ದಲಿತ ಸಾಹಿತ್ಯ ಪರಿಷತ್ ನಿಂದ ಅಕ್ಷದ ಅವ್ವ ಸಾವಿತ್ರಿ ಬಾಯಿಪುಲೆ ಪ್ರಶಸ್ತಿ ಪ್ರದಾನ ಶೋಷಿತರು, ದಮನಿತರ ಸಾಹಿತ್ಯದ ಧ್ವನಿಯಾಗಿ ದಸಾಪ ಕಾರ್ಯ ನಿರ್ವಹಿಸುತ್ತಿದೆ:ಡಾ.ಗೊಳಸಂಗಿ *ದಸಾಪದಿಂದ ಪ್ರಥಮ ಮಹಿಳಾ ಶಿಕ್ಷಕಿಯರಾದ ಸಾವಿತ್ರಿ ಬಾಯಿಪುಲೆ, ಫಾತೀಮಾ ಶೇಖ್ ಜಯಂತಿ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಶೋಷಿತರು, ದಮನಿತರು ಹಾಗೂ ಅವಕಾಶ ವಂಚಿತ ಸಾಹಿತ್ಯ ಕೃಷಿ ಮಾಡುವವರಿಗಾಗಿ ಮತ್ತು ಸಂವಿಧಾನದ ಆಶಯಗಳನ್ನು ಅನುಷ್ಠಾಗೊಳಿಸಲು ದಲಿತ ಸಾಹಿತ್ಯ ಪರಿಷತ್ ಕಳೆದ 30 ವರ್ಷಗಳಿಂದ ನಿರಂತರವಾಗಿ ಕಾರ್ಯ ಮಾಡುತ್ತಿದೆ ಎಂದು ಪರಿಷತ್ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಹೇಳಿದರು.
ಅವರು ನಗರದ ಐಎಂಎ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಹಿತ್ಯವು ಕೆಲವೇ ಜನರಿಗೆ ಸೀಮೀತ ಎನ್ನುವ ವಾತಾವರಣ ಸೃಷ್ಠಿಯಾಗಿದ್ದ ಸಂದರ್ಭದಲ್ಲಿ ದಸಾಪ ಅಸ್ತಿತ್ವಕ್ಕೆ ಬಂದಿದ್ದು ದಲಿತರು, ಶೋಷಿತ ಮತ್ತು ಹಿಂದುಳಿದ ವರ್ಗದವರ ಸಾಹಿತ್ಯ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದು ಪುಸ್ತಕ ಪ್ರಕರಟಣೆ, ಸಾಹಿತ್ಯ ಸಮ್ಮೇಳನ, ಕಾರ್ಯಾಗಾರ ಮತ್ತು ಸಾಹಿತ್ಯ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮೊಟ್ಟ ಮೊದಲ ಭಾರಿಗೆ ಸಾವಿತ್ರಿ ಬಾಯಿ ಪುಲೆ ಜಯಂತಿಯನ್ನು ಗದುಗಿನ ಪೂಜ್ಯ ತೋಂಟದಾರ್ಯ ಶ್ರೀಗಳ ಸಹಕಾರದಲ್ಲಿ ಆಯೋಜಿಸಿ ಯಶಸ್ವಿಗೊಳಿಸಲಾಯಿತು. ಅಂದಿನಿಂದ ಸರಕಾರಕ್ಕೆ ಜನವೇರಿ 03 ರಂದು ಸಾವಿತ್ರಿ ಬಾಯಿ ಪುಲೆ ಜಯಂತಿ ಆಚರಣೆ ಮಾಡುವಂತೆ ಸರಕಾರಕ್ಕೆ ಮನವಿ ಕೊಡಲಾಗಿತ್ತು.2014 ರಿಂದ ಸರಕಾರ ಸಾವಿತ್ರಿ ಬಾಯಿ ಪುಲೆ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆದೇಶ ಮಾಡಿದೆ. ನಂತರ ಇದೀಗ ಪ್ರಥಮ ಶಿಕ್ಷಕಿಯಾಗಿ ಕೆಲಸ ಮಾಡಿದ ಫಾತೀಮಾ ಶೇಖ್ ಇವರ ಜಯಂತಿಯನ್ನು ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಾವಿತ್ರ ಬಾಯಿ ಪುಲೆ ಮತ್ತು ಫಾತೀಮಾ ಶೇಖ್ ಇವರ ಹೆಸರಿನಲ್ಲಿ ಶಿಕ್ಷಕಿ
ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಕಾಂಗ್ರೆಸ್ ಮಹಿಳಾ ರಾಜ್ಯ ಮುಖಂಡರಾದ ಶೈಲಜಾ ಹಿರೇವ್ಮಠ ಮಾತನಾಡಿ, ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಭಿ ಜೀವನಕ್ಕೆ ಶಿಕ್ಷಣ ಬಹಳ ಮುಖ್ಯವಾಗಿದ್ದು ಸಾವಿತ್ರಿ ಬಾಯಿ ಪುಲೆ ಅವರು ಅಂದಿನ ಸಂಪ್ರದಾಯವಾದಿಗಳ ವಿರೋಧದ ಮಧ್ಯೆ ಮಹಿಳೆಯರಿಗೆ ಶಿಕ್ಷಣ ಕೊಡುವ ಮಹತ್ವದ ಕಾರ್ಯ ಮಾಡಿದರು. ಮಹಿಳೆಯರು ಮೂಡನಂಬೀಕೆ ಮತ್ತು ಕೆಟ್ಟ ಸಂಪ್ರದಾಯಗಳನ್ನು ಬಿಟ್ಟು ಶಿಕ್ಷಣ ಪಡೆಯುವ ಮೂಲಕ ಸರ್ವ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು ಇವರ ಸಂಖ್ಯೆ ಹೆಚ್ಚಾಗಬೇಕು. ಸಾವಿತ್ರ ಬಾಯಿ ಪುಲೆ ಅವರ ಜೀವನ ಪ್ರತಿ ಮಹಿಳೆಗೂ ಆದರ್ಶವಾಗಬೇಕು ದೇಶದಲ್ಲಿ ಹೆಣ್ಣು ಮಕ್ಕಳ ಸಂರಕ್ಷಣೆಯ ಮಾತುಗಳನ್ನಾಡುತ್ತಲೇ ನಿತ್ಯವೂ ಆತ್ಯಾಚಾರ, ಅನಾಚಾರಗಳಂತಹ ಪ್ರಕರಣ ಹೆಚ್ಚು ನಡೆಯುತ್ತಿವೆ.ಎಫ್‌ಸ್ಟೀನ್ ಫೈಲ್ ನಂತಹ ಪ್ರಕರಣದಿಂದ ಇಡೀ ವಿಶ್ವವೇ ಕಳವಳಗೊಳ್ಳುವ ಸ್ಥಿತಿ ಬಂದಿದೆ ಎಂದರು.
ಹಿರಿಯ ಹೋರಾಟಗಾರ ಜೆ.ಭಾರದ್ವಾಜ್, ಭಾಗ್ಯವಂತಪ್ಪ, ಕನಕಪ್ಪ ಚಿತ್ರಗಾರ, ಶಿವಪ್ಪ ಜಾಗೋಗೋರ್, ಮಹಮದ್ ರಫಿ, ವಿರೇಶ ಎಂ ಅಂಗಡಿ, ಸೋಮಶೇಖರಗೌಡ, ಆಶಾ ಅಗಸಿಮನಿ,ಹನುಮಂತಪ್ಪ ಚಳ್ಳೂರು,ಸೋಮಪ್ಪ,ಗಫೂರ ಸಾಬ,ಮಂಜುನಾಥ ಹೊಸಮನಿ,ವೆಂಕಪ್ಪ,ಶಶಿಕಲಾ ಚೌಹಾಣ್,ನಟರಾಜ್, ನಾಗಮ್ಮ ನಾಯಕ,ಮೋಜೆಸ್ ಪೌಲ್,ಕವಿತಾ, ಎಂ.ಶ್ರೀದೇವಿ ಇವರಿಗೆ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗಣ್ಣ ಜಂಗಮರಳ್ಳಿ,ತಾಲೂಕು ಅಧ್ಯಕ್ಷ ಛತ್ರಪ್ಪ ತಂಬೂರಿ,ಪ್ರಮುಖರಾದ ರಮೇಶ ಗಬ್ಬೂರು,ಕೆ.ನಿಂಗಜ್ಜ,ಡಾ.ಜಾಜಿ ದೇವೆಚಿದ್ರಪ್ಪ, ಡಾ.ಶರಣಬಸಪ್ಪ ಕೋಲ್ಕಾರ್,ಅಜಮೀರ್ ನಂದಾಪೂರ,ಡಿಡಿಪಿಐ ಸೋಮಶೇಖರಗೌಡ,ಬಿಇಒ ನಟೇಶ, ಪ್ರಕಾಶ ರಾಠೋಡ್, ಡಾ.ಶಿವಕುಮಾರ ಮಾಲೀಪಾಟೀಲ್,ರುದ್ರೇಶ ಮಡಿವಾಳ, ಶಿವಶಂಕರ ಕಲ್ಮಠ,ಮೈಲಾರಪ್ಪ ಬೂದಿಹಾಳ, ಶ್ರೀನಿವಾಸ ಉಪ್ಪಾರ, ಸುಂಕಪ್ಪ, ಪದ್ಮಾವತಿ, ರಮೇಶ ಬನ್ನಿಕೊಪ್ಪ, ಗುರುಪ್ರಸಾದ, ಚಂದ್ರಶೇಖರ ಸೇರಿ ಅನೇಕರಿದ್ದರು.

