Breaking News
ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ.

*32 ಕ್ರಸ್ಟಗೇಟ್‌ಗಳ ಫ್ಯಾಬ್ರಿಕೇಶನ್ ಪೂರ್ಣ.

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ: ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಅವರು ಏಪ್ರಿಲ್ 9 ರಂದು ಪ್ರವಾಸ ಕೈಗೊಂಡು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದರು.

ಇದೇ ವೇಳೆ, ತುಂಗಭದ್ರಾ ಜಲಾಶಯದಲ್ಲಿ ಗೇಟ್‌ಗಳ ಫ್ಯಾಬ್ರಿಕೇಶನ್, ಬಿಚ್ಚುವಿಕೆ ಮತ್ತು ಅಳವಡಿಕೆ ಕಾಮಗಾರಿಯ ಪ್ರಸ್ತುತ ಸ್ಥಿತಿಗತಿ ಪರಿಶೀಲಿಸಿದರು.

ಜಲಾಶಯದ ಒಟ್ಟು 33 ಕ್ರಸ್ಟ್ ಗೇಟ್‌ಗಳಲ್ಲಿ 32 ಕ್ರಸ್ಟಗೇಟ್‌ಗಳ ಫ್ಯಾಬ್ರಿಕೇಶನ್ ಪೂರ್ಣಗೊಂಡಿದೆ. 1 ಗೇಟು ಫ್ಯಾಬ್ರಿಕೇಶನ್ ಹಂತದಲ್ಲಿದ್ದು, ಹೊಸಪೇಟೆ ಫ್ಯಾಬ್ರಿಕೇಶನ್ ಕೇಂದ್ರದಲ್ಲಿ ಕೆಲಸ ಪ್ರಗತಿಯಲ್ಲಿದೆ. ಗೇಟ್ ಸಂಖ್ಯೆ 1 ರಿಂದ 14 ಮತ್ತು 16 ರಿಂದ 33 ರವರೆಗಿನ ಒಟ್ಟು 32 ಗೇಟ್‌ಗಳನ್ನು ಸಂಪೂರ್ಣ ತೆರವುಗೊಳಿಸಲಾಗಿದೆ.

ಗೇಟ್ ಸಂಖ್ಯೆ 15 ರ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. 20 ಗೇಟ್‌ಗಳ ಪ್ರಾಯೋಗಿಕ ಚಾಲನೆ ಪೂರ್ಣಗೊಂಡಿದೆ (ಗೇಟ್ ಸಂಖ್ಯೆಗಳು: 01, 02, 03, 04, 11, 12, 17, 18, 19, 20, 24, 25, 26, 27, 28, 29, 30, 31, 32 ಮತ್ತು 33). 24 ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದೆ (ಗೇಟ್ ಸಂಖ್ಯೆಗಳು: 01, 02, 03, 04, 05, 06, 07, 11, 12, 17, 18, 19, 20, 21, 24, 25, 26, 27, 28, 29, 30, 31, 32 ಮತ್ತು 33). 07 ಗೇಟ್‌ಗಳ ಕೆಲಸ ಪ್ರಗತಿಯಲ್ಲಿದೆ (ಗೇಟ್ ಸಂಖ್ಯೆಗಳು: 08, 09, 10, 13, 14, 16 ಮತ್ತು 22) ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಕೆ.ಎನ್.ಎನ್.ಎಲ್. ಮುಖ್ಯ ಎಂಜಿನಿಯರ್ ಶ್ರೀನಿವಾಸ ಮಲ್ಲಿಗವಾಡ, ಟಿಆರ್ ವಿಭಾಗದ ಇಇ ನಾಗನಾಥ, ಎಇಇ ಧರ್ಮರಾಜ್, ಟಿಬಿ ಬೋರ್ಡ್ ಇಇ ಚಂದ್ರಶೇಖರ, ಸೆಕ್ಷನ್ ಅಧಿಕಾರಿಗಳಾದ ಜಿ. ಕಿರಣ ಮತ್ತು ಪಂಪಾಪತಿ ಡಿ.ಕೆ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕುಡುಗೋಲಿನಿಂದ ಹಲ್ಲೆ: ಐವರಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿದ ನ್ಯಾಯಾಲಯ.

ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ನಡೆದು ಕುಡುಗೋಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಆರೋಪಿಗಳಿಗೆ ಸ್ಥಳೀಯ ಹಿರಿಯ ಸಿವಿಲ್ ನ್ಯಾಯಾಲಯ ಆರೋಪಿತರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 3 ಸಾವಿರ ದಂಡ ಹಾಗು 6 ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು ರೂ.2,500/- ದಂಡ ವಿಧಿಸಿದ ನ್ಯಾಯಾಲಯದ ತೀರ್ಪು ಪ್ರಕಟಿಸಿದೆ.
28.10.2015 ರಂದು ಸಂಜೆ 7-00 ಗಂಟೆಗೆ ದಶಮಾಪುರ ಗ್ರಾಮದಲ್ಲಿ ಹಿರಿಯರ ಆಸ್ತಿ ಪಾಲು ವಿಭಾಗ ಮಾಡಿಕೊಂಡ ವಿಷಯದಲ್ಲಿ ಹಳೇ ವೈಶಮ್ಯದಿಂದ ಆಯುಧಗಳನ್ನು ಹಿಡಿದುಕೊಂಡು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕೆ. ಕನಕಪ್ಪ, ಅನ್ನಪೂರ್ಣ. ಅಂಜಿನಪ್ಪ ರವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ತೀವ್ರ ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕೆ.ಅಂಜಿನಪ್ಪ, (ಮೃತ ಪಟ್ಟಿರುತ್ತಾರೆ), ಕೆ.ರಂಗಪ್ಪ, ಕೆ.ಅಶೋಕ್, ಕೊಡ್ಲಮ್ಮ. 5) ದುರುಗಮ್ಮ ಇವರ ವಿರುದ್ಧ ಕಲಂ:143, 147, 148, 324, 326, 504, 506 ಆಧಾರ 149 ಐಪಿಸಿ ರೀತ್ಯ ಈ ದೋಷಾರೋಪಣ ಪತ್ರವನ್ನು ತಯಾರಿಸಿ ನ್ಯಾಯಾಲಯಕ್ಕೆ ನಿವೇಧಿಸಿಕೊಳ್ಳಲಾಗಿತ್ತು. ಅಭಿಯೋಜನಾ ಪರವಾಗಿ ಸಾಕ್ಷಿದಾರರನ್ನು ವಿಚಾರಣೆ ಮಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಮಧುಸೂದನ ಡಿ.ಕೆ ಅವರು ಸದರಿ ಆರೋಪಿ /ನಂಬರ್-02 ಮತ್ತು 03 ರವರಿಗೆ 3 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 5 ಸಾವಿರ ರೂಪಾಯಿ ದಂಡ ಮತ್ತು 4 ಮತ್ತು 5 ನೇ ಆರೊಪಿತರಿಗೆ 6 ತಿಂಗಳು ಸಾದಾ ಸ್ವರೂಪದ ಜೈಲು ಶಿಕ್ಷೆ ಮತ್ತು ತಲಾ 2,500/- ರೂ. ದಂಡ ವಿಧಿಸಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ತನಿಖಾಧಿಕಾರಿ ವಾಸು.ಬಿ.ಎಸ್ ಮುಖ್ಯ ಪೇದೆ ಮತ್ತು .ಪಿ.ಎಸ್.ಐ. ಯಶ್ವಂತ್ ಬಿಸ್ನಳ್ಳಿ ಪ್ರಕರಣದ ತನಿಖೆ ನಡೆಸಿ ದೋಷಾರೋಪಣ
ಪತ್ರವನ್ನು ಮ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿ ಪಿ.ಸಿ-148 ರವಿಚಂದ್ರ ತಳವಾರ ಮತ್ತು ಸಮನ್ಸ್ ಪಿ.ಸಿ-278 ಕೊಟ್ರೇಶ್ ಇವರು ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಸರಿಯಾದ ಸಮಯಕ್ಕೆ ಹಾಜರುಪಡಿಸಿ ಸಹಕರಿಸಿದ್ದಾರೆ.ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರಾಘವೇಂದ್ರ,ಟಿ ಸಾಕ್ಷಿ ವಿಚಾರಣೆಯನ್ನು ನಡೆಯಿಸಿ ವಾದ ಮಂಡಿಸಿ ಆರೋಪಿತನಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ.