Breaking News
ಸಿಲಿಂಡರ್ ಅಭಾವ ಹೊಟೇಲ್ ಗಳ ಮೇಲೆ ದಾಳಿ ೧೦ ಗೃಹಬಳಕೆ ಸಿಲಿಂಡರ್ ವಶಕ್ಕೆ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಇರಾನ್ ಯುದ್ಧ ಪರಿಣಾಮದಿಂದ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ನಗರ ಪ್ರದೇಶದಲ್ಲಿ ಹೋಟೆಲ್ ತಳ್ಳುಬಂಡಿ ಗಾಡಿ ಸೇರಿದಂತೆ ಇತರೆ ವಾಣಿಜ್ಯ ಸ್ಥಳಗಳಲ್ಲಿ ಗೃಹಬಳಕೆಯ ಸಿಲಿಂಡರ್ ಗಳನ್ನು ಬಳಕೆ ಮಾಡಿ ಉಪಹಾರ, ಊಟ ತಯಾರಿಸುತ್ತಿದ್ದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 10

ಕ್ಕೂ ಹೆಚ್ಚು ಗೃಹಬಳಕೆಯ ಬಳಕೆಯ ಸಿಲಿಂಡರ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದಲ್ಲಿ ಹೆಚ್ಚಾಗಿ ಅಂಗಡಿ, ತಳ್ಳುಬಂಡಿ ಚಹಾದ ಹೋಟೆಲ್ ,ಕ್ಯಾಂಟೀನ್ ಗಳಲ್ಲಿ ಗ್ರಹಬಳಕೆಯ ಸಿಲಿಂಡರನ್ನು ಅಕ್ರಮವಾಗಿ ಬಳಸುತ್ತಿದ್ದು ಮನೆಗಳಲ್ಲಿ ಗ್ರಾಹಕರಿಗೆ ಸಿಲಿಂಡರ್ ಗಳ ಅಭಾವ ಉಂಟಾಗಿದೆ. ಅಧಿಕಾರಿಗಳ ಸೂಚನೆ ಮೇರೆಗೆ ಗೃಹ ಬಳಕೆಯ ಸಿಲಿಂಡರ್ ಬಳಸಿ ವಾಣಿಜ್ಯ ವ್ಯವಹಾರ ನಡೆಸುವವರ ವಿರುದ್ಧ ದಾಳಿ ನಡೆಸಿ ಕೇಸ್ ದಾಖಲಿಸಲು ತೀರ್ಮಾನಿಸಲಾಗಿದ್ದು ಆಹಾರ ಇಲಾಖೆ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ.

ದಾಳಿಯ ಸಂದರ್ಭದಲ್ಲಿ ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಯಾಶಸ್ ಯರೆಸೀಮೆ,ಶೇಖರಪ್ಪ, ನಾಗರತ್ನ,ಮುರ್ತುಜಾ ಸೇರಿ ಸಿಲಿಂಡರ್ ಪೂರೈಸುವ ಡೀಲರ್ ಗಳಿದ್ದರು.