ಎಸ್ಸಿ ಒಳಮೀಸಲಾತಿ ನ್ಯಾ. ನಾಗಮೋಹನ್ ದಾಸ್ ಅವೈಜ್ಞಾನಿಕ ವರದಿ ತಿರಸ್ಕಾರಕ್ಕೆ ದಲಿತ ಬಲಗೈ ಬಣ ಆಗ್ರಹ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ :ಎಸ್ಸಿ
ಒಳ ಮೀಸಲಾತಿ ಹಂಚಿಕೆಯ ವಿಚಾರವಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯು ಅವೈಜ್ಞಾನಿಕವಾಗಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು ಇಲ್ಲವಾದಲ್ಲಿ ತಿರಸ್ಕರಿಸಿ ಮತ್ತೊಮ್ಮೆ ಮೀಸಲಾತಿ ಮರು ಸಮೀಕ್ಷೆಯನ್ನು ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲಿತ ಬಲಗೈ ಸಮುದಾಯದ ಒಕ್ಕೂಟದ ಅಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮೀಜಿಯವರ ಆದೇಶದಂತೆ ಗಂಗಾವತಿಯ ಸರ್ಕಿಟ್ ಹೌಸ್ ನಲ್ಲಿ ದಲಿತ ಬಲಗೈ ಸಮುದಾಯದ ಸಂಘಟನೆಗಳ ನಾಯಕರೆಲ್ಲರರು ಒತ್ತಾಯಿಸಿದರು. ಈ ಸಂಬಂಧ ಮಾ. 25 ರಂದು ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ದಲಿತ ಬಲಗೈ ಸಮುದಾಯಗಳ ಒಕ್ಕೂಟ ವತಿಯಿಂದ ಬೃಹತ್ ಪ್ರತಿಭಟನೆಗೆ
ತೆರಳು ಕುರಿತು ಚರ್ಚೆ ನಡೆಸಲಾಯಿತು.
ದಲಿತ ಸಮುದಾಯದ ಹಿರಿಯ ನಾಯಕ ಕುಂಟೋಜಿ ಮರಿಯಪ್ಪ ಮಾತನಾಡಿ,
ನಾವು ಮೀಸಲಾತಿಯ ವಿರೋಧಿಗಳು ಅಲ್ಲಾ. ಆದರೆ ರೋಸ್ಟರ್ ಪದ್ಧತಿಯಲ್ಲಿ ಸಮನಾಗಿ ಹಂಚಿಕೆ ಮಾಡದೆ ಬಿಂದುಗಳಲ್ಲಿ ಏರುಪೇರು ಮಾಡಿದ್ದು ಇವುಗಳನ್ನು ಸರಿಪಡಿಯುವಕರಿದ್ದ.ಇಲ್ಲವಾದಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುವ ಸಾದ್ಯತೆ ಇದ್ದು ಕೂಡಲೇ ಸರಿಪಡಿಸಬೇಕು.
ನ್ಯಾಯಬದ್ಧ ಹೋರಾಟಕ್ಕೆ ಕೊಪ್ಪಳದ ವಿವಿಧ ತಾಲೂಕಿನ ದಲಿತ ಮುಖಂಡರು, ಸಂಘಟನೆಗಾರರು, ಮಹಿಳೆಯರು,ಯುವಕರು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಲಕ್ಷಾಂತರ ಜನ ಸೇರಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಬೇಕು ಮತ್ತು ಈ ಬೃಹತ್ ಪ್ರತಿಭಟನೆ ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸಬೇಕೆಂದರು.
ಸಮುದಾಯದ ಹಿರಿಯ
ಸಭೆಯಲ್ಲಿ ದಲಿತ ಬಲಗೈ ಸಮುದಾಯದ ಮುಖಂಡರಾದ ದೊಡ್ಡ ಬೋಜಪ್ಪ, ಸೋಮಶೇಖರ್ ಬಣ್ಣದಮನೆ,
ಜಿ.ಹುಲಗಪ್ಪ ಮಾಸ್ತರ, ಮಾಗಿ ಹುಲಗಪ್ಪ, ಅಂಬಣ್ಣ ಛಲವಾದಿ,ಹರೀಶ್ ಕುರಿ,ರಾಮಚಂದ್ರಪ್ಪ, ಹುಸೇನಪ್ಪ ಹಂಚಿನಾಳ ವಕೀಲರು, ಪ್ರತಾಪ್ ವಕೀಲರು, ತಿಮ್ಮಣ್ಣ ಮುಂಡಸ್ತ್, ಮಾರ್ಕಂಡೇಯ, ಆರತಿ ರವಿ, ಪೂಜಾರಿ ಬಸವರಾಜ ಆರತಿ ವೀರೇಶ್,ಆಂಜನೇಯ ಸೋಮನಾಳ,ಜಿ.ಟಿ. ನಾಗರಾಜ್, ಹಾಗೂ ಯುವಕರಾದ ಮಂಜುನಾಥ ಆರತಿ,ಮಲ್ಲಿಕಾ ಗೋಟೂರ ,ಪರುಶುರಾಮ,ಮಂಜುನಾಥ ಹಂಚಿನಾಳ,ಮುತ್ತುರಾಜ್, ಆನಂದ ಛಲವಾದಿ,ಭಾಷಾ ಚಲುವಾದಿ, ಜಡಿಯಪ್ಪ, ಯಮನಪ್ಪ,ಸಂತೋಷ್ , ರಾಮು ಕಿರಿ ಕಿರಿ,ಸುರೇಶ್, ರೇವಣ್ಣ, ಗೋವಿಂದಪ್ಪ, ಜುಮ್ಮಣ್ಣ, ಸುನಿಲ್ ಕುಮಾರ್ ಆರತಿ,ಇನ್ನೂ ಅನೇಕ ಯುವಕರಿದ್ದರು

