ಜುಲೈನಗರದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀರಾಮಲಿಂಗೇಶ್ವರ ಮಹಾರಥೋತ್ಸವ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಜುಲೈ ನಗರದ ಐತಿಹಾಸಿಕ ಪ್ರಸಿದ್ಧ ಶ್ರೀರಾಮಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಮಹಾರಥೋತ್ಸವ ಗುರುವಾರ ಸಂಜೆ ಶ್ರದ್ಧೆ, ಭಕ್ತಿಯಿಂದ ಜರುಗಿತು.
ಜುಲೈ ನಗರದ ಅತಿ ಪುರಾತನ ಶ್ರೀ ರಾಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಪ್ರತಿ ವರ್ಷ ಯುಗಾದಿಯ ಪಾಡ್ಯದಂದು ನೆರವೇರುತ್ತದೆ.
ಗಂಗಾವತಿಯ ಪುರಾತನ ಜಾತ್ರೆಗಳಲ್ಲಿ ಜುಲೈ ನಗರದ ಶ್ರೀ ರಾಮಲಿಂಗೇಶ್ವರ ಜಾತ್ರೆಯು ಒಂದಾಗಿದ್ದು, ನೂರಾರು ವರ್ಷಗಳಿಂದ ಈ ಜಾತ್ರಾ ಮಹೋತ್ಸವ ದಂದು ಬೆಳಿಗ್ಗೆ ನೈರ್ಮಲ್ಯ ವಿಸರ್ಜನೆ, ಜಲಾಭಿಷೇಕ, ಪಂಚಾಮೃತಾಭಿಷೇಕ ಸೇರಿದಂತೆ ಮಧ್ಯಾಹ್ನ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿರುತ್ತದೆ. ಸಂಜೆ ಡೊಳ್ಳು,ತಾಷಾ,ಕಲಾತಂಡಗಳ ಮೆರವಣಿಗೆಯಲ್ಲಿ ಮಹಾರಥೋತ್ಸವ ಜುಲೈ ನಗರದ ಮಹಾ ಜನತೆಯ ಮಧ್ಯೆ ಸಂಭ್ರಮದಿಂದ ನೆರವೇರಿತು.

