Breaking News
ನಗರಸಭೆ:ಮನೆ ತೆರಿಗೆಯ ಆದಾಯಕ್ಕಿಂತ ವಾಣಿಜ್ಯ ತೆರಿಗೆಯ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡಲು ಸಲಹೆ.

*ಸಿಟಿ ಮಾರ್ಕೆಟ್ ಸ್ಥಳಾಂತರ ಮಾಡಿ ಆದಾಯ ದ್ವಿಗುಣ ಮಾಡಿ

*ಬೀದಿ ಬದಿ ವ್ಯಾಪಾರಸ್ಥರ ತೆರಿಗೆ ಮೇಲೆ ನಿಗಾ ಇರಲಿ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ನಗರಸಭೆಯ ೨೦೨೬-ಮತ್ತು ೨೭ ನೇ ಸಾಲಿ ಆಯವ್ಯಯ(ಹಣಕಾಸು ಮಂಡನೆಯ) ೨೯ ಕೋಟಿಗು ಅಧಿಕ ಮಂಡಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಘೋಷಣೆ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಆರ್. ವಿರುಪಾಕ್ಷ ಮೂರ್ತಿ ಹೇಳಿದರು.

ಅವರು ನಗರಸಭೆಯ ಸಭಾಂಗಣದಲ್ಲಿ ೨೦೨೬-ಮತ್ತು ೨೭ ನೇ ಸಾಲಿ ಆಯವ್ಯಯ(ಹಣಕಾಸು ಮಂಡನೆಯ) ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಆದಾಯ ತೆರಿಗೆ ಶೇ. ೪ರಷ್ಟು ಹೆಚ್ಚುಗೋಳಿಸಲಾಗುವುದು.

ಯುಗಾದಿ ಹಬ್ಬದ ಮುಗಿದ ನಂತರ ಗುಂಡಮ್ಮ ಕ್ಯಾಂಪ ಸಿಟಿ ಮಾರ್ಕೆಟ್ ಗೆ ಸ್ಥಳಾಂತರ ಮಾಡಲಾಗುವುದು. ಎಲ್ಲರ ಸಲಹೆ ಸೂಚನೆಗಳನ್ನು ತೆಗದು ಕೊಂಡು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಅನುಮೋದನೆ ಪಡೆದುಕೊಂಡು ಬಜೆಟ್ ಘೋಷಣೆ ಮಾಡಲಾಗುವುದು ಎಂದರು.

ನಿವೃತ್ತ ಪ್ರಾಚಾರ್ಯ ಡಾ.ಬಿ.ಸಿ.ಐಗೊಳ ಮಾತನಾಡಿ, ಮನೆ ತೆರಿಗೆಗಿಂತ-ವಾಣಿಜ್ಯ ತೆರಿಗೆ ಹೆಚ್ಚಿಗೆ ಗೋಳಿಸಿಕೊಳ್ಳಬೇಕು.

ವಾಣಿಜ್ಯ ತೆರಿಗೆಮತ್ತು ಜಾಹಿರಾತು ತೆರಿಗೆಮೂಲಕ ನಗರಸಭೆ ಆದಾಯ ಸಂಪನ್ಮೂಲ ಕ್ರೋಡಿಕರಿಸಿಕೋಳ್ಳಿ. ನಗರದಲ್ಲಿರುವ ಉದ್ಯಾನವನಗಳ ಸುಂದರೀಕರಣಗೊಳಿಸಿ ಸಾರ್ವಜನಿಕರಿಗೆ ಹೋರೆಯಾಗಲಾರದಂತೆ ಶುಲ್ಕ ನಿಗದುಪಡಿಸಿಕೊಳ್ಳಿ ಎಂದರು.

ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ಮೊದಲು ಗುಂಡಮ್ಮ ಕ್ಯಾಂಪಗೆ ಮಾರುಕಟ್ಟೆ ಸ್ಥಳಾಂತರಿಸಿ ನಗರಸಭೆಯ ಆದಾಯ ದ್ವಿಗುಣಗೋಳಿಸಿ. ಅನಧಿಕೃತ ಲೇಔಟಗಳಲ್ಲಿ ಇರುವ ಮನೆಗಳನ್ನು ಸಕ್ರಮ ಗೊಳಿಸಿ ನಗರಸಭೆ ಆದಾಯ ಭರಿಸಿಕೊಂಡು ಮೂಲಭುತ ಸೌರ್ಕಯ ಒದಗಿಸಿ ಎಂದರು.

ನಗರಸಭೆಯ ಮಾಜಿ ಅಧ್ಯಕ್ಷ ಮೌಲಾಸಾಬ,ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಮೇಶ ಚೌಡ್ಕಿ,ನಗರಸಭೆ ಸದಸ್ಯ ಮಸ್ತಕಅಲಿ ಮಾತನಾಡಿ ನಗರಸಭೆ ಆದಾಯವನ್ನು ವಾಣಿಜ್ಯ ಮೂಲಕ ಇಮ್ಮಡಿಗೊಳಿಸಿಕೊಳ್ಳಿ. ಆಸ್ತಿ ತೆರಿಗೆ ಹೆಚ್ಚಿಸಿ ತೊಂದರೆ ಮಾಡಬೇಡಿ ಎಂದರು.

ಸಭೆಯಲ್ಲಿ ವೀರಭದ್ರಪ್ಪ ಎಸ್, ಖಾದರ ಪಾಶಾ, ಪತ್ರಕರ್ತರಾದ ವೀರಾಪೂರ ಕೃಷ್ಣ,ಎಂ.ಜೆ. ಶ್ರೀನಿವಾಸ,ಪ್ರಸನ್ನದೇಸಾಯಿ ಅನಿಸಿಕೆ ವ್ಯಕ್ತಪಡಿಸಿದರು.