ವಿಶ್ವಗುರು ಬಸವಣ್ಣ ವಿಶ್ವದ ಸಮಾನತೆಯ ಬೆಳಕು: ಗಾಲಿ ಜನಾರ್ದನ ರೆಡ್ಡಿ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ವಿಶ್ವಗುರು ಬಸವಣ್ಣನವರು ವಿಶ್ವದ ಸಮಾನತೆಯ ಬೆಳಕಾಗಿ ಭಾರತದ ಹಿರಿಮೆಯನ್ನು ಮತ್ತು ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಅವರು ನಗರದ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಬಸವೇಶ್ವರ ಮೂರ್ತಿಗೆ ಹೂಮಾಲೆ ಸಮರ್ಪಿಸಿ ಪೂಜೆ ಮಾಡಿದ ನಂತರ ಮಾತನಾಡಿದರು. ವಿಶ್ವದ ಮೊದಲ ಪಾರ್ಲಿಮೆಂಟ್, ಅನುಭವ ಮಂಟಪನ್ನು ಪರಿಚಯ ಮಾಡಿ ಸರ್ವ ಜನರನ್ನು ಇದರಲ್ಲಿ ಸೇರ್ಪಡೆ ಮಾಡಿದರು ಜೊತೆಗೆ ಮಹಿಳೆಯರಿಗೂ ಸಮಾನ ಅವಕಾಶಗಳನ್ನು ನೀಡುವ ಮೂಲಕ ಯಾವುದೇ ಲಿಂಗ ತಾರತಮ್ಯ ಕ್ಕೆ ಅವಕಾಶ ನೀಡಿದೆ ಸರ್ವರು ಸಮಾನರು, ಜಗತ್ತು ಸಮಾನತೆಯ ಬದುಕಿನಲ್ಲಿ ಬಾಳಿದರೆ ಮಾತ್ರ ಸ್ವರ್ಗ ಇಲ್ಲೇ ಸೃಷ್ಟಿಯಾಗುತ್ತದೆ. ಜೊತೆಗೆ ಕಾಯಕ ಮತ್ತು ದಾಸೋಹದ ಮೂಲಕ ಪ್ರತಿಯೊಬ್ಬರು ಜೀವನವನ್ನು ನಡೆಸಬೇಕು. ದುಡಿದು ಮತ್ತು ಇತರರಿಗೆ ಸಹಾಯ ಮಾಡುವ ಮನೋಭಾವ ಹೊಂದಬೇಕೆನ್ನುವುದು ಬಸವಣ್ಣನವರ ಆದರ್ಶವಾಗಿದ್ದು, ಪ್ರತಿಯೊಬ್ಬರು ಬುದ್ಧ, ಬಸವ, ಅಂಬೇಡ್ಕರ್ ಮಾರ್ಗದಲ್ಲಿ ಸಾಗುವ ಮೂಲಕ ಬಸವಣ್ಣನವರು ಕಂಡ ಸಮ ಸಮಾಜದ ಕನಸನ್ನು ನನಸು ಮಾಡಬೇಕು. 12ನೇ ಶತಮಾನದಲ್ಲಿ ಬಸವಣ್ಣ ಬಿತ್ತಿದ ಸಮಾನತೆಯ ಮತ್ತು ಜಾತ್ಯಾತೀತ ಮನೋಭಾವ ರೂಢಿಸಿಕೊಳ್ಳಬೇಕು ಎಂದರು. ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಈ ಸಂದರ್ಭದಲ್ಲಿ ಮಾತನಾಡಿದರು. ಶಾಸಕ ಗಾಲಿ ಜನಾರ್ದನ ರೆಡ್ಡಿ ಮುರಹರಿ ನಗರದಲ್ಲಿ ಸಮಗಾರ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮ,ನಂತರ ಬಸವೇಶ್ವರ ವೃತ್ತದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಶಿವರಾಮೇಗೌಡ್ರು, ಮಾಜಿ ಶಾಸಕ ಪರಣ್ಣ ಮುನವಳ್ಳಿ,
ಆಲ್ ಇಂಡಿಯಾ ಮಜ್ದೂರ್ ಯೂನಿಯನ್ ರಾಷ್ಟ್ರೀಯ ಅಧ್ಯಕ್ಷ ಆರ್.ಬಿ.ಪಾಟೀಲ್,
ಬಿಜೆಪಿಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ್, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ ಆಗೋಲಿ, ಬಿಜೆಪಿ ಮುಖಂಡರಾದ ತಿಪ್ಪೇರುದ್ರಸ್ವಾಮಿ,ಹೆಚ್. ಗಿರೇಗೌಡ, ಮನೋಹರಗೌಡ ಹೇರೂರು, ವೀರೇಶ್ ಬಲಕುಂದಿ, ಸಿದ್ದರಾಮಯ್ಯ ಸ್ವಾಮಿ, ಪ್ರಸಾದ್, ಜೋಗದ ದುರ್ಗಪ್ಪ ದಳಪತಿ, ವಿಶ್ವನಾಥ್ ಕೆಸರಟ್ಟಿ, ಜಿಲಾನಿ ಪಾಷಾ, ದಿಲೀಪ್ ಕುಮಾರ ವಂದಾಳ, ಷಣ್ಮುಖಪ್ಪ, ಕಾಳಪ್ಪ, ಅರಳಿ ಶೇಖರಪ್ಪ, ಬಸವರಾಜು, ಶರಣಪ್ಪ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

