾರೆ.

 

 

UNESCO restrictions only for Anegundi–Kishkindha region! Rules ignored in Hampi and Kamalapur!

Public representatives favor tourism in Hampi–Kamalapur region
Are the people and representatives of Anegundi–Kishkindha helpless?
Kishkindha Vani Special Report
By K. Ningajja

Gangavathi: Authorities are strictly enforcing the rules of the Hampi Development Authority only in the 15 villages of the Anegundi–Kishkindha region, which falls under the UNESCO area, leaving the local people helpless under the burden of UNESCO restrictions.
However, in Kamalapur and Hampi areas, which also come under the UNESCO jurisdiction and Hampi Development Authority, rules are being ignored. It is alleged that due to the support of MLAs, MPs, and district in-charge ministers, people there are freely conducting commercial activities and developing tourism.
In the first week of April, UNESCO representatives in charge of India are expected to visit the Anegundi–Kishkindha region to review development works, tourism activities, and monuments as per UNESCO guidelines. Ahead of their visit, the Hampi Development Authority and Koppal district administration have cut off commercial electricity connections in the Anegundi core zone 15 days in advance, plunging the area into darkness. This has also caused drinking water shortages and created inconvenience for thousands of tourists who visit daily.
In Thadebagilu village near Srirangadevarayalu Circle, locals had set up small sheds on private lands to sell tea, gobi manchurian, juice, and fruits, earning their livelihood through tourism using commercial electricity connections from JESCOM. However, due to the upcoming UNESCO visit, Hampi Development Authority officials issued notices to JESCOM officials in Gangavathi and got all electricity connections disconnected.
Commercial power connections exist in Hampi too:
In about 13 villages including Kamalapur under the Hampi Development Authority, commercial activities are openly carried out, and shops are running with commercial electricity connections. But the authorities seem to ignore these activities in Hampi. Instead, in the 15 villages of Anegundi, strict restrictions are imposed, especially in core zones like Anegundi and Virupapur Gaddi, where no commercial activity is allowed. Authorities from departments like electricity (JESCOM), forest, and revenue frequently conduct operations, removing small shops and preventing locals from earning a livelihood through tourism.
Helpless situation:
About 35 years ago, people of these 15 villages believed that inclusion under UNESCO would bring prosperity. But today, they feel helpless and are waiting for someone to support them. Locals allege that under pressure, Hampi Development Authority officials are behaving as if UNESCO rules apply only to Anegundi, while commercial activities in Hampi continue under the patronage of public representatives.
It is also said that the authorities have convinced elected representatives of Koppal district using outdated and unscientific rules of UNESCO and the Hampi Development Authority, leading to lack of support for tourism development in Anegundi. Locals have expressed disappointment over this.
Even though hotels and other commercial activities are running in Hampi–Kamalapur, no government department or authority is taking action on their own to shut them down. But in Anegundi, authorities and various departments are taking actions that negatively impact tourism. Locals have questioned the government, asking what kind of justice this is.