Breaking News
ತಳುವಗೇರಾ ಜಾತ್ರೆಯ ಹತ್ಯೆ ಪ್ರಕರಣ ತೀರ್ಪು ಪ್ರಕಟ: 15 ಅಪರಾಧಿಗಳಿಗೆ 7 ವರ್ಷ ಕಠಿಣ ಶಿಕ್ಷೆ ಪ್ರಕಟ

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ: 2019ರಲ್ಲಿ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದ ಜಾತ್ರೆಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಒಟ್ಟು 15 ಅಪರಾಧಿಗಳಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ

ತುಳುವಗೇರಾ ಗ್ರಾಮದ ಜಾತ್ರೆಯಲ್ಲಿ ಜಗದೀಶ ಹವಾಲ್ದಾರ ಹಾಗೂ ಅವರ ಸ್ನೇಹಿತರು ಪಿಪಿ ಹಾಗೂ ಬಲೂನಗಳನ್ನು ಖರೀದಿಸಿಕೊಂಡು ದುರುಗಮ್ಮ ಗುಡಿಯ ಹತ್ತಿರದಿಂದ ಸಾಗುತ್ತಿದ್ದ ವೇಳೆ, ನಾಗಪ್ಪ ಹುಂಡಿ ಮನೆ ಮುಂದೆ 17 ಜನ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಬಡಿಗೆ, ಕ್ರಿಕೆಟ್ ಸ್ಟಂಪ್, ಕಲ್ಲು ಹಾಗೂ ಖಾರದ ಪುಡಿ ಹಿಡಿದು ಜಗಳಕ್ಕೆ ಮುಂದಾಗಿದ್ದರು. ಈ ವೇಳೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಮಲ್ಲಪ್ಪ ತಂದೆ ಮಲ್ಲಿಕಾರ್ಜುನ ಕಂದಕೂರ ಅವರನ್ನು ಕ್ರಿಕೆಟ್ ಸ್ಟಂಪ್ ಹಾಗೂ ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಜೊತೆಗೆ ಜಗದೀಶ ಹವಾಲ್ದಾರ ಸೇರಿದಂತೆ ಇತರರಿಗೆ ತೀವ್ರ ಹಾಗೂ ಸಾಧಾರಣ ಗಾಯಗಳಾಗಿದ್ದವು. ಮಹಿಳಾ ಆರೋಪಿತರು ಖಾರದ ಪುಡಿ ಉಗ್ಗಿ ಜೀವ ಬೆದರಿಕೆ ಪ್ರಕರಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಚಂದ್ರಶೇಖರ ತೀರ್ಪು ಪ್ರಕಟಿಸಿ ಆರೋಪಿತರಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ರೂ. 4,12,500 ಗಳ ದಂಡ ವಿಧಿಸಿದ್ದಾರೆ. ಈ ದಂಡದ ಮೊತ್ತದಲ್ಲಿ ಶೇ.40 ಅಂದರೆ ರೂ. 1,65,000 ಗಳನ್ನು ಮೃತ ಮಲ್ಲಪ್ಪ ಅವರ ತಂದೆ-ತಾಯಿಗೆ ಪರಿಹಾರವಾಗಿ ನೀಡಲು ಹಾಗೂ ತೀವ್ರ ಗಾಯಗೊಂಡ ಶಿವಪ್ಪ ಕಂದಕೂರ ಅವರಿಗೆ ಶೇ.15 ಅಂದರೆ ರೂ. 62,000 ಗಳನ್ನು ನೀಡಲು ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಪ್ರಕರಣದಲ್ಲಿ ಕಳಕಪ್ಪ ತಂದೆ ಬಾಳಪ್ಪ ಹುಂಡಿ, ದೊಡ್ಡಪ್ಪ ತಂದೆ ಬಾಳಪ್ಪ ಹುಂಡಿ, ನಾಗಪ್ಪ ತಂದೆ ಬಾಳಪ್ಪ ಹುಂಡಿ, ರಮೇಶ @ ಕೆಂಪಣ್ಣ ತಂದೆ ಕಳಕಪ್ಪ ಹುಂಡಿ, ಕೃಷ್ಣ ತಂದೆ ದೊಡ್ಡಪ್ಪ ಹುಂಡಿ, ಚಿದಾನಂದ ತಂದೆ ಹನುಮಪ್ಪ ಹುಂಡಿ, ಶರಣಪ್ಪ ಬಾಲಪ್ಪ ಹುಂಡಿ, ಬಸವರಾಜ ತಂದೆ ದೊಡ್ಡಪ್ಪ ಹುಂಡಿ, ಮಂಜುನಾಥ ತಂದೆ ಹನುಮಪ್ಪ ಹುಂಡಿ, ಅಮರಪ್ಪ ಬಾಲಪ್ಪ ಹುಂಡಿ, ನೀಲಪ್ಪ ತಂದೆ ಅಮರಪ್ಪ ಹುಂಡಿ, ಚಂದ್ರಶೇಖರ ತಂದೆ ದೊಡ್ಡಪ್ಪ ಹುಂಡಿ, ಯಮನೂರಪ್ಪ ತಂದೆ ಭೀಮಪ್ಪ ಹುಂಡಿ, ತಿಪ್ಪಣ್ಣ ತಂದೆ ಬಾಲನಗೌಡ ಮಾಲಿಪಾಟೀಲ ಹಾಗೂ ಮುತ್ತಪ್ಪ ತಂದೆ ಹನುಮಪ್ಪ ಹುಂಡಿ ಇವರ ವಿರುದ್ಧ ಆರೋಪಗಳು ಸಾಬೀತಾಗಿದ್ದು ಶಿಕ್ಷೆ ವಿಧಿಸಲಾಗಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ ಕೊಂತವ್ವ ಗಂಡ ದೊಡ್ಡಪ್ಪ ಹುಂಡಿ ಹಾಗೂ ರೇಣವ್ವ ಗಂಡ ನಾಗಪ್ಪ ಹುಂಡಿ, ಇವರ ಮೇಲಿನ ಆರೋಪ ಸಾಬೀತಾಗದ ಕಾರಣ ಅವರನ್ನು ಬಿಡುಗಡೆಗೊಳಿಸಲಾಗಿದೆ.

ಪ್ರಕರಣದ ತನಿಖೆಯನ್ನು ಸಿಪಿಐ ಸುರೇಶ್ ತಳವಾರ ನಡೆಸಿ, ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಂ.ಎ. ಪಾಟೀಲ್ ವಾದ ಮಂಡಿಸಿದ್ದು, ಸಾಕ್ಷಿದಾರರನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಕುಷ್ಟಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹನುಮೇಶ ಜಗ್ಗಲ್ ಸಹಕರಿಸಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಎಂ.ಎ. ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.