ಬುಡಕಟ್ಟು ಲಕ್ಷಣಗಳ ಕುರುಬ ಜನಾಂಗಕ್ಕೆ ಎಸ್.ಟಿ.ಮೀಸಲಾತಿ ಶೀಘ್ರ ಘೋಷಣೆಗೆ ಕೇಂದ್ರ ಬುಡಕಟ್ಟು ಸಚಿವಾಲಯಕ್ಕೆ ಮನವಿ ಸಲ್ಲಿಕೆ.
*ಪೂಜ್ಯ ಶ್ರೀನಿರಂಜನನಾನಂದ ಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಮನವಿ ಸಲ್ಲಿಕೆ.
ಕಿಷ್ಕಿಂಧವಾಣಿ ಸುದ್ದಿ
ನವದೆಹಲಿ: ಸಾವಿರಾರು ವರ್ಷಗಳಿಂದ ಬುಡಕಟ್ಟು ಮತ್ತು ದೇಶದ ಮೂಲ ಸಂಸ್ಕೃತಿಯ ಲಕ್ಷಣಗಳನ್ನು ಹೊಂದಿರುವ ಕುರುಬ ಸಮಾಜಕ್ಕೆ ಕರ್ನಾಟಕದಲ್ಲಿ
ಎಸ್.ಟಿ.ಮೀಸಲಾತಿಯವನ್ನು ಕೇಂದ್ರ ಸರ್ಕಾರದ ಬುಡಕಟ್ಟು ಸಚಿವಾಲಯ ಘೋಷಣೆ ಮಾಡುವಂತೆ
ಶ್ರೀ ರೇವಣಸಿದ್ದೇಶ್ವರ ಕನಕ ಗುರು ಪೀಠ ಕಾಗಿನೆಲೆ ಮಹಾಸಂಸ್ಥಾನದ ಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಕೇಂದ್ರದ ಬುಡಕಟ್ಟು ಸಚಿವಾಲಯದ ಆಯುಕ್ತರಿಗೆ ಕುರುಬ ಸಮುದಾಯದ ಮುಖಂಡರು ಸಂಘಟನೆಗಳ ಹಿರಿಯರು ಮನವಿ ಪತ್ರವನ್ನು ಸಲ್ಲಿಸಿದರು.
ಈಗಾಗಲೇ ಕರ್ನಾಟಕದಲ್ಲಿ 1980ರ ದಶಕದ ಹಿಂದೆ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿಯನ್ನು ಕಲ್ಪಿಸಲಾಗಿತ್ತು. ಕೆಲ ಕಾರಣಗಳಿಂದ ಮಧ್ಯದಲ್ಲಿ ಎಸ್ಟಿ ಮೀಸಲಾತಿ ಸರ್ಕಾರ ತೆಗೆದುಹಾಕಿದ್ದು ಪುನಃ ಸಮುದಾಯದ ಬೇಡಿಕೆಯಂತೆ ರಾಜ್ಯ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ಸೇರಿದಂತೆ ಅಗತ್ಯ ತಾಂತ್ರಿಕ ಮಾಹಿತಿಯನ್ನು ಎರಡು ಬಾರಿ ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದು ಕೇಂದ್ರ ಸರ್ಕಾರದ ಬುಡಕಟ್ಟು ಅಧ್ಯಯನ ಮತ್ತು ಸಚಿವಾಲಯ ಎಸ್ ಟಿ ಮೀಸಲಾತಿ ಕಲ್ಪಿಸುವ ಕಡತವನ್ನು ಪರಿಶೀಲನೆ ಮಾಡಿದ್ದು ಶೀಘ್ರದಲ್ಲೇ ಕೇಂದ್ರ ಸರ್ಕಾರದ ಸಚಿವ ಸಂಪುಟದ ಮುಂದೆ ಕಡತವನ್ನು ಮಂಡನೆ ಮಾಡಿ ಎಸ್ ಟಿ ಮೀಸಲಾತಿಯನ್ನು ಘೋಷಣೆ ಮಾಡುವಂತೆ ಆಯುಕ್ತರಲ್ಲಿ ಮನವಿ ಮಾಡಲಾಯಿತು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ,ವಿಧಾನಪರಿಷತ್ ಮಾಜಿ ಸಭಾಧ್ಯಕ್ಷ ರಘುನಾಥ್ ಮಲ್ಕಾಪೂರೆ,ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳಿಕೇರಿ,ಹಾಲುಮತ ಮಹಾಸಭಾ ಅಧ್ಯಕ್ಷ ರುದೃಣ್ಣ ಗುಳಗುಳಿ ಸೇರಿದಂತೆ ಕುರುಬ ಸಮಾಜದ ಹಿರಿಯ ಮುಖಂಡರು ಇದ್ದರು.

