ನಿರ್ಬಂಧ ಮಧ್ಯದಲ್ಲಿ ಕಿಷ್ಕಿಂಧಾ ಅಂಜನಾದ್ರಿ ದರ್ಶನಕ್ಕೆ ಬಂದ ಪುನೀತ್ ಕೆರೆಹಳ್ಳಿ, ಪೊಲೀಸರ ಆಕ್ಷೇಪ ಉಲ್ಲಂಘಿಸಿ ಬೆಟ್ಟ ಹತ್ತಿರ ದೇವರ ದರ್ಶನ.

*ಮಾ.23 ರಂದು ಯಲಬುರ್ಗಾ ಹಿರೇವಂಕಲಕುಂಟಾದ ಹಿಂದು ಸಮಾವೇಶಕ್ಕೆ ಪ್ರಮೋದ್ ಮುತಾಲಿಕ್ ಹಾಗೂ ಪುನೀತ ಕೆರೆಹಳ್ಳಿ ಆಹ್ವಾನ ಹಿನ್ನೆಲೆಯಲ್ಲಿ ಇಬ್ಬರಿಗೂ ಜಿಲ್ಲಾಡಳಿತ ನಿರ್ಬಂಧ.
*ಮಾಹಿತಿ ತಿಳಿಯದೇ ಅಂಜನಾದ್ರಿ ಗೆ ಆಗಮಿಸಿದ ಪುನೀತ ಕೆರೆಹಳ್ಳಿ,ಪೊಲೀಸರೊಂದಿಗೆ ವಾಗ್ವಾದ.
*ಪಟ್ಟು ಬಿಡದೇ ಬೆಟ್ಟ ಹತ್ತಿದ ಕೆರೆಹಳ್ಳಿ ಫಾಲೋ ಮಾಡಿದ ಪೊಲೀಸರು.
*ಕೊನೆಗೂ ಪುನೀತ್ ಗೆ ನೋಟೀಸ್ ನೀಡಿ ಜಿಲ್ಲಾ ಗಡಿ ದಾಟಿಸಿದ ಪೊಲೀಸರು.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ:
ಗಂಗಾವತಿ ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ಪರ್ವತಕ್ಕೆ ದರ್ಶನಕ್ಕೆ ಆಗಮಿಸಿದ್ದ ಆರೆಸ್ಸೆಸ್ ಸಂಘ ಪರಿವಾರದ ಪುನೀತ್ ಕೆರೆಹಳ್ಳಿ ಅವರಿಗೆ ಕೊಪ್ಪಳ ಜಿಲ್ಲಾಡಳಿತ ನಿಷೇಧವಿದ್ದರೂ ಕಿಷ್ಕಿಂಧಾ ಅಂಜನಾದ್ರಿ ದರ್ಶನಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲೆಯ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಶನಿವಾರ ಬೆಳ್ಳಿಗ್ಗೆ ಜರುಗಿತು.
ನೋಟಿಸ್ ನೀಡದೇ ಅಂಜನಾದ್ರಿ ದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದನ್ನು ಪುನೀತ್ ಕೆರೆಹಳ್ಳಿ ಖಂಡಿಸಿ ಕಿಷ್ಕಿಂಧಾ ಅಂಜನಾದ್ರಿ ದರ್ಶನ ಪಡದೇ ಪಡೆಯುತ್ತೇನೆ ರಾಜ್ಯ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಜಿಲ್ಲಾಡಳಿತದ ಅಧಿಕಾರಿಗಳು ಏನು ಕ್ರಮ ಕೈಗೊಳ್ಳಲಿ ಎಂದು ಪೊಲೀಸರ ವಿರೋಧದ ಮಧ್ಯ ಬೆಟ್ಟ ಹತ್ತಿ ಶ್ರೀ ಆಂಜನೇಯನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ದರ್ಶನದ ನಂತರ ಬೆಟ್ಟ ಇಳಿದ ಪುನೀತ್ ಕೆರೆಹಳ್ಳಿ ಅವರಿಗೆ ಪೊಲೀಸರು ಜಿಲ್ಲಾ ಪ್ರವೇಶದ ನಿರ್ಬಂಧದ ನೋಟೀಸ್ ಅನ್ನ ನೀಡಿದರು ನಂತರ ಅವರನ್ನು ಕೊಪ್ಪಳ ಜಿಲ್ಲೆಯ ಗಡಿ ದಾಟಿಸಿ ಕಳುಹಿಸಿದರು.
ಮಾ.23 ರಂದು ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಆರೆಸ್ಸೆಸ್ ಹಾಗೂ ಸಂಘ ಪರಿವಾರದವರು ಆಯೋಜಿಸಿರುವ ಹಿಂದು ಸಮಾವೇಶದಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಹಾಗೂ ಗೋ ರಕ್ಷಣೆ ಹೋರಾಟ ಮಾಡುವ ಪುನೀತ್ ಕೆರೆಹಳ್ಳಿ ಮುಖ್ಯಭಾಷಣ ಮಾಡಲಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಪ್ರಮೋದ್ ಮುತಾಲಿಕ್ ಹಾಗೂ ಪುನೀತ್ ಕೆರೆಹಳ್ಳಿ ಅವರಿಗೆ ಮಾ.21-23 ಸಂಜೆ ವರೆಗೆ
ಕೊಪ್ಪಳ ಜಿಲ್ಲಾ ಪ್ರವಾಸವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಡಾ.ಸುರೇಶ ಇಟ್ನಾಳ
ಆದೇಶ ಮಾಡಿದ್ದಾರೆ.

