Breaking News
ತುಂಗಭದ್ರಾ ಡ್ಯಾಂ ನಿಂದ ಅಕ್ರಮವಾಗಿ ಕಾರ್ಖಾನೆಗಳಿಗೆ ನೀರು ಪೂರೈಕೆ,ವ್ಯಾಪಕ ಟೀಕೆ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತುಂಗಭದ್ರಾ ಡ್ಯಾಂ ನಲ್ಲಿರುವ ನೀರನ್ನು ಅಕ್ರಮವಾಗಿ ಅಧಿಕಾರಿಗಳು ಕಾರ್ಖಾನೆಗಳಿಗೆ ಹರಿಸುತ್ತಿರುವುದು ಖಂಡನೀಯವಾಗಿದೆ. ನಿಯಮಗಳ ಪ್ರಕಾರ ಪ್ರಸ್ತುತ ಕಾರ್ಖಾನೆಗಳಿಗೆ ನೀರನ್ನು ಪೂರೈಕೆ ಮಾಡಲು ಬರುವುದಿಲ್ಲ, ಆದರೂ ಅಧಿಕಾರಿಗಳು ಅಕ್ರಮವಾಗಿ ಕಾರ್ಖಾನೆಗಳ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ನೀರನ್ನು ಹರಿಸುತ್ತಿದ್ದಾರೆ ಎಂದು ತುಂಗಭದ್ರಾ ಉಳಿಸಿ ಆಂಧೋಲನ ಸಮಿತಿಯ ಅಧ್ಯಕ್ಷ ವೆಂಕಟೇಶ್ ಎಂ ಆರ್ ಒತ್ತಾಯಿಸಿದ್ದಾರೆ .

ತುಂಗಭದ್ರಾ ಜಲಾಶಯದಿಂದ ಮುನಿರಾಬಾದ್ ನೀರಾವರಿ ನಿಗಮದ ಕೇಂದ್ರ ವಲಯದ ಅಧಿಕಾರಿಗಳು ತುಂಗಭದ್ರಾ ಜಲಾಶಯದಿಂದ ಪ್ರಸ್ತುತ ಏಪ್ರಿಲ್ ತಿಂಗಳಲ್ಲೂ ಅಕ್ರಮವಾಗಿ ನೀರು ಸರಬರಾಜು ಮಾಡುವುದನ್ನು ತೀವ್ರವಾಗಿ ಖಂಡನೀಯವಾಗಿದೆ.

ಪ್ರಸ್ತುತ ಜಲಾಶಯದಲ್ಲಿ 12 ಟಿಎಂಸಿ ನೀರು ಇದ್ದು, ಇದರಲ್ಲಿ ಜಲಾಶಯದ ಜಲಚರಗಳಿಗಾಗಿ 2ಟಿಎಂಸಿ ಮೀಸಲಿದೆ. ಉಳಿದ 10ಟಿಎಂಸಿಯಲ್ಲಿ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರು, ಜಲಾಶಯದ ಎಡ ಮತ್ತು ಬಲ ಭಾಗದ ವಿಜಯನಗರ ಕಾಲುವೆಗಳಿಗೆ ನಿಂತ ಬೆಳೆಗಳಿಗೆ ನೀರನ್ನು ಮೇ ತಿಂಗಳ ಅಂತ್ಯದವರೆಗೆ ಒದಗಿಸ ಬೇಕು. ಆದರೆ ನೀರಾವರಿ ನಿಗಮದ ಅಧಿಕಾರಿಗಳು ಕಾರ್ಖಾನೆಗಳಿಗೆ ನೀರನ್ನು ಕೊಡಲು ಆಸ್ಪದ ಇಲ್ಲದಿದ್ದರೂ ಅಕ್ರಮವಾಗಿ ನೀರು ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಕುಡಿಯುವ ನೀರಿಗೆ ಕೊರತೆಯಾಗುವ ಸಂಭವ ಇದೆ. ನಿಂತ ಬೆಳೆಗೆ ನೀರಿನ ಕೊರತೆ, ಜಲಚರ ಮೀಸಲು ನೀರಿನಲ್ಲಿ ಕೊರಟೆಯಾಗುವ ಸಂಭವ ಇದೆ.

ಜಲಾಶಯದ ನೀರನ್ನು ಅಕ್ರಮವಾಗಿ ನೀಡುತ್ತಿರುವ ನೀರಾವರಿ ನಿಗಮದ ಮುಖ್ಯ ಅಭಿಯತರರು ಹಾಗೂ ಅಧೀಕ್ಷಕ ಅಭಿಯಂತರನ್ನು ಅಮಾನತುಗೊಳಿಸಿ, ತನಿಖೆ ನಡೆಸಬೇಕೆಂದು

ತುಂಗಭದ್ರಾ ಉಳಿಸಿ ಆಂಧೋಲನ ಸಮಿತಿಯ ಅಧ್ಯಕ್ಷ ವೆಂಕಟೇಶ್ ಎಂ ಆರ್ ಒತ್ತಾಯಿಸಿದ್ದಾರೆ . ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆಯ ನಡೆಸಲಾಗುವುದೆಂದು ತಿಳಿಸಿದ್ದಾರೆ.

ಬಾಲ್ಯವಿವಾಹ ಪ್ರಕರಣ ಮೂರು ಜನರಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ.

*2021ರಲ್ಲಿ ಕೃಷ್ಣದೇವರಾಯ ನಗರದಲ್ಲಿ ಪ್ರಕರಣ. *ಅಪ್ರಾಪ್ತ ಬಾಲಕಿಯ ತಂದೆ ಸೇರಿ ಮದುಮಗ ಹಾಗೂ ತಾಯಿ ಗೆ ಶಿಕ್ಷೆ ಪ್ರಕಟ.
*ಎರಡು ವರ್ಷ ಸೆರೆ ವಾಸ ಮತ್ತು ತಲಾ ಹತ್ತು ಸಾವಿರ ರೂ.ದಂಡ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತಾಲೂಕಿನ ಕೃಷ್ಣದೇವರಾಯ ನಗರದಲ್ಲಿ 2021 ಮೇ 5 ರಂದು ಜರುಗಿದ್ದ ಬಾಲ್ಯ ವಿವಾಹಕ್ಕೆ ಸಂಬಂಧಪಟ್ಟಂತೆ ಪ್ರಧಾನ ಸಿವಿಲ್ ಮತ್ತು ಜೆ. ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ ಅವರು ಆರೋಪಿಗಳಿಗೆ ಎರಡು ವರ್ಷ ಜೈಲು ಹಾಗೂ ತಲಾ ಹತ್ತು ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ತಾಲೂಕಿನ ಕೃಷ್ಣದೇವರಾಯ ನಗರದಲ್ಲಿ   05-05-2021 ರಂದು ಬೆಳಗ್ಗೆ 06-00 ಅವಧಿಯಲ್ಲಿ ಆರೋಪಿ  ಮಹೇಶ ತಂದೆ ಬಸ್ಸಪ್ಪ ಕುಡಲ್ಲಿ ಇತನು ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು   ದುರಗಮ್ಮ, ಕೃಷ್ಣಪ್ಪ ದಂಪತಿಗಳ ಮಗನಾದ  ಈರಣ್ಣ   ನಾಯಕ ಎನ್ನುವ ಯುವಕನಿಗೆ ಕೊಟ್ಟು   ಬಾಲ್ಯ ವಿವಾಹ ಮಾಡಿದ್ದರಿಂದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 09, 10 ಅಡಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ.  ಆರೋಪಿತರ ಮೇಲೆ ತನಿಖೆಯಲ್ಲಿ ಸಾಕ್ಷ್ಯಾಧಾರಗಳು ಕಂಡುಬಂದಿದ್ದರಿಂದ ದೋಷಾರೋಪಣ ಪಟ್ಟಿಯನ್ನು ಅಂದಿನ ತನಿಖಾಧಿಕಾರಿ ಯಲಪ್ಪ ಪಿಎಸ್‌ಐ (ನಿವೃತ್ತ) ಹಾಗೂ ಪಿಎಸ್ ಐ  ಶಾರದಮ್ಮ  ಇವರು  ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.   ಪ್ರಕರಣದ  ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ಮತ್ತು ಜೆ. ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ ಇವರು ಪ್ರಕರಣದ ಆರೋಪಿಗಳಾದ  ಈರಣ್ಣ  ನಾಯಕ, ದುರಗಮ್ಮ ಮತ್ತು ಮಹೇಶ ಕುಡಡ್ಲಿ ಇವರ ಮೇಲೆ ವಿಚಾರಣೆಯಲ್ಲಿ ಸಾಕ್ಷ್ಯಾಧಾರಗಳು ಕಂಡುಬಂದಿದ್ದರಿಂದ ಆರೋಪಿತರು ದೋಷಿಯೆಂದು ನಿರ್ಣಹಿಸಿ ತೀರ್ಪು ನೀಡಿದ್ದಾರೆ. ಆರೋಪಿತರಿಗೆ ಅಪರಾಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 9, 10 ಅಪರಾಧಕ್ಕೆ 2 ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸತಕ್ಕದು ಮತ್ತು ತಲಾ 10,000 ಸಾವಿರ ರೂಪಾಯಿ ಜುಲ್ತಾನೆ. ಶಿಕ್ಷೆಯನ್ನು ವಿಧಿಸಿ ಆದೇಶಿಸಲಾಗಿದೆ.   ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ  ವಾದ ಮಂಡಿಸಿದ್ದರು.  ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಸೈಯ್ ಗೌಸ್, ಮಾಂತೇಶ,  ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಾಕಷ್ಟು ಸಹಕಾರ ನೀಡಿದ್ದು ಇರುತ್ತದೆ.

ಕುರುಹೀನ ಶೆಟ್ಟಿ ಸಮಾಜದ ಆಶ್ರಯದಲ್ಲಿ.. ‘ತಾರಕಾ ಸುರನ ವಧೆ’ ಬಯಲಾಟ ಯಶಸ್ವಿ ಪ್ರದರ್ಶನ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ; ಕುರುಹಿನ ಶೆಟ್ಟಿ ಸಮಾಜದ ಶ್ರೀ ನೀಲಕಂಠೇಶ್ವರ ದೇವಸ್ಥಾನದ 37ನೇ ವಾರ್ಷಿಕೋತ್ಸವದ ಜಾತ್ರೆಯ ನಿಮಿತ್ತವಾಗಿ ಶ್ರೀ ನೀಲಕಂಠೇಶ್ವರ ಬಯಲಾಟ ಸಂಘ ದವರು ಪ್ರದರ್ಶಿಸಿದ ‘ತಾರಕಾಸುರನ ವಧೆ’ಬಯಲಾಟ ಯಶಸ್ವಿಯಾಗಿ ಪ್ರೇಕ್ಷಕರ ಮನಸ್ಸು ಸೂರೆಗೊಂಡಿತು. ಗಿರಿಜೆ ಮತ್ತು ಶಂಕರರ ಕಲ್ಯಾಣೋತ್ಸವ ಮತ್ತು ಇದರ ಹಿಂದಿನ ಇತಿಹಾಸವನ್ನು ನೆನಪಿಸುವ ತಾರಕಾ ಸುರನ ವಧೆ, ಹಂಪಿಯ ಹೇಮಕೂಟ, ವಿರೂಪಾಕ್ಷ ಮಂದಿರ,ಪಂಪಾ ಸರೋವರ,ಪಂಪಾ ಕ್ಷೇತ್ರದ ಸೌಂದರ್ಯವನ್ನು ಹೊಗಳುವ ಸನ್ನಿವೇಶಗಳು ಮತ್ತು ಶಿವನ ತಪೋಭಂಗ ಮಾಡುವ ಮನ್ಮಥನ ದೃಶ್ಯ ಮತ್ತು ತಾರಕಾಸುರನ ವಧೆ ಮಾಡುವ ಸನ್ನಿವೇಶಗಳು ಕಣ್ಣಿಗೆ ಕಟ್ಟುವಂತೆ ಇದ್ದವು.

ತಾರಕಾಸುರನ ವಧೆ ಬಯಲಾಟದ

ಪಾತ್ರ ವರ್ಗದಲ್ಲಿ ಯಲ್ಲಪ್ಪ ಪೊಲಕಲ್,ಐಲಿ ಮಾರುತಿ,ಐಲಿ ನಂಜುಂಡ,ಐಲಿ ರವಿ,ಮಾಂತಾ ಬಸವರಾಜ, ತಟ್ಟಿ ಚೇತನ್,ಐಲಿ ಶಂಕರ್, ಶಿರಿಗೇರಿ ಬಸವರಾಜ, ಬಂಡಿ ಮಾರುತಿ,

ಧೂಪಾ ಮಂಜುನಾಥ, ಗಿಟಗಿ ನೀಲಕಂಠ, ಕುಣಿಗಿ ನಾಗರಾಜ, ಅನುಪ ಮಾಂತಾ,ಪವಿತ್ರ ಗೊಲ್ಲರಹಳ್ಳಿ,ಅಂಜಿನಮ್ಮ ಕೂಡ್ಲಗಿ,ಮಲ್ಲಿಕಾರ್ಜುನ ಕೂರಂಟಿ,ಹಾರ್ಮೋನಿಯಂ ಚನ್ನಪ್ಪ ಕುರುಗೋಡು,ಕಥಾ ಸಂಚಾಲಕರಾಗಿ ವಿರೂಪಾಕ್ಷಪ್ಪ ಶಿರವಾರ ಕಾರ್ಯ ನಿರ್ವಹಿಸಿದರು.

ಬಯಲಾಟದಲ್ಲಿ ಮನ್ಮಥನ ಪಾತ್ರ ಮಾಡಿದ ಯಲ್ಲಪ್ಪ ಪೊಲಕಾಲ್ ಇವರನ್ನು ಸಂಗೀತ ಸ್ವರಾಂಜಲಿ ಕಲಾ ತಂಡದ ವತಿಯಿಂದ ಪತ್ರಕರ್ತ ಕೆ.ನಿಂಗಜ್ಜ, ಹನುಮಂತಪ್ಪ ಹುಲಿಹೈದರ್,ಖಾಜಾಹುಸೇನ ಮುಳ್ಳೂರು ಹಾಗೂ ತಿಮ್ಮಪ್ಪ ಸನ್ಮಾನಿಸಿದರು.

ಹಂಪಿಪ್ರಾಧಿಕಾರದ ಫೆರಿಪರಲ್ ಝೋನ್‌ನಲ್ಲಿರುವ ತಿರುಮಲಾಪೂರ ಕೃಷಿಭೂಮಿ ಮೇಲೆ ಹೊಸಪೇಟೆ ಪ್ರಭಾವಿಗಳ ಕಣ್ಣು!

*ಸಣ್ಣಪುಟ್ಟ ಹೊಟೇಲ್, ರೆಸಾರ್ಟ್ ಬಂದ್ ಮಾಡಿಸುವ ಕೇಸಿನಲ್ಲಿ ಇವರ ನೆರಳು ಆರೋಪ
*ಎಕರೆಗೆ 70-90 ಲಕ್ಷ ರೂ. ಕೊಟ್ಟು ಬೆಳೆ ಬಾಳುವ ಭೂಮಿ ಬೇನಾಮಿ ಹೆಸರಿನಲ್ಲಿ ಖರೀದಿ
*ಉಳಿದ ಕೃಷಿಭೂಮಿ ಒತ್ತಾಯಪೂರ್ವಕ ಖರೀದಿಗೆ ತಂತ್ರ

ಕಿಷ್ಕಿಂಧವಾಣಿ ವಿಶೇಷ
ಕೆ.ನಿಂಗಜ್ಜ
ಗಂಗಾವತಿ: ಆನೆಗೊಂದಿ, ಸಾಣಾಪೂರ ಭಾಗಕ್ಕೆ ನಿತ್ಯವೂ ಸಾವಿರಾರು ಪ್ರವಾಸಿಗರು, ಹನುಮಭಕ್ತರು ಆಗಮಿಸುತ್ತಿದ್ದು ಪ್ರತಿ ವಾರ ಟೆಕ್ಕಿಗಳು ವೀಕ್ ಎಂಡ್ ಕಳೆಯಲು ಆಗಮಿಸುತ್ತಿರುವುದರಿಂದ ಹೊಟೇಲ್, ರೆಸಾರ್ಟ್ಗಳು ಮತ್ತು ಹೋಂಸ್ಟೇಗಳು ಬಹಳಷ್ಟಿವೆ. ಇದರಲ್ಲಿ ಅಕ್ರಮ ಸಕ್ರಮ ಎರಡೂ ಇದ್ದು ಈ ಭಾಗದಲ್ಲಿ ಹೊಟೇಲ್, ರೆಸಾರ್ಟ್ ನಿರ್ಮಿಸಲು ಹಣವಂತರು ಹಾಗೂ ಕೆಲ ಪ್ರಭಾವಿಗಳು ಹಣ ಬಲ ತೋಳ್ಬಲದಿಂದ ಭೂಮಿ ಖರೀದಿಸುತ್ತಿದ್ದಾರೆ.
ಆನೆಗೊಂದಿ ಭಾಗದ ಫೆರಿಪರಲ್ ಝೋನ್ ವ್ಯಾಪ್ತಿಯ ತಿರುಮಲಾಪೂರ ನದಿ ಪಾತ್ರದ ಭೂಮಿ ಖರೀದಿಗೆ ಹೊಸಪೇಟೆಯ ಪ್ರಭಾವಿ ವ್ಯಕ್ತಿಗಳು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಯತ್ನಿಸುತ್ತಿದ್ದು ಈಗಾಗಲೇ ಬೇನಾಮಿ ಹೆಸರಿನಲ್ಲಿ 10-15 ಎಕರೆ ಭೂಮಿಯನ್ನು ಖರೀದಿಸಿದ್ದು ಮುಂದಿನ ದಿನಗಳಲ್ಲಿ ಸ್ಟಾರ್ ಹೊಟೇಲ್, ರೆಸಾರ್ಟ್ ನಿರ್ಮಾಣಕ್ಕೆ ನಿಯಮಗಳಲ್ಲಿರುವ ರಸ್ತೆ ಇತರೆ ಮೂಲಸೌಕರ್ಯ ಕಲ್ಪಿಸಲು ಈಗಾಗಲೇ ಬೇನಾಮಿಯಾಗಿ ಖರೀದಿಸಿರುವ ಭೂಮಿಯ ಅಕ್ಕಪಕ್ಕದಲ್ಲಿರುವ ಭೂಮಿಗಳನ್ನು ಖರೀದಿಗೆ ಮುಂದಾಗಿದ್ದು ಕೊಡದಿದ್ದರೆ ಹೆದರಿಸುವ ಯತ್ನಗಳು ನಡೆದಿವೆ. ತಿರುಮಲಾಪೂರ, ಸಾಣಾಪೂರ ಮತ್ತು ಬಸಾಪೂರ ಭಾಗದಲ್ಲಿರುವ ಸಣ್ಣ ಪುಟ್ಟ ಹೊಟೇಲ್, ರೆಸಾರ್ಟ್ ಬಂದ್ ಮಾಡಿಸುವಲ್ಲಿ ಬೇನಾಮಿ ಹೆಸರಿನಲ್ಲಿ ಭೂಮಿ ಖರೀದಿಸಿದ ಹೊಸಪೇಟೆಯ ಪ್ರಭಾವಿಗಳ ಕೈವಾಡವಿರುವ ಕುರಿತು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಈ ಹಿಂದೆ ಕಮಲಾಪೂರ, ರಾಮಸಾಗರ, ಬುಕ್ಕಸಾಗರ ವ್ಯಾಪ್ತಿಯಲ್ಲಿ ಪ್ರಭಾವಿಗಳು ಕೃಷಿ ಭೂಮಿ ಖರೀದಿಸಿ ವಾಣಿಜ್ಯ ಬಳಕೆಗೆ ಯತ್ನಿಸಿ ವಿಫಲವಾಗಿದ್ದು ಇದೀಗ ಆನೆಗೊಂದಿ ಭಾಗದ ತಿರುಮಲಾಪೂರ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಫೆರಿಪರಲ್ ಝೋನ್ ನಲ್ಲಿ ಬರುವುದರಿಂದ ಕೃಷಿಯೇತರ ಭೂಮಿಯಾಗಿ ಪರಿವರ್ತಿಸಲು ಮತ್ತು ಕಮರ್ಷಿಯಲ್ ಆಗಿ ಬಳಕೆ ಮಾಡಲು ಕಾನೂನು ವ್ಯಾಪ್ತಿಯಲ್ಲಿ ಅವಕಾಶವಿರುವುದರಿಂದ ಹೊಸಪೇಟೆಯ ಪ್ರಭಾವಿಗಳು ತಿರುಮಲಾಪೂರದಲ್ಲೇ ಸುಮಾರು 60 ಎಕರೆ ಭೂಮಿ ಖರೀದಿಸುವ ಯೋಜನೆಯೊಂದಿಗೆ ಫಿಲ್ಡಿಗೆ ಇಳಿದಿದ್ದು ಈಗಾಗಲೇ 10-15 ಎಕರೆಯನ್ನು ಆನೆಗೊಂದಿ ಭಾಗದ ಅಧಿಕೃತ ರೆಸಾರ್ಟ್ ಮಾಲೀಕರನೊರ್ವ ಖರೀದಿಸಿಕೊಟ್ಟಿದ್ದಾರೆನ್ನಲಾಗುತ್ತಿದ್ದು ಉಳಿದ ಕೃಷಿ ಭೂಮಿ ಖರೀದಿಸಲು ಒತ್ತಡ ಹಾಕುತ್ತಿರುವ ವರದಿಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸಾಣಾಪೂರ, ತಿರುಮಲಾಪೂರ ಮತ್ತು ಬಸಾಪೂರ ಭಾಗದ ಜನರು ಪ್ರಭಾವಿಗಳ ಕೃತ್ಯದ ಬಗ್ಗೆ ಮಾತನಾಡುತ್ತಿದ್ದು ಪ್ರಾಧಿಕಾರದ ನಿಯಮಗಳಿಂದ ನೊಂದಿರುವ ಸ್ಥಳೀಯರು ಹೊಸಪೇಟೆಯ ಪ್ರಭಾವಿಗಳು ಭೂಮಿ ಖರೀದಿಸಿ ಹೊಟೇಲ್, ರೆಸಾರ್ಟ್ ಉದ್ಯಮ ಆರಂಭಿಸಿದರೆ ಸಣ್ಣ ಪುಟ್ಟ ಹೊಟೇಲ್, ರೆಸಾರ್ಟ್ ಇಟ್ಟುಕೊಂಡವರಿಗೆ ಉಳಿಗಾಲವಿಲ್ಲ. ಜತೆಗೆ ಈಗಗಲೇ ಸರಕಾರದ ಒಂದಿಲ್ಲೊಂದು ಇಲಾಖೆಯವರು ದೂರಿನ ನೆಪದಲ್ಲಿ ಆನೆಗೊಂದಿ, ಸಾಣಾಪೂರ,ಮಲ್ಲಾಪೂರ ಮತ್ತು ಸಂಗಾಪೂರ ಭಾಗದಲ್ಲಿ ಹೊಟೇಲ್ ಗಳನ್ನು ತೆರವುಗೊಳಿಸುತ್ತಿದ್ದಾರೆ. ಕಮರ್ಷಿಯಲ್ ಕರೆಂಟ್ ತೆಗೆದುಕೊಂಡರೂ ನೋಟೀಸ್ ನೀಡದೇ ಕರೆಂಟ್ ಕಟ್ ಮಾಡುತ್ತಿದ್ದು ಸ್ಥಳೀಯರನ್ನು ಹಂಪಿ ಪ್ರಾಧಿಕಾರದ ನಿಯಮಗಳ ಉಲ್ಲಂಘನೆಯ ಒಕ್ಕಲೆಬ್ಬಿಸಲಾಗುತ್ತಿದೆ.
ಈಗಾಗಲೇ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಹಂಪಿ ಅಭಿವೃದ್ಧಿ ಮುಕ್ತಗೊಳಿಸಬೇಕು ಮತ್ತು 1988 ರಾಜ್ಯ ಪುರಾತತ್ವ ಮತ್ತು ಪ್ರಾಚ್ಯವಸ್ತು ಸಂರಕ್ಷಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಆನೆಗೊಂದಿ ಭಾಗದಲ್ಲಿಯೂ ಹಂಪಿ, ಕಡ್ಡಿರಾಂಪೂರ ಮತ್ತು ಕಮಲಾಪೂರ ಭಾಗದಲ್ಲಿ ಕಮರ್ಷಿಯಲ್ ಝೋನ್ ಮಾಡಿದಂತೆ ಆನೆಗೊಂದಿ ಭಾಗದಲ್ಲಿಯೂ ಮಾಡಬೇಕೆನ್ನುವುದು ಸ್ಥಳೀಯರ ಹೋರಾಟವಾಗಿದೆ.
ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಅಕ್ರಮವಾಗಿ ಕೃಷಿ ಭೂಮಿಯನ್ನು ಹೆಚ್ಚು ಬೆಳೆ ನೀಡಿ ಖರೀದಿಸುವವರ ಕುರಿತು ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಜತೆಗೆ ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ತಿದ್ದುಪಡಿ ಮಾಡಿ ಕೋರ್ ಝೋನ್,ಬಫರ್ ಝೋನ್ ಹಾಗೂ ಫೆರಿಪರಲ್ ಝೋನ್ ಗಳ ವಿಸ್ತೀರ್ಣ ಸಡಿಲೀಕರಣ ಮಾಡುವ ಮೂಲಕ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಸ್ಥಳೀಯರ ನೆರವಿಗೆ ಬರಬೇಕಿದೆ.

****
ರಾಜ್ಯ ಪುರಾತತ್ವ ಮತ್ತು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯಿಂದ ಗುರುತಿಸಲ್ಪ ಸ್ಮಾರಕಗಳ ಪೈಕಿ ಆನೆಗೊಂದಿ ಮತ್ತು ವಿರೂಪಾಪೂರಗಡ್ಡಿ ಕೋರ್ ಝೋನ್ ನಲ್ಲಿ ಇದ್ದು ತಿರುಮಲಾಪೂರ ಫೆರಿಪರಲ್ ಝೋನ್ ನಲ್ಲಿ ಬರುತ್ತದೆ. ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಆನೆಗೊಂದಿ ಪ್ರದೇಶದ ಪೈಕಿ ತಿರುಮಲಾಪೂರ ಗ್ರಾಮದಲ್ಲಿರುವ ಕೃಷಿ ಭೂಮಿಯನ್ನು ಪ್ರಾಧಿಕಾರದ ನಿಯಮದಂತೆ ಅರ್ಜಿ ಸಲ್ಲಿಸಿ ಕೃಷಿಯೇತರ ಭೂಮಿ ಮಾರ್ಪಡಿಸಿ ವಾಣಿಜ್ಯ ವ್ಯವಹಾರ ಮಾಡಲು ಬರುತ್ತದೆ. ಈ ನಿಟ್ಟಿನಲ್ಲಿ ಭೂಮಿ ಖರೀದಿ ನಡೆದಿರಬಹುದು, ಎಲ್ಲವೂ ನಿಯಮಗಳಂತೆ ನಡೆಯಬೇಕು.
-ಶೇಜೇಶ್ವರ ಉಪನಿರ್ದೇಶಕರು ರಾಜ್ಯ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ

ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಂದ ನೀರಿನ ಅರವಟಿಗೆ ಆರಂಭ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ಗಂಗಾವತಿ ವಿರುಪಾಪೂರ ತಾಂಡದ ಸದ್ಗುರು ಸೇವಾಲಾಲ್ ಮಹಾರಾಜ ಸರ್ಕಲ್ ಬಳಿ

ಕರ್ನಾಟಕ ರತ್ನ ಡಾ.ವಿಷ್ಣುವರ್ಧನ ಅಭಿಮಾನಿಗಳು ಹಾಗೂ

ವಿರೂಪಾಪೂರತಾಂಡ

ವತಿಯಿಂದ

ಶುದ್ಧ ಕುಡಿಯುವ ನೀರಿನ ಅವರಟಿಗೆ ಸೇವೆ ಆರಂಭಿಸಲಾಯಿತು.

ಬಿರು ಬೇಸಿಗೆಯ

ಬಿಸಿಲು ತಾಪಮಾನ ಹೆಚ್ಚಾಗುತ್ತಿದ್ದು ವಿರುಪಾಪೂರ ತಾಂಡ ಹಾಗೂ ನಗರದ ಅತಿ ಹೆಚ್ಚು ಜನರು ಕೂಲಿ ಕಾರ್ಮಿಕರು ಹಿರಿಯರು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಕೊಡುವ ಉದ್ದೇಶದಿಂದ ನೀರಿನ ಅರವಟಿಗೆ ಆರಂಭಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿರುಪಾಪೂರತಾಂಡದ

ವಿಷ್ಣುಸೇನ ಸಮಿತಿ,ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ

ಮಲ್ಲೆಪ್ಪ ಕುನ್ನಾ( ಕದಂಬ),

ಅಧ್ಯಕ್ಷ ಹನುಮಂತ ಜಾದವ್,ಉಪಾಧ್ಯಕ್ಷ

ಪಾಂಡು ನಾಯ್ಕ್ (ಬಟಣಿ),

ಪ್ರಧಾನ ಕಾರ್ಯದರ್ಶಿ

ರಾಜಾ ನಾಯಕ್,ಸಹಕಾರ್ಯದರ್ಶಿ

ಬಾಬು ನಾಯ್ಕ್ , ಸಂಘಟನಾ ಕಾರ್ಯದರ್ಶಿ

ರವಿಕುಮಾರ್ ಖಜಾಂಚಿ ಶಿವಪ್ಪ ,ವೆಂಕಟೇಶ್ ಗೋಬಿ ಹಾಗೂ

ಸಂಘದ ಕಾರ್ಯಕರಣಿ ಸದಸ್ಯರು ಹನಮಂತ ಪೂಜಾರಿ,ಪರಶುರಾಮ್,ಸೋಮ,ಅಶೋಕ ಹಸನಾ,ಚಂದ್ರ ನಾಯ್ಕ, ಕಿರಣಕುಮಾರ್,ರಾಮ ಮುನಿ,ರವಿಚಂದ್ರ ಚವ್ಹಾಣ ಸೇರಿದಂತೆ ಅನೇಕರಿದ್ದರು.

ಶ್ರೀ ನೀಲಕಂಠೇಶ್ವರ ದೇವಸ್ಥಾನದ 37ನೇ ವಾರ್ಷಿಕೋತ್ಸವ: ಶ್ರದ್ಧೆ, ಭಕ್ತಿಯಿಂದ ಜರುಗಿದ ರಥೋತ್ಸವ.

 

*ಕುರುಹೀನಶೆಟ್ಟಿ ಜಗದ್ಗುರು ಪೂಜ್ಯ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ,ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಸೇರಿ ಪ್ರಮುಖರ ಉಪಸ್ಥಿತಿ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಆರಾಧ್ಯ ದೈವ ಶ್ರೀ ನೀಲಕಂಠೇಶ್ವರ ದೇವರ ದೇವಸ್ಥಾನ ನಿರ್ಮಾಣದ 37ನೇ ವಾರ್ಷಿಕೋತ್ಸವದ ನಿಮಿತ್ಯ ಶ್ರೀ ನೀಲಕಂಠೇಶ್ವರ ಮಹಾರಥೋತ್ಸವ ಬಸವ ಜಯಂತಿಯಂದು ಸಂಜೆ ಸಾವಿರಾರು ಭಕ್ತರ ಮಧ್ಯೆ ಶ್ರದ್ದೆ, ಭಕ್ತಿಯಿಂದ ಜರುಗಿತು.

ಕರುಹೀನ ಶೆಟ್ಟಿ ಸಮಾಜದ ಜಗದ್ಗುರು ಪೂಜ್ಯ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗಿನ ಜಾವ ಶ್ರೀ ನೀಲಕಂಠೇಶ್ವರ ಸ್ವಾಮಿಗೆ ನೈರ್ಮಲ್ಯ ವಿಸರ್ಜನೆ, ಜಲಾಭಿಷೇಕ, ಪಂಚಾಮೃತ ಅಭಿಷೇಕ, ವಿವಿಧ ಹೂಗಳಿಂದ ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಮಧ್ಯಾಹ್ನ ದೇವಸ್ಥಾನಕ್ಕೆ ಭೇಟಿ ನೀಡಿ ನೀಲಕಂಠೇಶ್ವರ ಸ್ವಾಮಿಯ ದರ್ಶನ ಪಡೆದು ಮಡಿತೇರಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಕುರುಹಿನಶೆಟ್ಟಿ ಸಮಾಜದ ಮುಖಂಡರಾದ ಎಂ ಮಲ್ಲಿಕಾರ್ಜುನ ನಾಗಪ್ಪ ಸೇರಿದಂತೆ ಕುರುಹೀನಶೆಟ್ಟಿ ಸಮಾಜದ ಹಿರಿಯರು ಮತ್ತು ಶ್ರೀ ನೀಲಕಂಠೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಶ್ವಗುರು ಬಸವಣ್ಣ ವಿಶ್ವದ ಸಮಾನತೆಯ ಬೆಳಕು: ಗಾಲಿ ಜನಾರ್ದನ ರೆಡ್ಡಿ

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ವಿಶ್ವಗುರು ಬಸವಣ್ಣನವರು ವಿಶ್ವದ ಸಮಾನತೆಯ ಬೆಳಕಾಗಿ ಭಾರತದ ಹಿರಿಮೆಯನ್ನು ಮತ್ತು ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಅವರು ನಗರದ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಬಸವೇಶ್ವರ ಮೂರ್ತಿಗೆ ಹೂಮಾಲೆ ಸಮರ್ಪಿಸಿ ಪೂಜೆ ಮಾಡಿದ ನಂತರ ಮಾತನಾಡಿದರು. ವಿಶ್ವದ ಮೊದಲ ಪಾರ್ಲಿಮೆಂಟ್, ಅನುಭವ ಮಂಟಪನ್ನು ಪರಿಚಯ ಮಾಡಿ ಸರ್ವ ಜನರನ್ನು ಇದರಲ್ಲಿ ಸೇರ್ಪಡೆ ಮಾಡಿದರು ಜೊತೆಗೆ ಮಹಿಳೆಯರಿಗೂ ಸಮಾನ ಅವಕಾಶಗಳನ್ನು ನೀಡುವ ಮೂಲಕ ಯಾವುದೇ ಲಿಂಗ ತಾರತಮ್ಯ ಕ್ಕೆ ಅವಕಾಶ ನೀಡಿದೆ ಸರ್ವರು ಸಮಾನರು, ಜಗತ್ತು ಸಮಾನತೆಯ ಬದುಕಿನಲ್ಲಿ ಬಾಳಿದರೆ ಮಾತ್ರ ಸ್ವರ್ಗ ಇಲ್ಲೇ ಸೃಷ್ಟಿಯಾಗುತ್ತದೆ. ಜೊತೆಗೆ ಕಾಯಕ ಮತ್ತು ದಾಸೋಹದ ಮೂಲಕ ಪ್ರತಿಯೊಬ್ಬರು ಜೀವನವನ್ನು ನಡೆಸಬೇಕು. ದುಡಿದು ಮತ್ತು ಇತರರಿಗೆ ಸಹಾಯ ಮಾಡುವ ಮನೋಭಾವ ಹೊಂದಬೇಕೆನ್ನುವುದು ಬಸವಣ್ಣನವರ ಆದರ್ಶವಾಗಿದ್ದು, ಪ್ರತಿಯೊಬ್ಬರು ಬುದ್ಧ, ಬಸವ, ಅಂಬೇಡ್ಕರ್ ಮಾರ್ಗದಲ್ಲಿ ಸಾಗುವ ಮೂಲಕ ಬಸವಣ್ಣನವರು ಕಂಡ ಸಮ ಸಮಾಜದ ಕನಸನ್ನು ನನಸು ಮಾಡಬೇಕು. 12ನೇ ಶತಮಾನದಲ್ಲಿ ಬಸವಣ್ಣ ಬಿತ್ತಿದ ಸಮಾನತೆಯ ಮತ್ತು ಜಾತ್ಯಾತೀತ ಮನೋಭಾವ ರೂಢಿಸಿಕೊಳ್ಳಬೇಕು ಎಂದರು. ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಈ ಸಂದರ್ಭದಲ್ಲಿ ಮಾತನಾಡಿದರು. ಶಾಸಕ ಗಾಲಿ ಜನಾರ್ದನ ರೆಡ್ಡಿ ಮುರಹರಿ ನಗರದಲ್ಲಿ ಸಮಗಾರ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮ,ನಂತರ ಬಸವೇಶ್ವರ ವೃತ್ತದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಶಿವರಾಮೇಗೌಡ್ರು, ಮಾಜಿ ಶಾಸಕ ಪರಣ್ಣ ಮುನವಳ್ಳಿ,

ಆಲ್ ಇಂಡಿಯಾ ಮಜ್ದೂರ್ ಯೂನಿಯನ್ ರಾಷ್ಟ್ರೀಯ ಅಧ್ಯಕ್ಷ ಆರ್.ಬಿ.ಪಾಟೀಲ್,

ಬಿಜೆಪಿಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ್, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ ಆಗೋಲಿ, ಬಿಜೆಪಿ ಮುಖಂಡರಾದ ತಿಪ್ಪೇರುದ್ರಸ್ವಾಮಿ,ಹೆಚ್. ಗಿರೇಗೌಡ, ಮನೋಹರಗೌಡ ಹೇರೂರು, ವೀರೇಶ್ ಬಲಕುಂದಿ, ಸಿದ್ದರಾಮಯ್ಯ ಸ್ವಾಮಿ, ಪ್ರಸಾದ್, ಜೋಗದ ದುರ್ಗಪ್ಪ ದಳಪತಿ, ವಿಶ್ವನಾಥ್ ಕೆಸರಟ್ಟಿ, ಜಿಲಾನಿ ಪಾಷಾ, ದಿಲೀಪ್ ಕುಮಾರ ವಂದಾಳ, ಷಣ್ಮುಖಪ್ಪ, ಕಾಳಪ್ಪ, ಅರಳಿ ಶೇಖರಪ್ಪ, ಬಸವರಾಜು, ಶರಣಪ್ಪ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

ಅಕ್ರಮ ಹೆಂಡ (ಶೇಂದಿ)ಮಾರಾಟದ ಅಡ್ಡೆಯ ಮೇಲೆ ಗ್ರಾಮೀಣ ಪೊಲೀಸರ ದಾಳಿ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಅಕ್ರಮವಾಗಿ ಹೆಂಡ (ಶೇಂದಿ) ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಡಿಎಸ್ಪಿ ಕಚೇರಿ ಜಾಗೃತದಳ ಹಾಗೂ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಅಕ್ರಮ ಹೆಂಡ ಹಾಗೂ ಆರೋಪಿತನನ್ನು ವಶಕ್ಕೆ ಪಡೆದ ಪ್ರಕರಣ ಕನಕಗಿರಿ ತಾಲೂಕಿನ ಹಿರೇಡಂಕನಕಲ್ ಗ್ರಾಮದಲ್ಲಿ ಸೋಮವಾರದಂದು ಮಧ್ಯಾನ್ಹ ಜರುಗಿದೆ.

ಹಿರೇ ಡಂಕನಕಲ್ ಗ್ರಾಮದ ಮುತ್ತಣ್ಣ ಮ್ಯಾಗಳಮಾನಿ (50) ಎನ್ನುವ ವ್ಯಕ್ತಿ ಕಳೆದ ಹಲವು ತಿಂಗಳುಗಳಿಂದ ಆಂಧ್ರಪ್ರದೇಶದಿಂದ ಅಕ್ರಮವಾಗಿ ಹೆಂಡವನ್ನು ತಂದು ಹಿರೇಡಂಕನಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಕುರಿತು

ಡಿ. ವೈ. ಎಸ್. ಪಿ. ಜೆ.ಎಸ್. ನ್ಯಾಮಗೌಡ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಕಚೇರಿ ಜಾಗೃತ ದಳ ಹಾಗೂ ಗ್ರಾಮೀಣ ಸಿಪಿಐ ರಂಗಪ್ಪ ದೊಡ್ಮನಿ ಹಾಗೂ ಪೊಲೀಸರು ದಾಳಿ ನಡೆಸಿ

ಅಕ್ರಮ ನಡೆಸುತ್ತಿದ್ದ ಆರೋಪಿ ಹಾಗೂ 48 ಲೀಟರ್ ಹೆಂಡವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಮರಿಯಮ್ಮನಹಳ್ಳಿ ಬಿಎಂಎಂ ಕಾರ್ಖಾನೆ ಬಳಿ ಎನ್. ಎಚ್.ರಸ್ತೆಯಲ್ಲಿ ಸರಣಿ ಅಪಘಾತ.ಐವರ ಸಾವು ಶಂಕೆ.

ಕಿಷ್ಕಿಂಧವಾಣಿ ಸುದ್ದಿ
ಮರಿಯಮ್ಮನಹಳ್ಳಿ(ಹೊಸಪೇಟೆ): ತಾಲೂಕಿನ ಮರಿಯಮ್ಮನಹಳ್ಳಿ ಬಿ ಎಂ ಎಂ ಕಾರ್ಖಾನೆ ಬಳಿ ಎನ್ ಎಚ್ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಸರಣಿ ಅಪಘಾತ ಜರುಗಿ ಐವರು ಮೃತಪಟ್ಟ ಸಂಖ್ಯೆ ಇದ್ದು ಹಲವರಿಗೆ ಗಾಯಗಳಾಗಿವೆ.
ಢಣಾಪುರ ಬಳಿ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ಹರಿಯಾಣ ನೋಂದಣಿಯ ಲಾರಿಯೊಂದು ಕಾರು, ಸರ್ಕಾರಿ ಬಸ್ ಹಾಗೂ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಬೆಳ್ಳೊಳ್ಳಿ ಸಾಗಣೆ ಮಾಡುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಮೊದಲು ಕಾರಿಗೆ, ಬಳಿಕ ಬೈಕ್‌ಗಳಿಗೆ ಡಿಕ್ಕಿ ಹೊಡೆದು ಕೊನೆಗೆ ಬಸ್ ಹಿಂಭಾಗಕ್ಕೆ ಭೀಕರವಾಗಿ ಗುದ್ದಿದೆ. ಡಿಕ್ಕಿಯ ತೀವ್ರತೆಗೆ ಕಾರಿನ ಮೇಲೆ ಲಾರಿ ಪಲ್ಟಿಯಾಗಿ ಬಿದ್ದಿದ್ದು, ಸ್ಥಳದಲ್ಲೇ ಭಾರೀ ಅವ್ಯವಸ್ಥೆ ಉಂಟಾಯಿತು.
ಗಾಯಾಳುಗಳ ಸ್ಥಿತಿ : ಬಸ್ ಹೊಸಪೇಟೆಯಿಂದ ಚಿತ್ರದುರ್ಗದತ್ತ ತೆರಳುತ್ತಿದ್ದು, ಅಪಘಾತದ ವೇಳೆ ಬಸ್‌ನಲ್ಲಿದ್ದ ಸುಮಾರು 35 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿರುವುದಾಗಿ ಮೂಲಗಳು ತಿಳಿಸಿವೆ.
ಹೆದ್ದಾರಿ ಕಾಮಗಾರಿಯಲ್ಲೇ ಅವಘಡ : ಅಪಘಾತ ಸಂಭವಿಸಿದ ಸ್ಥಳದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಒಂದೇ ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಈ ಕಾರಣದಿಂದಲೇ ವಾಹನಗಳ ಚಾಲಕರು ಗೊಂದಲಕ್ಕೀಡಾಗಿ ಲಾರಿ ನಿಯಂತ್ರಣ ತಪ್ಪಿ ಸರಣಿ ಅಪಘಾತಕ್ಕೆ ಕಾರಣವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಟ್ರಾಫಿಕ್ ಜಾಮ್, ರಕ್ಷಣಾ ಕಾರ್ಯ : ಅಪಘಾತದ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿಶಾಮಕ ಹಾಗೂ ರಕ್ಷಣಾ ತಂಡಗಳು ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕೊಲ್ಲಿ ನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದ ಉಪನ್ಯಾಸಕ ಕಳಕಪ್ಪ ಕುಂಬಾರ ಅಕಾಲಿಕ ಸಾವು!

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ಅತಿಥಿ ಉಪನ್ಯಾಸಕ ಕಳಕಪ್ಪ ಕುಂಬಾರ್ (41) ಇವರು ಮಾನ್ವಿ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ.
ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕರಾಗಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.
ವಿದ್ಯಾರ್ಥಿಗಳ ಅತ್ಯಂತ ಪ್ರೀತಿಯ ಗುರುಗಳಾಗಿದ್ದರು.
ಕುಟುಂಬದವರು ನೀಡಿದ
​ಮಾಹಿತಿಯ ಪ್ರಕಾರ, ಕಳಕಪ್ಪ ಅವರು ತಮ್ಮ ಅತ್ತೆಯ ಮನೆಯಾದ ಕಲ್ಲೂರು ಗ್ರಾಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಈ ಆಕಸ್ಮಿಕ ಸಾವು ಅವರ ಕುಟುಂಬಸ್ಥರು ಹಾಗೂ ಅಭಿಮಾನಿ ಬಳಗವನ್ನು ತೀವ್ರ ಆಘಾತಕ್ಕೆ ದೂಡಿದೆ.
​ವಿದ್ಯಾರ್ಥಿಗಳ ನೆಚ್ಚಿನ ‘ಸಮಾಜಶಾಸ್ತ್ರ ಉಪನ್ಯಾಸಕ
​ಕಳಕಪ್ಪ ಕುಂಬಾರ್ ಅವರು ಕೇವಲ ಪಾಠಕ್ಕಷ್ಟೇ ಸೀಮಿತವಾಗದೆ, ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಸರಳ ವ್ಯಕ್ತಿತ್ವ ಹಾಗೂ ಬೋಧನಾ ಶೈಲಿಯಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಮನ ಗೆದ್ದಿದ್ದರು.
​ಕಳಕಪ್ಪ ಅವರ ನಿಧನಕ್ಕೆ ಕಾಲೇಜಿನ ಪ್ರಾಂಶುಪಾಲರು, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ, ತಂದೆ ತಾಯಿ ಸೋದರಿ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.