ದ್ವಿತೀಯ ಪಿ.ಯು.ಸಿ ಫಲಿತಾಂಶ. ಶ್ರೀವಿದ್ಯಾನಿಕೇತನ ಸಂಸ್ಥೆಯ ಪಿಯುಸಿ ಕಾಲೇಜುಗಳ ಅದ್ವಿತೀಯ ಸಾಧನೆ *ರಾಜ್ಯಮಟ್ಟದ ೨ ಮತ್ತು ೩ನೇ ರ‍್ಯಾಂಕ್‌ಗಳು ವಿದ್ಯಾನಿಕೇತನ ಕಾಲೇಜಿನ ಪಾಲಿಗೆ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ೨೦೨೫-೨೬ನೇ ಸಾಲಿನ ದ್ವಿತೀಯ ಪಿ.ಯು.ಸಿ ಫಲಿತಾಂಶವನ್ನು ಪ್ರಕಟಿಸಿದ್ದು.ಗಂಗಾವತಿ ಗಂಗಾವತಿ,ಶ್ರೀರಾಮನಗರ, ವಡ್ಡರಹಟ್ಟಿ ಹಾಗೂ ಗಂಗಾವತಿಯ ಶ್ರೀ ವಿದ್ಯಾನಿಕೇತನ ಪಿ.ಯು. ಕಾಲೇಜ್ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆದು ಗಂಗಾವತಿಯ ಕೀರ್ತಿ ಹೆಚ್ಚುವಂತೆ ಮಾಡಿದೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ ಒಟ್ಟು ೧೭೭೪ ವಿದ್ಯಾರ್ಥಿಗಳಲ್ಲಿ ೧೭೬೭ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ ೯೯.೬೦ ರಷ್ಟು ಫಲಿತಾಂಶವನ್ನು ಸಾಧಿಸಿದ್ದು, ೧೪೬೩ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, ೨೯೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೯ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿನಿಯಾದ ಯು. ಶ್ರಾವಣಿ ೬೦೦ಕ್ಕೆ ೫೯೮ ಅಂಕಗಳನ್ನು ಪಡೆಯುವ ಮೂಲಕ ಅಮೋಘ ಸಾಧನೆಗೈದು ರಾಜ್ಯಮಟ್ಟದಲ್ಲಿ ೨ನೇ ರ‍್ಯಾಂಕ್ ಗಳಿಸಿದ್ದಾಳೆ. ಅದೇ ರೀತಿ ಅರ್ಜುನ್ ಗ್ವಾಟಗಿ ೬೦೦ಕ್ಕೆ ೫೯೭ ಅಂಕಗಳನ್ನು ಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ ೩ನೇ ರ‍್ಯಾಂಕ್ ಪಡೆದಿದ್ದು, ವೈಷ್ಣವಿ ೬೦೦ಕ್ಕೆ ೫೯೫ ಅಂಕಗಳನ್ನು ಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ ೫ನೇ ರ‍್ಯಾಂಕ್ ಹಾಗೂ ಪಡೆಯುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕುಮಾರಿ ವಂದನಾ ಜೈನ್ ೬೦೦ಕ್ಕೆ ೫೯೪ ಅಂಕಗಳನ್ನು ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ೭ನೇ ರ‍್ಯಾಂಕ್ ಗಳಿಸುವ ಮೂಲಕ ಅತ್ಯುತ್ತಮ ಸಾಧನೆಯನ್ನು ಗೈದಿದ್ದಾಳೆ. ಯು.ಶ್ರಾವಣಿ ೫೯೮ ಅಂಕ, ಅರ್ಜುನ ಗ್ವಾಟಗಿ ೫೯೭, ವೈಷ್ಣವಿ ೫೯೫, ಅಭಿಷೇಕ ಎಂ,ಮಣಿಕಂಠ ಡಿ, ಶ್ರೀಗೌರಿ, ವಂದನಾ ಜೈನ್ ೫೯೪ ಅಂಕಗಳನ್ನು ಪಡೆದಿದ್ದಾರೆ.ಬೃಂದಾ, ಭಾವನಾ, ಜಿ.ಭಾಸ್ಕರ್ ಸಾತ್ವಿಕ್, ಸಂಧ್ಯಾ ಪಾಟೀಲ್, ತೇಜಶ್ವೀನಿ, ದೀಪಿಕಾ ಇವರು ೫೯೩ ಅಂಕಗಳನ್ನು ಪಡೆದಿದ್ದಾರೆ. ಕಲ್ಯಾಣ ಕರ್ನಾಟಕ ಶಿಕ್ಷಣದಲ್ಲಿ ಹಿಂದುಳಿದಿದೆ ಎಂಬ ಹಣೆಪಟ್ಟಿಯನ್ನು ತೊಲಗಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯು ಅಂತರಾಷ್ಟೀಯ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ರಾಜ್ಯಮಟ್ಟದ ಅತ್ಯುನ್ನತ್ತ ರ‍್ಯಾಂಕ್‌ಗಳನ್ನು ಪಡೆದು ಅಮೋಘ ಸಾಧನೆಯನ್ನು ಗೈದಿದೆ. ಸತತ ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಅಭಿನಂದಿಸಿದ್ದಾರೆ. ಅದೇ ರೀತಿ ಸೂಕ್ತ ಮಾರ್ಗದರ್ಶನ ನೀಡಿದ ಕಾಲೇಜಿನ ಪ್ರಾಂಶುಪಾಲ ಜಗನ್ನಾಥರಾವ್, ಮಲ್ಲಿಕಾರ್ಜುನ್, ಉಮಾಶಂಕರ್, ಅಭಿಷೇಕ್ ಡಿ.ಎಮ್,ಉಪನ್ಯಾಸಕವೃಂದವನ್ನು ಅಭಿನಂದಿಸಿದ್ದಾರೆ.

