Breaking News
ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ಜನ್ಮದಿನದ ಶುಭಾಶಯ ಕೋರಿದ ಇಕ್ಬಾಲ್ ಅನ್ಸಾರಿ.

 

*ಬಿಎಲ್ ಎ-01ಹುದ್ದೆಗೆ ಕೋಕ್ ಕೊಟ್ಟ ಬೆನ್ನಲ್ಲೇ ಜೆಡಿಎಸ್ ಹತ್ತಿರವಾಗುತ್ತಿರುವ ಅನ್ಸಾರಿ?

*ಸೋಶಿಯಲ್ ಮೀಡಿಯಾದಲ್ಲಿ ದೇವೆಗೌಡ-ಅನ್ಸಾರಿ ಪೋಸ್ಟರ್ ಬಲು ಜೋರು.

*ಪಕ್ಷದ್ರೋಹಿಗಳಿಗೆ ಶಿಕ್ಷೆ ಕಾಂಗ್ರೆಸ್ ಹೈಕಮಾಂಡ್ ತಾತ್ಸಾರ,ಅನ್ಸಾರಿ ಮುನಿಸಿಗೆ ಪ್ರಮುಖ ಕಾರಣ.

ಕಿಷ್ಕಿಂಧವಾಣಿ ವಿಶೇಷ

ಗಂಗಾವತಿ: ಜೆಡಿಎಸ್ ಪಕ್ಷದ ವರಿಷ್ಠರು ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್. ಡಿ. ದೇವೇಗೌಡರ ಜನ್ಮದಿನವನ್ನು ರಾಜ್ಯದ ವಿವಿಧಡೆ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಅವರ ಅಭಿಮಾನಿಗಳು ಸೋಮವಾರ ಆಚರಿಸಿದರು.

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಶುಭಾಶಯ ಕೋರಿದ್ದಾರೆ.

ಜೆಡಿಎಸ್ ತೊರೆದಾಗಿನಿಂದ ಶುಭಾಶಯ ಕೋರದ

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಅಭಿಮಾನಿಗಳು ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಹಾಗೂ ಇಕ್ಬಾಲ್ ಅನ್ಸಾರಿ ಅವರು ಜತೆಗಿರುವ ಭಾವಚಿತ್ರದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಬದಲಾವಣೆಗೆ ಹತ್ತಿರ, ಬದಲಾವಣೆ ಜಗದ ಸಹಜ ನಿಯಮ ಎನ್ನುವ ಟ್ಯಾಗ್ ನ್ ಹಾಕಿ ವ್ಯಾಪಕವಾಗಿ ವೈರಲ್ ಮಾಡುತ್ತಿದ್ದಾರೆ. ಇದಕ್ಕೆ ಕೆಲವು ಸೋಶಿಯಲ್ ಮೀಡಿಯಾದ ಗೆಳೆಯರು ಪರ- ವಿರೋಧದ ಸ್ಟೇಟಸ್ ಹಾಕುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ.

ಈ ಮಧ್ಯೆ ಕಳೆದ ವಾರ ಪಕ್ಷ ಸಂಘಟನೆ ಮತ್ತು ಇತರ ವಿಚಾರಕ್ಕಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿ ಎಲ್ ಎ-01 ಹುದ್ದೆಯಿಂದ ಇಕ್ಬಾಲ್ ಅನ್ಸಾರಿ ಅವರನ್ನು ಬದಲಾಯಿಸಿ ಸಂಸದ ಕೆ. ರಾಜಶೇಖರ ಹಿಟ್ನಾಳ್ ಅವರನ್ನು ನೇಮಕ ಮಾಡಿ ರಾಜ್ಯ ಚುನಾವಣಾ ಆಯೋಗಕ್ಕೆ ಕೆಪಿಸಿಸಿ ಅಧ್ಯಕ್ಷ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆದೇಶ ಮಾಡಿರುವುದಕ್ಕೂ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸನ ಕೆಲ ಮುಖಂಡರು ಬೇರೆ ಪಕ್ಷದವರಿಗೆ ಬಹಿರಂಗವಾಗಿ ಸಹಾಯ ಮಾಡಿ ಪಕ್ಷದ್ರೋಹ ವ್ಯಸಗಿದ್ದ ಕುರಿತು

ಇಕ್ಬಾಲ್ ಅನ್ಸಾರಿ ಯವರು ಕೆಪಿಸಿಸಿ ಮತ್ತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ದೂರು ಸಲ್ಲಿಸಿದರೂ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೆ ಇರುವುದು ಅನ್ಸಾರಿಯವರು ಹಾಗೂ ಅವರ ಅಭಿಮಾನಿಗಳು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕೋಪಗೊಳ್ಳಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.