ಶಿಕ್ಷಕರ ಮತದಾರರ ಪಟ್ಟಿಯಲ್ಲೂ ಎಸ್ಐಆರ್!ಪ್ರಬಲ ಆಕಾಂಕ್ಷಿಗಳ ಹೆಸರು ಕೈ ಬಿಟ್ಟು ಪಟ್ಟಿ ಪ್ರಕಟ. *ಪ್ರಜಾಪ್ರಭುತ್ವ ಗಾಳಿಗೆ ತೂರಿದ ಶಾಲಾಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆ!
*ನೋಟಿಸ್ ಬೋರ್ಡ್ಗೆ ಮತದಾರರಪಟ್ಟಿ ಲಗತ್ತಿಸದೇ ಚುನಾವಣೆ ಘೋಷಣೆ
*ಪ್ರಬಲ ಆಕಾಂಕ್ಷಿಗಳ ಹೆಸರು ಮತದಾರರ ಪಟ್ಟಿಯಿಂದ ಮಾಯ! *ನಿವೃತ್ತರು,ನಿಧನರಾದವರ ಹೆಸರು ಮತದಾರರ ಪಟ್ಟಿಯಲ್ಲಿ ನಮೂದು *ಕೂಡಲೇ ಚುನಾವಣಾ ಪ್ರಕ್ರಿಯೆ ತಡೆಯುವಂತೆ ಆಗ್ರಹ
ಕಿಷ್ಕಿಂಧವಾಣಿ ವಿಶೇಷ
ಕೆ.ನಿಂಗಜ್ಜ
ಗಂಗಾವತಿ: ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ, ಜಿಲ್ಲಾ ಮತ್ತು ತಾಲೂಕು ಘಟಕಗಳ ನಿರ್ದೇಶಕರ ಸ್ಥಾನಕ್ಕೆ 2026-31 ನೇ ಸಾಲಿನ ಆಡಳಿತ ಮಂಡಳಿ ರಚನೆಗಾಗಿ ಏಪ್ರೀಲ್-19 ರಂದು ಮತದಾನ ಜರುಗಲಿದ್ದು ಇದುವರೆಗೂ ಮೂಲ ಮತದಾನ ಪಟ್ಟಿ ಬಿಡುಗಡೆಯಾಗದೇ ಕರಡು ಮತದಾರರ ಪಟ್ಟಿಯಿಂದಲೇ ಚುನಾವಣೆ ನಡೆಸಲಾಗುತ್ತಿದ್ದು ಏ.11 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಚುನಾವಣಾ ಪ್ರಕ್ರಿಯೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿಯಾಗಿದ್ದು ಕೂಡಲೇ ಮೂಲ ಮತದಾರರ ಪಟ್ಟಿ ಬಿಡುಗಡೆ ಮಾಡಿ ನಂತರ ಚುನಾವಣಾ ದಿನಾಂಕ ಘೋಷಣೆ ಮಾಡುವಂತೆ ಶಿಕ್ಷಕ ಮತದಾರರು ಆಗ್ರಹಿಸಿದ್ದಾರೆ. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 08 ನಿರ್ದೇಶಕರ ಸ್ಥಾನಗಳಿದ್ದು ಇದರಲ್ಲಿ ಐದು ಪುರುಷರು, ಮೂರು ಮಹಿಳಾ ನಿರ್ದೇಶಕರಿದ್ದು ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ ಶಿಕ್ಷಕಿಯರು ಮತದಾರರಾಗಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾಗಿದ್ದು ಇದುವರೆಗೂ ಮತದಾರರ ಮೂಲ ಪಟ್ಟಿ ಬಿಡುಗಡೆ ಮಾಡಿಲ್ಲ. ಬದಲಿಗೆ ಆಲಮಟ್ಟಿ ಯಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಂದ ಕರಡು ಮತದಾರರ ಪಟ್ಟಿಯನ್ನು ಕೆಲವರು ಖರೀದಿಸಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ. ಪ್ರಸ್ತುತ ಇರುವ ನಿರ್ದೇಶಕರು ಉದ್ದೇಶಪೂರ್ವಕವಾಗಿ ಚುನಾವಣೆಗೆ ಸ್ಪರ್ಧಿಸುವವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡುವಂತೆ ಮಾಡಿ ತಮಗೆ ಬೇಕಾದವರನ್ನು ಮಾತ್ರ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬರುವಂತೆ ನೋಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ. 08 ನಿರ್ದೇಶಕರ ಸ್ಥಾನಗಳಿಗೆ ಏ.11ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಏ.14 ರಂದು ನಾಮಪತ್ರ ಪರಿಶೀಲನೆ ಮತ್ತು ವಾಪಸ್ ಪಡೆಯುವುದು ಅಗತ್ಯ ಬಿದ್ದರೆ ಏ,19 ರಂದು ಮತದಾನ ಮಾಡಲು ಚುನಾವಣಾ ವೇಳಾ ಪಟ್ಟಿ ಬಿಡುಗಡೆಯಾಗಿದೆ. ಪ್ರಸ್ತುತ ಕರಡು ಮತದಾರರ ಪಟ್ಟಿಯಲ್ಲಿ ನಿವೃತ್ತ ಶಿಕ್ಷಕರು 04 ಜನ ಮತ್ತು ಒಬ್ಬ ಮೃತ ಶಿಕ್ಷಕರ ಹೆಸರು ಸೇರ್ಪಡೆಯಾಗಿದೆ. ಪ್ರಬಲ ಆಕಾಂಕ್ಷಿಗಳಾಗಿದ್ದ ಶರಣಪ್ಪ ಹಕ್ಕಂಡಿ, ಛತ್ರಪ್ಪ ತಂಬೂರಿ ಸೇರಿ ಇನ್ನೂ ಹಲವರ ಹೆಸರು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಒಟ್ಟಾರೆ ಚುನಾವಣಾ ಪ್ರಕ್ರಿಯೆ ಪ್ರಜಾಪ್ರಭುತ್ವ ಸಂವಿಧಾನ ವಿರೋಧಿಯಾಗಿದ್ದು ಮತದಾರರ ಪಟ್ಟಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ಆಗದಂತೆ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿದೆ. ಏ.11 ಎರಡನೇಯ ಶನಿವಾರ, ಏ.12 ರವಿವಾರ, ಏ.14 ಅಂಬೇಡ್ಕರ್ ಜಯಂತಿ ಇದ್ದು ಸಾಲು ಸಾಲು ರಜೆ ಇರುವುದರಿಂದ ಚುನಾವಣಾ ಆಕಾಂಕ್ಷಿಗಳು ಕೋರ್ಟ್ ಮೊರೆ ಹೋಗಲು ಆಗದಂತೆ ಮುಂದಾಲೋಚನೆಯಿAದ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿದೆ ಎಂದು ನಿರ್ದೇಶಕ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಶರಣಪ್ಪ ಹಕ್ಕಂಡಿ ಮತ್ತು ಛತ್ರಪ್ಪ ತಂಬೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಕ್ಸ್ ಈಗಾಗಲೇ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿದ್ದು ರಾಜ್ಯ ಚುನಾವಣಾಧಿಕಾರಿಗಳು ನೀಡಿದ ಮತದಾರರ ಪಟ್ಟಿಯ ಅನ್ವಯ ಚುನಾವಣೆ ಘೋಷಣೆ ಮಾಡಲಾಗುತ್ತದೆ. ಹೆಸರು ಬಿಟ್ಟು ಹೋದವರು ಮನವಿ ಪತ್ರ ಸಲ್ಲಿಸಿದರೆ ರಾಜ್ಯ ಚುನಾವಣಾಧಿಕಾರಿಗಳಿಗೆ ಕಳಿಸಲಾಗುತ್ತದೆ. ಉಳಿದಂತೆ ನಮಗೆ ಯಾವುದೇ ಅಧಿಕಾರವಿಲ್ಲ. -ಗವಿಸಿದ್ದಪ್ಪ ಮಡಿವಾಳ ತಾಲೂಕು ಚುನಾವಣಾಧಿಕಾರಿಗಳು ಶಿಕ್ಷಕರ ಸಂಘ

