Breaking News
ದಲಿತ ಸಾಹಿತ್ಯ ಪರಿಷತ್ ನಿಂದ ಅಕ್ಷದ ಅವ್ವ ಸಾವಿತ್ರಿ ಬಾಯಿಪುಲೆ ಪ್ರಶಸ್ತಿ ಪ್ರದಾನ ಶೋಷಿತರು, ದಮನಿತರ ಸಾಹಿತ್ಯದ ಧ್ವನಿಯಾಗಿ ದಸಾಪ ಕಾರ್ಯ ನಿರ್ವಹಿಸುತ್ತಿದೆ:ಡಾ.ಗೊಳಸಂಗಿ *ದಸಾಪದಿಂದ ಪ್ರಥಮ ಮಹಿಳಾ ಶಿಕ್ಷಕಿಯರಾದ ಸಾವಿತ್ರಿ ಬಾಯಿಪುಲೆ, ಫಾತೀಮಾ ಶೇಖ್ ಜಯಂತಿ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಶೋಷಿತರು, ದಮನಿತರು ಹಾಗೂ ಅವಕಾಶ ವಂಚಿತ ಸಾಹಿತ್ಯ ಕೃಷಿ ಮಾಡುವವರಿಗಾಗಿ ಮತ್ತು ಸಂವಿಧಾನದ ಆಶಯಗಳನ್ನು ಅನುಷ್ಠಾಗೊಳಿಸಲು ದಲಿತ ಸಾಹಿತ್ಯ ಪರಿಷತ್ ಕಳೆದ 30 ವರ್ಷಗಳಿಂದ ನಿರಂತರವಾಗಿ ಕಾರ್ಯ ಮಾಡುತ್ತಿದೆ ಎಂದು ಪರಿಷತ್ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಹೇಳಿದರು.
ಅವರು ನಗರದ ಐಎಂಎ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಹಿತ್ಯವು ಕೆಲವೇ ಜನರಿಗೆ ಸೀಮೀತ ಎನ್ನುವ ವಾತಾವರಣ ಸೃಷ್ಠಿಯಾಗಿದ್ದ ಸಂದರ್ಭದಲ್ಲಿ ದಸಾಪ ಅಸ್ತಿತ್ವಕ್ಕೆ ಬಂದಿದ್ದು ದಲಿತರು, ಶೋಷಿತ ಮತ್ತು ಹಿಂದುಳಿದ ವರ್ಗದವರ ಸಾಹಿತ್ಯ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದು ಪುಸ್ತಕ ಪ್ರಕರಟಣೆ, ಸಾಹಿತ್ಯ ಸಮ್ಮೇಳನ, ಕಾರ್ಯಾಗಾರ ಮತ್ತು ಸಾಹಿತ್ಯ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮೊಟ್ಟ ಮೊದಲ ಭಾರಿಗೆ ಸಾವಿತ್ರಿ ಬಾಯಿ ಪುಲೆ ಜಯಂತಿಯನ್ನು ಗದುಗಿನ ಪೂಜ್ಯ ತೋಂಟದಾರ್ಯ ಶ್ರೀಗಳ ಸಹಕಾರದಲ್ಲಿ ಆಯೋಜಿಸಿ ಯಶಸ್ವಿಗೊಳಿಸಲಾಯಿತು. ಅಂದಿನಿಂದ ಸರಕಾರಕ್ಕೆ ಜನವೇರಿ 03 ರಂದು ಸಾವಿತ್ರಿ ಬಾಯಿ ಪುಲೆ ಜಯಂತಿ ಆಚರಣೆ ಮಾಡುವಂತೆ ಸರಕಾರಕ್ಕೆ ಮನವಿ ಕೊಡಲಾಗಿತ್ತು.2014 ರಿಂದ ಸರಕಾರ ಸಾವಿತ್ರಿ ಬಾಯಿ ಪುಲೆ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆದೇಶ ಮಾಡಿದೆ. ನಂತರ ಇದೀಗ ಪ್ರಥಮ ಶಿಕ್ಷಕಿಯಾಗಿ ಕೆಲಸ ಮಾಡಿದ ಫಾತೀಮಾ ಶೇಖ್ ಇವರ ಜಯಂತಿಯನ್ನು ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಾವಿತ್ರ ಬಾಯಿ ಪುಲೆ ಮತ್ತು ಫಾತೀಮಾ ಶೇಖ್ ಇವರ ಹೆಸರಿನಲ್ಲಿ ಶಿಕ್ಷಕಿ
ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಕಾಂಗ್ರೆಸ್ ಮಹಿಳಾ ರಾಜ್ಯ ಮುಖಂಡರಾದ ಶೈಲಜಾ ಹಿರೇವ್ಮಠ ಮಾತನಾಡಿ, ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಭಿ ಜೀವನಕ್ಕೆ ಶಿಕ್ಷಣ ಬಹಳ ಮುಖ್ಯವಾಗಿದ್ದು ಸಾವಿತ್ರಿ ಬಾಯಿ ಪುಲೆ ಅವರು ಅಂದಿನ ಸಂಪ್ರದಾಯವಾದಿಗಳ ವಿರೋಧದ ಮಧ್ಯೆ ಮಹಿಳೆಯರಿಗೆ ಶಿಕ್ಷಣ ಕೊಡುವ ಮಹತ್ವದ ಕಾರ್ಯ ಮಾಡಿದರು. ಮಹಿಳೆಯರು ಮೂಡನಂಬೀಕೆ ಮತ್ತು ಕೆಟ್ಟ ಸಂಪ್ರದಾಯಗಳನ್ನು ಬಿಟ್ಟು ಶಿಕ್ಷಣ ಪಡೆಯುವ ಮೂಲಕ ಸರ್ವ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು ಇವರ ಸಂಖ್ಯೆ ಹೆಚ್ಚಾಗಬೇಕು. ಸಾವಿತ್ರ ಬಾಯಿ ಪುಲೆ ಅವರ ಜೀವನ ಪ್ರತಿ ಮಹಿಳೆಗೂ ಆದರ್ಶವಾಗಬೇಕು ದೇಶದಲ್ಲಿ ಹೆಣ್ಣು ಮಕ್ಕಳ ಸಂರಕ್ಷಣೆಯ ಮಾತುಗಳನ್ನಾಡುತ್ತಲೇ ನಿತ್ಯವೂ ಆತ್ಯಾಚಾರ, ಅನಾಚಾರಗಳಂತಹ ಪ್ರಕರಣ ಹೆಚ್ಚು ನಡೆಯುತ್ತಿವೆ.ಎಫ್‌ಸ್ಟೀನ್ ಫೈಲ್ ನಂತಹ ಪ್ರಕರಣದಿಂದ ಇಡೀ ವಿಶ್ವವೇ ಕಳವಳಗೊಳ್ಳುವ ಸ್ಥಿತಿ ಬಂದಿದೆ ಎಂದರು.
ಹಿರಿಯ ಹೋರಾಟಗಾರ ಜೆ.ಭಾರದ್ವಾಜ್, ಭಾಗ್ಯವಂತಪ್ಪ, ಕನಕಪ್ಪ ಚಿತ್ರಗಾರ, ಶಿವಪ್ಪ ಜಾಗೋಗೋರ್, ಮಹಮದ್ ರಫಿ, ವಿರೇಶ ಎಂ ಅಂಗಡಿ, ಸೋಮಶೇಖರಗೌಡ, ಆಶಾ ಅಗಸಿಮನಿ,ಹನುಮಂತಪ್ಪ ಚಳ್ಳೂರು,ಸೋಮಪ್ಪ,ಗಫೂರ ಸಾಬ,ಮಂಜುನಾಥ ಹೊಸಮನಿ,ವೆಂಕಪ್ಪ,ಶಶಿಕಲಾ ಚೌಹಾಣ್,ನಟರಾಜ್, ನಾಗಮ್ಮ ನಾಯಕ,ಮೋಜೆಸ್ ಪೌಲ್,ಕವಿತಾ, ಎಂ.ಶ್ರೀದೇವಿ ಇವರಿಗೆ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗಣ್ಣ ಜಂಗಮರಳ್ಳಿ,ತಾಲೂಕು ಅಧ್ಯಕ್ಷ ಛತ್ರಪ್ಪ ತಂಬೂರಿ,ಪ್ರಮುಖರಾದ ರಮೇಶ ಗಬ್ಬೂರು,ಕೆ.ನಿಂಗಜ್ಜ,ಡಾ.ಜಾಜಿ ದೇವೆಚಿದ್ರಪ್ಪ, ಡಾ.ಶರಣಬಸಪ್ಪ ಕೋಲ್ಕಾರ್,ಅಜಮೀರ್ ನಂದಾಪೂರ,ಡಿಡಿಪಿಐ ಸೋಮಶೇಖರಗೌಡ,ಬಿಇಒ ನಟೇಶ, ಪ್ರಕಾಶ ರಾಠೋಡ್, ಡಾ.ಶಿವಕುಮಾರ ಮಾಲೀಪಾಟೀಲ್,ರುದ್ರೇಶ ಮಡಿವಾಳ, ಶಿವಶಂಕರ ಕಲ್ಮಠ,ಮೈಲಾರಪ್ಪ ಬೂದಿಹಾಳ, ಶ್ರೀನಿವಾಸ ಉಪ್ಪಾರ, ಸುಂಕಪ್ಪ, ಪದ್ಮಾವತಿ, ರಮೇಶ ಬನ್ನಿಕೊಪ್ಪ, ಗುರುಪ್ರಸಾದ, ಚಂದ್ರಶೇಖರ ಸೇರಿ ಅನೇಕರಿದ್ದರು.

ಕುಟುಂಬದ ಏಳ್ಗೆ, ಭವಿಷ್ಯವನ್ನು ಮಹಿಳೆಯರು ನಿರ್ಧರಿಸುತ್ತಾರೆ: ಪದ್ಮವಿಠ್ಠಲ್  *ಹಗರಿಬೊಮ್ಮನಹಳ್ಳಿಯಲ್ಲಿ ಮಹಿಳಾ ದಿನಾಚರಣೆ

ಕಿಷ್ಕಿಂಧವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ: ಕುಟುಂಬದ ಏಳ್ಗೆ ಮತ್ತು ಭವಿಷ್ಯವನ್ನು ಮಹಿಳೆಯರು ನಿರ್ಧರಿಸುತ್ತಾರೆ. ಆದ್ದರಿಂದ ಮಹತ್ವದ ವಿಷಯಗಳನ್ನು ಪುರುಷರು

ಮಹಿಳೆಯರ ಹತ್ತಿರ ಚರ್ಚಿಸುವುದು ಅಗತ್ಯವಾಗಿದೆ ಎಂದು ಸಂಘಪರಿವಾರದ ಹಿರಿಯರಾದ ಪದ್ಮವಿಠಲ್ ಹೇಳಿದರು.

ರಾಷ್ಟ್ರೋತ್ಥಾನ ಸಭಾಂಗಣದಲ್ಲಿ ಸರಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಉದ್ಘಾಟಿಸಿದರು

ಪ್ರಸಕ್ತ ದಿನಗಳಲ್ಲಿ ಮಹಿಳೆ ನೌಕರಿಯ ಜೊತೆಗೆ ಕುಟುಂಬ ಪಾಲನೆಯ ಹೊರೆ ಹಾಗೂ ಜವಾಬ್ದಾರಿ ಮಹತ್ತರವಾಗಿದೆ ಮಕ್ಕಳನ್ನು ಬೆಳೆಸುವ ಹೊಣೆಗಾರಿಕೆಯೂ ಆಕೆಯ ಮೇಲಿದೆ.

ಕುಟುಂಬವನ್ನು ಆರ್ಥಿಕವಾಗಿ ಬಲಿಷ್ಠ ಗೊಳಿಸಲು ಮಹಿಳೆಯು ಉದ್ಯೋಗಸ್ಥಿಯಾಗುವುದು ಅನಿವಾರ್ಯವಾಗಿದೆ ಎಂದರು.

ಪ್ರಸ್ತಾವಿಕವಾಗಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂಪಿಎಂ ಮಂಜುನಾಥ ಮಾತನಾಡಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕ ಮಹಿಳೆಯರ ವಸೇವೆ ಯನ್ನು ಗುರುತಿಸಿ ಈ ವರ್ಷ ಸನ್ಮಾನಿಸುತ್ತಿರುವುದು ಸಂಘದ ಹೆಮ್ಮೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ನಾಗರತ್ನ ವೈ ಇಟಗಿ, ಸಂಘದ ಪದಾಧಿಕಾರಿಗಳಾದ ಆರ್. ಜಯಶ್ರೀ, ಅರ್ಪಿತ ಆನಂದ್, ಗಾಳೆಮ್ಮ. ಸಾವಿತ್ರಿ ಬಾಯಿಪುಲೆ ಶಿಕ್ಷಕಿಯರ ಸಂಘದ ದೀಪಿಕಾ. ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಜೆ.ಎಂ. ಜ್ಯೋತೇಶ್ವರಿ. ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಗೌರಮ್ಮ ಆಯುಷ್ಯ ಡಾ. ಹಾಲಮ್ಮ, ಎಂ. ಯಂಕ ರೆಡ್ಡಿ. ಹಂಸಾಗರದ ಆನಂದ,ಆಂಜನೇಯ, ಸೋಮಶೇಖರ್,

ಎನ್ ಮಂಜುನಾಥ, ಸದಸ್ಯ ರಾಜು ಸೋಗಿ, ಸೊನ್ನದ ಕೊಟ್ರೇಶ್, ಹೆಚ್ ಲೋಕಪ್ಪ, ಗುಲ್ಜಾರ್ ಬೇಗಮ್, ನಾಗಲಕ್ಷ್ಮಿ, ಕೆಎಂ ನಿರ್ಮಲ,ಭಾರತಿ. ಪ್ರಮೋದಿನಿ, ಕವಿತಾ, ಉಷಾರಾಣಿ,ಖಾಜಾ ಬೂನ, ಶಾಂತಕುಮಾರಿ, ಶೋಭಾ, ಶಾರದಾ ಇದ್ದರು.

ಬಸವನದುರ್ಗವನ್ನು ಕಂದಾಯ ಗ್ರಾಮವನ್ನಾಗಿಸುವಂತೆ ಗ್ರಾಮಸ್ಥರಿಂದ ಪಾದಯಾತ್ರೆ ಪ್ರತಿಭಟನೆ. * ಕಂದಾಯ ನಿರೀಕ್ಷಕನಿಂದ ಅವಜ್ಞಾನಿಕ ವರದಿ ತಿರಸ್ಕರಿಸುವಂತೆ ಒತ್ತಾಯ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತಾಲೂಕಿನ ಬಸವನದುರ್ಗವನ್ನು ಕಂದಾಯ ಗ್ರಾಮವನ್ನಾಗಿ ಮಾಡುವಂತೆ ಆಗ್ರಹಿಸಿ ಬಸವನದುರ್ಗ ಗ್ರಾಮಸ್ಥರು ತಮ್ಮ ಗ್ರಾಮದಿಂದ ಗಂಗಾವತಿಯ ತಹಸೀಲ್ ಕಚೇರಿವರೆಗೆ ಪಾದಯಾತ್ರೆ ನಡೆಸಿ ಸರಕಾರವನ್ನು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ಕೆ. ವಿ. ವೆಂಕಟೇಶ ಬಾಬು ಮಾತನಾಡಿ, ಬಸವನದುರ್ಗ ಗ್ರಾಮ ಕಳೆದ 50 ವರ್ಷಗಳಿಂದ ಅಸ್ತಿತ್ವದಲ್ಲಿದ್ದು ಇಲ್ಲಿ ಕೂಲಿ ಕಾರ್ಮಿಕರು, ಬಡವರು, ರೈತರು, ಸರ್ಕಾರಿ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ರಾಜ್ಯ ಸರ್ಕಾರ ಹಟ್ಟಿ, ಕ್ಯಾಂಪು,ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಕುರಿತು ಯೋಜನೆಯನ್ನು ಅನುಷ್ಠಾನ ಮಾಡಿದ್ದು, ಜಿಲ್ಲಾಡಳಿತಕ್ಕೆ ವರದಿಯನ್ನು ಕಳಿಸುವಾಗ ಆನೆಗೊಂದಿ ಭಾಗದ ಕಂದಾಯ ನಿರೀಕ್ಷಕ ಬಷೀರ್ ಅಹಮದ್ ಎನ್ನುವ ಅಧಿಕಾರಿ ಬಸವನ ದುರ್ಗದ ಬಗ್ಗೆ ತಪ್ಪು ಮಾಹಿತಿಯನ್ನು ಕಳಿಸಿದ್ದರಿಂದ ಈ ಭಾರಿ ಬಸವನದುರ್ಗ ಕಂದಾಯ ಗ್ರಾಮವಾಗಿ ಮಾರ್ಪಡಲು ಸಾಧ್ಯವಿಲ್ಲ, ಆದ್ದರಿಂದ ಅಧಿಕಾರಿಯ ಅವೈಜ್ಞಾನಿಕ ವರದಿಯನ್ನು ತಿರಸ್ಕಾರ ಮಾಡಿ, ಪುನಃ ವರದಿ ಪಡೆದು ಇದೇ ವರ್ಷದಲ್ಲಿ ಬಸವನ ದುರ್ಗವನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕು. ಇಲ್ಲದಿದ್ದರೆ ನಿರಂತರವಾಗಿ ಗ್ರಾಮದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ,  ಗ್ರಾ.ಪಂ.ಮಾಜಿ  ಸದಸ್ಯ ರಾಜಶೇಖರ, ರಾಮಕೃಷ್ಣ ನಾಯಕ,  ಯಮನಪ್ಪ, ಲೈಂದರ್,  ಸಲೀಂ ಪಾಷಾ,  ಎ.ರಮೇಶ,  ಶ್ರೀನಿವಾಸ ರೆಡ್ಡಿ, ನಾಗೆರೆಡ್ಡಿ,  ಗೋಪಾಲ್ ರೆಡ್ಡಿ,  ಜಗದೀಶ, ಮಂಜುನಾಥ ಜಂಗರ,   ವೇಣುಗೋಪಾಲ,  ಎ. ರವಿ,  ರಾಮನಗೌಡ, ರಂಗಪ್ಪ , ಅಂಬರೀಶ, ಸುಗಪ್ಪ , ಬೇಗಮ್ಮ, ರೇಣಮ್ಮ, ದುರ್ಗಮ್ಮ, ಯಮನಮ್ಮ ಸೇರಿದಂತೆ ಅನೇಕರಿದ್ದರು.

ಪತ್ರಿಕಾ ವಿಭಾಗದ ಯುವವಾಣಿ, ಕಾಲೇಜುರಂಗ ಪತ್ರಿಕೆ ಬಿಡುಗಡೆ ಎಸ್‌ಕೆಎನ್‌ಜಿಕಾಲೇಜು ಪತ್ರಿಕಾವಿಭಾಗದಲ್ಲಿ ಡಿಜಿಟಲ್ ಸ್ಟುಡಿಯೋ ಸ್ಥಾಪನೆೆ:ಜಿ.ಜನಾರ್ದನರೆಡ್ಡಿ *ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಪತ್ರಿಕೋದ್ಯಮದ ವಿದ್ಯಾರ್ಥಿಗಳು ಧನಾತ್ಮಕ ವರದಿಗಾರಿಕೆಗೆ ಆದ್ಯತೆ ನೀಡಬೇಕು.ಅಭಿವೃದ್ಧಿಗೆ ಪೀಠಿಕೆಯಾಗಿ ಪತ್ರಕರ್ತರು ಕಾರ್ಯ ಮಾಡುವ ಮೂಲಕ ದೇಶದ ಪ್ರಗತಿಗೆ ಕಾರಣೀಕರ್ತರಾಗಬೇಕು. ಸ್ಥಳೀಯ ಎಸ್‌ಕೆಎನ್‌ಜಿ ಕಾಲೇಜಿನಲ್ಲಿ ಕಳೆದ 20 ವರ್ಷಗಳಿಂದ ಪತ್ರಿಕೋದ್ಯಮ ವಿಭಾಗವಿದ್ದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ನಿಧಿಯಿಂದ ಅನುದಾನ ಒದಗಿಸಿ ಡಿಜಿಟಲ್ ಸ್ಟುಡಿಯೋ ಸ್ಥಾಪಿಸಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ಅವರು ನಗರದ ಕೊಲ್ಲಿ ನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹೊರಗೆ ತಂದಿರುವ ಯುವವಾಣಿ ಮತ್ತು ಕಾಲೇಜು ರಂಗ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ರಂಗ ಸಾರ್ವಜನಿಕ ಅಭಿಪ್ರಾಯ ಮತ್ತು ಸಂವಿಧಾನಾತ್ಮಕ ಕಾರ್ಯಗಳು ನಡೆಯುವಂತೆ ಮಾಡುತ್ತದೆ. ಸರಕಾರ ದಾರಿ ತಪ್ಪಿದ ಸಂದರ್ಭದಲ್ಲಿ ವರದಿ ಮತ್ತು ಲೇಖನ ಪ್ರಕಟಣೆಯ ಮೂಲಕ ಸರಿದಾರಿಗೆ ತರುವ ಮಹಾನ್ ಕಾರ್ಯವನ್ನು ಪತ್ರಕರ್ತರು ಮಾಡುತ್ತಾರೆ. ಪ್ರಸ್ತುತ ಪತ್ರಿಕೋದ್ಯಮ ಓದುವವರಿಗೆ ವಿಫುಲವಾದ ಉದ್ಯೋಗ ಅವಕಾಶಗಳಿವೆ. ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಬೇಕಾಗುವ ಪುಸ್ತಕಗಳನ್ನು ಕರ್ನಾಟಕ ಮಾದ್ಯಮ ಅಕಾಡೆಮಿ ವತಿಯಿಂದ ರಿಯಾಯಿತಿ ದರದಲ್ಲಿ ಖರೀದಿಸಿ ಕೊಡಲಾಗುತ್ತದೆ. ಕಾಲೇಜಿನಲ್ಲಿ ಮಹಿಳಾ ಶೌಚಾಲಯ ಸೇರಿ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ನೂತನವಾಗಿ ಕಾಲೇಜು ಅಭಿವೃದ್ಧಿ ಕಮೀಟಿ ರಚನೆಯಾಗಿದ್ದು ಕಮೀಟಿ ಸರಿಯಾಗಿ ಕಾರ್ಯ ಮಾಡಲಿದೆ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಮಾತನಾಡಿ, ಪತ್ರಿಕೋದ್ಯಮ ಪ್ರಸ್ತುತ ಹೆಚ್ಚು ಉದ್ಯೋಗ ಕಲ್ಪಿಸುವ ಕ್ಷೇತ್ರವಾಗಿದ್ದು ಹೆಚ್ಚು ವಿದ್ಯಾರ್ಥಿಗಳು ಪತ್ರಿಕೋದ್ಯಮ ಓದಲು ಬರಬೇಕು. ಅಕಾಡೆಮಿಯಿಂದ ಪ್ರಕಟಗೊಂಡಿರುವ ಅನೇಕ ಹಿರಿಯ ಪತ್ರಕರ್ತರು ಬರೆದು ಪುಸ್ತಕಗಳು ಲಭ್ಯವಿದ್ದು ರಿಯಾಯಿತಿ ದರದಲ್ಲಿ ಖರೀಸಬಹುದಾಗಿದೆ. ಶಾಸಕರು ಅಕಾಡೆಮಿಯಿಂದ ಎಸ್‌ಕೆಎನ್‌ಜಿ ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಪುಸ್ತಕ ಕೊಡಿಸಬೇಕು. ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಕರ್ತರಿಗೆ ಮತ್ತು ಪತ್ರಿಕೋದ್ಯಮ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯ ತರಬೇತಿ, ಎಐ ತರಬೇತಿ ಕಾಲಕಾಲಕ್ಕೆ ನೀಡುತ್ತಿದ್ದು ಇದರ ಸದುಪಯೋಗ ಪಡೆಯಬೇಕು. ಕಲ್ಯಾಣ ಕರ್ನಾಟಕದ ಪತ್ರಕರ್ತರಿಗೆ ಶೀಘ್ರವೇ ಕೌಶಲ್ಯ ತರಬೇತಿ ನೀಡುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತದೆ. ಪತ್ರಿಕೋದ್ಯಮಕ್ಕೆ ಹೆಚ್ಚೆಚ್ಚು ಮಹಿಳೆಚಿiÀÄರು ಬರಬೇಕಿದ್ದು ಅಕಾಡೆಮಿಯಲ್ಲಿ ಪ್ರೋತ್ಸಾಹಕ ಯೋಜನೆಗಳಿವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಶಿವರಾಜ್ ಗುರಿಕಾರ, ಕಾಲೇಜು ಉಪಾಧ್ಯಕ್ಷ ವಿರೇಶ ಬಲ್ಕುಂದಿ, ಸದಸ್ಯ ಆಸೀಫ್ ಬಿಚ್ಚಗತ್ತಿ,ಬಿಜೆಪಿ ಮುಖಂಡ ಯಮನೂರ ಚೌಡ್ಕಿ, ಪ್ರಾಧ್ಯಾಪಕರಾದ ಮಂಜುನಾಥ, ಜೆ,ಕೃಷ್ಣ, ಪತ್ರಿಕೋದ್ಯಮ ವಿಭಾಗದ ಬಸವರಾಜ ಕರುಗಲ್, ಸತೀಶ, ಬಸವರಾಜ ಗಡಾದ್, ಶ್ರೀಕಾಂತ ಸೇರಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿದ್ದರು.