Breaking News
ಹೋಳಿ ಹಬ್ಬ:ಸಾಣಾಪೂರ ತುಂಗಭದ್ರಾ ನದಿಗೆ ಸ್ನಾನಕ್ಕೆ ತೆರಳಿದ್ದ ಗಾಂಧಿನಗರದ ಇಬ್ಬರು ಯುವಕರು ನೀರು ಪಾಲು! *ಪ್ರತಿವರ್ಷ ಪೊಲೀಸರ ಮುನ್ನೆಚ್ಚರಿಕೆ ಮಧ್ಯ ಅನಾಹುತ ಗ್ಯಾರಂಟಿ!

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಹೋಳಿ ಹಬ್ಬದ ರಂಗೀನಾಟ ಮುಗಿಸಿಕೊಂಡು ಸಾಣಾಪೂರ ಹತ್ತಿರ ತುಂಗಭದ್ರಾ ನದಿಯ ಫಾಲ್ಸ್ ನಲ್ಲಿ ಸ್ನಾನಕ್ಕೆ ತೆರಳಿದ್ದ ಗಂಗಾವತಿ ಗಾಂಧಿನಗರದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಜರುಗಿದೆ.
ಗಾಂಧಿನಗರದ ನಿವಾಸಿಗಳಾದ
ಅಭಿಷೇಕ(೧೮),ಸೂರ್ಯ (೧೯) ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹೋಳಿ ಹಬ್ಬದ ಆಚರಣೆಯು ನಂತರ ಗೆಳೆಯರ ಜೊತೆ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಮಧ್ಯಾನ್ಹ 3 ಗಂಟೆಗೆ ಆಗಮಿಸಿದ್ದರು.ಈ ಸಂದರ್ಭದಲ್ಲಿ ಸಾಣಾಪೂರ ಹತ್ತಿರದ ಫಾಲ್ಸ್ ಹೋಗದಂತೆ ಅಲ್ಲಿದ್ದವರು ಎಚ್ಚರಿಕೆ ನೀಡಿದ್ದಾರೆ.ಆದಾಗ್ಯೂ ನದಿಗೆ ಮೃತಪಟ್ಟವರು ಸ್ನಾನಕ್ಕೆ ಹೋಗಿದ್ದರಿಂದ ಅನಾಹುತ ಸಂಭವಿಸಿದೆ.
ಸ್ಥಳೀಯರು ಹಾಗೂ ಗ್ರಾಮೀಣ ಪೊಲೀಸರು ಹರ ಸಾಹಸ ಪಟ್ಟು ನದಿಯಲ್ಲಿ ಮುಳುಗಿದ್ದ ಯುವಕರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.