ಅಕಾಲಿಕ ಗಾಳಿ, ಮಳೆ ಧರೆಗೆ ಉರುಳಿದ ಗಿಡಮರಗಳು! ಮಲ್ಲಾಪುರದಲ್ಲಿ ಮಾವಿನ ಮರಕ್ಕೆ ಸಿಡಿಲು ಬಡಿದು ಬೆಂಕಿ!
*ವಿದ್ಯುತ್ ಸರಬರಾಜು ಸ್ಥಗಿತ
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಸಂಜೆ ಸುರಿದ ಗಾಳಿ ಮಳೆಗೆ ಗಿಡಮರಗಳು ಧರೆಗೆ ಉರುಳಿವೆ.
ಗಂಗಾವತಿ ನಗರದಲ್ಲಿ ಬೀಸಿದ. ಬಿರುಗಾಳಿಯ
ಧೂಳು ಪಾದಚಾರಿಗಳು ಮತ್ತು ಬೈಕ್ ಸವಾರರು ನಿಲ್ಲುವಂತೆ ಮಾಡಿತು. ಬಿರುಗಾಳಿಗೆ ಮರಗಳ ಎಲೆಗಳು ರಸ್ತೆಗಳ ತುಂಬಾ ಹರಡಿವೆ.
ತಾಲೂಕಿನ ಮಲ್ಲಾಪುರದಲ್ಲಿ ಭಾರಿ ಪ್ರಮಾಣದ ಸಿಡಿಲು ಹೊಡೆದ ಪರಿಣಾಮ ಎರಡು ಮಾವಿನ ಮರಗಳಿಗೆ ಬೆಂಕಿ ಹತ್ತಿಕೊಂಡಿದೆ.
ಅಕಾಲಿಕ ಆನೇಕಲ್ಲು ಮಳೆ ಗಾಳಿಯ ಪರಿಣಾಮವಾಗಿ ಮಾವಿನ ಕಾಯಿಗಳು ನೆಲಕ್ಕೆ ಹುರುಳಿದ್ದು ರೈತರಿಗೆ ನಷ್ಟ ಸಂಭವಿದೆ. ಗಾಳಿಯಿಂದ ವಿದ್ಯುತ್ ಕಂಬಗಳು ಬಿದ್ದಿರುವ ಕಾರಣ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಲ್ಲಾಪುರದಲ್ಲಿ ಮಾವಿನ ಮರಗಳಿಗೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಕಳೆದ ಎರಡು ದಿನಗಳಿಂದ ಸಂಜೆ ಅಕಾಲಿಕ ಮಳೆ ಸುರಿಯುತ್ತಿದ್ದು ಗ್ರಾಮೀಣ ಭಾಗದಲ್ಲಿ ಆಣೆಕಲ್ಲು ಮಳೆಯಾಗಿದೆ. ಅಕ್ಕಾಲಿಕ ಮಳೆ ಮತ್ತು ಸಿಡಿಲು ಬಡಿದ ಪ್ರಕರಣದಲ್ಲಿ ಜನ ಜಾನುವಾರುಗಳಿಗೆ ಯಾವುದೇ ಹಾನಿಯಾಗಿಲ್ಲ.

